ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಬಜಾಜ್ ಸಂಸ್ಥೆಯು ಈಗಾಗಲೇ ಕಮ್ಯೂಟರ್ ಬೈಕ್ ಮಾರಾಟ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದು, ಪ್ಲಾಟಿನಾ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಟಿನಾ ಬೈಕ್‌ಗಳಲ್ಲಿ ಮತ್ತಷ್ಟ ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ನೀಡುತ್ತಿರುವ ಬಜಾಜ್ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಹೊಸ ಎಡಿಷನ್ ಒಂದನ್ನು ಬಿಡುಗಡೆ ಮಾಡುತ್ತಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಹೌದು, ಬಜಾಜ್ ಸಂಸ್ಥೆಯು ಈ ಹಿಂದೆ ಪ್ಲಾಟಿನಾ ಮಾದರಿಯಲ್ಲಿ ಕಂಫಾರ್ಟೆಕ್ ಎಡಿಷನ್ ಪರಿಚಯಿಸಿದ ಮಾದರಿಯಲ್ಲೇ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದ್ದು, ಕಂಫಾರ್ಟೆಕ್ ಎಡಿಷನ್‌ಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿರುವ ಪ್ಲಾಟಿನಾ ಹೆಚ್ ಗೇರ್ ಎನ್ನುವ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಪ್ಲಾಟಿನಾ ಹೆಚ್ ಗೇರ್ ಆವೃತ್ತಿಯನ್ನು ಈಗಾಗಲೇ ಬಹುತೇಕ ಬಜಾಜ್ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಮಾದರಿಯು ಬಿಡುಗಡೆಗೊಳ್ಳುವುದು ಖಚಿತವಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಸದ್ಯ ಮಾರುಕಟ್ಟೆಯಲ್ಲಿ ಬಜಾಜ್ ಪ್ಲಾಟಿನಾ ಬೈಕ್ ಮಾದರಿಯು ಎರಡು ಮಾದರಿಯ ಎಂಜಿನ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಆವೃತ್ತಿಯು 100ಸಿಸಿ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಪ್ಲಾಟಿನಾ ಕಂಫಾರ್ಟೆಕ್ ಮಾದರಿಯು 110ಸಿಸಿ ಎಂಜಿನ್ ಸೌಲಭ್ಯವನ್ನು ಹೊಂದಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಇದೀಗ ಬಿಡುಗಡೆಗಾಗಿ ಸಿದ್ದವಾಗಿರುವ ಪ್ಲಾಟಿನಾ ಹೆಚ್ ಗೇರ್ ಮಾದರಿಯು ಸಹ ಕಂಫಾರ್ಟೆಕ್ ಮಾದರಿಗಿಂತಲೂ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸ್ತತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆ ಪೂರೈಸಲು ಉದ್ದೇಶದಿಂದಲೇ ಈ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಿದಂತಿದೆ. ಯಾಕೆಂದ್ರೆ 110 ಸಿಸಿ ಬೈಕ್‌ಗಳ ವಿಭಾಗದಲ್ಲೇ ಹಲವಾರು ಪ್ರೀಮಿಯಂ ಫೀಚರ್ಸ್ ಹೊತ್ತುಬಂದಿರುವ ಪ್ಲಾಟಿನಾ ಹೆಚ್ ಗೇರ್ ಮಾದರಿಯು ಮೊದಲ ನೋಟದಲ್ಲೇ ಬೈಕ್ ಸವಾರರನ್ನು ಆಕರ್ಷಣೆ ಮಾಡದೇ ಇರದು.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಎಲ್ಇಡಿ ಡಿಆರ್‌ಎಲ್ ಹೆಡ್‌ಲ್ಯಾಂಪ್ ಡಿಸೈನ್, ಹೆಡ್‌ಲ್ಯಾಂಪ್ ಕ್ಲಸ್ಟರ್, ಆಕರ್ಷಕ ಗ್ರಾಫಿಕ್ ಸ್ಟಿಕರ್ಸ್, ವಿವಿಧ ಬಣ್ಣಗಳ ಆಯ್ಕೆ, ಮುಂಭಾಗದಲ್ಲಿ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಅಲಾಯ್ ವೀಲ್ಹ್ ಮತ್ತು ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿನಲ್ಲಿ ನೀಡಬಲ್ಲ ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ವಿಶೇಷ ಅಂದ್ರೆ, ಹೊಸ ಬೈಕಿನಲ್ಲಿ ರಾಂಗ್ ಗೇರ್ ಎಚ್ಚರಿಸುವ ಇಂಡಿಕೇಟರ್ ಕೂಡಾ ಇದ್ದು, ಒಂದು ವೇಳೆ ಬೈಕ್ ಸವಾರಿ ವೇಳೆ ತಪ್ಪಾಗಿ ಗೇರ್ ಬಳಕೆ ಮಾಡುತ್ತಿದ್ದಲ್ಲಿ ಅದು ಬೈಕ್ ಸವಾರರನ್ನು ಎಚ್ಚರಿಸಲಿದೆ. ಜೊತೆಗೆ ಬ್ಯಾಟಿರಿ ವೋಲ್ಟೆಜ್ ವಾರ್ನಿಂಗ್ ಇಂಡಿಕೇಟರ್‌ನೊಂದಿಗೆ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಎಂಜಿನ್ ಸಾಮರ್ಥ್ಯ

ಪ್ಲಾಟಿನಾ ಕಂಫಾರ್ಟೆಕ್ ಮಾದರಿಯು 110ಸಿಸಿ ಎಂಜಿನ್ ಹೊಂದಿದ್ದಲ್ಲಿ ಪ್ಲಾಟಿನಾ ಹೆಚ್ ಗೇರ್ ಮಾದರಿಯು 115 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ 8.5-ಬಿಎಚ್‌ಪಿ ಮತ್ತು 9.81-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಪ್ಲಾಟಿನಾ ನ್ಯೂ ಎಡಿಷನ್

ಈ ಮೂಲಕ ಡಿಸ್ಕವರ್ 125 ಆಯ್ಕೆಗೆ ಪರ್ಯಾಯವಾಗಿ ಮತ್ತೊಂದು ಅತ್ಯುತ್ತಮ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಬಜಾಜ್ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಅನ್ನು ನಿರ್ಮಾಣ ಮಾಡಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಉತ್ತಮ ಮೈಲೇಜ್ ಹೊಂದಿರುವ ಹೊಸ ಬೈಕ್ ಮಾದರಿಯು ಕಂಫಾರ್ಟೆಕ್ ಮಾದರಿಗಿಂತಲೂ ತುಸು ದುಬಾರಿ ಬೆಲೆ ಹೊಂದಿರಲಿದೆ.

Most Read Articles

Kannada
Read more on ಬಜಾಜ್ bajaj
English summary
Bajaj Platina H Gear Arrives At Dealerships; Premium Variant Comes With New Features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X