ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಭಾರತೀಯ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಅಥೆರ್ ಎನರ್ಜಿ ಇದೀಗ ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ಚೆನ್ನೈನಲ್ಲಿ ನಡೆದ ಇನ್ವೆಸ್ಟ್ ಮೆಂಟ್ ಹಾಗೂ ಸ್ಕಿಲ್ ಡೆವಲಪ್‍‍ಮೆಂಟ್ ಸಮಾವೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಈ ಒಪ್ಪಂದದ ಪ್ರಕಾರ ಅಥೆರ್ ಎನರ್ಜಿ ಕಂಪನಿಯು ನಾಲ್ಕು ಲಕ್ಷ ಚದರ ಅಡಿ ಅಳತೆ ಜಾಗದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಹೊಸ ಉತ್ಪಾದನಾ ಘಟಕವನ್ನು ಹೊಸೂರಿನಲ್ಲಿ ಸ್ಥಾಪಿಸಲಾಗುವುದು. ಈ ಘಟಕವು ತಮಿಳುನಾಡು ಸರ್ಕಾರದ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಅಡಿಯಲ್ಲಿ ಪೂರ್ಣ ಪ್ರಮಾಣದ ಬೆಂಬಲವನ್ನು ಹೊಂದಿರಲಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ ಎನರ್ಜಿಯ ಹೊಸ ಉತ್ಪಾದನಾ ಘಟಕದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲಾಗುತ್ತದೆ. ಇದರ ಜೊತೆಗೆ ಕಂಪನಿಯ ಲಿಥಿಯಂ-ಐಯಾನ್ ಬ್ಯಾಟರಿಯನ್ನೂ ತಯಾರಿಸಲಾಗುತ್ತದೆ. ಅಥೆರ್ ಎನರ್ಜಿಯ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಬೇಕಾದರೆ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವುದು ಅಥೆರ್ ಕಂಪನಿಗೆ ಅವಶ್ಯಕವಾಗಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ ಎನರ್ಜಿ ಎಲೆಕ್ಟ್ರಿಕ್ ವಾಹನಗಳ ಉದ್ಯಮದಲ್ಲಿರುವ ಅವಕಾಶವನ್ನು ಬಳಸಿಕೊಳ್ಳಲಿದೆ. ಈ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಅಥೆರ್ ಎನರ್ಜಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಈ ಸೆಗ್‍‍ಮೆಂಟಿನಲ್ಲಿ 4,000 ಉದ್ಯೋಗಗಳನ್ನು ಸೃಷ್ಟಿಸಲು ಬಯಸಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ ಎನರ್ಜಿ ಕಂಪನಿಯು ಬೆಂಗಳೂರು ಹಾಗೂ ಚೆನ್ನೈನಲ್ಲಿ ಫಾಸ್ಟ್ ಚಾರ್ಜಿಂಗ್‍‍ಗಳನ್ನು ಒದಗಿಸಲು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಸದ್ಯಕ್ಕೆ ಚೆನ್ನೈನಲ್ಲಿ ಹತ್ತು ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಇನ್ನು ಹೆಚ್ಚಿನ ಪ್ರಮಾಣದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯವು ಸಾಗಿದೆ. ಇದರ ಜೊತೆಗೆ ಅಥೆರ್ ಎನರ್ಜಿ ಕಂಪನಿಯು ಮುಂಬರುವ ದಿನಗಳಲ್ಲಿ ಹೈದರಾಬಾದ್, ಪುಣೆ, ದೆಹಲಿ ಹಾಗೂ ಮುಂಬೈಗಳಲ್ಲಿ ಈ ಸೌಲಭ್ಯವನ್ನು ವಿಸ್ತರಿಸಲು ಬಯಸಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ ಎನರ್ಜಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತರುಣ್ ಮೆಹ್ತಾರವರು ಮಾತನಾಡಿ, ಕಂಪನಿಯು ವೇಗವಾಗಿ ಬೆಳೆಯುತ್ತಿದ್ದು, ಈ ಬೆಳವಣಿಗೆಗೆ ದೊಡ್ಡ ಉತ್ಪಾದನಾ ಘಟಕದ ಅಗತ್ಯವಿದೆ. ಹೊಸ ಉತ್ಪಾದನಾ ಘಟಕದಿಂದಾಗಿ ಕಂಪನಿಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳನ್ನು ಪೂರೈಸಲಿದೆ ಎಂದು ಹೇಳಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ತಮಿಳುನಾಡು ವಾಹನ ತಯಾರಿಕೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿರುವ ಕಂಪನಿಗಳು ಪರಿಸರ ಸ್ನೇಹಿ ವಾಹನಗಳನ್ನು ತಯಾರಿಸಲು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಹ್ತಾ ಹೇಳಿದರು. ಬೆಂಗಳೂರಿನಲ್ಲಿರುವ ರಿಸರ್ಚ್ ಹಾಗೂ ಡೆವಲಪ್‍‍ಮೆಂಟ್ ಕೇಂದ್ರಕ್ಕೆ ಹತ್ತಿರವಿರುವ ಕಾರಣಕ್ಕೆ ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಈ ವರ್ಷದ ಜುಲೈನಲ್ಲಿ ಅಥೆರ್ ಎನರ್ಜಿ ಕಂಪನಿಯು ಚೆನ್ನೈನಲ್ಲಿರುವ ತನ್ನ ಗ್ರಾಹಕರಿಗಾಗಿ ಪ್ರಿ ಆರ್ಡರ್‍‍ಗಳನ್ನು ಶುರುಮಾಡಿತು. ಈ ಪ್ರಿ ಆರ್ಡರ್‍‍ಗಳು ಡಿಸೆಂಬರ್‍‍ವರೆಗೂ ಮುಕ್ತಾಯವಾಗಿವೆ ಎಂದು ಅಥೆರ್ ಎನರ್ಜಿ ಕಂಪನಿ ಹೇಳಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಮೂರನೇ ಹಂತದ ಪ್ರಿ ಆರ್ಡರ್ ಈಗ ಶುರುವಾಗಿದ್ದು, ಈ ಹಂತದಲ್ಲಿನ ಅಥರ್ 450 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 2020ರ ಫೆಬ್ರವರಿ ಹಾಗೂ ಮಾರ್ಚ್ ನಡುವೆ ವಿತರಿಸಲಾಗುವುದು. ಅಥೆರ್ ಎನರ್ಜಿ ಕಂಪನಿಯು ಸದ್ಯಕ್ಕೆ ಅಥೆರ್ 450 ಸ್ಕೂಟರ್ ಅನ್ನು ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ ಎನರ್ಜಿ ಕಂಪನಿಯು ಅಥೆರ್ 340 ಹೆಸರಿನ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದರೂ 99%ಗೂ ಹೆಚ್ಚು ಜನರು ಅಥೆರ್ 450 ಸ್ಕೂಟರ್ ಅನ್ನು ಖರೀದಿಸಿದ ಕಾರಣಕ್ಕೆ ಅಥೆರ್ 340 ಸ್ಕೂಟರ್ ಅನ್ನು ಸ್ಥಗಿತಗೊಳಿಸಿತು. ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಗಾಗಿ ಮತ್ತೊಂದು ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ 450 ಸ್ಕೂಟರಿನಲ್ಲಿ 2.4 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿ 5.4 ಕಿ.ವ್ಯಾ ಪವರ್ ಹಾಗೂ 20.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 80 ಕಿ.ಮೀಗಳಾಗಿದೆ ಎಂದು ಕಂಪನಿಯು ಹೇಳಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 75 ಕಿ.ಮೀ ದೂರ ಚಲಿಸುತ್ತದೆ. ಅಥೆರ್ 450 ಸ್ಕೂಟರಿನಲ್ಲಿ ಪಾರ್ಕಿಂಗ್ ಅಸಿಸ್ಟ್, ಸೀಮ್‍‍ಲೆಸ್ ಚಾರ್ಜಿಂಗ್, ಆನ್‍‍ಬೋರ್ಡ್ ನ್ಯಾವಿಗೇಷನ್ ಹೊಂದಿರುವ 7 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿವೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಅಥೆರ್ 450 ಸ್ಕೂಟರಿನ ಮಾಲೀಕರು ತಮ್ಮ ಫೋನ್‌ಗಳಿಂದ ನ್ಯಾವಿಗೇಷನ್ ಅನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಕಳುಹಿಸಬಹುದು. ಈ ಅಪ್ಲಿಕೇಶನ್‍‍ನಿಂದ ಸ್ಕೂಟರ್ ಮಾಲೀಕರು ವಾಹನದ ಸ್ಥಿತಿಯನ್ನು ಪರಿಶೀಲಿಸಬಹುದು. ಬ್ಯಾಟರಿಯನ್ನು ಸಹ ಪರಿಶೀಲಿಸ ಬಹುದು. ಅಥೆರ್ 450 ಸ್ಕೂಟರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.07 ಲಕ್ಷಗಳಾಗಿದೆ.

ತಮಿಳುನಾಡು ಸರ್ಕಾರದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಅಥೆರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಥೆರ್ ಎನರ್ಜಿ ಹಾಗೂ ತಮಿಳುನಾಡು ಸರ್ಕಾರದ ನಡುವಿನ ಒಪ್ಪಂದಿಂದಾಗಿ ಹೊಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಅಥೆರ್ ಎನರ್ಜಿಯ ಸ್ಕೂಟರ್‍‍ಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವ ಸಾಧ್ಯತೆಗಳಿವೆ.

More from DriveSpark

Article Published On: Monday, December 2, 2019, 12:59 [IST]
English summary
Ather Energy Signs MoU With Government Of Tamil Nadu: To Create 4,000 Jobs Over Five Years - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+