Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೋರಿಕೆಯಾದ ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ಚಿತ್ರಗಳು
ಮಹೀಂದ್ರಾ ಕಂಪನಿಯು ಈಗಿರುವ ಥಾರ್ ವಾಹನದ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ಹೊಸ ಆವೃತ್ತಿಯ ವಾಹನವನ್ನು 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಿದೆ. ಈಗಿರುವ ವಾಹನವನ್ನು ಸ್ಥಗಿತಗೊಳಿಸುವ ಮುನ್ನವೇ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುವುದು, ಹೊಸ ವಾಹನಕ್ಕೆ ಸಿಗ್ನೇಚರ್ ಎಡಿಷನ್ ಎಂಬ ಹೆಸರಿಡಲಾಗಿದೆ.

ಹೊಸ ಸಿಗ್ನೇಚರ್ ಎಡಿಷನ್ ವಾಹನದ ಚಿತ್ರಗಳು ಸೋರಿಕೆಯಾಗಿದ್ದು, ಈಗಿರುವ ವಾಹನಕ್ಕೆ ನೀಡುತ್ತಿರುವ ರಾಯಲ್ ಗುಡ್ ಬೈ ಇದು ಎಂದು ಬಣ್ಣಿಸಲಾಗಿದೆ. ಆಟೋಕಾರ್ ಬಿಡುಗಡೆಗೊಳಿಸಿರುವ ಚಿತ್ರಗಳಿಂದ ಹೊಸ ವಾಹನದ ಬಗ್ಗೆ ತಿಳಿಯುತ್ತದೆ. ಇದು ಈ ಸೆಗ್‍ಮೆಂಟಿನಲ್ಲಿರುವ ಪ್ರಿಮೀಯಂ ವಾಹನವಾಗಿದೆ. ಕೇವಲ 700 ಸಿಗ್ನೇಚರ್ ಎಡಿಷನ್ ವಾಹನಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುವುದು. ಈ ವಾಹನಗಳನ್ನು ನಪೋಲಿ ಬ್ಲಾಕ್ ಹಾಗೂ ಆಕ್ವಾ ಮರೀನ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಆಕ್ವಾ ಮರೀನ್ ಬಣ್ಣವನ್ನು ಇದೇ ಮೊದಲ ಬಾರಿಗೆ ಮಹೀಂದ್ರಾ ಥಾರ್ ವಾಹನದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದುವರೆಗೂ ಈ ವಾಹನವು ರೆಡ್ ರೇಜ್, ನಪೋಲಿ ಬ್ಲಾಕ್, ಮಿಸ್ಟ್ ಸಿಲ್ವರ್, ರಾಕಿ ಬೀಜ್ ಹಾಗೂ ಡೈಮಂಡ್ ವೈಟ್ ಎಂಬ 5 ಬಣ್ಣಗಳಲ್ಲಿ ಲಭ್ಯವಿತ್ತು.

ಆಕ್ವಾ ಮರೀನ್ ಬಣ್ಣವು ಡೀಪ್ ರಾಯಲ್ ಬ್ಲೂ ಬಣ್ಣದಂತೆಯೇ ಇದೆ. ಈ ಬಣ್ಣವನ್ನು ಮಹೀಂದ್ರಾ ಮರಾಜೋ ವಾಹನದಲ್ಲಿಯೂ ಕಾಣಬಹುದಾಗಿದೆ. ಮಹೀಂದ್ರಾ ಥಾರ್ ಸಿಗ್ನೇಚರ್ ಎಡಿಷನ್ ವಾಹನದಲ್ಲಿ 15 ಇಂಚಿನ, 5 ಸ್ಪೋಕ್ ಅಲಾಯ್ ವ್ಹೀಲ್‍ಗಳಿರಲಿದ್ದು, ಈ ವ್ಹೀಲ್‍ಗಳನ್ನು ಮೊದಲ ಬಾರಿಗೆ 2006ರಲ್ಲಿ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೊ ವಾಹನದಲ್ಲಿ ಅಳವಡಿಸಲಾಗಿತ್ತು.

ಈ ವ್ಹೀಲ್‍ಗಳನ್ನು ಮಹೀಂದ್ರಾ ಮಾರ್ಕ್ಸ್ ಮನ್ ಸೇರಿದಂತೆ ಇನ್ನೂ ಅನೇಕ ವಾಹನಗಳಲ್ಲಿ ಉಪಯೋಗಿಸಲಾಗುತ್ತಿದೆ, ಈ ವ್ಹೀಲ್‍ಗಳು ಟಫ್‍ನೆಸ್‍ಗೆ ಹೆಸರುವಾಸಿಯಾಗಿವೆ. ಹೊಸ ವಾಹನದ ಬಾನೆಟ್ ಮೇಲೆ ಕಪ್ಪು ಬಣ್ಣದ ಡೆಕಾಲ್ ಹಾಗೂ ಮುಂಭಾಗದ ಬಂಪರ್‍ಗಳಿವೆ. ಈ ವಾಹನವು ಲಿಮಿಟೆಡ್ ಎಡಿಷನ್ ಆದ ಕಾರಣ ಮಹೀಂದ್ರಾ ಕಂಪನಿಯು ಬ್ಯಾಡ್‍ಗಳನ್ನು ಅಳವಡಿಸಲು ಉದ್ದೇಶಿಸಿದೆ. ಈ ಬ್ಯಾಡ್ಜ್ ನಲ್ಲಿ ಮಹೀಂದ್ರಾ ಗ್ರೂಪಿನ ಚೇರ್‍ಮನ್‍ರಾದ ಆನಂದ್ ಮಹೀಂದ್ರಾರವರ ಸಹಿ ಇರಲಿದೆ.

ಇದರ ಜೊತೆಗೆ 700 ವಾಹನಗಳನ್ನು ಉತ್ಪಾದಿಸುತ್ತಿರುವ ಕಾರಣಕ್ಕೆ 700ರ ಸಂಖ್ಯೆಯನ್ನು ಬ್ಯಾಡ್ಜ್ ನಲ್ಲಿ ಅಳವಡಿಸಲಾಗುವುದು. ಈ ಸಿಗ್ನೇಚರ್ ಆವೃತ್ತಿಯಲ್ಲೂ ಸಹ ಸ್ಟಾಂಡರ್ಡ್ ಥಾರ್ ಸಿಆರ್‍ಡಿಇ ವಾಹನದಲ್ಲಿರುವಂತಹ 2.5 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 105 ಬಿಹೆಚ್‍ಪಿಯನ್ನು 3,800 ಆರ್‍ಪಿಎಂನಲ್ಲಿ ಹಾಗೂ ಪೀಕ್ ಟಾರ್ಕ್ ಅನ್ನು 1,800 ರಿಂದ 2,000 ಆರ್‍ಪಿಎಂನಲ್ಲಿ ಉತ್ಪಾದಿಸುತ್ತದೆ.
MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಈ ಎಂಜಿನ್‍ನಲ್ಲಿ ಅಳವಡಿಸಲಾಗಿರುವ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಎಲ್ಲಾ ನಾಲ್ಕು ವ್ಹೀಲ್‍ಗಳನ್ನು, ಲೋ ರೇಷಿಯೋ ಗೇರ್‍ಬಾಕ್ಸ್ ನಲ್ಲಿ 4 ಡಬ್ಲ್ಯುಡಿ ಸಿಸ್ಟಂ ಮುಖಾಂತರ ಚಲಾಯಿಸುತ್ತದೆ. ಮಹೀಂದ್ರಾ ಥಾರ್ ವಾಹನದಲ್ಲಿ ಏರ್ ಕಂಡಿಷನಿಂಗ್, ಪವರ್ ಸ್ಟೀಯರಿಂಗ್, ಇಂಡಿಪೆಂಡೆಂಟ್ ಫ್ರಂಟ್ ಸಸ್ಪೆಂಷನ್ ಹಾಗೂ ಎಬಿಎಸ್‍ಗಳಿರಲಿವೆ. ಆದರೆ ಈ ಎಸ್‍ಯುವಿಯಲ್ಲಿ ಹೊಸ ಸುರಕ್ಷಾ ನಿಯಮಗಳನ್ನು ಅಳವಡಿಸಲಾಗಿಲ್ಲ.
MOST READ: ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಈಗಿರುವ ವಾಹನವು ದಶಕಗಳಷ್ಟು ಹಳೆಯ ಮಹೀಂದ್ರಾ ಫಾರ್ಮುಲಾದ ಮೇಲೆ ಆಧಾರಿತವಾಗಿದೆ. ಈ ವಾಹನದಲ್ಲಿ ಹಳೆಯ ಫ್ರೇಮ್ ಚಾಸೀಸ್ ಹಾಗೂ ಹಳೆಯ ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಮಹೀಂದ್ರಾ ಕಂಪನಿಗೆ ಹೊಸ ಮಾದರಿಯ ವಾಹನವನ್ನು ಮಾರುಕಟ್ಟೆಗೆ ತರಲು ಇದು ಸೂಕ್ತ ಕಾಲವಾಗಿದ್ದು, ಈ ವಾಹನವನ್ನು 2020ರ ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು.
MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ

ಹೊಸ ಮಾದರಿಯಲ್ಲಿ ಹೊಸ ಡೀಸೆಲ್ ಎಂಜಿನ್ ಇರಲಿದ್ದು, 120 ರಿಂದ 140 ಬಿಹೆಚ್‍ಪಿ ಉತ್ಪಾದಿಸಲಿದೆ. ಮಾಲಿನ್ಯ ನಿಯಮ, ಇಂಧನ ಬೆಲೆಗಳು ಹಾಗೂ ಸಾಕಷ್ಟು ಕಾರಣಗಳಿಗಾಗಿ ಗ್ರಾಹಕರು ಪೆಟ್ರೋಲ್ ವಾಹನಗಳತ್ತ ಒಲವು ತೋರುತ್ತಿರುವ ಕಾರಣ, ಮಹೀಂದ್ರಾ ಕಂಪನಿಯು ಮುಂದಿನ ದಿನಗಳಲ್ಲಿ ಈ ವಾಹನದಲ್ಲಿ ಪೆಟ್ರೋಲ್ ಎಂಜಿನ್ ಅಳವಡಿಸಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಹೀಂದ್ರಾ ಥಾರ್ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ದ ಹೆಸರನ್ನು ಹೊಂದಿದೆ. ಈ ವಾಹನವನ್ನು ವಿಶ್ವದದ್ಯಾಂತವಿರುವ ಆಫ್ ರೋಡ್ ವಾಹನ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಮಹೀಂದ್ರಾ ಥಾರ್ ವಾಹನದಲ್ಲಿ ಅನೇಕ ಕೊರತೆಗಳಿದ್ದು, ಹಳೆ ಮಾದರಿಯ ವಿನ್ಯಾಸಕ್ಕೆ ಜೋತು ಬಿದ್ದಿದೆ.

ಮಹೀಂದ್ರಾ ಕಂಪನಿಯು ಹೊಸ ಮಾದರಿಯ ವಾಹನದಲ್ಲಿ ಹೊಸ ವಿನ್ಯಾಸಗಳನ್ನು ಅಳವಡಿಸಲಿದೆ. ಮಹೀಂದ್ರಾ ಥಾರ್ ವಾಹನದ ಜೊತೆಯಲ್ಲಿಯೆ ಫೋರ್ಸ್ ಮೋಟಾರ್ಸ್ ಸಹ ತನ್ನ ಹೊಸ ಗೂರ್ಖಾ ವಾಹನವನ್ನು ಬಿಡುಗಡೆ ಮಾಡಲಿದ್ದು, ಈ ಸೆಗ್‍ಮೆಂಟಿನಲ್ಲಿ ಪೈಪೋಟಿ ಏರ್ಪಡಲಿದೆ.
Source: Autocarindia