ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಪಿಯಾಜಿಯೋ ಒಡೆತನದ ಎಪ್ರಿಲಿಯಾ ಮತ್ತು ವೆಸ್ಪಾ ಬ್ರಾಂಡ್‍‍ಗಳು, 150 ಸಿಸಿ ಸೆಗ್‍‍ಮೆಂಟಿನ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದವು. ಇದಕ್ಕೆ ಮೊದಲು ಈ ಸಾಮರ್ಥ್ಯದ ಸ್ಕೂಟರ್ ಗಳನ್ನು ಕೈನೆಟಿಕ್ ಕಂಪನಿ ಉತ್ಪಾದಿಸುತ್ತಿತ್ತು. ಎಪ್ರಿಲಿಯಾ ಈಗ 160 ಸಿಸಿ ಸಾಮರ್ಥ್ಯದ ಮ್ಯಾಕ್ಸಿ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಬೈಕ್‍‍ವಾಲೆ ಸುದ್ದಿ ಸಂಸ್ಥೆಯ ಪ್ರಕಾರ ಎಪ್ರಿಲಿಯಾ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯನ್ನು ಎಸ್‍ಆರ್ 150 ಬೈಕಿನ ಬಿಡುಗಡೆಯೊಂದಿಗೆ ಪ್ರವೇಶಿಸಿತು, ನಂತರ ಎಪ್ರಿಲಿಯಾ ಎಸ್‍ಆರ್ 125 ವಾಹನವನ್ನು ಬಿಡುಗಡೆಗೊಳಿಸಿತು. ಎಸ್‍ಆರ್ 150 ಸ್ಕೂಟರ್‍‍ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೂ, ಎಪ್ರಿಲಿಯಾ 125 ಸ್ಕೂಟರ್‍‍ಗಳು ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗಲಿಲ್ಲ. ಭಾರತೀಯರು ತಾವು ನೀಡಿದ ಬೆಲೆಗಿಂತ ಹೆಚ್ಚು ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಾರೆಂದು ತಿಳಿದ ಎಪ್ರಿಲಿಯಾ ಭಾರತೀಯ ಮಾರುಕಟ್ಟೆಗೆಂದೇ ಹೆಚ್ಚು ಸಾಮರ್ಥ್ಯದ ಸ್ಕೂಟರ್‍‍ಗಳನ್ನು ಅಭಿವೃದ್ದಿಪಡಿಸುತ್ತಿದೆ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಪಿಯಾಜಿಯೋ ವಾಹನಗಳ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ‍ಇ‍ಒ ಆದ ಡಿಯಾಗೋ ಗ್ರಾಫಿ ರವರು ಮಾತನಾಡಿ, ಕಂಪನಿಯು 150-200 ಸಿಸಿ ಸ್ಕೂಟರ್‍‍ಗಳ ನ್ನು ಅಭಿವೃದ್ಧಿ ಪಡಿಸುತ್ತಿದೆ. 200-300 ಸಿಸಿ ಸಾಮರ್ಥ್ಯದ ಬೈಕುಗಳ ಮಾರುಕಟ್ಟೆಯು ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಎಪ್ರಿಲಿಯಾ ಬಿಡುಗಡೆ ಮಾಡಲಿರುವ ಹೊಸ ದ್ವಿಚಕ್ರ ವಾಹನಗಳ ಸರಣಿಗೆ ಮ್ಯಾಕ್ಸಿ ಸ್ಕೂಟರ್ ಎಂಬ ಹೆಸರಿಡಲಾಗಿದೆ. ಮ್ಯಾಕ್ಸಿ ಸ್ಕೂಟರ್ಸ್ ದ್ವಿಚಕ್ರ ವಾಹನಗಳ ಪಯಣಕ್ಕಿರುವ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಸ್ಕೂಟರ್‍‍ನಲ್ಲಿ ಹೊಸ ವಿನ್ಯಾಸದ ಸ್ಟೈಲ್, ಆರಾಮದಾಯಕ ಪಯಣ, ಉತ್ತಮವಾದ ಸ್ಟೋರೇಜ್ ಸಾಮರ್ಥ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಈಗ ಲಭ್ಯವಿರುವ ಮಾದರಿಗಳಿಗಿಂತ ಎಪ್ರಿಲಿಯಾ ಹೆಚ್ಚು ಸ್ಪೋರ್ಟಿಯರ್ ಆಗಿದ್ದು, ಇನ್ನಷ್ಟು ಹೆಚ್ಚಿನ ಪ್ರಮಾಣದ ಸ್ಪೋರ್ಟ್ ಲುಕ್‍‍ಗಳನ್ನು ಪಡೆಯಲಿದೆ. ಈಗ ಬಿಡುಗಡೆಯಾಗಲಿರುವ ಎಪ್ರಿಲಿಯಾ ಸರಣಿಯ ಸ್ಕೂಟರ್‍‍ಗಳು ಹೆಚ್ಚಿನ ಪ್ರಮಾಣದ ಪರ್ಫಾಮೆನ್ಸ್ ನೀಡಲಿವೆ. ಕಂಪನಿಯ ಪ್ರಕಾರ ಮೋಟಾರ್-ಸ್ಕೂಟರ್ ಸೆಗ್‍‍ಮೆಂಟಿನಲ್ಲಿ ಈಗ ಇಡುತ್ತಿರುವ ಹೆಜ್ಜೆಯು ಭವಿಷ್ಯದ ಮುನ್ಸೂಚನೆಯಾಗಿದ್ದು, ಈಗಿರುವ ಯೋಜನೆಗಳಿಗಿಂತ ಉತ್ತಮವಾದ ಯೋಜನೆಯಾಗಿದೆ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಬಿಡುಗಡೆಯಾಗಲಿರುವ ಎಪ್ರಿಲಿಯಾ ಮ್ಯಾಕ್ಸಿ ಸ್ಕೂಟರ್ ಅನ್ನು ಇಟಲಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಈ ಸ್ಕೂಟರ್ ಅನ್ನು ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಸುಜುಕಿ ಕಂಪನಿಯ ಬರ್ಗ್‍‍ಮನ್ ಸ್ಟ್ರೀಟ್ 125 ನ ಪ್ರೇರಣೆಯಿಂದ ತಯಾರಾಗಿರುವ 160 ಸಿಸಿ ಮ್ಯಾಕ್ಸಿ ಸ್ಕೂಟರ್, ಆ ವಾಹನದ ರೀತಿಯ ಅನುಭವವನ್ನು ಗ್ರಾಹಕರಿಗೆ ನೀಡಲಿದೆ.

MOST READ: ಬಿ‍ಎಸ್6 ಡೀಸೆಲ್ ಕಾರುಗಳ ಮಾರಾಟ ಮುಂದುವರೆಸಲಿದೆ ಹೋಂಡಾ

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಹೊಸ ಮ್ಯಾಕ್ಸಿ ಸ್ಕೂಟರ್ ನಲ್ಲಿ 155 ಸಿಸಿ ಯ ಎಂಜಿನ್ ಇರಲಿದ್ದು, ಇದೇ ಮಾದರಿಯ ಎಂಜಿನ್ ಅನ್ನು ಎಸ್‍ಆರ್ 150 ಮತ್ತು ವೆಸ್ಪಾ ಸ್ಕೂಟರ್‍‍ಗಳಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಅನ್ವಯವಾಗುವ ರೀತಿಯಲ್ಲಿ ಮಾರ್ಪಾಡಿಸಲಾಗಿದೆ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಹೊಸ ಮ್ಯಾಕ್ಸಿ 160 ಸ್ಕೂಟರ್‍‍ನ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಪ್ರಿಲಿಯಾ 160 ಮ್ಯಾಕ್ಸಿ ಸ್ಕೂಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮ್ಯಾಕ್ಸಿ ಸ್ಕೂಟರ್‍‍ಗಳನ್ನು ಉತ್ತಮವಾದ ರೀತಿಯಲ್ಲಿ ಅಭಿವೃದ್ದಿಪಡಿಸಿ ಎಪ್ರಿಲಿಯಾ ಕಂಪನಿಯು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ - ಎಸ್‍ಆರ್ ಮ್ಯಾಕ್ಸ್, ಎಸ್‍ಆರ್‍‍ವಿ 850 ಎ‍‍ಬಿ‍ಎಸ್ - ಸರಣಿಯ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಎಸ್‍ಆರ್‍‍ವಿ 850 ಸ್ಕೂಟರನ್ನು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಜನೆಗಳಿಲ್ಲ. ಮುಂಬರುವ ದಿನಗಳಲ್ಲಿ ಎಪ್ರಿಲಿಯಾ 400 ಸಿಸಿ ಎಂಜಿನ್‍‍ನಲ್ಲಿ ಸ್ಕೂಟರ್‍‍ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

Most Read Articles

Kannada
English summary
Aprilia 160 Maxi Scooter To Launch Soon — Return Of The Performance Scooter - Read in kannada
Story first published: Tuesday, May 14, 2019, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X