ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಟ್ರಯಂಫ್ ಮೋಟರ್ ಸೈಕಲ್ಸ್ ಹೇಳಿಕೆಯೊಂದನ್ನು ನೀಡಿದ್ದು, ಬಜಾಜ್ ಆಟೋ ಹಾಗೂ ಟ್ರಯಂಫ್ ಮೋಟರ್ ಸೈಕಲ್ಸ್ ನಡುವಿನ ಸಹಭಾಗಿತ್ವಕ್ಕೆ ಸಹಿ ಹಾಕುವಲ್ಲಿನ ವಿಳಂಬದಿಂದಾಗಿ ಈ ಎರಡೂ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿರುವ ಬೈಕಿನ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ತಿಳಿಸಿದೆ.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಎಕಾನಾಮಿಕ್ ಟೈಮ್ಸ್ ವರದಿಗಳ ಪ್ರಕಾರ, ಬ್ರಿಟಿಷ್ ಮೂಲದ ಬೈಕ್ ತಯಾರಕ ಕಂಪನಿಯು ಬಜಾಜ್ ಸಹಯೋಗದಲ್ಲಿ ಮೂಲಮಾದರಿಗಳ ಆರಂಭಿಕ ಪರೀಕ್ಷೆಯನ್ನು ಆರಂಭಿಸಿರುವುದಾಗಿ ಹೇಳಿದೆ. ಈ ಉತ್ಪನ್ನದ ಅಭಿವೃದ್ಧಿಯನ್ನು ಪರೀಕ್ಷಿಸಲು ಬಜಾಜ್ ಆಟೋದ ಮುಖ್ಯಸ್ಥರಾದ ರಾಜೀವ್ ಬಜಾಜ್ ಕಳೆದ ತಿಂಗಳು ಬ್ರಿಟನ್‍‍ನಲ್ಲಿರುವ ಟ್ರಯಂಫ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದರು.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಬಜಾಜ್ ಆಟೋ ಹಾಗೂ ಟ್ರಯಂಫ್ ಮೋಟಾರ್‌ಸೈಕಲ್‌ಗಳು 2017ರ ಆಗಸ್ಟ್ ನಲ್ಲಿ ಜಂಟಿ ಸಹಭಾಗಿತ್ವದಲ್ಲಿ ವಾಹನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಕಟಿಸಿದ್ದವು. ಆದರೆ ಎರಡೂ ಕಂಪನಿಗಳು ಇನ್ನೂ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಬಜಾಜ್ ಆಟೋ ಹಾಗೂ ಟ್ರಯಂಫ್ ಮೋಟರ್ ಸೈಕಲ್ಸ್ ನಡುವಿನ ಒಪ್ಪಂದವು ರಾಯಲ್ಟಿ ಆಧಾರಿತವಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಎರಡೂ ಕಂಪನಿಗಳು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಳಿಸಿಕೊಳ್ಳುತ್ತವೆ ಹಾಗೂ ಎರಡೂ ಕಂಪನಿಗಳೂ ಪಾಲುದಾರರ ಷೇರುಗಳನ್ನು ಹೊಂದಿರುವುದಿಲ್ಲ.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಬಜಾಜ್ ಟ್ರಯಂಫ್ ಸಹಭಾಗಿತ್ವದಲ್ಲಿ ಹೊಸ ಎಂಜಿನ್ ಪ್ಲಾಟ್‌ಫಾರ್ಮ್‌ನಲ್ಲಿ ಮಧ್ಯಮ ತೂಕದ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿ, ನಿರ್ಮಿಸಲಾಗುತ್ತದೆ. ಬೈಕಿನ ಎಂಜಿನ್ ಅನ್ನು ಬಜಾಜ್ ತಯಾರಿಸಲಿದ್ದರೆ, ಟ್ರಯಂಫ್ ಭಾರತದಲ್ಲಿ ಮಾರಾಟ ಮಾಡಲಿದೆ.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಹೊಸ ಮೋಟರ್ ಸೈಕಲ್‌ಗಳು ಮುಖ್ಯವಾಗಿ ರಾಯಲ್ ಎನ್‌ಫೀಲ್ಡ್‌ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡಲಿವೆ. ರಾಯಲ್ ಎನ್‌ಫೀಲ್ಡ್‌ ಕಂಪನಿಯ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ 300 ಸಿಸಿ ಯಿಂದ 500 ಸಿಸಿ ಸೆಗ್‍‍ಮೆಂಟಿನಲ್ಲಿ ಪ್ರಾಬಲ್ಯ ಹೊಂದಿವೆ.

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಟ್ರಯಂಫ್ ಕಂಪನಿಯು ಈ ಬೈಕುಗಳನ್ನು ಭಾರತದ ಜೊತೆಗೆ ತಾನು ಮಾರಾಟ ಜಾಲವನ್ನು ಹೊಂದಿರುವ ಎಲ್ಲಾ ದೇಶಗಳಲ್ಲಿ ಮಾರಾಟ ಮಾಡಲಿದೆ. ಬಜಾಜ್ ಈ ಬೈಕುಗಳನ್ನು ಟ್ರಯಂಫ್ ಕಂಪನಿಯು ಕಾರ್ಯಾಚರಣೆ ಮಾಡದ, ತಾನು ಕಾರ್ಯಾಚರಣೆ ನಡೆಸುವ ದೇಶಗಳಲ್ಲಿ ಮಾರಾಟ ಮಾಡಲಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಟ್ರಯಂಫ್ ಈ ಹಿಂದೆ 250 ಸಿಸಿ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ತಯಾರಿಸಿ ಬಿಡುಗಡೆಗೊಳಿಸಲು ಯೋಜನೆ ರೂಪಿಸಿತ್ತು. ಆದರೆ ಹಣಕಾಸಿನ ಕೊರತೆಯಿಂದಾಗಿ ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಬಜಾಜ್ ಆಟೋ ತನ್ನ ಹಣಕಾಸು ಯೋಜನೆಯನ್ನು ಸರಿಯಾಗಿ ರೂಪಿಸಿದೆ. ಟ್ರಯಂಫ್ ಕಂಪನಿಯು, ಬಜಾಜ್ ಕಂಪನಿಯ ಹಣಕಾಸಿನ ಬಲ ಹಾಗೂ ಸಪ್ಲೈಯರ್‍‍ಗಳ ಹಿನ್ನೆಲೆಯಲ್ಲಿ ಭಾರೀ ಯಶಸ್ಸನ್ನು ನಿರೀಕ್ಷಿಸುತ್ತಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಮಧ್ಯಮ ತೂಕದ ಬೈಕುಗಳನ್ನು ಸ್ವತಃ ಅಭಿವೃದ್ಧಿಪಡಿಸಿದರೆ ಉತ್ಪಾದನಾ ವೆಚ್ಚಗಳು ಕಡಿಮೆಯಾಗುತ್ತವೆ ಎಂಬುದು ಟ್ರಯಂಫ್ ಕಂಪನಿಯ ಅಭಿಪ್ರಾಯವಾಗಿದೆ. ಬಜಾಜ್ ಕಂಪನಿಯ ಸಹಭಾಗಿತ್ವದಲ್ಲಿ ದೊರೆಯುವ ಪ್ರಯೋಜನವೆಂದರೆ ಬಜಾಜ್ ಕಂಪನಿಯು ಹೊಂದಿರುವ ಹಣಕಾಸಿನ ಸಂಪನ್ಮೂಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮತ್ತಷ್ಟು ತಡವಾಗಲಿದೆ ಬಜಾಜ್ ಟ್ರಯಂಫ್ ಸಹಭಾಗಿತ್ವದ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಸಹಭಾಗಿತ್ವದಿಂದ ಎರಡೂ ಕಂಪನಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಬಜಾಜ್‌ ಕಂಪನಿಯ ಸಪ್ಲೈಯರ್ ಹಾಗೂ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಿಂದ ಟ್ರಯಂಫ್ ಲಾಭಗಳಿಸಿದರೆ, ಟ್ರಯಂಫ್‌ನ ಟೆಕ್ನಾಲಜಿಯಿಂದ ಬಜಾಜ್ ಲಾಭ ಗಳಿಸಿ, ಹೆಚ್ಚುವರಿ ಆದಾಯವನ್ನು ಪಡೆಯಲಿದೆ.

Most Read Articles

Kannada
English summary
Bajaj Triumph bike prototype begins testing collaboration on course - Read in Kannada
Story first published: Tuesday, November 12, 2019, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X