ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಗುರುಗ್ರಾಮ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ 22 ಮೋಟಾರ್ಸ್ 2019ರ ಫೆಬ್ರವರಿ 7 ರಂದು, ಹಿಲ್ ಅಸಿಸ್ಟ್ ಫೀಚರ್‍‍ಗಳಿಗಾಗಿ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿತ್ತು. 22 ಮೋಟಾರ್ಸ್ ಕಂಪನಿಯು 2019ರ ಮೇ 9ರಂದು ಪೇಟೆಂಟ್ ಪಡೆದಿದೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಹಿಲ್ ಅಸಿಸ್ಟ್ ಫೀಚರ್ ಅನ್ನು, ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಅಳವಡಿಸಲಾಗಿದೆ. 22 ಮೋಟಾರ್ಸ್ ನೀಡುತ್ತಿರುವ ಸುರಕ್ಷಾ ಫೀಚರ್‍‍ಗಳಿಗೆ ಇದು ಹೊಸ ಸೇರ್ಪಡೆಯಾಗಿದೆ. 22 ಮೋಟಾರ್ಸ್‍‍ನ ಸಹ ಸ್ಥಾಪಕ ಹಾಗೂ ಸಿ‍ಇ‍ಒ ಪರ್ವೀನ್ ಕಾರ್ಬ್‍‍ರವರು ಮಾತನಾಡಿ, ನಾವು ಯಾವಾಗಲೂ ಗುಡ್ಡಗಾಡು ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳನ್ನು, ಅಪಾಯವನ್ನು ನಿರ್ಲಕ್ಷಿಸುತ್ತೇವೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಬಹುತೇಕ ನಾಲ್ಕು ಚಕ್ರದ ವಾಹನಗಳು ಹಿಲ್ ಸ್ಟಾರ್ಟ್ ಅಸಿಸ್ಟ್ ತರಹದ ಸುರಕ್ಷಾ ಫೀಚರ್‍‍ಗಳನ್ನು ಹೊಂದಿರುತ್ತವೆ. ನಮ್ಮ ಪ್ರಕಾರ ಎಲ್ಲಾ ವಾಹನಗಳ ಚಾಲಕರೂ ಸಹ ಸುರಕ್ಷತೆಯನ್ನು ಪಡೆಯಬೇಕಾಗುತ್ತದೆ ಎಂದು ತಿಳಿಸಿದರು. ಹಿಲ್ ಅಸಿಸ್ಟ್ ವಾಹನವು ಗುಡ್ಡಗಾಡಿನ ಇಳಿಜಾರಿನಲ್ಲಿ ವಾಹನ ಚಲಾಯಿಸಬೇಕಾದ ಸಂದರ್ಭದಲ್ಲಿ ಚಾಲಕನಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಜೊತೆಗೆ ಆರಾಮದಾಯಕ ಹಾಗೂ ಸುರಕ್ಷಿತವಾದ ಚಾಲನೆಯನ್ನು ನೀಡುತ್ತದೆ. ಈ ಟೆಕ್ನಾಲಜಿಯು ಗುಡ್ಡಗಾಡು ಪ್ರದೇಶದ ಇಳಿಜಾರುಗಳಲ್ಲಿ ಚಾಲನೆ ಮಾಡುವಾಗ ಆಟೋಮ್ಯಾಟಿಕ್ ಆಗಿ ಆಕ್ಟಿವೇಟ್ ಆಗುತ್ತದೆ. ಈ ಹಿಲ್ ಅಸಿಸ್ಟ್ ಫೀಚರ್ ಸ್ಕೂಟರ್ ಕೆಳಗೆ ಬೀಳದಂತೆ ನೋಡಿಕೊಳ್ಳುತ್ತದೆ ಹಾಗೂ ಚಾಲಕನು ಆಕ್ಸೆಲೆರೇಟ್ ಮಾಡಲು ಅವಕಾಶ ನೀಡುತ್ತದೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

22 ಮೋಟಾರ್ಸ್ ತಯಾರು ಮಾಡುವ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ರಿವರ್ಸ್ ಮೋಡ್, ಕ್ರೂಸ್ ಮೋಡ್ ಹಾಗೂ ಡ್ರಾಗ್ ಮೋಡ್‍‍ಗಳಿವೆ. ಈಗ ಹೊಸದಾಗಿ ಅಳವಡಿಸಲಾಗಿರುವ ಹಿಲ್ ಅಸಿಸ್ಟ್ ಫೀಚರ್‍‍ನಿಂದಾಗಿ 22 ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಅಡ್ವಾನ್ಸ್ ಟೆಕ್ನಾಲಜಿಗಳನ್ನು ಹೊಂದಿದಾಗುತ್ತದೆ. ರಿವರ್ಸ್ ಮೋಡ್‍‍ನಲ್ಲಿ ಚಾಲಕನು ಪಾರ್ಕಿಂಗ್ ಮಾಡಲು ಸ್ಕೂಟರ್‍‍ನಲ್ಲಿರುವ ಮೋಟಾರ್ ಅನ್ನು ಉಪಯೋಗಿಸುತ್ತಾನೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ರಿವರ್ಸ್ ಮೋಡಿನಲ್ಲಿ ಚಾಲಕನು ತನ್ನ ದೈಹಿಕ ಬಲವನ್ನು ಉಪಯೋಗಿಸುವ ಬದಲು, ಸ್ಕೂಟರ್‍‍ನಲ್ಲಿರುವ ಮೋಟಾರ್ ಪವರ್‍‍ನಿಂದಾಗಿ ಪಾರ್ಕಿಂಗ್ ಮಾಡಬಹುದಾಗಿದೆ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಡ್ರಾಗ್ ಮೋಡ್ ನಲ್ಲಿ ಸ್ಕೂಟರ್‍‍ನ ವೇಗವನ್ನು ಪ್ರತಿ ಗಂಟೆಗೆ ಕೇವಲ 3 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ಬ್ರೇಕ್‍‍ಡೌನ್ ಆದಾಗ ಅಥವಾ ಫ್ಲಾಟ್ ಟಯರ್ ಆದಾಗ, ಯಾವುದೇ ರೀತಿಯ ಅಧಿಕ ಶ್ರಮವನ್ನು ಹಾಕದೇ, ಸುಲಭವಾಗಿ ಹತ್ತಿರದಲ್ಲಿರುವ ಮೆಕಾನಿಕ್ ಬಳಿ ಕೊಂಡೊಯ್ಯ ಬಹುದು. ಈ ಸ್ಕೂಟರಿನಲ್ಲಿರುವ ಬ್ಯಾಟರಿ ಹಾಗೂ ಮೋಟಾರ್‍‍ಗಳು ಹಾನಿಯಾಗುವುದಿಲ್ಲ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಈ ಸ್ಕೂಟರ್‍‍ನಲ್ಲಿರುವ ಮತ್ತೊಂದು ಫೀಚರ್ ಆದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಚಾಲಕನ ವರ್ತನೆಯನ್ನು ಅಧ್ಯಯನ ಮಾಡುತ್ತದೆ, ಸರ್ವಿಸ್‍‍ಗಳನ್ನು ಯಾವಾಗ ಮಾಡಬೇಕು, ಯಾವಾಗ ಹೊಸ ಬಿಡಿ ಭಾಗಗಳನ್ನು ಬದಲಿಸಬೇಕು ಎಂಬುದನ್ನು ತಿಳಿಸುತ್ತದೆ. 22 ಮೋಟಾರ್ಸ್‍‍ನ ಪ್ರಕಾರ ಈ ಸಿಸ್ಟಂನಿಂದಾಗಿ ದೊಡ್ಡ ಮಟ್ಟದಲ್ಲಿ ಬ್ರೇಕ್‍‍ಡೌನ್ ಆಗುವುದನ್ನು ತಪ್ಪಿಸುತ್ತದೆ. ಈ ಸ್ಕೂಟರ್‍‍ನಲ್ಲಿ ಕ್ಲೌಡ್ ಆಧಾರಿತ ಡೇಟಾ ಅನಾಲಿಸಿಸ್ ಹಾಗೂ ಇಂಟೆಲಿಜೆಂಟ್ ಕೊಲ್ಯುಷನ್ ಡಿಟೆಕ್ಷನ್ ಅಲರ್ಟ್‍‍‍ಗಳಿವೆ.

MOST READ: ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

22 ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಸ್ಕೂಟರ್ ಅನ್ನು ಫ್ಲೋ ಎಂದು ಕರೆಯಲಾಗುವುದು. ಫ್ಲೋ ಸ್ಕೂಟರ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಸ್ಕೂಟರ್‍‍ನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.74,740 ಗಳಾಗಲಿದೆ.

MOST READ: ಮುಂದಿನ 3 ವರ್ಷಗಳಿಗೆ ಮಹೀಂದ್ರಾ ಹೂಡಿಕೆ ಮಾಡಲಿರುವ ಬಂಡವಾಳವೆಷ್ಟು?

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ಬೈಕಿಗೆ ಆಗಲಿ ಅಥವಾ ಸ್ಕೂಟರ್‍‍ಗೆ ಆಗಲಿ ಹಿಲ್ ಅಸಿಸ್ಟ್ ಏಕೆ ಬೇಕು ಎಂಬುದು ತಿಳಿಯುತ್ತಿಲ್ಲ. ಎಲೆಕ್ಟ್ರಿಕ್ ಸ್ಕೂಟರ್ ಬೆಟ್ಟದ ಮೇಲೆ ಹೋಗಬಹುದು ಅಥವಾ ಹೋಗದೇ ಇರಬಹುದು. ಬಹುತೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಗುಡ್ಡಗಾಡು ಪ್ರದೇಶಗಳಿಗೆ ತೆಗೆದುಕೊಂಡು ಹೋಗಲಾರರು. ಪರ್ವತ ಪ್ರದೇಶಗಳು ಬಹಳಷ್ಟು ನಗರಗಳನ್ನು ಹೊಂದಿಲ್ಲ.

ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

22 ಮೋಟಾರ್ಸ್ ಕಂಪನಿಯು ಅಳವಡಿಸಿರುವ ಸುರಕ್ಷಾ ಫೀಚರ್‍‍ಗಳು ಉತ್ತಮವಾಗಿಯೇ ಇವೆ. ಆದರೆ ಕಂಪನಿಯು ವಾಸ್ತವಕ್ಕೆ ಹತ್ತಿರವಿರುವ ಫೀಚರ್‍‍ಗಳನ್ನು ಅಳವಡಿಸಿದ್ದರೆ ಪ್ರಯೋಜನವಾಗುತ್ತಿತ್ತು.

More from DriveSpark

Article Published On: Thursday, May 30, 2019, 14:50 [IST]
English summary
22 Motors Adds Hill Assist To Electric Scooter Features - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+