ಭರ್ಜರಿ ಆಫರ್ ಘೋಷಿಸಿದ ಬಜಾಜ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬಜಾಜ್ ಆಟೋ ಹಬ್ಬದ ವೇಳೆಯಲ್ಲಿ ತನ್ನ ಎಲ್ಲಾ ಮಾದರಿಯ ಬೈಕುಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯ ಪ್ರಮುಖ ಮಾದರಿ ಬಜಾಜ್ ಡೊಮಿನಾರ್ 400 ಬೈಕಿನ ಮೇಲೆ ರೂ.1,500 ರಿಂದ ರೂ.6,000 ವರೆಗೆ ನಗದು ರಿಯಾಯಿತಿ ನೀಡಲಾಗುವುದು.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ನಗದು ರಿಯಾಯಿತಿಯ ಜೊತೆಗೆ ಬಜಾಜ್ ಐದು ವರ್ಷಗಳ ವಾರಂಟಿ ಮತ್ತು 5 ಉಚಿತ ಸರ್ವಿಸ್‍‍ಗಳೊಂದಿಗೆ ರೂ.1,200 ಗಳ ನಿರ್ವಹಣಾ ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ. ಬಜಾಜ್ ಬೈಕ್‍‍ಗಳ ಭರ್ಜರಿ ಆಪರ್ ಮತ್ತು ರಿಯಾಯಿತಿಗಳ ಕುರಿತು ಮಾಹಿತಿ ಇಲ್ಲಿದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಸಿಟಿ100

ಸಿಟಿ 100 ಬಜಾಜ್ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಆಗಿದ್ದು, ಮೂರು ಮಾದರಿಗಳನ್ನು ಹೊಂದಿದೆ. ಅವುಗಳಲ್ಲಿ ಕಿಕ್ ಸ್ಟಾರ್ಟ್(ಕೆಎಸ್) ಸ್ಪೋಕ್, ಕೆಎಸ್ ಅಲಾಯ್ ಮತ್ತು ಎಲೆಕ್ಟ್ರಿಕ್-ಸ್ಪಾರ್ಟ್(ಇಎಸ್) ಸೇರಿವೆ. ಈ ಮಾದರಿಗಳು ಹಬ್ಬದ ವಿಶೇಷ ರಿಯಾಯಿತಿ ಒಳಗೊಂಡಿಲ್ಲ. ಇಎಸ್ ಮಾದರಿಯ ಬೈಕಿನ ಮೇಲೆ ರೂ.1,500 ಮತ್ತು ರೂ.1,200 ವಿನಾಯಿತಿ ನೀಡುವುದರ ಜೊತೆಗೆ, ಐದು ವರ್ಷಗಳ ವಾರಂಟಿ ಮತ್ತು 5 ಉಚಿತ ಸೇವೆಗಳ ಪ್ಯಾಕೇಜ್‍‍ನೊಂದಿಗೆ ನೀಡಲಾಗುವುದು.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಸಿಟಿ 110

ಬಜಾಜ್ ಸಿಟಿ 110 ಬೈಕ್ ಮೇಲೆ ರೂ.2,000 ಮತ್ತು 1,200 ಸಾವಿರ ಸರ್ವಿಸ್ ಪ್ಯಾಕೇಜ್‍ ನೀಡಲಿದೆ. ಒಟ್ಟು ರೂ.3200 ವಿಶೇಷ ಕೊಡುಗೆ. ಈ ಬೈಕ್ ಎಲೆಕ್ಟ್ರಿಕ್ ಸ್ಟಾರ್ಟ್ -ಕಿಕ್ ಸ್ಟಾರ್ಟ್ ಆಯ್ಕೆಗಳಲ್ಲಿ ಲಭ್ಯವಿದೆ. ಸಿಟಿ 110ಸಿಸಿ ಬೈಕ್ 8.4 ಬಿಎಚ್‍ಪಿ ಪವರ್ ಮತ್ತು 9.81 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ಗೆ 4-ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಪ್ಲಾಟಿನಾ 100

ಬಜಾಜ್ ಪ್ಲಾಟಿನಾ 100 ಬೈಕಿಗೆ ಸರ್ವಿಸ್ ಪ್ಯಾಕೇಜ್, ರೂ.2,000 ದವರೆಗೆ ನಗದು ರಿಯಾಯಿತಿ ಮತ್ತು ಒಟ್ಟು ರೂ.3,200 ರಿಯಾಯಿತಿ ಘೋಷಿಸಿದೆ. ಈ ಬೈಕ್ 102 ಸಿಸಿ ಮೋಟಾರ್ 7.7 ಬಿ‍ಎ‍ಚ್‍ಪಿ ಪವರ್ ಮತ್ತು 8.34 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಪ್ಲಾಟಿನಾ 110

ಬಜಾಜ್ ಪ್ಲಾಟಿನಾ ಬೈಕ್ 110 ಸಿಬಿಎಸ್ ಮತ್ತು 110 ಎಚ್ ಎಂಬ ಎರಡು ಮಾದರಿಗಳಲ್ಲಿ ಈ ಬೈಕ್ ಲಭ್ಯವಿದೆ. ಪ್ಲಾಟಿನಾ 110 ಸಿ‍ಬಿಎಸ್ ಮಾದರಿಯು ರೂ.2000 ನಗದು ರಿಯಾಯಿತಿ ಮತ್ತು ಪ್ಲಾಟಿನಾ 110 ಎಚ್-ಗೇರ್ ಮಾದರಿ ರೂ.2,500 ನಗದು ಪ್ರಯೋಜನೆ ಸಿಗಲಿದೆ. ಈ ಎರಡು ಮಾದರಿಗಳಲ್ಲಿ ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಬಜಾಜ್ ಪ್ಲಾಟಿನಾ ಬೈಕ್ 102 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 7.7 ಬಿಎಚ್‍ಪಿ ಪವರ್ ಮತ್ತು 8.3 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಡಿಸ್ಕವರ್ 110 ಮತ್ತು 125

ಬಜಾಜ್ ಡಿಸ್ಕವರ್ ಬೈಕಿನ ಮೇಲೆ ರೂ.3,200 ನಗದು ರಿಯಾಯಿತಿ ಮತ್ತು ರೂ.2,000 ಮತ್ತು 1,200 ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಅನ್ನು ಘೋಷಿಸಿದೆ. ಹೆಚ್ಚು ಪವರ್‍‍ಫುಲ್ ಡಿಸ್ಕವರಿ 125 ಬೈಕ್ ರೂ.3200 ವರೆಗೂ ಕೊಡುಗೆಯನ್ನು ಘೋಷಿಸಿದ್ದಾರೆ. ಬಾಜಾಜ್ 124.5ಸಿಸಿ ಎಂಜಿನ್ 10.8 ಬಿಎಚ್‍ಪಿ ಪವರ್ ಮತ್ತು 11 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಪಲ್ಸರ್ 125

ಪಲ್ಸರ್ 125 ಬಜಾಜ್ ಕಂಪನಿಯ ಹೊಸ ಸೇರ್ಪಡೆಯಾಗಿದ್ದು, ಪಲ್ಸರ್ ಸರಣಿಯ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಈ ಹೊಸ ಬೈಕಿಗೆ ಹಬ್ಬದ ಪ್ರಯುಕ್ತ ರೂ.2,500 ಮತ್ತು ರೂ.1,200 ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಅನ್ನು ಘೋಷಿಸಿದೆ. ಬಜಾಜ್ ಪಲ್ಸರ್ 12.4 ಸಿಸಿ ಸಿಂಗಲ್ ಸಿಲಿಂಡರ್ . ಏರ್ ಕೂಲ್ ಎಂಜಿನ್ 11.8 ಬಿಎಚ್‍ಪಿ ಪವರ್ ಮತ್ತು 11 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಪಲ್ಸರ್ 150

ಪಲ್ಸರ್ 150 ಕ್ಲಾಸಿಕ್ ಬೈಕ್ ನಿಯೊನ್,ಟ್ವಿನ್ ಡಿಸ್ಕ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಎಲ್ಲಾ ಮಾದರಿಗಳ ಮೇಲೆ ರೂ.3.000 ನಗದು ರಿಯಾಯಿತಿ ಮತ್ತು ರೂ.1,200 ಸರ್ವಿಸ್ ನಿರ್ವಾಹಣೆ ಪ್ಯಾಕೇಜ್ ಘೋಷಿಸಿದೆ. 149ಸಿಸಿ ಎಂಜಿನ್ 13.8 ಬಿಎಚ್‍ಪಿ ಪವರ್ ಮತ್ತು 13.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ 180 ಎಫ್

ಬಜಾಜ್ ಪಲ್ಸರ್ 180 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಗೊಳಿಸಲಾಗಿದೆ. ಹಬ್ಬದ ಪ್ರಯುಕ್ತ ರೂ.4,200 ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಮತ್ತು ರೂ.3,000 ನಗದು ರಿಯಾಯಿತಿಯನ್ನು ಘೋಷಿಸಿದೆ. ಪಲ್ಸರ್ 180 ಎಫ್ ಬೈಕ್ 178 ಸಿಸಿ ಎಂಜಿನ್ 16.7 ಬಿ‍ಎಚ್‍ಪಿ ಪವರ್ ಮತ್ತು 14.22 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಪಲ್ಸರ್ ಆರ್‍ಎಸ್ 200, ಎನ್‍ಎಸ್200 ಮತ್ತು 220 ಎಫ್

ಬಜಾಜ್ ಪಲ್ಸರ್ ಈ ಮೂರು ಮಾದರಿಗಳ ಮೇಲೆ ರೂ.3,800 ವರೆಗೂ ನಗದು ರಿಯಾಯಿತಿ ಮತ್ತು ರೂ.3,800 ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಪಲ್ಸರ್ ಎನ್‍ಎಸ್ ಮತ್ತು ಆರ್‍‍ಎಸ್ 200 ಬೈಕ್‍‍ಗಳು 199.ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಅವೆಂಜರ್ 160 ಮತ್ತು 220

ಬಜಾಜ್ ಅವೆಂಜರ್ 160 ಮತ್ತು 220 ಬೈಕ್ ರೂ.3,000 ನಗದು ರಿಯಾಯಿತಿ ಮತ್ತು ಸರ್ವಿಸ್ ನಿರ್ವಹಣೆ ಪ್ಯಾಕೇಜ್ ಅನ್ನು ಘೋಷಿಸಿದೆ. ಅವೆಂಜರ್ 160 ಬೈಕ್ 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 14.7 ಬಿಎಚ್‍ಪಿ ಮತ್ತು 13.5 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅವೆಂಜರ್ 220 ಬೈಕ್ 220 ಸಿಸಿ ಎಂಜಿನ್ 18.7 ಬಿ‍ಎಚ್‍‍ಪಿ ಪವರ್ ಮತ್ತು 17.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಡೊಮಿನಾರ್ 400

ಬಜಾಜ್ ಡೊಮಿನಾರ್ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಬಜಾಜ್ ಡೊಮಿನಾರ್ 400 ಬೈಕಿನ ಮೇಲೆ ರೂ.6,000 ನಗದು ರಿಯಾಯಿತಿ, ವಾರಂಟಿ ಮತ್ತು ಸರ್ವಿಸ್ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಹಬ್ಬದ ಪ್ರಯುಕ್ತ ಎಲ್ಲಾ ವಿಶೇಷ ಕೊಡುಗೆಯನ್ನು ಸೇರಿಸಿ ಒಟ್ಟು ರೂ.7,200 ಉಳಿಸಬಹುದು. ಈ ಬೈಕ್ 373.3 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ 39.4 ಬಿ‍ಎಚ್‍ಪಿ ಪವರ್ ಮತ್ತು 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭರ್ಜರಿ ಆಫರ್ ಘೋಷಿಸಿದ ಬಜಾಜ್

ಬಜಾಜ್ ಬೈಕ್ ಅಭಿಮಾನಿಗಳಿಗೆ ಕಂಪನಿಯು ಸಿಹಿ ಸುದ್ದಿ ನೀಡಿದೆ. ಬಜಾಜ್ ಬೈಕ್ ಖರೀದಿಸುವವರಿಗೆ ಇದು ಸುವರ್ಣ ಅವಕಾಶವಾಗಿದೆ. ಬಜಾಜ್ ಪ್ರಿಯರಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡು ಮಾರಾಟದಲ್ಲಿ ಸಂಖ್ಯೆಯು ಇಳಿಕೆಯಾಗಿತ್ತು. ಆದರೆ ಈ ಭರ್ಜರಿ ಆಫರ್ ನೀಡುವ ಮೂಲಕ ಹಬ್ಬದ ವೇಳೆಯಲ್ಲಿ ಮಾರಾಟದಲ್ಲಿ ಏರಿಕೆಯಾಗಲಿದೆ ಎಂಬ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

Article Published On: Sunday, September 29, 2019, 11:00 [IST]
English summary
Bajaj Discounts & Benefits: Free Maintenance Package & Other Offers Available Across Models - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+