ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

2019ರ ಜೂನ್ ತಿಂಗಳಿನ ಬೈಕ್ ಮಾರಾಟದ ವರದಿಯನ್ನು ದೇಶಿಯ ಮಾರುಕಟ್ಟೆಯಲ್ಲಿನ ವಿವಿಧ ದ್ವಿಚಕ್ರ ವಾಹನ ತಯಾರಕರು ಬಿಡುಗಡೆಗೊಳಿಸಿದ್ದಾರೆ. ಬೈಕು ಮಾರಾಟ ವರದಿಯ ಪ್ರಕಾರ ಪ್ರಮುಖ ದ್ವಿಚಕ್ರ ವಾಹನ ತಯಾರಕರಲ್ಲಿ ಸಾಕಷ್ಟು ಏರು ಪೇರುಗಳಾಗಿವೆ. ದೇಶದ ಕೆಲವು ಪ್ರಮುಖ ಕಂಪನಿಗಳ ಮಾರಾಟ ವರದಿ ಇಲ್ಲಿದೆ.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಹೀರೋ ಮೊಟೊಕಾರ್ಪ್

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಎನಿಸಿರುವ ಹೀರೋ ಮೋಟೊಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ಕಠಿಣ ಸಮಯವನ್ನು ಎದುರಿಸುತ್ತಿದೆ. ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯ 2019ರ ಜೂನ್ ತಿಂಗಳ ಮಾರಾಟದಲ್ಲಿ 12.49%ನಷ್ಟು ಕುಸಿತ ಉಂಟಾಗಿದೆ. ಹೀರೋ ಕಂಪನಿಯು ಮೇ ತಿಂಗಳಿನಲ್ಲಿ 6,16,526 ಬೈಕುಗಳನ್ನು ಮಾರಾಟ ಮಾಡಿದೆ. 2018ರ ಮೇ ತಿಂಗಳಿನಲ್ಲಿ 7,04,562 ಬೈಕುಗಳ ಮಾರಾಟವಾಗಿತ್ತು.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಹೀರೋ ಕಂಪನಿಯು ಕಳೆದ ಎರಡು ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್ ಟ್ರೀಂ200ಎಸ್, ಎಕ್ಸ್ ಪಲ್ಸ್ 200, ಮೆಸ್ಟ್ರೋ ಎಡ್ಜ್ 125 ಹಾಗೂ ಪ್ಲೆಷರ್ 110 ಎಂಬ ನಾಲ್ಕು ಹೊಸ ಉತ್ಪನ್ನಗಳನ್ನು ಹೊರತಂದಿದ್ದರೂ ಸಹ ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ. ಕಂಪನಿಯು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಭಾರತದ ಮೊದಲ ಬಿ‍ಎಸ್6 ಎಂಜಿನ್ ಆಧಾರಿತ ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ರಾಯಲ್ ಎನ್‍‍ಫೀಲ್ಡ್

ಚೆನ್ನೈ ಮೂಲದ ಬೈಕ್ ತಯಾರಕ ಕಂಪನಿ ಈ ವರ್ಷ ಸಾಕಷ್ಟು ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಜೂನ್ ತಿಂಗಳಿನಲ್ಲಿಯೂ ಸಹ ಮಾರಾಟದಲ್ಲಿ ಕುಸಿತ ಕಂಡಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 24%ನಷ್ಟು ಕುಸಿತವನ್ನು ದಾಖಲಿಸಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯ 55,082 ಬೈಕುಗಳನ್ನು ಜೂನ್ 2019ರಲ್ಲಿ ಮಾರಾಟ ಮಾಡಲಾಗಿದ್ದರೆ, 2018ರ ಜೂನ್ ತಿಂಗಳಿನಲ್ಲಿ 72,558 ಬೈಕುಗಳನ್ನು ಮಾರಾಟ ಮಾಡಲಾಗಿತ್ತು.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ರಾಯಲ್ ಎನ್‌ಫೀಲ್ಡ್ ಕಂಪನಿಯು ಬೈಕುಗಳ ರಫ್ತಿನಲ್ಲಿ 72%ರಷ್ಟು ಏರಿಕೆಯೊಂದಿಗೆ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಜೂನ್ 2018ರಲ್ಲಿ 1,889 ಬೈಕುಗಳ ಮಾರಾಟ ಮಾರಾಟ ಮಾಡಲಾಗಿದ್ದರೆ, ಈ ವರ್ಷದ ಜೂನ್ ತಿಂಗಳಲ್ಲಿ 3,257 ಬೈಕುಗಳನ್ನು ಮಾರಾಟ ಮಾಡಲಾಗಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿನ ಮಾರಾಟ ಹಾಗೂ ರಫ್ತು ಎರಡನ್ನೂ ಸೇರಿಸಿದರೂ 22%ರಷ್ಟು ಕುಸಿತವನ್ನು ದಾಖಲಿಸಿದೆ.

ಟಿವಿಎಸ್ ಮೋಟಾರ್ಸ್

ಟಿವಿಎಸ್ ಮೋಟಾರ್ಸ್ ಸಹ ದೇಶಿಯ ಮಾರುಕಟ್ಟೆಯಲ್ಲಿ ನಿಧಾನಗತಿಯ ಬೆಳವಣಿಗೆಯನ್ನು ದಾಖಲಿಸಿದೆ. ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 8%ನಷ್ಟು ಕುಸಿತ ದಾಖಲಿಸಿದೆ. 2018ರ ಜೂನ್‌ನಲ್ಲಿ 2,46,176 ಬೈಕುಗಳ ಮಾರಾಟವಾಗಿದ್ದರೆ, 2019ರ ಜೂನ್‌ನಲ್ಲಿ 2,26,279 ಬೈಕುಗಳ ಮಾರಾಟವಾಗಿದೆ.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಆದರೆ ಕಂಪನಿಯ ಬೈಕ್ ಸೆಗ್‍‍ಮೆಂಟ್‍‍ನಲ್ಲಿ 2018 ರ ಜೂನ್‌ನಲ್ಲಿ 2%ನಷ್ಟು ಏರಿಕೆಯಾಗಿದೆ. ಜೂನ್ 2018ರಲ್ಲಿ 1,28,825ಗಳಷ್ಟಿದ್ದ ಬೈಕ್ ಮಾರಾಟವು, ಜೂನ್ 2019ರಲ್ಲಿ 1,31,331 ಯುನಿಟ್‌ಗಳಿಗೆ ತಲುಪಿದೆ. ಸ್ಕೂಟರ್ ಸೆಗ್‍‍ಮೆಂಟ್‍‍ನಲ್ಲಿ ಯಾವುದೇ ಗಮನಾರ್ಹವಾದ ಪ್ರಗತಿ ಕಂಡು ಬಂದಿಲ್ಲ. ಕಳೆದ ವರ್ಷ ಜೂನ್‌ನಲ್ಲಿ 1,02,763 ಯುನಿಟ್‌‍‍ಗಳಷ್ಟಿದ್ದ ಮಾರಾಟವು 2019ರ ಜೂನ್‌ನಲ್ಲಿ 99,007 ಯೂನಿಟ್‌ಗಳಿಗೆ ತಲುಪಿ 3%ನಷ್ಟು ಕುಸಿತವನ್ನು ದಾಖಲಿಸಿದೆ.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಬಜಾಜ್ ಆಟೋ

ಬಜಾಜ್ ಆಟೋ, ಭಾರತೀಯ ಮೂಲದ ಕೆಲವೇ ದ್ವಿಚಕ್ರ ವಾಹನ ಕಂಪನಿಗಳ ಪೈಕಿ ಒಂದಾಗಿದೆ. ಬಜಾಜ್ ಕಂಪನಿಯು ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಸ್ಥಿರವಾಗಿಡಲು ಯಶಸ್ವಿಯಾಗಿದೆ. ಆದರೆ, ಕಂಪನಿಯ ದೇಶೀಯ ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷ ಜೂನ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ತಿಂಗಳಿನಲ್ಲಿ 1%ನಷ್ಟು ಕಡಿಮೆಯಾಗಿದೆ. 2018ರ ಜೂನ್ ತಿಂಗಳಿನಲ್ಲಿ 2,00,949 ಬೈಕುಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷದ ಜೂನ್‌ನಲ್ಲಿ 1,99,340 ಬೈಕುಗಳನ್ನು ಮಾರಾಟ ಮಾಡಲಾಗಿದೆ.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಆದರೆ ರಫ್ತು ಮಾರಾಟದಲ್ಲಿ ಬಜಾಜ್ ಕಂಪನಿಯು 11%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು 2019 ರ ಜೂನ್‌ನಲ್ಲಿ 1,361,951 ಯುನಿಟ್‌ಗಳನ್ನು ರಫ್ತು ಮಾಡಿದ್ದರೆ, ಜೂನ್ 2018 ರಲ್ಲಿ 1,36,803 ಯುನಿಟ್‌ಗಳಿನ್ನು ರಫ್ತು ಮಾಡಿ ಒಟ್ಟಾರೆ ಶೇಕಡಾ 4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಸುಜುಕಿ ಮೋಟಾರ್ ಸೈಕಲ್ಸ್

ದೇಶಿಯ ಮಾರುಕಟ್ಟೆಯಲ್ಲಿ 2019ರ ಜೂನ್ ತಿಂಗಳಿನಲ್ಲಿ ಗಮನಾರ್ಹವಾದ ಮಾರಾಟವನ್ನು ದಾಖಲಿಸಿ ಎರಡು ಅಂಕಿಯ ಬೆಳವಣಿಗೆಯನ್ನು ದಾಖಲಿಸಿದ ಕೆಲವೇ ದ್ವಿಚಕ್ರ ವಾಹನ ತಯಾರಕರಲ್ಲಿ ಸುಜುಕಿ ಕಂಪನಿಯು ಒಂದಾಗಿದೆ. ಜಪಾನ್ ಮೂಲದ ಸುಜುಕಿ ಕಂಪನಿಯು ಒಟ್ಟಾರೆಯಾಗಿ 29%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಜೂನ್ 2019 ರಲ್ಲಿ ಒಟ್ಟು 67,491 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 52,217 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈ. ಲಿಮಿಟೆಡ್‍‍ನ ಉಪಾಧ್ಯಕ್ಷರಾದ ದೇವಶಿಶ್ ಹಂಡಾರವರು ಮಾತನಾಡಿ, ಆಟೋಮೊಬೈಲ್ ಉದ್ಯಮವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಮೊದಲ ತ್ರೈಮಾಸಿಕದಲ್ಲಿ ಎರಡು ಅಂಕಿಯ ಬೆಳವಣಿಗೆಯನ್ನು ಸಾಧಿಸುವ ಮೂಲಕ ಉತ್ತಮ ಪ್ರಗತಿಯನ್ನು ದಾಖಲಿಸಿದೆ. ನಮ್ಮ ಕಂಪನಿಯ ವಾಹನಗಳ ಮೇಲೆ ನಂಬಿಕೆಯಿಟ್ಟ ಭಾರತೀಯ ದ್ವಿಚಕ್ರ ವಾಹನ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ವಿಶ್ವಾಸಾರ್ಹತೆಯ ಹೆಚ್ಚಿನ ಪಾಲು ಗ್ರಾಹಕರಿಗೆ ಬೆಸ್ಟ್ ಇನ್ ಕ್ಲಾಸ್ ಸೇವೆಯನ್ನು ನೀಡುತ್ತಿರುವ ನಮ್ಮ ಡೀಲರ್‍‍ಗಳಿಗೆ ಸಲ್ಲಬೇಕು ಎಂದು ತಿಳಿಸಿದರು.

ಬೈಕ್ ಮಾರುಕಟ್ಟೆಯಲ್ಲಿ ಮುಂದುವರೆದ ಏರಿಳಿತ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯು ಸಂಕಷ್ಟದಲ್ಲಿದ್ದರೂ, ಬಜಾಜ್ ಹಾಗೂ ಸುಜುಕಿಯಂತಹ ಕೆಲವು ಕಂಪನಿಗಳು ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸುವಲ್ಲಿ ಯಶಸ್ವಿಯಾಗಿವೆ. ಮುಂಬರುವ ಹಬ್ಬದ ತಿಂಗಳುಗಳವರೆಗೆ ಈ ಕುಸಿತವು ಮುಂದುವರೆಯುವ ಸಾಧ್ಯತೆಗಳಿವೆ.

Article Published On: Wednesday, July 3, 2019, 10:47 [IST]
English summary
Bike Sales Report For June 2019 — Two-Wheelers Sales Is A Mixed Bag Of Ups & Downs! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+