ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ದೇಶಿಯ ಆಟೋ ಉದ್ಯಮದಲ್ಲಿ ಮುಂಬರುವ 2020ರ ಏಪ್ರಿಲ್ 1ರಿಂದ ಕೆಲವು ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೈಕ್ ಉತ್ಪಾದನಾ ಸಂಸ್ಥೆಯಾದ ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ 180 ಬೈಕ್ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲು ಮುಂದಾಗಿದೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಈ ಹಿಂದೆ 2017ರ ಏಪ್ರಿಲ್ 1ರಿಂದ ಬಿಎಸ್-3(ಭಾರತ್ ಸ್ಟೇಜ್) ನಿಷೇಧಗೊಳಿಸಿ ಬಿಎಸ್-4 ಜಾರಿಗೆ ತಂದಿದ್ದ ಕೇಂದ್ರ ಸರ್ಕಾರವು ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-4 ನಿಷೇಧಿಸಿ ಬಿಎಸ್-6 ನಿಯಮವನ್ನು ಜಾರಿಗೆ ತರಲು ಸಿದ್ದತೆ ನಡೆಸಿದ್ದು, ಇದರಿಂದ ದೇಶದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಕೆಲವು ಪ್ರಮುಖ ಬೈಕ್ ಮತ್ತು ಕಾರುಗಳುಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಬಜಾಜ್ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದು, ಬಿಎಸ್-6 ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವಿರದ ಪಲ್ಸರ್ 180 ಬೈಕ್ ಮಾದರಿಯನ್ನು ಸ್ಥಗಿತಗೊಳಿಸುತ್ತಿದ್ದು, ಇದೇ ಕಾರಣಕ್ಕೆ 2019ರ ಆವೃತ್ತಿಯನ್ನು ಇದುವರೆಗೆ ನವೀಕರಣಗೊಳಿಸಿ ಬಿಡುಗಡೆ ಮಾಡಿಲ್ಲ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಪಲ್ಸರ್ 180 ಹೊರತುಪಡಿಸಿ ಉಳಿದೆಲ್ಲಾ ಬೈಕ್ ಆವೃತ್ತಿಗಳ 2019ರ ಮಾದರಿಯನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿರುವ ಬಜಾಜ್ ಸಂಸ್ಥೆಯು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಉನ್ನತಿಕರಿಸುತ್ತಿದ್ದು, ಮಾಲಿನ್ಯ ಪ್ರಮಾಣ ತಡೆಯುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿ ಎಂಜಿನ್ ಅಭಿವೃದ್ಧಿಗೊಳಿಸುತ್ತಿದೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಬಿಎಸ್-6 ನಿಯಮವು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಡೆಯುವ ಉದ್ದೇಶದಿಂದಲೇ ಜಾರಿಯಾಗುತ್ತಿದ್ದು, ಬಿಎಸ್-4 ನಿಯಮಕ್ಕಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಬಿಎಸ್-6 ಹೊಸ ನಿಯಮವು ಹೊಸ ವಾಹನಗಳಲ್ಲಿ ಹೊರಸೂಸುವ ಹೊಗೆಯ ಪ್ರಮಾಣವನ್ನು ಪರಿಣಾಮಕಾರಿ ತಗ್ಗಿಸಲಿದೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಹೀಗಾಗಿ ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ವಾಹನಗಳು ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆ ಹೊಸ ನಿಯಮದಿಂದ ಹಿನ್ನಡೆ ಅನುಭವಿಸಬಹುದಾದ ಪಲ್ಸರ್ 180 ಮಾದರಿಯನ್ನು ಸ್ಥಗಿತಗೊಳಿಸಲು ಬಜಾಜ್ ನಿರ್ಧರಿಸಿದೆ

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಪಲ್ಸರ್ 180ಎಫ್ ಮೇಲೆ ಹೆಚ್ಚಿನ ಒತ್ತು..!

ಹೌದು, ಸಾಮಾನ್ಯ ಮಾದರಿಯ ಪಲ್ಸರ್ 180 ಸ್ಥಗಿತಗೊಳಿಸಲು ನಿರ್ಧರಿಸುವ ಬಜಾಜ್ ಸಂಸ್ಥೆಯು ಅದಕ್ಕೆ ಪರ್ಯಾಯ ಬೈಕ್ ಮಾದರಿಯಾಗಿರುವ ಪಲ್ಸರ್ 180ಎಫ್ ಆವೃತ್ತಿಯ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಇನ್ನುಳಿದಂತೆ ವಿವಿಧ ಮಾದರಿಗಳು ಯಥಾಸ್ಥಿತಿಯಲ್ಲಿ ಮಾರಾಟಗೊಳ್ಳಲಿವೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಕಳೆದ 1 ದಶಕದಿಂದ ಬಜಾಜ್ ಸಂಸ್ಥೆಗೆ ಭಾರೀ ಜನಪ್ರಿಯತೆ ತಂದುಕೊಟ್ಟಿರುವ ಪಲ್ಸರ್ 180 ಬೈಕ್ ಮಾದರಿಯು ಇಂದಿಗೂ ಕೂಡಾ ಯುವಕರ ಪಾಲಿನ ಹಾಟ್ ಫೆವರಿಟ್ ಆಯ್ಕೆಯಾಗಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಈಗಾಗಲೇ ಪಲ್ಸರ್ 180 ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಪಲ್ಸರ್ 180ಎಫ್ ಮೇಲೆ ಹೆಚ್ಚಿನ ಗಮನಹರಿಸಿರುವ ಬಜಾಜ್ ಸಂಸ್ಥೆಯು ಸ್ಟಾಕ್ ಮುಗಿಯುವ ತನಕ ಮಾತ್ರವೇ ಪಲ್ಸರ್ 180 ಬೈಕ್‌ ಮಾರಾಟ ಮಾಡಲಿದ್ದು, ಪಲ್ಸರ್ 180ಎಫ್ ಎಂದಿನಂತೆ ಖರೀದಿಗೆ ಲಭ್ಯವಿರದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಇನ್ನು ಪಲ್ಸರ್ 180ಎಫ್ ಮಾದರಿಯು 178.6ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 17-ಬಿಎಚ್‌ಪಿ ಮತ್ತು 14.2-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಪಲ್ಸರ್ 180 ಬೈಕಿಗೆ ಗುಡ್‌ಬೈ ಹೇಳಿದ ಬಜಾಜ್

ಗ್ರಾಹಕರ ಬೇಡಿಕೆಯೆಂತೆ ಪಲ್ಸರ್ 180ಎಫ್ ಬೈಕ್ ಮಾದರಿಯಲ್ಲಿ ಇದೀಗ 180 ನಿಯಾನ್ ಎಡಿಷನ್ ಕೂಡಾ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.87,000 ಬೆಲೆ ಪಡೆದುಕೊಂಡಿದೆ. ಹಾಗೆಯೇ ಪಲ್ಸರ್ 180ಎಫ್ ಬೈಕ್ ಹೊಸ ನಿಯಮಗಳಿಗೆ ಅನುಗುಣವಾಗಿ ಗುಣಮಟ್ಟದ ಸುರಕ್ಷತೆ ಮತ್ತು ಎಂಜಿನ್ ವೈಶಿಷ್ಯತೆಯನ್ನು ಗಿಟ್ಟಿಸಿಕೊಂಡಿದೆ.

More from DriveSpark

Article Published On: Tuesday, April 9, 2019, 12:53 [IST]
English summary
Bajaj Pulsar 180 Discontinued — Replaced By Semi-Faired Bajaj Pulsar 180F. Read in Kannada.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+