ವಾರ್ ಚಿತ್ರದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ಬೈಕುಗಳು..!
ಬಾಲಿವುಡ್‍ನ ಪ್ರಮುಖ ನಟರಾದ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅವರು ಹೊಸ ಚಿತ್ರ ವಾರ್‍ನಲ್ಲಿ ಬರುವ ಬೈಕ್ ಚೇಸಿಂಗ್ ದೃಶ್ಯದಲ್ಲಿ ಬೆರಗುಗೊಳಿಸುವ ಪೋರ್ಚುಗಲ್‌ನ ಕಡಲ ತೀರದಲ್ಲಿ ಬಿಎಂಡಬ್ಲ್ಯು ಆರ್ 9 ಟಿ ಸ್ಕ್ರ್ಯಾಂಬ್ಲರ್ ಹಾಗೂ ಬಿಎಂಡಬ್ಲ್ಯು ಎಫ್ 750 ಜಿಎಸ್ ಸವಾರಿ ಮಾಡುವುದನ್ನು ಕಾಣಬಹುದು.

ವಾರ್ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಪರಸ್ಪರ ಎದುರಾಳಿಗಳಾಗಿದ್ದು, ಭಾರೀ ಪ್ರಮಾಣದ ಆಕ್ಷನ್ ದೃಶ್ಯಗಳಿರಲಿವೆ. ಬೈಕ್ ಆಕ್ಷನ್ ದೃಶ್ಯಗಳನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಚಿತ್ರಿಸಲಾಗಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ವಾರ್ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2019ರ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುದ್ರತೇಜ್ ಸಿಂಗ್‍ರವರು ಮಾತನಾಡಿ, ಬಿಎಂಡಬ್ಲ್ಯು ಮೋಟರ್‍ರಾಡ್, ದ್ವಿಚಕ್ರಗಳಲ್ಲಿನ ಸಾಹಸ ಮತ್ತು ಪರಿಶೋಧನೆಗಾಗಿ ಕಲಬೆರಕೆಯಿಲ್ಲದ ಉತ್ಸಾಹವನ್ನು ಹೊಂದಿದೆ.

ನಗರದ ರಸ್ತೆಗಳಿರಲಿ, ಕಠಿಣ ಭೂಪ್ರದೇಶಗಳಿರಲಿ ಅಥವಾ ರೇಸ್‌ಟ್ರಾಕ್ ಆಗಿರಲಿ, ನಮ್ಮ ಬೈಕುಗಳು ಯಾವಾಗಲೂ ಹೆಚ್ಚಿನ ಕ್ರಿಯೆಗೆ ಸಿದ್ಧವಾಗಿರುತ್ತವೆ. ಈ ಸಮಯದಲ್ಲಿ ನಮ್ಮ ಬೈಕುಗಳ ಸಾಹಸವು ದೊಡ್ಡ ಪರದೆಯಲ್ಲಿ ಬರಲಿದೆ.

ಬಿಎಂಡಬ್ಲ್ಯು ಆರ್ 9 ಟಿ ಸ್ಕ್ರ್ಯಾಂಬ್ಲರ್ ಮತ್ತು ಬಿಎಂಡಬ್ಲ್ಯು ಎಫ್ 750 ಜಿಎಸ್ ಮುಂಬರುವ ಆಕ್ಷನ್ ಚಿತ್ರ ವಾರ್‍ನಲ್ಲಿ ವಿಶೇಷ ಪ್ರದರ್ಶನ ನೀಡಲಿವೆ. ಹಿಂದೆಂದೂ ನೋಡಿರದ ಆಕ್ಷನ್ ಸನ್ನಿವೇಶಗಳಲ್ಲಿ ಬಿಎಂಡಬ್ಲ್ಯು ಮೋಟರ್‌ರಾಡ್ ಅಭಿಮಾನಿಗಳು ಹಾಗೂ ಬಾಲಿವುಡ್ ಪ್ರೇಮಿಗಳು ಈ ಬೈಕುಗಳ ಡೈನಾಮಿಕ್ ಪರ್ಫಾಮೆನ್ಸ್ ಹಾಗೂ ನಿಖರತೆಗೆ ಸಾಕ್ಷಿಯಾಗಲಿದ್ದಾರೆ.

ನಿಜ ಜೀವನದಲ್ಲಿ ಮತ್ತು ಚಿತ್ರದಲ್ಲಿ ಬಿಎಂಡಬ್ಲ್ಯು ಮೋಟರ್‍ರಾಡ್ ಪ್ರಪಂಚದಾದ್ಯಂತವಿರುವ ಬೈಕ್ ಪ್ರಿಯರನ್ನು ರಂಜಿಸಲಿದೆ ಎಂದು ಹೇಳಿದರು. ಚಿತ್ರದ ನಿರ್ದೇಶಕರಾದ ಸಿದ್ದಾರ್ಥ್ ಆನಂದ್‍ರವರು ಮಾತನಾಡಿ, ವಾರ್ ಚಿತ್ರವು ಬಾಲಿವುಡ್ ಚಿತ್ರ ಪ್ರೇಮಿಗಳು ಹಾಗೂ ಬಿಎಂಡಬ್ಲ್ಯು ಪ್ರಿಯರು ನೋಡಬೇಕಾದ ದೊಡ್ಡ ಆಕ್ಷನ್ ಚಿತ್ರವಾಗಿದೆ.

ಈ ಚಿತ್ರದಲ್ಲಿರುವ ಬರುವ ಆಕ್ಷನ್ ದೃಶ್ಯಗಳಿಗೆ ಬಿಎಂಡಬ್ಲ್ಯು ಎಫ್ 750 ಜಿಎಸ್ ಹಾಗೂ ಬಿಎಂಡಬ್ಲ್ಯು ಆರ್ 9 ಟಿ ಸ್ರ್ಕಾಂಬ್ಲರ್ ಬೈಕುಗಳು ಹೇಳಿ ಮಾಡಿಸಿದಂತಿವೆ. ನಾವು ಈ ಎರಡೂ ಬೈಕುಗಳನ್ನು ಮೈ ಜುಮ್ ಎನಿಸುವ ಸಾಹಸ ದೃಶ್ಯಗಳಲ್ಲಿ ಬಳಸಿದ್ದೇವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಎರಡೂ ಬೈಕುಗಳಿಂದಾಗಿ ನಮ್ಮ ಚಿತ್ರದಲ್ಲಿನ ಸಾಹಸ ದೃಶ್ಯಗಳಿಗೆ ಇನ್ನೂ ಹೆಚ್ಚಿನ ಕಳೆ ಬಂದಿದೆ. ವಾರ್ ಚಿತ್ರ ತಂಡವು, ಬಿಎಂಡಬ್ಲ್ಯು ಮೋಟಾರ್‍ರಾಡ್ ಬೈಕುಗಳು ಈ ಆಕ್ಷನ್ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆ ಪಡುತ್ತದೆ ಎಂದು ಹೇಳಿದರು. ವಾರ್ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಎದುರಾಳಿಗಳಾಗಿ ನಟಿಸಿದ್ದಾರೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಈ ಚಿತ್ರದ ನಿರ್ಮಾಪಕರು ಈ ಇಬ್ಬರು ಸ್ಟಾರ್ ನಟರ ಬೃಹತ್ ಮುಖಾಮುಖಿಗಾಗಿ ಸಾಧ್ಯವಿರುವ ಎಲ್ಲಾ ಆಕ್ಷನ್ ದೃಶ್ಯಗಳನ್ನು ಹಿಂದೆಂದೂ ಕಾಣದಂತಹ ರೀತಿಯಲ್ಲಿ ನಿರ್ಮಿಸಿದ್ದಾರೆ. ವರ್ಷದ ಅತಿದೊಡ್ಡ ಆಕ್ಷನ್ ಎಂಟರ್‌ಟೈನರ್ ಎಂದು ಹೆಸರಿಸಿರುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಅಂದ ಹಾಗೆ ಬಿಎಂಡಬ್ಲ್ಯು ಆರ್ 9 ಟಿ ಸ್ಕ್ರಾಂಬ್ಲರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.15.9 ಲಕ್ಷಗಳಾಗಿದೆ. ಇನ್ನು ಬಿಎಂಡಬ್ಲ್ಯು ಎಫ್ 750 ಜಿಎಸ್ ಬೈಕಿನ ಬೆಲೆಯು ರೂ.12 ಲಕ್ಷದಿಂದ ರೂ.13.4 ಲಕ್ಷಗಳಾಗಿದೆ.


Click it and Unblock the Notifications