ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ರಾಜಕಾರಣಿಗಳು ಅಧಿಕಾರವನ್ನು ಮಾತ್ರ ಪ್ರೀತಿಸುತ್ತಾರೆ, ಅದರ ಮುಂದೆ ಬೇರೆಲ್ಲವೂ ಗೌಣ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತಾಗಿದೆ. ದೆಹಲಿಯ ಗದ್ದುಗೆಗಾಗಿ ದೇಶಾದ್ಯಂತ ಚುನಾವಣೆಗಳು ನಡೆದು, ನರೇಂದ್ರ ಮೋದಿರವರು ಮತ್ತೆ ಪ್ರಧಾನಿ ಗಾದಿಗೆ ಏರುವ ಮೂಲಕ ಚುನಾವಣೆ ಪ್ರಕ್ರಿಯೆಗಳೆಲ್ಲವೂ ಅಂತ್ಯಗೊಂಡಿವೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಅಧಿಕಾರ ಮಾತ್ರವಲ್ಲದೇ ಈ ರಾಜಕಾರಣಿಗಳು ಕಾರುಗಳ ಬಗ್ಗೆಯೂ ವ್ಯಾಮೋಹವನ್ನು ಹೊಂದಿದ್ದಾರೆ. ಈ ಲೇಖನದಲ್ಲಿ ಭಾರತದ 10 ರಾಜಕಾರಣಿಗಳ ಬಳಿ ಇರುವ ಕಾರುಗಳ ಬಗ್ಗೆ ತಿಳಿಸುತ್ತೇವೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ನರೇಂದ್ರ ಮೋದಿ - ರೇಂಜ್ ರೋವರ್ ವೋಗ್

ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ವಿಶೇಷವಾಗಿ ತಯಾರಿಸಲಾಗಿರುವ ರೇಂಜ್ ರೋವರ್ ವಾಹನದಲ್ಲಿ ಓಡಾಡುತ್ತಾರೆ. ಈ ವಾಹನವನ್ನು ರೇಂಜ್ ರೋವರ್ ವೋಗ್ ಎಂದು ಕರೆಯಲಾಗುವುದು, ಭದ್ರತಾ ಕಾರಣಗಳಿಗಾಗಿ ಈ ವಾಹನವನ್ನು ವಿಶೇಷವಾಗಿ ತಯಾರಿಸಲಾಗಿದೆ. ರೇಂಜ್ ರೋವರ್ ವೋಗ್ ವಾಹನದಲ್ಲಿ 3.0 ಲೀಟರಿನ ಸೂಪರ್‍‍ಚಾರ್ಜ್ದ್ ವಿ6 ಪೆಟ್ರೋಲ್ ಎಂಜಿನ್ ಇದ್ದು, ಅತ್ಯಧಿಕವಾದ 340 ಬಿ‍‍ಹೆಚ್‍‍ಪಿಯನ್ನು ಉತ್ಪಾದಿಸುತ್ತದೆ. ಈ ವಾಹನಕ್ಕೆ ವಿ‍ಆರ್8 ಬ್ಯಾಲಿಸ್ಟಿಕ್ ಸುರಕ್ಷತೆಯನ್ನು ಹೊದಿಸಲಾಗಿದ್ದು, ಬಾಂಬ್ ದಾಳಿ ನಡೆದರೂ ಯಾವುದೇ ತೊಂದರೆಯಾಗುವುದಿಲ್ಲ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಸೊನಿಯಾ ಗಾಂಧಿ - ರೇಂಜ್ ರೋವರ್

ನೆಹರೂ - ಗಾಂಧಿ ಮನೆತನದ ಸೊಸೆ ಸೋನಿಯಾ ಗಾಂಧಿರವರು ಮನಮೋಹನ್ ಸಿಂಗ್‍‍ರವರು ಭಾರತದ ಪ್ರಧಾನ ಮಂತ್ರಿಗಳಿದ್ದಾಗ ಆ ಸರ್ಕಾರದ ಹಿಂದಿನ ಶಕ್ತಿಯಾಗಿದ್ದರು. ಶ್ರೀಮತಿ ಸೋನಿಯಾ ಗಾಂಧಿರವರನ್ನು ಈಗಲೂ ಭಾರತದ ಪವರ್ ಫುಲ್ ಮಹಿಳೆಯರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗುತ್ತದೆ. ಅವರು ದೆಹಲಿಯಲ್ಲಿದ್ದಾಗ ರೇಂಜ್ ರೋವರ್ ಎಸ್‍‍ಯು‍‍ವಿಯಲ್ಲಿ ಓಡಾಡುತ್ತಾರೆ. ತಮ್ಮ ಮಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಂತೆ ಸೋನಿಯಾ ಗಾಂಧಿರವರೂ ಸಹ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಹೋಗುವಾಗ ಟಾಟಾ ಸಫಾರಿ ವಾಹನದಲ್ಲಿ ಓಡಾಡುತ್ತಾರೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ರಾಹುಲ್ ಗಾಂಧಿ - ಟೊಯೊಟಾ ಲ್ಯಾಂಡ್ ಕ್ರೂಸರ್

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿರವರು ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನದಲ್ಲಿ ಹೆಚ್ಚಿಗೆ ಓಡಾಡುತ್ತಾರೆ. ರಾಹುಲ್ ಗಾಂಧಿರವರು ಅನೇಕ ಬಾರಿ ತಮ್ಮ ಲ್ಯಾಂಡ್ ಕ್ರೂಸರ್ ಜೊತೆ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಲೆಕ್ಸಸ್ ಎಲ್‍ಎಕ್ಸ್ ಎಸ್‍‍ಯು‍‍ವಿ ಹಾಗೂ ಹೆಚ್ಚಿನ ಸುರಕ್ಷತೆ ಹೊಂದಿರುವ ಟಾಟಾ ಸಫಾರಿ ಕಾರುಗಳನ್ನು ಹೊಂದಿದ್ದಾರೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ರಾಜ್ ಠಾಕ್ರೆ - ಲ್ಯಾಂಡ್ ಕ್ರೂಸರ್

ಬಲಪಂಥಿಯ ಸಂಘಟನೆಯಾದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷರಾದ ರಾಜ್ ಠಾಕ್ರೆರವರು ಬೇರೆಲ್ಲಾ ವಾಹನಗಳಿಗಿಂತ ಹೆಚ್ಚಾಗಿ ಟೊಯೊಟಾ ಕಂಪನಿಯ ಲ್ಯಾಂಡ್ ಕ್ರೂಸರ್ ಎಸ್‍‍ಯು‍‍ವಿಯಲ್ಲಿ ಓಡಾಡುತ್ತಾರೆ. ಟೊಯೊಟಾ ಲ್ಯಾಂಡ್ ಕ್ರೂಸರ್‍‍ನ ಹೊರತಾಗಿ ಠಾಕ್ರೆರವರ ಬಳಿ ಹಿಂದಿನ ತಲೆಮಾರಿನ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ವಾಹನವಿದೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಒಮರ್ ಅಬ್ದುಲ್ಲಾ - ರೇಂಜ್ ರೋವರ್

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾರವರು ಅನೇಕ ಕಾರುಗಳನ್ನು ಹೊಂದಿದ್ದರೂ ಸಹ ತಮ್ಮ ನೆಚ್ಚಿನ ರೇಂಜ್ ರೋವರ್ ಕಾರಿನ ಜೊತೆಯಲ್ಲಿ ಹೆಚ್ಚಿಗೆ ಕಾಣಿಸಿಕೊಂಡಿದ್ದಾರೆ. ಒಮರ್ ಅಬ್ದುಲ್ಲಾರವರು ತಮ್ಮ ಕಾರನ್ನು ತಾವೇ ಚಾಲನೆ ಮಾಡುತ್ತಾರೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಕಿರಣ್ ಬೇಡಿ - ಮರ್ಸಿಡಿಸ್ ಜಿ‍ಎಲ್ - ಕ್ಲಾಸ್

ಭಾರತದ ಮೊಟ್ಟ ಮೊದಲ ಮಹಿಳಾ ಐ‍‍ಪಿ‍ಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಕಿರಣ್ ಬೇಡಿರವರು ತಮ್ಮ ಉದ್ಯೋಗವನ್ನು ತ್ಯಜಿಸಿದ ನಂತರ ರಾಜಕೀಯಕ್ಕೆ ಬಂದರು. ಈಗ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ಪೊಲೀಸ್ ಸೇವೆಯಲ್ಲಿದ್ದಾಗ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು. ಬೇಡಿರವರ ನೆಚ್ಚಿನ ಕಾರು ಮರ್ಸಿಡಿಸ್ ಜಿ‍ಎಲ್ - ಕ್ಲಾಸ್ ಆಗಿದ್ದು, ಈ ಎಸ್‍‍ಯುವಿ ಮರ್ಸಿಡಿಸ್ ಸರಣಿಯಲ್ಲಿ ಈ ಹಿಂದೆ ಬಿಡುಗಡೆಯಾದ ವಾಹನವಾಗಿತ್ತು. ಈ ಸರಣಿಯ ವಾಹನಗಳಿಗೆ ಬದಲಾಗಿ 2016ರಲ್ಲಿ ಜಿ‍ಎಲ್‍ಎಸ್ ಬಿಡುಗಡೆಗೊಳಿಸಲಾಗಿತ್ತು. ಈಗ ಈ ಸರಣಿಯನ್ನು ಜಿ63 ಎ‍ಎಂ‍‍ಜಿ ಎಂದು ಕರೆಯಲಾಗುತ್ತಿದೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಹೇಮಾ ಮಾಲಿನಿ - ಮರ್ಸಿಡಿಸ್ ಎಂ‍ಎಲ್ - ಕ್ಲಾಸ್

ನಟಿ ಹಾಗೂ ಸಂಸತ್ ಸದಸ್ಯರಾದ ಹೇಮಾ ಮಾಲಿನಿರವರ ಬಳಿ ಅನೇಕ ಕಾರುಗಳಿದ್ದರೂ, ಅವರು ಎಸ್‍‍ಯುವಿ ವಾಹನಗಳಿಗೆ ಆದ್ಯತೆ ನೀಡುತ್ತಾರೆ. ಕೆಲವು ದಿನಗಳ ಹಿಂದೆ ಇವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಸೆಡಾನ್ ವಾಹನವು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅವರ ಬಳಿ ಮರ್ಸಿಡಿಸ್ ಬೆಂಜ್ ಎಂ‍ಎಲ್ ಕ್ಲಾಸ್ ಎಸ್‍‍ಯು‍‍ವಿ ವಾಹನವಿದೆ. ಈ ವಾಹನದ ಉತ್ಪಾದನೆಯನ್ನು ನಿಲ್ಲಿಸಲಾಗಿದೆ, ಇದರ ಬದಲಿಗೆ ಇದೇ ಮಾದರಿಯ ಜಿ‍ಎಲ್‍ಇ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಪವನ್ ಕಲ್ಯಾಣ್ - ಮರ್ಸಿಡಿಸ್ ಜಿ55 ಎ‍ಎಂ‍‍ಜಿ

ಪವನ್ ಕಲ್ಯಾಣ್ ರವರು ತೆಲುಗು ಚಿತ್ರರಂಗದ ಜನಪ್ರಿಯ ನಟರು ಮಾತ್ರವಲ್ಲದೇ, ರಾಜಕಾರಣಿಯೂ ಆಗಿದ್ದಾರೆ. ಇವರು ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿರವರ ಸಹೋದರ. ಪವನ್ ಕಲ್ಯಾಣ್‍‍ರವರು ಹೆಚ್ಚಾಗಿ ತಮ್ಮ ಮರ್ಸಿಡಿಸ್ ಬೆಂಜಿನ ಜಿ55 ಎ‍ಎಂ‍‍ಜಿ ವಾಹನದೊಂದಿಗೆ ಕಾಣಿಸಿಕೊಂಡಿದ್ದಾರೆ. ಮರ್ಸಿಡಿಸ್ ಜಿ55 ವಾಹನವನ್ನು ಅದಕ್ಕೂ ಮುಂಚೆ ಇದ್ದ ಜಿ63 ವಾಹನದ ಬದಲಿಗೆ ಬಿಡುಗಡೆಗೊಳಿಸಲಾಗಿದೆ. ಜಿ55 ಎಸ್‍‍ಯು‍‍ವಿ ವಾಹನದಲ್ಲಿ 5.5 ಲೀಟರಿನ್ ವಿ8 ಸೂಪರ್‍‍ಚಾರ್ಜ್ ಎಂಜಿನ್‍‍ಯಿದ್ದು, 507 ಬಿ‍‍ಹೆಚ್‍‍ಪಿ ಹಾಗೂ 700 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ರಜನಿಕಾಂತ್ - ಬಿ‍ಎಂ‍‍ಡಬ್ಲ್ಯು ಎಕ್ಸ್5

ರಜನಿಕಾಂತ್‍‍ರವರು ಭಾರತದಲ್ಲಿ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಚಿತ್ರನಟರಾಗಿದ್ದಾರೆ. ಇವರ ಚಿತ್ರಗಳು ಬಿಡುಗಡೆಯಾದ ನಂತರ ಭಾರತದ ಮೂಲೆ ಮೂಲೆಯನ್ನು ತಲುಪುತ್ತವೆ. ತಮಿಳು ಚಿತ್ರರಂಗದ ದಂತಕಥೆ ಹಾಗೂ ಈಗ ರಾಜಕಾರಣಿಯಾಗಿರುವ ರಜನಿಕಾಂತ್‍‍ರವರ ಬಳಿ ಲಗ್ಷುರಿಗೆ ಹೆಸರಾಗಿರುವ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವಿದೆ. ಇದರ ಜೊತೆಗೆ ರಜನಿಕಾಂತ್ ರವರು ಹಳೆಯ ತಲೆಮಾರಿನ ಟೊಯೊಟಾ ಇನೋವಾ ಎಂ‍‍ಪಿ‍‍ವಿಯನ್ನು ಸಹ ಹೊಂದಿದ್ದಾರೆ.

MOST READ: ಡುಕಾಟಿ ರೈಡಿಂಗ್ ಅಭಿಯಾನದ ಬಗ್ಗೆ ಗೊತ್ತಾ?

ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ನವಜೋತ್ ಸಿದ್ದು - ಲ್ಯಾಂಡ್ ಕ್ರೂಸರ್

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ನವಜೋತ್ ಸಿದ್ದು ತಮ್ಮ ಹಾಸ್ಯ ಭರಿತ ಮಾತುಗಳಿಗೆ ಹೆಸರಾದವರು. ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಸಿಕ್ಸರ್ ಸಿದ್ದು ಎಂದೇ ಖ್ಯಾತರಾಗಿದ್ದ ಸಿದ್ದುರವರು ತಮ್ಮ ಲ್ಯಾಂಡ್ ಕ್ರೂಸರ್ ಎಸ್‍‍ಯು‍‍ವಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಪಂಜಾಬ್‍‍ನಲ್ಲಿ ಲ್ಯಾಂಡ್ ಕ್ರೂಸರ್ ವಾಹನಗಳು ಹೆಚ್ಚು ಜನಪ್ರಿಯವಾಗಿವೆ. ಸಿದ್ದುರವರು ಈಗ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

Most Read Articles

Kannada
English summary
Politicians & their luxury SUVs - Read in kannada

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more