ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಬೆನ್ಲಿಂಗ್ ಇಂಡಿಯಾ, ತನ್ನ ಎಲೆಕ್ಟ್ರಿಕ್ ಸರಣಿಯ ವಾಹನಗಳ ಮಾರಾಟವನ್ನು 2020ರಿಂದ ಶುರು ಮಾಡಲಿದೆ. ಬೆನ್ಲಿಂಗ್ ಕಂಪನಿಯು ಇದುವರೆಗೂ ಭಾರತದಲ್ಲಿ 800 ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಮುಂಬರುವ ದಿನಗಳಲ್ಲಿ ರಿವೋಲ್ಟ್ ಕಂಪನಿಯ ಆರ್‍‍‍ವಿ 400 ಬೈಕಿಗೆ ಪೈಪೋಟಿ ನೀಡುವ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಕೇಂದ್ರ ಸರ್ಕಾರವು ಇನ್ನು ಕೆಲವು ವರ್ಷಗಳಲ್ಲಿ 150 ಸಿಸಿ ಹಾಗೂ ಅದಕ್ಕಿಂತ ಕೆಳಗಿನ ಸಿಸಿಯ ಪೆಟ್ರೋಲ್ ದ್ವಿಚಕ್ರ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ. ಇದಾದ ನಂತರ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡಲಿವೆ. ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ದ್ವಿ ಚಕ್ರ ವಾಹನಗಳು 150 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿವೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ತುಂಬಿರುವ ದೇಶಿಯ ಮಾರುಕಟ್ಟೆಗೆ ಬೆನ್ಲಿಂಗ್ ಕಂಪನಿಯು ಹೊಸದಾಗಿ ಕಾಲಿಡುತ್ತಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಭಾರತದಲ್ಲಿರುವ ಬಹುತೇಕ ದ್ವಿಚಕ್ರ ವಾಹನಗಳು ಸಣ್ಣ ಸಾಮರ್ಥ್ಯದ ಎಂಜಿನ್ ಹೊಂದಿವೆ. ಬೆನ್ಲಿಂಗ್ ಕಂಪನಿಯ ವಾಹನಗಳು ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ವಿದೇಶಿ ಮಾರುಕಟ್ಟೆಗಳಲ್ಲಿ ಬೆನ್ಲಿಂಗ್ ಕಂಪನಿಯು ಪ್ರತಿ ವರ್ಷ 6 ರಿಂದ 12 ಲಕ್ಷ ವಾಹನಗಳನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಇದರ ಜೊತೆಗೆ ವಿದೇಶಿ ಮಾರುಕಟ್ಟೆಗಳಲ್ಲಿ 60%ಕ್ಕೂ ಹೆಚ್ಚು ಮಾರಾಟ ಪ್ರಮಾಣವನ್ನು ಹೊಂದಿದೆ. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬೆನ್ಲಿಂಗ್‌ ಕಂಪನಿಯು ಕೃತಿ, ಫಾಲ್ಕನ್ ಹಾಗೂ ಐಕಾನ್ ಎಂಬ 3 ಮಾದರಿಯ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಎಲ್ಲಾ ಮೂರು ಮಾದರಿಗಳು ಕಡಿಮೆ ವೇಗದ ಸ್ಕೂಟರ್‌ಗಳಾಗಿವೆ. ಈ ಸ್ಕೂಟರ್‍‍ಗಳ ಬೆಲೆಯು ರೂ.40,000ಗಳ ಆಸುಪಾಸಿನಲ್ಲಿರದೆ. ಹೈ ಸ್ಪೀಡ್ ಸ್ಕೂಟರ್ ಅಭಿವೃದ್ಧಿ ಹಂತದಲ್ಲಿದೆ. ಹೈ ಸ್ಪೀಡ್ ಸ್ಕೂಟರ್, ಔರಾ ಎಂಬ ಹೆಸರನ್ನು ಹೊಂದುವ ಸಾಧ್ಯತೆಗಳಿವೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಈ ಸ್ಕೂಟರ್‍‍ಗಳನ್ನು ಬೆಂಗಳೂರು, ಕೋಲ್ಕತಾ, ಗುರುಗ್ರಾಮ, ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿರುವ ಬೆನ್ಲಿಂಗ್ ಡೀಲರ್‍‍ಗಳ ಬಳಿ ಮಾರಾಟ ಮಾಡಲಾಗುವುದು. ಪರಿಸರ ಸ್ನೇಹಿ ವಾಹನಗಳಾದ ಇವಿಗಳು ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಆದರೆ ಈ ಇವಿಗಳನ್ನು ಚಾರ್ಜ್ ಮಾಡುವ ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಲಿನಿಂದ ಎಂಬುದು ಕಟು ಸತ್ಯ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಖಾಸಗಿ ವಾಹನಗಳನ್ನು 30%, ಸಾರ್ವಜನಿಕ ಸಾರಿಗೆಯನ್ನು 70% ಹಾಗೂ ದ್ವಿ ಚಕ್ರ ಹಾಗೂ ತ್ರಿ ಚಕ್ರವಾಹನಗಳನ್ನು 80% ಬಳಸಿದರೂ, 2030ರ ವೇಳೆಗೆ ಭಾರತದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು 846 ದಶಲಕ್ಷ ಟನ್‌ಗಳಷ್ಟು ಕಡಿಮೆ ಮಾಡಬಹುದು.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

2025ರ ವೇಳೆಗೆ 150 ಸಿಸಿಯ ಕೆಳಗಿರುವ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ ಎಂಬುದಾಗಿ ಬೆನ್ಲಿಂಗ್ ಇಂಡಿಯಾ ನಂಬಿದೆ. ಇದರ ಜೊತೆಗೆ ಇವಿಗಳನ್ನು ಎಷ್ಟು ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆಯೋ ಅದಕ್ಕೆ ಅನುಗುಣವಾಗಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಸಾಧ್ಯತೆಗಳಿವೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಚೀನಾದಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳಿವೆ. ಆದರೆ ಭಾರತದಲ್ಲಿ ಕೇವಲ 650 ಚಾರ್ಜಿಂಗ್ ಸ್ಟೇಷನ್‍‍ಗಳಿವೆ. 2023-25ರ ವೇಳೆಗೆ, 50,000 ಚಾರ್ಜಿಂಗ್ ಕೇಂದ್ರಗಳನ್ನು ತೆರೆದರೆ, ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವವರ ಸಂಖ್ಯೆಯು ಹೆಚ್ಚಲಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಬೆನ್ಲಿಂಗ್ ಭಾರತದಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದೆ. ಬೆನ್ಲಿಂಗ್ ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಹೊಂದಿದೆ. ಸದ್ಯಕ್ಕೆ, ಅಸೆಂಬ್ಲಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವವರೆಗೆ, ಜನರ ಸಂಚಾರಕ್ಕಾಗಿ ಎಲೆಕ್ಟ್ರಿಕ್ ಬೈಕುಗಳನ್ನು ಬಾಡಿಗೆಗೆ ನೀಡಲು ಕಂಪನಿಯು ಯೋಜಿಸಿದೆ. ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ದಿಪಡಿಸುತ್ತಿದೆ.

ಭಾರತಕ್ಕೆ ಕಾಲಿಡಲಿವೆ ಕಡಿಮೆ ಬೆಲೆಯ ಬೆನ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಈ ಬೈಕ್, ಒಂದು ಬಾರಿಯ ಚಾರ್ಜಿನಿಂದ 140 ಕಿ.ಮೀ ದೂರ ಚಲಿಸುವುದರ ಜೊತೆಗೆ, ಪ್ರತಿ ಗಂಟೆಗೆ 80-90 ಕಿ.ಮೀ ವೇಗದಲ್ಲಿ ಚಲಿಸಲಿದೆ. ಬೆನ್ಲಿಂಗ್, ಈ ಬೈಕ್ ಅನ್ನು 2020ರ ಜನವರಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಿವೋಲ್ಟ್ ಆರ್‍‍ವಿ 400 ಇ ಬೈಕಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, August 23, 2019, 15:34 [IST]
English summary
Benling India will soon launch their low cost electric scooters- Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+