ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಬಜಾಜ್ ಆಟೋ ಸಂಸ್ಥೆಯು ಮಾರುಕಟ್ಟೆಯ ಬೇಡಿಕೆ ಅನುಸಾರವಾಗಿ ತನ್ನ ಜನಪ್ರಿಯ ಬೈಕ್ ಆವೃತ್ತಿಯಾಗಿರುವ ಸಿಟಿ100 ಎಂಟ್ರಿ ಲೆವೆಲ್ ಮಾದರಿಯಲ್ಲೇ ಹೊಚ್ಚ ಹೊಸ ಸಿಟಿ110 ಆವೃತ್ತಿಯೊಂದನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಅಧಿಕೃತ ಬಿಡುಗಡೆಗೂ ಮುನ್ನವೇ ಸಿಟಿ110 ಕುರಿತಾದ ಸಂಪೂರ್ಣ ತಾಂತ್ರಿಕ ಅಂಶಗಳ ಮಾಹಿತಿ ಜೊತೆಗೆ ಬೆಲೆ ಮಾಹಿತಿಯನ್ನು ಸಹ ಬಹಿರಂಗಪಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಎಂಟ್ರಿ ಲೆವೆಲ್ ಕಮ್ಯುಟರ್ ಬೈಕ್ ಮಾರಾಟದಲ್ಲಿ ಈಗಾಗಲೇ ಸಿಟಿ100 ಮಾದರಿಯು ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಬಿಡುಗಡೆ ಮಾಡಲಾಗುತ್ತಿರುವ ಸಿಟಿ110 ಮಾದರಿಯ ಹೊಸ ಎಂಜಿನ್‌ನೊಂದಿಗೆ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಹೀರೋ ಸ್ಪ್ಲೆಂಡರ್ ಪ್ಲಸ್‌ ಮತ್ತು ಟಿವಿಎಸ್ ರೆಡಿಯಾನ್ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯಲ್ಲಿ ಹೊಸ ಸಿಟಿ110 ಬೈಕ್ ಮಾದರಿಯು ಖರೀದಿಗೆ ಲಭ್ಯವಿರಲಿದ್ದು, ಡಿಸ್ಕವರ್ ಮತ್ತು ಪ್ಲ್ಯಾಟಿನಾ ಬೈಕ್ ಮಾದರಿಗಳಿಗಾಗಿ ಅಭಿವೃದ್ಧಿಪಡಿಸಲಾದ ಹೊಸ ಎಂಜಿನ್ ಮಾದರಿಯನ್ನೇ ಸಿಟಿ110 ಬೈಕ್‌ನಲ್ಲಿ ಜೋಡಿಸಲಾಗಿದೆಯೆಂತೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಹೊಸ ಸಿಟಿ110 ಬೈಕ್ ಮಾದರಿಯು 115ಸಿಸಿ ಎಂಜಿನ್ ಹೊಂದಿರಲಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ ಜೊತೆ ಆಲ್ ಡೌನ್ ಶಿಫ್ಟ್ ಪ್ಯಾಟರ್ನ್ ಪ್ರೇರಣೆಯೊಂದಿಗೆ ಗರಿಷ್ಠ 8.6-ಬಿಎಚ್‌ಪಿ ಮತ್ತು 9.81-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೀಗಾಗಿ ಇದು ಡಿಸ್ಕವರ್ ಮತ್ತು ಪ್ಲ್ಯಾಟಿನಾ ಬೈಕ್‌ಗಳಿಗೆ ಸಮನಾಗಿರಲಿದ್ದು, ವಿಶಿಷ್ಟ್ಯತೆ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಬೈಕ್ ಬೆಲೆ(ಬೆಂಗಳೂರು ಆನ್‌ರೋಡ್ ಪ್ರಕಾರ)

ಬಜಾಜ್ ಸಿಟಿ110 ಬೈಕ್ ಮಾದರಿಯು ಬೆಂಗಳೂರು ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಯಾದ ಕಿಕ್ ಸ್ಟಾರ್ಟ್ ಮಾದರಿಯು ರೂ.50,329 ಬೆಲೆ ಹೊಂದಿದ್ದರೆ, ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು ರೂ. 56,500 ಬೆಲೆ ಪಡೆದುಕೊಂಡಿದೆ. ಹಾಗೆಯೇ ಕಿಕ್ ಸ್ಟಾರ್ಟ್ ಆವೃತ್ತಿಗಿಂತ ಎಲೆಕ್ಟ್ರಿಕ್ ಸ್ಟಾರ್ಟ್ ಆವೃತ್ತಿಯಲ್ಲಿ ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ನಾಬಿ ಟೈರ್ಸ್ ಮತ್ತು ಲಾರ್ಜ್ ಕ್ರ್ಯಾಶ್ ಗಾರ್ಡ್ ಪ್ರಮುಖ ಆಕರ್ಷಣೆಯಾಗಿವೆ.

ಇನ್ನುಳಿದಂತೆ ಹೊಸ ಬೈಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಿಂಬದಿಯ ಸವಾರರಿಗೆ ಅನುಕೂಲವಾಗುವಂತೆ ವಿಸ್ತರಿಸಿದ ಸೀಟು, ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್, ಕಪ್ಪು ಬಣ್ಣ ಹೊಂದಿರುವ ಎಂಜಿನ್ ಹೊರಭಾಗ, ರಬ್ಬರ್ ಮಿರರ್ ಕವರ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಇನ್ನುಳಿದಂತೆ ಹೊಸ ಸಿಟಿ110 ಬೈಕ್ ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಮ್ಯಾಟೆ ಒಲಿವ್ ಗ್ರೀನ್, ಎಬೊನಿ ಬ್ಲ್ಯಾಕ್ ಮತ್ತು ಗ್ರಾಸ್ ಫ್ಲೆಮ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಇದರ ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಜೋಡಿಸಲಾಗಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಈಗಾಗಲೇ ಹೊಸ ಬೈಕ್ ಅಧಿಕೃತ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಗ್ರಾಹಕರ ಕೈ ಸೇರಲಿದೆ. ಇದರಲ್ಲಿ ಕಿಕ್ ಸ್ಟಾರ್ಟ್ ಮಾದರಿಗಿಂತ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು ಖರೀದಿಗೆ ಉತ್ತಮವಾಗಿದ್ದು, ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಬಜಾಜ್ ಹೊಚ್ಚ ಹೊಸ ಸಿಟಿ110 ಮಾರುಕಟ್ಟೆಗೆ..

ಮಾಹಿತಿಗಳ ಪ್ರಕಾರ, ಹೊಸ ಬೈಕ್ ಮಾದರಿಯನ್ನು ಮುಂಬರುವ ಗಣೇಶ ಚತುರ್ಥಿ ಮುನ್ನಾದಿನಗಳಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದ್ದು, ಡಿಸ್ಕವರ್ 110 ಬೈಕಿಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಸಿಟಿ110 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: Autocar India

Most Read Articles

Kannada
English summary
Bajaj CT110 Prices Revealed — Starts Arriving At Dealerships Ahead Of Official Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X