ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಬೆನೆಲ್ಲಿ ಕಂಪನಿಯು ಎರಡನೇ ಬಾರಿಗೆ ಭಾರತಕ್ಕೆ ಕಾಲಿಟ್ಟು ಹೈದರಾಬಾದ್ ಮೂಲದ ಮಹಾವೀರ್ ಗ್ರೂಪ್‍‍ನ ಜೊತೆ ಸಹಭಾಗಿತ್ವ ಹೊಂದಲಿದೆ. ಬೆನೆಲ್ಲಿ ಕಂಪನಿಯು ತನ್ನ ಸ್ಟಾಂಡರ್ಡ್ ಮಾದರಿಯ ಟಿ‍ಎನ್‍‍ಟಿ 300, ಹೊಸ ವಿನ್ಯಾಸ ಹೊಂದಿರುವ 302 ಆರ್, ಟಿ‍ಎನ್‍‍ಟಿ 600 ಐ, ಟಿ‍ಆರ್‍‍ಕೆ 502 ಮತ್ತು 502 ಎಕ್ಸ್ ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಕಂಪನಿಯು ತನ್ನ 300 ಸಿಸಿ ಸೆಗ್‍‍ಮೆಂಟಿನ ಮೋಟಾರ್‍‍ಸೈಕಲ್‍‍ಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಉತ್ಪಾದನೆಯ ವೆಚ್ಚವು ಕಡಿಮೆಯಾಗಿರುವ ಕಾರಣ, ಬೆನೆಲ್ಲಿ ಕಂಪನಿಯು ಟಿ‍ಎನ್‍‍ಟಿ 300 ಮತ್ತು 320 ಆರ್ ಮಾದರಿಗಳ ಬೆಲೆಗಳನ್ನು ಕಡಿಮೆಗೊಳಿಸಿದೆ. ಈ ಎರಡೂ ಮಾದರಿಯ ಬೈಕುಗಳಲ್ಲಿ 300 ಸಿಸಿಯ ಇನ್-ಲೈನ್ ಟ್ವಿನ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 38.8 ಬಿಹೆಚ್‍‍ಪಿ ಪವರ್ ಅನ್ನು 11,500 ಆರ್‍‍ಪಿ‍ಎಂ ನಲ್ಲಿ ಮತ್ತು 26.5 ಎನ್‍ಎಂ ಟಾರ್ಕ್ ಅನ್ನು 10,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಬೆನೆಲ್ಲಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ವಿಕಾಸ್ ಜಬಾಕ್ ರವರು ಮಾತನಾಡಿ, ನಾವು ನಮ್ಮ ಬ್ರಾಂಡ್‍‍ಗಿರುವ ಬೆಲೆಯನ್ನು ಹಾಗೂ ಗ್ರಾಹಕರು ಬೆನೆಲ್ಲಿ ವಾಹನಗಳಡೆಗೆ ಹೊಂದಿರುವ ಭಾವನೆಗಳನ್ನು ಗೌರವಿಸುತ್ತೇವೆ.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಟಿ‍ಎನ್‍‍ಟಿ 300 ಮತ್ತು ಟಿ‍ಎನ್‍‍ಟಿ 302 ಆರ್ ಮಾದರಿಗಳ ಉತ್ಪಾದನೆಯಲ್ಲಿನ ವೆಚ್ಚವು ಕಡಿಮೆಯಾಗಿರುವ ಕಾರಣದಿಂದ ನಾವು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ ಎಂದು ತಿಳಿಸಿದರು. ಬೆಲೆಗಳನ್ನು ಪರಿಷ್ಕರಿಸಿದ ನಂತರ ಎರಡೂ ಮೋಟಾರ್‍‍ಸೈಕಲ್‍‍ಗಳ ಬೆಲೆಯು ಕೈಗೆಟುಕುವ ದರದಲ್ಲಿ ದೊರೆಯಲಿದ್ದು, ಪ್ರತಿಸ್ಪರ್ಧಿ ಕಂಪನಿಗಳಿಗೆ ಪೈಪೋಟಿ ನೀಡಲಿದೆ.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

302 ಆರ್ ನ ಬೆಲೆಯು ಕವಾಸಕಿ ನಿಂಜಾ 300 ಬೈಕಿಗಿಂತ ಸ್ವಲ್ಪ ಹೆಚ್ಚಿರಲಿದೆ, ಕವಾಸಕಿ ನಿಂಜಾ 300 ಬೈಕಿನ ಬೆಲೆಯು ರೂ.2.98 ಲಕ್ಷಗಳಾಗಿದ್ದರೆ, ಟಿವಿ‍ಎಸ್ ಅಪಾಚೆ ಆರ್‍ಆರ್310 ರ ಬೆಲೆಯು ರೂ.2.24 ಲಕ್ಷಗಳಾಗಿದೆ. ಮತ್ತೊಂದೆಡೆ, ಸ್ಟಾಂಡರ್ಡ್ ಟಿ‍ಎನ್‍‍ಟಿ 300 ಬೈಕಿನ ಬೆಲೆಯು ಹೆಚ್ಚು ಕಡಿಮೆ ಬಿ‍ಎಂ‍‍ಡಬ್ಲೂ ಜಿ310ಆರ್ ನಷ್ಟೆ ಆಗಿರಲಿದ್ದು, ಬಹುತೇಕ ಕೆಟಿ‍ಎಂ 390 ಡ್ಯೂಕ್‍ ಹೊಂದಿರುವ ಬೆಲೆಯನ್ನು ಹೊಂದಿರಲಿದೆ, ಇದರ ಬೆಲೆ ರೂ.2.48 ಲಕ್ಷಗಳು. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳು.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಟಿ‍ಎನ್‍‍ಟಿ 300 ನ ಬೆಲೆಯನ್ನು ರೂ.51,000 ಕಡಿಮೆ ಮಾಡಲಾಗಿದ್ದು, ಈಗ ರೂ.2.99 ಲಕ್ಷಗಳಾಗಲಿದೆ, ಮೊದಲು ಇದರ ಬೆಲೆಯು ರೂ.3.50 ಲಕ್ಷಗಳಾಗಿತ್ತು. 302ಆರ್ ಬೈಕಿನ ಬೆಲೆಯು ಮೊದಲು ರೂ.3.70 ಲಕ್ಷಗಳಾಗಿದ್ದು, ಈಗ ರೂ.3.10 ಲಕ್ಷಗಳಾಗಲಿದೆ. ಈ ಎಲ್ಲಾ ಬೆಲೆಗಳು ಭಾರತದಲ್ಲಿರುವ ಎಕ್ಸ್ ಶೋರೂಂ ದರಗಳು.

MOST READ: ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಕಳೆದ ಬಾರಿ ಬೆನೆಲ್ಲಿ ಕಂಪನಿಯು ತನ್ನ ಉಳಿದ ಮಾದರಿಗಳಾದ ಟಿ‍ಆರ್‍‍ಕೆ 502 ಮತ್ತು ಟಿ‍ಆರ್‍‍ಕೆ 502 ಎಕ್ಸ್ ಮಾದರಿಗಳ ಬೆಲೆಯನ್ನು ರೂ. 10,000 ಗಳಷ್ಟು ಏರಿಕೆ ಮಾಡಿತ್ತು. ಈ ಬೆಲೆಗಳ ಏರಿಕೆಯು 21ನೇ ಏಪ್ರಿಲ್ 2019ರಿಂದ ಜಾರಿಗೆ ಬಂದಿತ್ತು.

ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಮಾದರಿಯ ಬೈಕುಗಳನ್ನು ಕೊಳ್ಳುವವರಿಗೆ ಇದೊಂದು ಶುಭ ಸುದ್ದಿಯಾಗಿದೆ. ಬೆನೆಲ್ಲಿ ಮೋಟಾರ್‍‍ಸೈಕಲ್ ಮೆಷಿನ್‍‍ಗಳು ಉತ್ಕೃಷ್ಟ ದರ್ಜೆಯಲ್ಲಿದ್ದು, ಆ ಕಂಪನಿಯ ಬೈಕುಗಳನ್ನು ಚಲಾಯಿಸುವುದು ಕನಸು ನನಸಾದಂತಹ ಅನುಭವವನ್ನು ನೀಡುತ್ತದೆ. ಬೆನೆಲ್ಲಿ ಕಂಪನಿಯು ತನ್ನ ಉಳಿದ ಮಾದರಿಗಳ ಬೆಲೆಗಳನ್ನು ಸಹ ಕಡಿಮೆ ಮಾಡುವ ನಿರೀಕ್ಷೆಯಿದೆ. ಬೆಲೆಗಳನ್ನು ಕಡಿಮೆ ಮಾಡುವುದರಿಂದ ಮಾರಾಟದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದುವ ಸಾಧ್ಯತೆಗಳಿವೆ. ಕೆಟಿ‍ಎಂ ಕಂಪನಿಯ ಡ್ಯೂಕ್ 790 ಬೈಕ್ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಆಸ್ಟ್ರಿಯಾ ಮೂಲದ ಬೆನೆಲ್ಲಿ ಕಂಪನಿಗೆ ಪೈಪೋಟಿ ನೀಡುವ ಉದ್ದೇಶದಿಂದ ಬಹುತೇಕ ದ್ವಿಚಕ್ರ ವಾಹನ ತಯಾರಕರು ತಮ್ಮ ವಾಹನಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

More from DriveSpark

Article Published On: Tuesday, May 14, 2019, 12:38 [IST]
English summary
Benelli Reduces Price Of TNT 300 And 302R — Reductions Of Up To Rs 60,000 - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+