ಹೊಸ ಬಣ್ಣದಲ್ಲಿ ಲಭ್ಯವಿರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಬಜಾಜ್ ಆಟೋ ಸಂಸ್ಥೆಯು ಇತ್ತೀಚೆಗೆ ಹಲವಾರು ಬದಲಾವಣೆಗಳೊಂದಿಗೆ ತಮ್ಮ ಡಾಮಿನಾರ್ 400 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.74 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಬಿಡುಗಡೆಗೊಂಡಾಗ ಕೇವಲ ಗ್ರೀನ್ ಮತ್ತು ಕಪ್ಪು ಎಂಬ ಎರಡು ಬಣ್ಣಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಕೆಲವು ದಿನಗಳ ಹಿಂದಷ್ಟೆ ಬಜಾಜ್ ಸಂಸ್ಥೆಯು ಬಿಡುಗಡೆ ಮಾಡಿದ ಹೊಸ ಟಿವಿಸಿ ಜಾಹಿರಾತಿನಲ್ಲಿ ಬಜಾಜ್ ಡಾಮಿನಾರ್ 400 ಬೈಕ್ ಮತ್ತೆರಡು ಬಣ್ಣಗಳಲ್ಲಿ ಲಭ್ಯವಿರಲಿದೆ ಎಂಬ ಸುಳಿವನ್ನು ನೀಡಿತ್ತು. ಬಜಾಜ್ ಡಾಮಿನಾರ್ 400 ಬೈಕ್‍ಗಳು ಗ್ಲಾಸಿ ರೆಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದೀಗ ಮೆಟಾಲಿಕ್ ರೆಡ್ ಎಂಬ ಹೊಸ ಬಣ್ಣದೊಂದಿಗೆ ಕಾಣಿಸಿಕೊಂಡಿತ್ತು. ಈ ಹೊಸ ಬಣ್ಣ ಪಡೆದು ಬಿಡುಗಡೆಯಾಗಲಿರುವ ಬಜಾಜ್ ಡಾಮಿನಾರ್ ಬೈಕ್‍ಗಳು ಹಬ್ಬದ ಋತುವಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಬೈಕ್‍ವಾಲೆ ವರದಿಗಳು ಹೇಳುತ್ತಿವೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಬಿಡುಗಡೆಗೂ ಮುನ್ನವೇ ಬಜಾಜ್ ಆಟೋ ಡೀಲರ್‍‍ಗಳು ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಪ್ರಾರಂಭಿಸಲಾಗಿದ್ದು, ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಬಜಾಜ್ ಡೀಲರ್‍‍ನ ಬಳಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆಯೆ ಈ ಬೈಕಿನ ವಿತರಣೆಯನ್ನು ಸಹ ಡೀಲರ್‍‍ಗಳು ಪ್ರಾರಂಭಿಸಿದ್ದಾರೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ಡಾಮಿನಾರ್ 400 ಬೈಕ್‍ಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಪಡೆಸಿಲ್ಲವಾಗಿದ್ದು, ಈ ಬಾರಿ ಹೊಸ ವೈಷ್ಟ್ಯತೆಗಳು ಮತ್ತು ತಾಂತ್ರಿಕತೆಯಲ್ಲಿ ಬದಲಾವಣೆಯನ್ನು ಪಡೆದುಕೊಂಡಿದೆ. ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಹೊಸ ಫೀಚರ್ಸ್

ಪ್ರಸ್ತುತ ಇರುವ ಬೈಕಿನಲ್ಲಿ ನೀಡಲಾದ ಸ್ಕ್ರೀನ್ ಅನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಅನ್ನು ಪಡೆದುಕೊಳ್ಳಲಿದೆ. ಇಷ್ಟೆ ಅಲ್ಲದೆ ಈ ಬೈಕಿನಲ್ಲಿ ಸೆಕೆಂಡರಿ ಡಿಸ್ಪ್ಲೇ ಕೂಡಾ ಬಳಸಲಾಗಿದ್ದು, ಇದು ಫ್ಯುಯಲ್ ಟ್ಯಾಂಕ್‍ನ ಮೇಲೆ ಕಾಣಿಸಿಕೊಳ್ಳುತ್ತೆ. ಇದರಲ್ಲಿ ಗೇರ್ ಪೊಸಿಷನ್, ಟ್ರಿಪ್ ಮೀಟರ್ ಮತ್ತು ಟೈಮ್ ತೋರಿಸುತ್ತದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 40 ಬಿಹೆಚ್‍ಪಿ ಮತ್ತು 34ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಂದರೆ ಹಿಂದಿನ ಮಾದರಿಯ ಬೈಕಿಗೆ ಹೋಲಿಸಿದರೆ 6 ಬಿಹೆಚ್‍ಪಿ ಹೆಚ್ಚಿನದಾಗಿ ಹೊಸ ಬೈಕ್ ಪಡೆದಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಅಷ್ಟೆ ಅಲ್ಲದೇ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ಹೊಸ ಎಕ್ಸಾಸ್ಟ್ ಸಿಸ್ಟಂ ಅನ್ನು ನೀಡಲಾಗಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಪೋರ್ಟ್ಸ್, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ. ಜೊತೆಗೆ ಈ ಹೊಸ ಎಕ್ಸಾಸ್ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಬಜಾಜ್ ಡಾಮಿನಾರ್ 400 ಬೈಕ್

ಬಜಾಜ್ ಸಂಸ್ಥೆಯಲ್ಲಿನ ಜನಪ್ರಿಯ ಡಾಮಿನಾರ್ ಬೈಕ್ ಈ ಬಾರಿ ಹಲವಾರು ಬದಲಾವಣೆಗಳನ್ನು ಪಡೆದು ಇದೀಗ ಬಿಡುಗಡೆಗೊಂಡಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಮತ್ತು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Bajaj Dominar 400 To Get New Color Launch In This Festive Season. Read In Kannada
Story first published: Friday, July 26, 2019, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X