ಹೊಸ ಸ್ಕೂಟರ್‍ಗಳ ಬೆಲೆ ಮಾಹಿತಿ ಬಿಚ್ಚಿಟ್ಟ 22 ಕೇಮ್ಕೊ
22 ಕೇಮ್ಕೊ ಕಂಪನಿಯು ಮೂರು ಹೊಸ ಸ್ಕೂಟರ್‍ಗಳನ್ನು ಅನಾವರಣಗೊಳಿಸಿದೆ. ಇದರಲ್ಲಿ ಅಪ್‍ಡೇಟ್ ಮಾಡಲಾದ ಐಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಸಹ ಸೇರಿದೆ. ಈ ಸ್ಕೂಟರ್‍ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.90,000ಗಳಾಗಿದೆ.

ಲೈಕ್ ಸ್ಕೂಟರ್‍ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1.30 ಲಕ್ಷಗಳಾಗಿದೆ. ಎಕ್ಸ್ ಟೌನ್ 300ಐ ನ ಬೆಲೆಯು ಎಕ್ಸ್ ಶೋರೂಂ ದರದಂತೆ 2.30 ಲಕ್ಷಗಳಾಗಿದೆ. ಈ ಎರಡೂ ಸ್ಕೂಟರ್‍ಗಳು ಪೆಟ್ರೋಲ್ ಎಂಜಿನ್ ಹೊಂದಿವೆ. ಈ ಸ್ಕೂಟರ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಸೆಪ್ಟೆಂಬರ್‍ನಿಂದ ಮಾರಾಟ ಮಾಡಲಾಗುವುದು. ಕಂಪನಿಯು ಈ ಸ್ಕೂಟರ್‍ಗಳನ್ನು ಬೆಂಗಳೂರು, ನವ ದೆಹಲಿ, ಪುಣೆ, ಹೈದರಾಬಾದ್, ಕೊಲ್ಕತಾ ಹಾಗೂ ಅಹಮದಾಬಾದ್‍ಗಳಲ್ಲಿ ಮಾರಾಟ ಮಾಡಲಿದೆ.

ಕಂಪನಿಯು ಈ ನಗರಗಳಲ್ಲಿ 14 ಡೀಲರ್‍ಶಿಪ್‍ಗಳನ್ನು ತೆರೆಯುವ ಗುರಿಯನ್ನಿಟ್ಟುಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 300ಕ್ಕೂ ಹೆಚ್ಚು ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿದೆ.

22 ಕೇಮ್ಕೊ ಚೇರ್‍ಮನ್‍ರಾದ ಅಲೆನ್ ಕೆಒರವರು ಮಾತನಾಡಿ, ಹರಿಯಾಣದಲ್ಲಿರುವ ಭಿವಾಡಿಯಲ್ಲಿ ಆರಂಭಿಕ ಹಂತವಾಗಿ 11 ಲಕ್ಷ ವಾಹನಗಳನ್ನು ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಐ ಫ್ಲೋ ಸ್ಕೂಟರ್ ಅನ್ನು ಭಾರತದಲ್ಲಿ ತಯಾರಿಸಿದರೆ, ಲೈಕ್ 200 ಹಾಗೂ ಎಕ್ಸ್ ಟೌನ್ 300 ಐ ಸ್ಕೂಟರ್‍ಗಳನ್ನು ಸೆಮಿ ಕ್ನಾಕ್ಡ್ ಡೌನ್ (ಎಸ್‍ಕೆಡಿ) ಆಗಿ ಆಮದು ಮಾಡಿಕೊಳ್ಳಲಾಗುವುದು. ಐ ಫ್ಲೋ ಸ್ಕೂಟರ್ ಅನ್ನು ಭಾರತದಲ್ಲಿಯೇ ಉತ್ಪಾದಿಸಿದರೂ ಇದರಲ್ಲಿರುವ ಬ್ಯಾಟರಿ ಹಾಗೂ ಮೋಟಾರ್‍ಗಳನ್ನು ಚೀನಾದಿಂದ ಆಮದುಮಾಡಿಕೊಳ್ಳಲಾಗಿದೆ. ಈ ಸ್ಕೂಟರ್‍ಗಳ ಬಿಡುಗಡೆಯ ಜೊತೆಗೆ ಕಂಪನಿಯು ದೇಶಾದ್ಯಂತ ಚಾರ್ಜಿಂಗ್ ಪಾಯಿಂಟ್‍ಗಳನ್ನು ಆರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

22 ಕೇಮ್ಕೊ ಕಂಪನಿಯ ಪ್ರಕಾರ, ಕಂಪನಿಯು ಪ್ರತಿ ನಗರದಲ್ಲೂ 40ಐಯೊನೆಕ್ಸ್ ಚಾರ್ಜ್ ಪಾಯಿಂಟ್‍ಗಳನ್ನು ತೆರೆಯಲಿದೆ. ಇದರಿಂದಾಗಿ ಇ-ಮೊಬಿಲಿಟಿ ಸೇವೆಯು ಕೈಗೆಟುಕುವ ದರದಲ್ಲಿ ದೊರೆಯಲಿದ್ದು, ಹೆಚ್ಚಿನ ಜನರು ಪ್ರಯೋಜನ ಪಡೆಯಲಿದ್ದಾರೆ.

22ಕೇಮ್ಕೊ ಐ ಫ್ಲೋ
ಐ ಫ್ಲೋ ಸ್ಕೂಟರ್ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿದ್ದ 22 ಮೋಟಾರ್ಸ್‍ನ ಫ್ಲೋ ಸ್ಕೂಟರ್‍ನ ಅಪ್‍ಡೇಟೆಡ್ ಆವೃತ್ತಿಯಾಗಿದೆ. ಈ ಸ್ಕೂಟರಿನಲ್ಲಿ ರಿಜನರೇಟಿವ್ ಬ್ರೇಕಿಂಗ್, ಕ್ಲೌಡ್ ಕನೆಕ್ಟಿವಿಟಿ, ರಿವರ್ಸ್, ಕ್ರೂಸ್ ಹಾಗೂ ಸ್ಕೂಟರ್ ಪಂಕ್ಚರ್ ಆದಾಗ ನಿಧಾನವಾಗಿ ಚಲಿಸಲು ಡ್ರಾಗ್ ರೈಡಿಂಗ್ ಮೋಡ್‍ಗಳನ್ನು ನೀಡಲಾಗಿದೆ.

ಇದರ ಜೊತೆಗೆ ಹಿಲ್ ಅಸಿಸ್ಟ್, ಆಪ್ ಆಧಾರಿತ ಸ್ಮಾರ್ಟ್ ಫಂಕ್ಷನ್, ಆಲ್ ಎಲ್‍ಇಡಿ ಲೈಟ್ಸ್ ಹಾಗೂ ಸಿಬಿಎಸ್‍ಗಳನ್ನು ನೀಡಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 2100ವ್ಯಾಟ್ ಉತ್ಪಾದಿಸುವುದರಿಂದ ಈ ಸ್ಕೂಟರ್‍ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60 ಕಿ.ಮೀ ಆಗಿರಲಿದೆ. ಐಫ್ಲೋ ಸ್ಕೂಟರಿನ ಎರಡೂ ಕಡೆ ಡಿಸ್ಕ್ ಬ್ರೇಕ್‍ಗಳಿವೆ. ಈ ಸ್ಕೂಟರ್ ಆರು ಬಣ್ಣಗಳಲ್ಲಿ ಲಭ್ಯವಿರಲಿದೆ.

ಸ್ಕೂಟರಿನ ಜೊತೆಯಲ್ಲಿ ಬ್ಯಾಟರಿಗಳನ್ನು ನೀಡಲಾಗುವುದಿಲ್ಲ. ಕೇಮ್ಕೊ ಕಂಪನಿಯು ಬ್ಯಾಟರಿಗಳನ್ನು ಲೀಸ್‍ನ ಆಧಾರದ ಮೇಲೆ ನೀಡಲಿದೆ. ಇದರಿಂದಾಗಿ ಕಳಪೆ ದರ್ಜೆಯ ಬ್ಯಾಟರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಲೀಸ್‍ನ ಬೆಲೆಯು ಪ್ರತಿ ತಿಂಗಳಿಗೆ ಪ್ರತಿ ಬ್ಯಾಟರಿಯ ಮೇಲೆ ರೂ.500 ಆಗಿರಲಿದೆ.
MOST READ: ಉಬರ್ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಈ ಸ್ಕೂಟರನಲ್ಲಿ ಎರಡು ಬ್ಯಾಟರಿಗಳನ್ನು ಇಡಬಹುದು. ಒಂದು ಬ್ಯಾಟರಿ ಬಳಸಿದರೆ 40 ಕಿ.ಮೀ ದೂರದವರೆಗೆ ಚಲಿಸಬಹುದು, ಎರಡು ಬ್ಯಾಟರಿಗಳನ್ನು ಬಳಸಿದರೆ ಸುಮಾರು 80 ಕಿ.ಮೀ ವರೆಗೆ ಚಲಿಸಬಹುದು. ಕಂಪನಿಯು ಈ ಲೀಸಿಂಗ್ ಕಾಂಟ್ರಾಕ್ಟ್ ನಲ್ಲಿ ಬರುವ ಎಲ್ಲಾ ಬಗೆಯ ಸರ್ವಿಸ್ ವೆಚ್ಚಗಳನ್ನು ಭರಿಸಲಿದೆ. ಈ ಸ್ಕೂಟರಿನ ಮೇಲೆ 5 ವರ್ಷಗಳ ವಾರಂಟಿ ನೀಡಲಾಗುವುದು.

22 ಕೇಮ್ಕೊ ಲೈಕ್ 200
ಕಂಪನಿಯ ಪ್ರಕಾರ, ಲೈಕ್ 200 ರೆಟ್ರೊ ವಿನ್ಯಾಸದಲ್ಲಿರುವ ಆಧುನಿಕ ಸ್ಕೂಟರ್ ಆಗಿದ್ದು, ಪ್ರತಿ ದಿನದ ಸಂಚಾರಕ್ಕಾಗಿ ಅನುಕೂಲವಾಗಲಿದೆ. ಅನಾವರಣಗೊಳಿಸಲಾದ ಲೈಕ್ 200 ಸ್ಕೂಟರ್, ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಲೈಕ್ 150 ಸ್ಕೂಟರ್ ಅನ್ನು ಹೋಲುತ್ತದೆ.
MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!

ಕಂಪನಿಯ ಪ್ರಕಾರ ಲೈಕ್ 200 ವಿನ್ಯಾಸ ಹಾಗೂ ಫೀಚರ್‍ಗಳಲ್ಲಿ ಲೈಕ್ 150 ಸ್ಕೂಟರ್‍ನ ಅಂಶಗಳನ್ನು ಒಳಗೊಂಡಿದೆ. ಲೈಕ್ 150 ಸ್ಕೂಟರ್‍ನಲ್ಲಿ 150 ಸಿಸಿಯ ಎಂಜಿನ್ ಇದ್ದರೆ, ಲೈಕ್ 200ನಲ್ಲಿ ಹೊಸ 163 ಸಿಸಿ ಎಂಜಿನ್ ಇರಲಿದೆ. ಬಿಡುಗಡೆಯ ಸಮಯದಲ್ಲಿ ಕಂಪನಿಯು ಈ ಸ್ಕೂಟರ್‍ನ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಬಹಿರಂಗಪಡಿಸಲಿದೆ.

22 ಕೇಮ್ಕೊ ಎಕ್ಸ್ ಟೌನ್ 300ಐ
ಎಕ್ಸ್ ಟೌನ್ 300 ಐ ಸ್ಕೂಟರಿನಲ್ಲಿ 276 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್, ಟೂ ವಾಲ್ವ್, ಸಿಂಗಲ್ ಸಿಲಿಂಡರ್ ಹೊಂದಿರುವ ಎಂಜಿನ್ ಅಳವಡಿಸಲಾಗಿದ್ದು, 24.5 ಬಿಹೆಚ್‍ಪಿ ಹಾಗೂ 25 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್‍ನಲ್ಲಿ ಸಿವಿಟಿ ಅಳವಡಿಸಲಾಗಿದೆ. ಎಕ್ಸ್ ಟೌನ್ ಮ್ಯಾಕ್ಸಿ ಸ್ಕೂಟರ್ ಆಗಿದ್ದು, ಈ ಬೆಲೆಯಲ್ಲಿರುವ ಏಕೈಕ ಸ್ಕೂಟರ್ ಆಗಿದೆ.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ದೊಡ್ಡ ಗಾತ್ರವನ್ನು ಹೊಂದಿರುವ ಈ ಸ್ಕೂಟರ್‍ನ ತೂಕವು 181 ಕೆ.ಜಿಯಿದ್ದು, 12.5 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಕೆಲವು ಬೈಕ್‍ಗಳಷ್ಟೇ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್‍ನ ಎರಡೂ ಕಡೆ ಡಿಸ್ಕ್ ಬ್ರೇಕ್‍ಗಳಿದ್ದು, ಮುಂಭಾಗದಲ್ಲಿ 120/80-14 ಟಯರ್ ಹಾಗೂ ಹಿಂಭಾಗದಲ್ಲಿ 150/70-13 ಟಯರ್‍ಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಎಬಿಎಸ್ ಹೊಂದಿದೆ.


Click it and Unblock the Notifications








