Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹಿರಂಗವಾಯ್ತು ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ದರ
ಬಜಾಜ್ ಕಂಪನಿಯ ಬಹುನಿರೀಕ್ಷಿತ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ಬೆಲೆ ಬಹಿರಂಗಗೊಂಡಿದೆ. ಯುವಜನತೆಯ ಮೆಚ್ಚಿನ ಪಲ್ಸರ್ ಶ್ರೇಣಿಯ ಮುಂಬರಲಿರುವ 125 ರೂಪಾಂತರದ ಬೆಲೆಯು ಹೈದರಾಬಾದಿನ ಆನ್-ರೋಡ್ ದರದಂತೆ ರೂ.83,400ಗಳಾಗಿದೆ.

ಪಲ್ಸರ್ 125 ನಿಯಾನ್‍ಗಿಂತ ಉನ್ನತ ಮಟ್ಟದಲ್ಲಿದೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ಬೆಲೆಯು, ಪಲ್ಸರ್ ನಿಯಾನ್ ಬೈಕಿಗಿಂತಲೂ ರೂ.3,500 ಹೆಚ್ಚಿರಲಿದೆ.

ಪಲ್ಸರ್ 125 ಬೈಕ್ ತನ್ನದೆ ಶ್ರೇಣಿಯ ಪಲ್ಸರ್ 125 ನಿಯಾನ್ ಬೈಕ್ ಅನ್ನು ಹೋಲುತ್ತದೆ. ಹೊಸ ಪಲ್ಸರ್ 125 ನಲ್ಲಿ ಕೆಲವು ಬದಲಾವಣೆಗಳನ್ನು ಕಂಪನಿ ಮಾಡಿದೆ. ಅದರಲ್ಲಿ ಪ್ರಮುಖ ಬದಲಾವಣೆಗಳು ಫ್ಯೂಯಲ್ ಟ್ಯಾಂಕ್ ಕೌಲ್, ಎಂಜಿನ್ ಕೌಲ್, ಗ್ರಾಫಿಕ್ಸ್ ನಲ್ಲಿ ಮತ್ತು ಸ್ಪ್ಲಿಟ್ ಗ್ರ್ಯಾಬ್ ರೈಲ್‍ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ 125 ಸಿಸಿ ಪಲ್ಸರ್ ಬೈಕ್ ಬಹುನಿರೀಕ್ಷಿತ ಬೈಕ್ ಆಗಿದೆ. ಹೊಸ ಪಲ್ಸರ್ 125 ಬೈಕ್ ಅನ್ನು ದೇಶಿಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ. ಪಲ್ಸರ್ 125 ಬೈಕ್‍ನಲ್ಲಿ ರಿಫ್ಲೆಕ್ಟರ್ ಹೆಡ್‍ಲ್ಯಾಂಪ್ ಮತ್ತು ಡ್ಯುಯಲ್ ಟೋನ್ ಮಾಸ್ಕ್ ಅನ್ನು ಅಳವಡಿಸಲಾಗಿದೆ.

ಬೈಕಿನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸೈಡೆಡ್ ನೈಟ್ರೋಕ್ಸ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಬ್ರೇಕ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ರೈಡರ್‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 260ಎಂಎಂ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. 1.7 ಎಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಹಿಂಭಾಗದಲ್ಲಿ ಆಕರ್ಷಕವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದ್ದು, ಆದರೆ ಪಲ್ಸರ್ 125 ನಿಯಾನ್‌ನಲ್ಲಿನ ಸ್ಪ್ಲಿಟ್ ಗ್ರ್ಯಾನ್ ರೈಲ್, ಆಕರ್ಷಕ ಗ್ರಾಫಿಕ್ಸ್ ನಿಂದ ಸ್ಟೈಲಿಸ್ ಲುಕ್ ಹೊಂದಿದೆ. ಬೈಕ್ ಏರ್-ಕೂಲ್ಡ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 11.8 ಬಿಎಚ್‍ಪಿ ಪವರ್ ಮತ್ತು 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರೇರ್ ವ್ಹೀಲ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಿದೆ.

ಪಲ್ಸರ್ ಬ್ರ್ಯಾಂಡ್ ಸುಮಾರು ಎರಡು ದಶಕಗಳ ಹಿಂದೆ ಲಗ್ಗೆ ಇಟ್ಟು ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಮರೆದಿದ್ದರು. ವರ್ಷಗಳು ಕಳೆದಂತೆ ಹೊಸ ಬೈಕ್‍ಗಳ ಆಗಮನದ ಮೂಲಕ ಸ್ಪರ್ಧೆ ಹೆಚ್ಚಾಯಿತು. ಆದರೆ ಪಲ್ಸರ್ ಬ್ರ್ಯಾಂಡ್ ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಪಲ್ಸರ್ ಶ್ರೇಣಿಯ ಸಿಗ್ನೇಚರ್ ಹೆಡ್‍ಲ್ಯಾಂಪ್ ಕ್ಲಸಟ್ ಈ ಬೈಕ್ ನಲ್ಲಿ ಕಾಣಸಿಗುತ್ತದೆ. ಎಂದಿನಂತೆ ಪಲ್ಸರ್ ಸಿಗ್ನೇಚರ್ ಹೆಡ್‍ಲ್ಯಾಂಪ್ ಕ್ಲಸ್ಟರ್ ಇದರಲ್ಲಿಯು ಮುಂದುವರೆದಿದೆ. ಪೈಲಟ್ ಲ್ಯಾಂಪ್ ಅನ್ನು ಹೆಡ್‍ಲ್ಯಾಂಪ್‍ನಿಂದ 2006ರಲ್ಲಿ ಒಂದು ಭಾರೀ ಯುಜಿ ಮಾದರಿಯಲ್ಲಿ ಬದಲಾವಣೆ ಮಾಡಿದ್ದಾರೆ. ಕಂಪನಿಯು ಸಿಗ್ನೇಚರ್ ಟೈಲ್ ಲೈಟ್ ಮತ್ತು ಸೆಮಿ ಡಿಜಿಟಲ್ ಇನ್ಸ್ಟ್ರೋಮೆಂಟ್ ಕ್ಲಸ್ಟರ್ ಅನ್ಜು ಅಪ್‍ಡೇಟ್ ಮಾಡಿದ್ದಾರೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಪಲ್ಸರ್ 150 ಸಿಸಿ ನಿಯೊನ್ ಬೈಕಿಗಿಂತ ಹೊಸ ಪಲ್ಸರ್ ಬೈಕಿನ ದರವು ಅಧಿಕವಾಗಿದೆ. ಹೊಸ ಪಲ್ಸರ್ ಬೆಲೆಯಲ್ಲಿ ಸಣ್ಣ ಮಟ್ಟದ ದುಬಾರಿಯಾಗಿದೆ, ಅಲ್ಲದೇ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡೀರುವ ಹಿನ್ನಲೆಯಲ್ಲಿ ಪಲ್ಸರ್ ಬೈಕ್ ಎಷ್ಟರ ಮಟ್ಟಿಗೆ ಗ್ರಾಹಕರ ಗಮನಸೆಳೆಯಲಿದೆ ಎಂಬುವುದನ್ನು ಕಾದು ನೋಡಬೇಕು. ಬಹುನಿರೀಕ್ಷಿತ ಪಲ್ಸರ್ 125 ಶೀಘ್ರದಲ್ಲೇ ದೇಶಿಯ ಮಾರುಕಟ್ಟೆ ಪ್ರವೇಶಿಸಲಿದೆ.