ಬಿಡುಗಡೆಯಾಯ್ತು ರೂ.4.79 ಲಕ್ಷ ಬೆಲೆಯ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್
ಬೆನೆಲ್ಲಿ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಲಿಯಾನ್‍ಸಿನೊ 500 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಲಿಯಾನ್‍ಸಿನೊ 500 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.4.79 ಲಕ್ಷಗಳಾಗಿದೆ.

ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್ ಅನ್ನು ಕೇವಲ ಸ್ಟಾಂಡರ್ಡ್ ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ರೂ.10,000 ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಲಿಯಾನ್‍ಸಿನೊ 500 ಬೈಕಿನಲ್ಲಿ 499 ಸಿಸಿಯ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 47.6 ಬಿಹೆಚ್‍ಪಿ ಪವರ್ ಹಾಗೂ 45 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಆರು ಸ್ಫೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಸ್ಕ್ರ್ಯಾಂಬ್ಲರ್ ಶೈಲಿಯ ಈ ಬೈಕ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿರಲಿದೆ. ಸಸ್ಪೆಂಷನ್‍ಗಳಿಗಾಗಿ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ 50 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ.

ಇವುಗಳು ಪ್ರಿ ಲೋಡ್ ಅಡ್ಜಸ್ಟ್ ಮೆಂಟ್ ಹೊಂದಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಬೆನೆಲ್ಲಿ ಲಿಯಾನ್‍ಸಿನೊ 500 ಕನಿಷ್ಠ ವಿನ್ಯಾಸಗಳನ್ನು ಹೊಂದಿದೆ. ಇವುಗಳಲ್ಲಿ ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಲೋ ಸೆಟ್ ಹ್ಯಾಂಡಲ್‌ಬಾರ್, ಹಿಂಭಾಗದಲ್ಲಿ ಮಿನಿಮಲ್ ಪ್ಯಾನೆಲ್ ಹಾಗೂ ಮುಂಭಾಗದ ಫೆಂಡರ್‌ನಲ್ಲಿ ಮೆಟಾಲಿಕ್ ಆರ್ನಾಮೆಂಟ್‍ಗಳಿವೆ.

ಲಿಯಾನ್‍ಸಿನೊ 500 ಪಾಡ್ ಶೈಲಿಯ ವಿನ್ಯಾಸದಲ್ಲಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ನ ಜೊತೆಗೆ, ಎಲ್ಇಡಿ ಡಿಆರ್‍ಎಲ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್‍ಗಳನ್ನು ಹೊಂದಿದೆ.

ಬೆನೆಲ್ಲಿ ಕಂಪನಿಯು ಲಿಯಾನ್‍ಸಿನೊ 500 ಬೈಕಿನ ಮೇಲೆ ಐದು ವರ್ಷ ಅಥವಾ ಅನಿಯಮಿತ ಕಿಲೋಮೀಟರ್‍ಗಳ ವಾರಂಟಿಯನ್ನುನೀಡುತ್ತದೆ. ಇದರಿಂದಾಗಿ ಕಂಪನಿಗೆ ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಸೆಳೆಯಲು ಅನುಕೂಲವಾಗಲಿವೆ.
MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಲಿಯಾನ್‍ಸಿನೊ 500 ಬೈಕ್ ಭಾರತದಲ್ಲಿರುವ ಬೆನೆಲ್ಲಿ ಕಂಪನಿಯ ಟಿಎನ್‌ಟಿ 300 ಹಾಗೂ ಟಿಆರ್‌ಕೆ 502 ಬೈಕುಗಳ ನಡುವಿನ ಸರಣಿಯಲ್ಲಿರಲಿದೆ. ಲಿಯಾನ್‍ಸಿನೊ 500 ಬೈಕ್ ಅನ್ನು ಸಿಲ್ವರ್ ಹಾಗೂ ಕೆಂಪು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ.
MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿಎಂ ಬೈಕ್ ಸವಾರ

ಬೆನೆಲ್ಲಿ ಕಂಪನಿಯು ಇತ್ತೀಚೆಗಷ್ಟೆ ತನ್ನ ಮೊದಲ ಅಡ್ವೆಂಚರ್ ಟೂರರ್ ಬೈಕ್ ಆದ ಟಿಆರ್‌ಕೆ 502 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಅಡ್ವೆಂಚರ್ ಬೈಕ್ ಅನ್ನು ಟಿಆರ್‍ಕೆ 502 ಹಾಗೂ ಟಿಆರ್‍ಕೆ 502 ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಅಡ್ವೆಂಚರ್ ಬೈಕಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5 ಲಕ್ಷಗಳಾಗಿದೆ.
MOST READ: ಒಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಇಟಲಿ ಮೂಲದ ಬೆನೆಲ್ಲಿ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ವಿವಿಧ ಸಮಸ್ಯೆಗಳಿಂದಾಗಿ ಡಿಎಸ್‌ಕೆ ಜೊತೆಗಿನ ಸಹಭಾಗಿತ್ವವು ವಿಫಲವಾದ ನಂತರ ಬೆನೆಲ್ಲಿ ಕಂಪನಿಯು ಮಹಾವೀರ್ ಗ್ರೂಪ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಬೆನೆಲ್ಲಿ ಲಿಯಾನ್‍ಸಿನೊ 500 ಭಾರತದಲ್ಲಿ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ, ಬೆಲೆಗೆ ಸಂಬಂಧಿಸಿದಂತೆ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಹಾರ್ಲೆ ಡೇವಿಡ್ಸನ್ 750 ಬೈಕುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








