TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಹೊಸ ಬಜಾಜ್ ಡಾಮಿನಾರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಶುರು...
ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ಸಂಸ್ಥೆಯು ಈ ಹಿಂದೆಯೆ ತಮ್ಮ ಬಜಾಜ್ ಡಾಮಿನಾರ್ ಬೈಕ್ ಅನ್ನು ಬಿಡುಗಡೆಗೊಳಿಸಿ, ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದೆ. ಈ ಕಾರಣದಿಂದಾಗಿ ಬಜಾಜ್ ಸಂಸ್ಥೆಯು ತಮ್ಮ ಡಾಮಿನಾರ್ ಬೈಕನ್ನು ನವೀಕರಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಸುಳಿವು ನೀಡಿತ್ತು.
ಈ ಬಾರಿ ಬಿಡುಗಡೆಯಾಗಲಿರುವ ಹೊಸ ಬಜಾಜ್ ಡಾಮಿನಾರ್ ಬೈಕ್ ಬಿಎಸ್-VI ಎಂಜಿನ್ ಅನ್ನು ಪಡೆಯಲಿದ್ದು, ಇಂಡಿಯನ್ ಆಟೋಸ್ ಬ್ಲಾಗ್ ಮಾಹಿತಿ ಪ್ರಕಾರ ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದೀಗ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಶುರುವಾಗಿದೆ. ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಬಜಾಜ್ ಡೀಲರ್‍ನ ಬಳಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.
ಹೀಗಾಗಿ ಹೊಸ ಎಮಿಷನ್ ಅನ್ನು ಪಡೆದುಕೊಂಡಿರುವ ಬಜಾಜ್ ಡಾಮಿನಾರ್ 400 ಬೈಕ್‍ಗಳು ಈ ಬಾರಿ ಹೆಚ್ಚು ಸಾಮರ್ಥ್ಯವನ್ನು ಹೊರಹಾಕಲಿದ್ದು, ಬಿಡುಗಡೆಯಾಗುವ ವರೆಗು ಎಷ್ಟು ಪವರ್ ಔಟ್‍ಪುಟ್ ನೀಡಲಿದೆ ಎಂದು ತಿಳಿಯಬೇಕಿದೆ.
ಆದರೆ ಪ್ರಸ್ತುತ ಇರುವ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 34ಬಿಹೆಚ್‍ಪಿ ಮತ್ತು 35ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಹೊಸ ಬಜಾಜ್ ಡಾಮಿನಾರ್ 400 ಬೈಕಿಗೆ ಈ ಬಾರಿ ನೀಡಲಾದ ಎಂಜಿನ್ ಅನ್ನು 43.5 ಬಿಹೆಚ್‍ಪಿ ಸಾಮರ್ಥ್ಯವನ್ನು ನೀಡುವ ಕೆಟಿಎಂ 390 ಬೈಕಿನಿಂದ ಪಡೆಯಲಾಗಿದ್ದು, ಇದು ಹೆಚ್ಚಿನ ಸಂಕುಚಿತ ಅನುಪಾತದಿಂದಾಗಿ ಮತ್ತು ಬಜಾಜ್ ಆಟೊ ಅದರ ಒತ್ತಡ ಹೆಚ್ಚಾಗುವುದನ್ನು ಸ್ವಲ್ಪ ಹೆಚ್ಚಿನ ಶಕ್ತಿ ಪಡೆಯುವಂತೆ ಮಾಡುತ್ತದೆ ಎನ್ನಲಾಗಿದೆ.
ಅಷ್ಟೆ ಅಲ್ಲದೇ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡುವ ಸುಳಿವು ನೀಡಿದ್ದು, ಹೊಸ ಎಕ್ಸಾಸ್ಟ್ ಸಿಸ್ಟಂ ಅನ್ನು ನೀಡಲಾಗಿತ್ತಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಪೋರ್ಟ್ಸ್, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ. ಜೊತೆಗೆ ಈ ಹೊಸ ಎಕ್ಸಾಸ್ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ.
ಹೊಸ 2019 ಬಜಾಜ್ ಡೊಮಿನಾರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಗ್ರೇಡ್ ಉಪಕರಣಗಳನ್ನು ಸಹ ಸ್ವೀಕರಿಸುತ್ತದೆ. ಪ್ರಸ್ತುತ ಇರುವ ಬೈಕಿನಲ್ಲಿ ನೀಡಲಾದ ಸ್ಕೀನ್ ಅನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಅನ್ನು ಪಡೆದುಕೊಳ್ಳಲಿದೆ.
ಇದಲ್ಲದೇ ಈ ಬಾರಿ ಫ್ಯುಯಲ್ ಟ್ಯಾಂಕ್‍ನ ಮೇಲೆ ನೀಡಲಾದ ಸ್ಕ್ರೀನ್ ಗೇರ್ ಪೊಸಿಷನ್ ಅನ್ನು ತೋರಿಸುತ್ತದೆ. ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
ಪ್ರಸ್ಥುತ ಇರುವ ಬಜಾಜ್ ಡಾಮಿನಾರ್ 400 ಬೈಕ್ ಎಕ್ಸ್ ಶೋರಂ ಬೆಂಗಳೂರು ಪ್ರಕಾರ 2.02 ಲಕ್ಷದ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ನವೀಕರಣದೊಂದಿಗೆ ಬಿಡುಗಡೆಯಾಲಿರುವ ಬೈಕ್ ಇನ್ನು ರೂ. 15,000 ರಿಂದ ರೂ. 20,000 ಅಧಿಕವಾಗಿರಬಹುದೆಂದು ಹೇಳಲಾಗುತ್ತಿದೆ.