ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ಬೈಕ್ ಮಾಲೀಕರಿಗೆ ಉಚಿತ ಸರ್ವಿಸ್

ಭಾರತದ ಹಲವು ಪ್ರದೇಶಗಳಲ್ಲಿ ಭೀಕರ ಪ್ರವಾಹ ಸಂಭವಿಸಿ ಭಾರೀ ಆಸ್ತಿ-ಪಾಸ್ತಿಗಳು ಜಲಾವೃತಗೊಂಡು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರ ನೆರವಿಗೆ ಧಾವಿಸಿರುವ ಬಜಾಜ್ ಆಟೋ ಸಂಸ್ಥೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಚಿತ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕೆಟ್ಟು ನಿಂತ ಬೈಕ್‍‍ಗಳಿಗೆ ಉಚಿತ ಸರ್ವಿಸ್ ಘೋಷಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಪ್ರವಾಹ ಪೀಡಿತ ಪ್ರದೇಶಗಳಾದ ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ಗುಜರಾತ್‍‍ನಲ್ಲಿ ಈ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಎಕೋನಾಮಿಕ್ಸ್ ಟೈಮ್ಸ್ ಪ್ರಕಾರ, ಆಗಸ್ಟ್ 19 ರಿಂದ ಸೆಪ್ಟೆಂಬರ್‍ 7‍ರವರೆಗೂ ಬಜಾಜ್ ಆಟೋ ಮತ್ತು ಡೀಲರ್‍‍‍ಶಿಪ್ ವತಿಯಿಂದ ಈ ಶಿಬಿರವನ್ನು ಆಯೋಜಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಕಂಪನಿ ತಿಳಿಸಿದ ಪ್ರಕಾರ ಬಜಾಜ್ ಮಾಲೀಕರು ತಮ್ಮ ವಾಹನವನ್ನು ಬಜಾಜ್ ಡಿಲರ್ ಬಳಿ ಅಥವಾ ನಿಮ್ಮ ಹತ್ತಿರದ ಸರ್ವಿಸ್ ಸೆಂಟರ್‍‍ಗಳಿಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ವಾಹನದ ಇಂಜಿನ್‍ಗಳಿಗೆ ನೀರು ಹರಿದು ಅದರಲ್ಲಿ ಸಮಸ್ಯೆ ಉಂಟದಾಗ ಸಂದರ್ಭದಲ್ಲಿ ಅದನ್ನು ಪರಿಶೀಲಿಸುತ್ತಾರೆ ಹಾಗೂ ನಿಮ್ಮ ವಾಹನದ ಸಂಪೂರ್ಣವಾದ ಚೆಕ್‍ಆಪ್ ಕೂಡಾ ಉಚಿತವಾಗಿ ನಡೆಸಲಾಗುತ್ತದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಉಚಿತ ಸೇವೆಗಳು

ಡೀಲರ್ ಶಿಪ್ ವತಿಯಿಂದ ಸಂಪೂರ್ಣವಾದ ಚೆಕ್‍ಆಪ್, ಉಚಿತ ಆಯಿಲ್ ಬದಲಾವಣೆ,ಇಂಜಿನ್ ಆಯಿಲ್, ಆಯಿಲ್ ಫಿಲ್ಟರ್, ಏರ್ ಫಿಲ್ಟರ್ ಹಾಗೂ ಉಚಿತವಾಗಿ ವಾಹನದ ಬೀಡಿಭಾಗಗಳನ್ನು ಬದಲಾಯಿಸುತ್ತಾರೆ. ಬಜಾಜ್ ಆಟೊ ಸಂಸ್ಥೆಯು ಇಂತಹ ಹಲವಾರು ಉಚಿತ ಸೇವೆಯನ್ನು ಶಿಬಿರದಲ್ಲಿ ಹಮ್ಮಿಕೊಂಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಬಜಾಜ್ ಆಟೋ ಸೈಕಲ್ ಬ್ಯುಸಿನೆಸ್ ಅಧ್ಯಕ್ಷ ಸರಾಂಗ್ ಮಾತನಾಡಿ ಭೀಕರ ಪ್ರವಾಹದಿಂದ ನಮ್ಮ ಗ್ರಾಹಕರ ಮೇಲೆ ದೊಡ್ಡ ಪಾರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ನಾವು ಮತೊಮ್ಮೆ ನಮ್ಮ ಗ್ರಾಹಕರ ಪರವಾಗಿ ನಿಲ್ಲುತ್ತೇವೆ ಜೊತೆಗೆ ವಾಹನಗಳು ಮತ್ತೆ ರಸ್ತೆಗೆ ಇಳಿಯುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಕಂಪನಿಯೂ ಈಗಗಾಲೇ ವಾಹನಗಳಿಗೆ ಬೇಕಾಗಿರುವ ಹಲವಾರು ಬೀಡಿ ಭಾಗಗಳನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಡೀಲರ್ ಶಿಪ್ ಹಾಗೂ ಸರ್ವಿಸ್ ಸೆಂಟರ್ಸ್‍ಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಬಜಾಜ್ ಆಟೋ ಇತ್ತೀಚೆಗೆ ಪಲ್ಸರ್ 125 ನಿಯೊನ್ ಅನ್ನು ಬಿಡುಗಡೆಗೊಳಿಸಿದರು. ಹೊಸ 124ಸಿಸಿ ಡಿಟೆಎಸ್-ಐ ಇಂಜಿನ್‍‍ನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 11.8-ಬಿಹೆಚ್‍‍ಪಿ ಉತ್ಪಾದಿಸುವ ಗುಣವನ್ನು ಹೊಂದಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಹೊಸ ಬಜಾಜ್ ಪಲ್ಸರ್‍ 125 ನಿಯೊನ್ ದರವು ಭಾರತೀಯ ಎಕ್ಸ್‌ಶೋರೂಂ ನ ಪ್ರಕಾರ ರೂ. 64,000 ಮತ್ತು ರೂ. 66,618 ಆಗಿದೆ. ಈ ಬೈಕ್ ಮೂರು ಬಣ್ಣದಲ್ಲಿ ದೊರಯಲಿದೆ. ಬ್ಲೂ, ಸೂಲಾರ್ ರೆಡ್, ಪ್ಲ್ಯಾಟಿನಮ್ ಸಿಲ್ವರ್ ಆಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಜಾಜ್ ವಾಹನ ಮಾಲಕರಿಗೆ ಉಚಿತ ಸೇವೆ

ಭಾರತದ ಹಲವು ಕಡೆಗಳಲ್ಲಿ ಭೀಕರ ಪ್ರವಾಹ ಬಂದಾಗ ಹಲವು ವಾಹನಗಳು ಜಲಾವೃತವಾಗಿತ್ತು. ಪ್ರವಾಹದಲ್ಲಿ ಸಿಲುಕಿಗೊಂಡ ವಾಹನಗಳಿಗೆ ನೀರು ಸೇರಿ ಹಲವಾರು ಸಮಸ್ಯೆಗಳು ಉಂಟಾಗಿದೆ. ಪ್ರವಾಹದಲ್ಲಿ ಹಲವರು ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡ ವೇಳೆಯಲ್ಲಿ ಬಜಾಜ್ ಆಟೋ ಸಂಸ್ಥೆಯು ತಮ್ಮ ಗ್ರಾಹಕರ ನೆರವಿಗೆ ಧಾವಿಸಿರುವುದು ಗ್ರಾಹಕರ ಪಾಲಿಗೆ ಆಶಾದಾಯಕ ವಿಷಯವಾಗಿದೆ. ಬಜಾಜ್ ಆಟೋ ಗ್ರಾಹಕರು ಈ ಶಿಬಿರದ ಸದೋಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Article Published On: Wednesday, August 21, 2019, 20:27 [IST]
English summary
Bajaj Auto Conducts Free Service Camps In Flood Affected States-Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+