ಮುಂದಿನ 3 ವರ್ಷಗಳಿಗೆ ಮಹೀಂದ್ರಾ ಹೂಡಿಕೆ ಮಾಡಲಿರುವ ಬಂಡವಾಳವೆಷ್ಟು?
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ತನ್ನ ಬಂಡವಾಳ ಹೂಡಿಕೆಯಲ್ಲಿ 20% ನಷ್ಟು ಏರಿಕೆ ಮಾಡಲಿದೆ. ಎಸ್‍ಯುವಿ ಹಾಗೂ ಟ್ರಾಕ್ಟರ್ ತಯಾರಿಕೆಯಲ್ಲಿ ಜನಪ್ರಿಯವಾಗಿರುವ ಈ ಕಂಪನಿಯು, ವಾಹನ ಉದ್ಯಮ ಮಾರುಕಟ್ಟೆಯಲ್ಲಿನ ಕುಸಿತವು ಕೊನೆಯಾಗಲಿದ್ದು, ಮೊದಲಿನಂತೆ ಚೇತರಿಸಿಕೊಳ್ಳಲಿದೆ ಎಂದು ಹೇಳಿದೆ.

ಮುಂಬೈ ಮೂಲದ ಆಟೋ ಮೋಬೈಲ್ ಕಂಪನಿಯು 2020-2022ರ ಆರ್ಥಿಕ ವರ್ಷದಲ್ಲಿ ರೂ.18,000 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಈ ಮೊದಲು ರೂ.15,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿತ್ತು. ಈ ಬಂಡವಾಳ ಹೂಡಿಕೆಯಲ್ಲಿ ಈಗಿರುವ ವಾಹನಗಳ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಯಲ್ಲಿ, ಕೃಷಿ ಹಾಗೂ ಆಟೋಮೋಬೈಲ್ ಉದ್ಯಮದಲ್ಲಿ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, ಅವಕಾಶವಿರುವ ಕಡೆಗಳಲ್ಲಿ ಹೂಡಿಕೆಯನ್ನು ಮಾಡಲಿದೆ.

ಮಹೀಂದ್ರಾ ಗ್ರೂಪಿನ ಮುಖ್ಯ ಹಣಕಾಸು ಅಧಿಕಾರಿ ವಿ ಎಸ್ ಪಾರ್ಥ ಸಾರಥಿರವರು ಮಾತನಾಡಿ, ತ್ರೈಮಾಸಿಕ ಅವಧಿಯಂತಹ ಚಿಕ್ಕ ಅವಧಿಗೆ ಹೂಡಿಕೆ ಮಾಡುವುದು ಅಷ್ಟೇನೂ ಲಾಭಕರವಲ್ಲ. 7% ಜಿಡಿಪಿಯ ನಿರೀಕ್ಷೆಯಲ್ಲಿರುವಾಗ ದೀರ್ಘಾವಧಿಗೆ ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯು ಲಾಭ ತರಲಿದೆ ಎಂದು ತಿಳಿಸಿದರು.

ಮಹೀಂದ್ರಾ ಕಂಪನಿಯು ಬುಧವಾರ ತನ್ನ ನಾಲ್ಕನೇ ತ್ರೈಮಾಸಿಕ ವಿವರದ ಬಗ್ಗೆ ಪ್ರಕಟಿಸಿದ್ದು, ಪ್ಯಾಸೆಂಜರ್ ವೆಹಿಕಲ್ ಹಾಗೂ ಕಮರ್ಷಿಯಲ್ ವೆಹಿಕಲ್ ಸೆಗ್‍ಮೆಂಟ್‍ಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕ್ರಮವಾಗಿ 3 - 5% ಹಾಗೂ 10 - 12% ನಷ್ಟು ನಿರೀಕ್ಷಿಸಿದೆ. ಮಹೀಂದ್ರಾ ಕಂಪನಿಯು ಈ ಆರ್ಥಿಕ ವರ್ಷದಲ್ಲಿ ಟ್ರಾಕ್ಟರ್ ಉದ್ಯಮದಲ್ಲಿ 5% ನಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜು ಮಾಡಿದೆ.

ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪವನ್ ಗೋಯಂಕಾರವರು ಮಾತನಾಡಿ, ಬೇರೆ ಕಂಪನಿಯವರು ತಮ್ಮ ಬಂಡವಾಳ ಹೂಡಿಕೆಯ ಬಗ್ಗೆ ಪರಿಶೀಲಿಸುತ್ತಾರೆ, ಆದರೆ ಮಹೀಂದ್ರಾ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ನಾವು ನಮ್ಮ ಬಂಡವಾಳವನ್ನು ಮುಂದಿನ 3 ವರ್ಷಗಳಿಗೆ 20%ನಷ್ಟು ಹೆಚ್ಚು ಮಾಡುತ್ತಿದ್ದೇವೆ. ನಾವು ನಮ್ಮ ಉತ್ಪನ್ನಗಳನ್ನು ಕಡಿಮೆ ಮಾಡಿಲ್ಲ, ಮೊದಲಿನಂತಯೇ ಉತ್ಪಾದನೆಯನ್ನು ಮುಂದುವರೆಸಿದ್ದು, ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವರ್ಷ ಮಹೀಂದ್ರಾ ಕಂಪನಿಯು ಬಿಎಸ್ 6 ನಿಯಮಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಲಿದೆ. ಬಿಎಸ್ ನಿಯಮಗಳು 2020 ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಕಂಪನಿಯು ತನ್ನ ವಾಹನಗಳಿಗಾಗಿ 2021ರ ಆರ್ಥಿಕ ವರ್ಷದ ಯೋಜನೆಗಳನ್ನು ರೂಪಿಸಿದೆ.
MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಹೊಸ ಸಿ ಸೆಗ್‍ಮೆಂಟಿನ ಡಬ್ಲ್ಯು601 ಎಂಬ ಹೆಸರಿನ ಹೊಸ ವಾಹನವನ್ನು ಚಕಾನ್ ಘಟಕದಲ್ಲಿ ತಯಾರಿಸಲಾಗುವುದು. ಇದರ ಜೊತೆಗೆ ಫೋರ್ಡ್ ಕಂಪನಿಗಾಗಿ ವಾಹನವನ್ನು ತಯಾರಿಸಲಿದೆ. ಮಹೀಂದ್ರಾ ಹಾಗೂ ಫೋರ್ಡ್ ಕಂಪನಿಗಳ ನಡುವೆ ವಾಹನ ತಯಾರಿಕೆ-ಹಂಚಿಕೆ ಒಪ್ಪಂದವಾಗಿದೆ.
MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಕಂಪನಿಯು ಹೊಸ ಪ್ರೆಸ್ ಲೈನ್ ಹೊಂದಲಿದ್ದು, ಈ ಬಣ್ಣದ ಫ್ಯಾಕ್ಟರಿಯಲ್ಲಿ ಪ್ರತಿ ವರ್ಷ 3 ಲಕ್ಷ ಉತ್ಪನ್ನಗಳನ್ನು ನಿಭಾಯಿಸಲಿದೆ. ಚಕಾನ್‍ನಲ್ಲಿ ಚಾಸೀಸ್‍ನ ಅಂತಿಮ ಹಂತದ ಘಟಕವನ್ನು ನಿರ್ಮಿಸಲಿದೆ.
MOST READ: ಸೋರಿಕೆಯಾದ ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಚಿತ್ರಗಳು

ಗೋಯಂಕಾರವರು ಮಾತನಾಡಿ, ಟ್ರಾಕ್ಟರ್‍ನ ತಯಾರಿಕೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮಾಡಲಾಗುವ ಬಂಡವಾಳ ಹೂಡಿಕೆಯು ಈ ಮುಂಚಿನ 5 ವರ್ಷಗಳಲ್ಲಿ ಮಾಡಲಾಗಿರಲಿಲ್ಲಎಂದು ತಿಳಿಸಿದರು.

ಟ್ರಾಕ್ಟರ್ ತಯಾರಿಕೆಗಾಗಿಯೇ ಕಂಪನಿಯು ಹೊಸ ಉತ್ಪಾದನಾ ಘಟಕವನ್ನು ತೆರೆಯಲಿದೆ.


Click it and Unblock the Notifications








