ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಗ್ರೀವ್ಸ್ ಕಾಟನ್ ಒಡೆತನದ ಆಂಪಿಯರ್ ಎಲೆಕ್ಟ್ರಿಕ್ ವಾಹನಗಳ ತಯಾರಕ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ವಿತರಣೆಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ತಿಳಿಸಿದೆ. ಕಂಪನಿಯು ಈಗ ದೇಶಾದ್ಯಂತ 23 ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಈ ಹೊಸ ಡೀಲರ್‍‍ಶಿಪ್‍‍ಗಳಿಂದಾಗಿ ಹೆಚ್ಚು ಗ್ರಾಹಕರನ್ನು ತಲುಪಬಹುದಾಗಿದೆ. ಇದರಿಂದಾಗಿ ಗ್ರಾಹಕರು ಆಂಪಿಯರ್ ಕಂಪನಿಯ ಹೈ ಪರ್ಫಾಮೆನ್ಸ್ ಇ-ಸ್ಕೂಟರ್‍‍ಗಳನ್ನು ಸುಲಭವಾಗಿ ಖರೀದಿಸಬಹುದು. ಆಂಪಿಯರ್ ಕಂಪನಿಯ ಇ-ಸ್ಕೂಟರ್‍‍ಗಳು ಪರಿಸರ ಸ್ನೇಹಿಯಾಗಿವೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಕಂಪನಿಯ ಸ್ಕೂಟರ್‍‍ಗಳಿಂದಾಗಿ ಪ್ರತಿ ಕಿ.ಮೀಗೆ 15 ಪೈಸೆಯಷ್ಟು ಖರ್ಚಾಗಲಿದೆ. ಆಂಪಿಯರ್ ಕಂಪನಿಯು ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಖಂಡ ಹಾಗೂ ರಾಜಸ್ತಾನಗಳಲ್ಲಿ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್, ಸದ್ಯಕ್ಕೆ ಹೆಚ್ಚು ಮಾರಾಟವಾಗುತ್ತಿರುವ ಹೈ ಸ್ಪೀಡ್‍‍ನ ಜೀಲ್ ಎಲೆಕ್ಟ್ರಿಕ್ ಸ್ಕೂಟರಿನ ಜೊತೆಗೆ, ಮಿಡ್ ರೇಂಜ್‍‍ನಲ್ಲಿರುವ ಎಂಟ್ರಿ ಲೆವೆಲ್‍ ಸ್ಕೂಟರ್‍‍ಗಳಾದ ವಿ 48 ಎಲ್‍ಎ, ಮ್ಯಾಗ್ನಸ್ 60, ರಿಯೊ ಎಲ್‍ಎ ಹಾಗೂ ರಿಯೊ ಎಲ್‍ಐ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಗ್ರೀವ್ಸ್ ಕಾಟನ್‍‍ನ ಸಿ‍ಇ‍ಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ನಾಗೇಶ್ ಬಸವನಹಳ್ಳಿರವರು ಮಾತನಾಡಿ, ಪರಿಸರ ಸ್ನೇಹಿ ವಾಹನಗಳ ಸೆಗ್‍‍ಮೆಂಟಿನಲ್ಲಿ ಗ್ರೀವ್ಸ್ ಕಾಟನ್ ಅನ್ನು ಆರಂಭಿಸಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದರು.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ವೆಹಿಕಲ್ಸ್ ಮೂಲಕ, ಜನರು ಪ್ರತಿದಿನ ಪ್ರಯಾಣಿಸುವ ವಿಧಾನವನ್ನು ಬದಲಿಸಬೇಕೆಂದಿದ್ದೇವೆ. ಈ ಕಾರಣಕ್ಕಾಗಿ ಡೀಲರ್‍‍ಶಿಪ್‍‍ಗಳನ್ನು ವಿಸ್ತರಿಸಿದ್ದೇವೆ. 2020ರಲ್ಲಿ ನಮ್ಮ ವಾಹನಗಳನ್ನು ಮತ್ತಷ್ಟು ಜನರಿಗೆ ತಲುಪಿಸಲಿದ್ದೇವೆ ಎಂದು ಅವರು ಹೇಳಿದರು.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ವೆಹಿಕಲ್ಸ್‌ನ ಚೀಫ್ ಆಪರೇಷನ್ಸ್ ಅಧಿಕಾರಿಗಳಾದ ಪಿ ಸಂಜೀವ್‍‍ರವರು ಮಾತನಾಡಿ, ನಮ್ಮ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಲ್ಲಾ ರೀತಿಯ ಸವಾರರಿಗೆ ಸೂಕ್ತವಾಗಿವೆ. ಯುವಕರಿಂದ ಹಿಡಿದು ವಯಸ್ಸಾದವರೆಗೆ, ಆರಾಮದಾಯಕ ಸವಾರಿ ಬಯಸುವವರಿಂದ ಹಿಡಿದು ವ್ಯವಹಾರ ನಡೆಸುವವರೆಗೆ ಎಲ್ಲರಿಗೂ ಇಷ್ಟವಾಗಲಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಭಾರತದಾದ್ಯಂತ 50,000ಕ್ಕೂ ಹೆಚ್ಚು ಸ್ಕೂಟರ್‍‍ಗಳನ್ನು ಮಾರಾಟ ಮಾಡಲಾಗಿದೆ. ಈಗಾಗಲೇ 180ಕ್ಕೂ ಪಟ್ಟಣ ಹಾಗೂ ನಗರಗಳಲ್ಲಿ ನಮ್ಮ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಸಂಚರಿಸುತ್ತಿದ್ದು, ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸುತ್ತಿವೆ ಎಂದು ಹೇಳಿದರು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಹೊಸದಾಗಿ ಡೀಲರ್‍‍‍ಶಿಪ್‍‍ಗಳನ್ನು ಆರಂಭಿಸುತ್ತಿರುವುದರಿಂದ ಹೆಚ್ಚು ಗ್ರಾಹಕರನ್ನು ತಲುಪಬಹುದೆಂಬುದು ಆಂಪಿಯರ್ ಕಂಪನಿಯ ಅಭಿಪ್ರಾಯವಾಗಿದೆ. ಇದರಿಂದಾಗಿ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಅನುಕೂಲವಾಗಲಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಮುಂದಿನ ದಿನಗಳಲ್ಲಿಯೂ ಕೈಗೆಟಕುವ ಬೆಲೆಯ ಹಾಗೂ ಹೆಚ್ಚಿನ ಪರ್ಫಾಮೆನ್ಸ್ ನೀಡುವ ವಿಶ್ವ ದರ್ಜೆಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬಿಡುಗಡೆಯನ್ನು ಮುಂದುವರೆಸಲಾಗುವುದೆಂದು ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ತಿಳಿಸಿದೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಇದೇ ಸಂದರ್ಭದಲ್ಲಿ, ಆಂಪಿಯರ್ ಕಂಪನಿಯು ತನ್ನ ಜೀಲ್ ಎಲೆಕ್ಟ್ರಿಕ್ ಸ್ಕೂಟರಿನ ಮೇಲೆ ಉಚಿತ ಇನ್ಶೂರೆನ್ಸ್, ಫೇಮ್ 2 ಯೋಜನೆಯ ಮೇಲೆ ಸೌಲಭ್ಯ ಹಾಗೂ ರೂ.1,000 ಮೌಲ್ಯದ ಆಕ್ಸೆಸರೀಸ್‍‍ಗಳನ್ನು ನೀಡಲಿದೆ.

ದೇಶಾದ್ಯಂತ ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿದ ಆಂಪಿಯರ್ ಎಲೆಕ್ಟ್ರಿಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಸೆಗ್‍‍ಮೆಂಟ್ ಆರಂಭಿಕ ಹಂತದಲ್ಲಿದ್ದರೂ ಸಹ ವೇಗವಾಗಿ ಬೆಳೆಯುತ್ತಿದೆ. ಆಂಪಿಯರ್ ಎಲೆಕ್ಟ್ರಿಕ್ ವಾಹನಗಳ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈಗ ಹೆಚ್ಚುವರಿಯಾಗಿ 23 ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿರುವ ಆಂಪಿಯರ್ ಕಂಪನಿಗೆ ಶುಭ ಹಾರೈಕೆಗಳು.

Most Read Articles

Kannada
English summary
Ampere Electric Vehicles Opens 23 New Dealerships Across India - Read in Kannada
Story first published: Tuesday, December 31, 2019, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X