ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍‍ಡಬ್ಲ್ಯು ಮೋಟರಾಡ್, ಆರ್ 1250 ಆರ್ ಹಾಗೂ ಆರ್ 1250 ಆರ್‍‍ಟಿ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕುಗಳ ಬೆಲೆ ಕ್ರಮವಾಗಿ ರೂ.15.95 ಲಕ್ಷ ಹಾಗೂ ರೂ.22.50 ಲಕ್ಷಗಳಾಗಿದೆ. ಈ ಎರಡೂ ಬೈಕುಗಳನ್ನು ಸಿ‍‍ಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್‍) ಆಗಿ ಮಾರಾಟ ಮಾಡಲಾಗುವುದು.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಈ ಬೈಕುಗಳನ್ನು ಬಿಎಂಡಬ್ಲ್ಯು ಮೋಟೊರಾಡ್ ಡೀಲರ್‍‍ಗಳ ಮೂಲಕ ಬುಕ್ಕಿಂಗ್ ಮಾಡಬಹುದು. ಪುಣೆನಲ್ಲಿರುವ ಬಿ‍ಎಂ‍‍ಡಬ್ಲ್ಯು ಡೀಲರ್‍‍ಗಳು ಈ ಬೈಕುಗಳನ್ನು ರೂ.3 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಬಹುದೆಂದು ಖಚಿತಪಡಿಸಿದ್ದಾರೆ. ಬುಕ್ಕಿಂಗ್ ಮಾಡಿದ ಮೂರು ತಿಂಗಳ ನಂತರ ಈ ಬೈಕುಗಳನ್ನು ವಿತರಿಸಲಾಗುವುದು. ಪ್ರತಿ ಮಾದರಿಗೆ ಐದು ಬೈಕುಗಳನ್ನು ಮಾರಾಟ ಮಾಡಲಾಗುವುದು.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍ಡಬ್ಲ್ಯು ಆರ್ 1250 ಆರ್ ಬೈಕಿನ ಎಲ್ಲಾ ಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ. ಮುಂಭಾಗದಲ್ಲಿರುವ ಫೆಂಡರ್, ಫ್ಯೂಯಲ್ ಟ್ಯಾಂಕಿನ ಸೈಡುಗಳು, ಫ್ರಂಟ್ ಸ್ಪಾಯಿಲರ್ ಹಾಗೂ ರೇರ್ ಸೈಡ್ ಪ್ಯಾನೆಲ್‍‍ಗಳು ಕಪ್ಪು ಬಣ್ಣವನ್ನು ಹೊಂದಿವೆ. ಈ ಬೈಕ್ ಅನ್ನು ಬ್ಲಾಕ್ ಸ್ಟಾರ್ಮ್ ಮೆಟಾಲಿಕ್ ಬಣ್ಣದಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಹೊಸ ಬಿ‍ಎಂ‍ಡಬ್ಲ್ಯು ಆರ್ 1250 ಆರ್‍‍ಟಿ ಬೈಕ್ ಅನ್ನು ಬ್ಲೂ ಪ್ಲಾನೆಟ್ ಮೆಟಾಲಿಕ್ ಹಾಗೂ ಸ್ಪಾರ್ಕ್ಲಿಂಗ್ ಸ್ಟಾರ್ಮ್ ಮೆಟಾಲಿಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ಬಣ್ಣವನ್ನೆ ಈ ಬೈಕಿನಲ್ಲಿರುವ ಭಾಗಗಳಿಗೂ ಅಳವಡಿಸಲಾಗಿದೆ. ಆದರೆ ಹ್ಯಾಂಡಲ್ ಬಾರ್ ಹಾಗೂ ವಿಂಡ್‍‍ಶೀಲ್ಡ್ ಟ್ರಿಮ್‍‍ಗಳ ಮೇಲೆ ಕ್ರೋಮ್ ಬಣ್ಣವನ್ನು ನೀಡಲಾಗಿದೆ.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍ಡಬ್ಲ್ಯು ಆರ್ 1250 ಆರ್ ಹಾಗೂ ಬಿ‍ಎಂ‍ಡಬ್ಲ್ಯು ಆರ್ 1250 ಆರ್‍‍ಟಿ ಬೈಕುಗಳಲ್ಲಿ ಸ್ಟಾಂಡರ್ಡ್ ಆಗಿ ಎರಡು ರೈಡಿಂಗ್ ಮೋಡ್‍‍ಗಳನ್ನು ನೀಡಲಾಗುವುದು. ಈ ಬೈಕುಗಳು ಆಟೋಮ್ಯಾಟಿಕ್ ಸ್ಟಾಬಿಲಿಟಿ ಕಂಟ್ರೋಲ್, ಎ‍‍ಬಿ‍ಎಸ್, ಕಾರ್ನರಿಂಗ್ ಎ‍‍ಬಿ‍ಎಸ್ ಹಾಗೂ ಹಿಲ್ ಸ್ಟಾರ್ಟ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿವೆ.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍‍ಡಬ್ಲ್ಯು ಕಂಪನಿಯು ಹೊಸದಾಗಿ ಈ ಬೈಕುಗಳಲ್ಲಿ ಹೀಟೆಡ್ ಸೀಟ್, ಸೆಂಟ್ರಲ್ ಲಾಕಿಂಗ್, ಟಯರ್ ಪ್ರೆಷರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ ಹಾಗೂ ಯಾಂಟಿ ಥೆಫ್ಟ್ ಅಲಾರಂಗಳನ್ನು ಅಳವಡಿಸಿದೆ. ಈ ಎರಡೂ ಬೈಕುಗಳು ಡೈನಾಮಿಕ್ ಇ‍‍ಎಸ್‍ಎ, ಕ್ರೂಸ್ ಕಂಟ್ರೋಲ್, ಕೀ-ಲೆಸ್ ರೈಡ್ ಹಾಗೂ ಡಿ‍ಆರ್‍ಎಲ್‍‍ಗಳನ್ನು ಹೊಂದಿವೆ.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍ಡಬ್ಲ್ಯು ಆರ್ 1250 ಆರ್ ಹಾಗೂ ಬಿ‍ಎಂ‍ಡಬ್ಲ್ಯು ಆರ್ 1250 ಆರ್‍‍ಟಿ ಬೈಕಿನಲ್ಲಿರುವ ಕನೆಕ್ಟಿವಿಟಿ ಫೀಚರ್‍‍ಗಳು ಫುಲ್ ಕಲರಿನ ಟಿ‍ಎಫ್‍‍ಟಿ ಸ್ಕ್ರೀನ್, ಬ್ಲೂಟೂತ್, ರೇಡಿಯೊ ಸಾಫ್ಟ್ ವೇರ್ ಹಾಗೂ ಇಂಟಿಗ್ರೇಟೆಡ್ ಬಿ‍ಎಂ‍‍ಡಬ್ಲ್ಯು ಮೋಟರಾಡ್ ಮಲ್ಟಿ ಕಂಟ್ರೋಲರ್‍‍ಗಳನ್ನು ಹೊಂದಿವೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍ಡಬ್ಲ್ಯು ಆರ್ 1250 ಆರ್ ಬೈಕಿನಲ್ಲಿ 6.5 ಇಂಚಿನ ಸ್ಕ್ರೀನ್ ಇದ್ದರೆ, ಬಿ‍ಎಂ‍ಡಬ್ಲ್ಯು ಆರ್ 1250 ಆರ್‍‍ಟಿ ಬೈಕ್ 5.7 ಇಂಚಿನ ಸ್ಕ್ರೀನ್‍ ಹೊಂದಿದೆ. ಈ ಎರಡೂ ಬೈಕುಗಳು 1254 ಸಿಸಿಯ ಎರಡು ಸಿಲಿಂಡರ್ ಇನ್-ಲೈನ್ ಬಾಕ್ಸರ್ ಎಂಜಿನ್ ಹೊಂದಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಈ ಎಂಜಿನ್‍‍ಗಳು 134 ಬಿ‍‍ಹೆಚ್‍‍ಪಿ ಪವರ್ ಹಾಗೂ 143 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಬೈಕುಗಳು ಗೋಲ್ಡನ್ ಬ್ರೇಕ್ ಕ್ಯಾಲಿಪರ್, ರೇಡಿಯೆಟರ್ ಕವರ್ ಹಾಗೂ ಸ್ಟೈನ್‍‍ಲೆಸ್ ಸ್ಟೀಲ್ ಟ್ಯಾಂಕ್ ಕವರ್‍‍ಗಳನ್ನು ಹೊಂದಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಬಿ‍ಎಂ‍‍ಡಬ್ಲ್ಯುವಿನ ಶಿಫ್ಟ್ ಕ್ಯಾಮ್ ಟೆಕ್ನಾಲಜಿಯು (ವೇರಿಯೆಬಲ್ ಕ್ಯಾಮ್ ಶ್ಯಾಫ್ಟ್ ಕಂಟ್ರೋಲ್) ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ. ಇದರಿಂದಾಗಿ ರೆವ್ ಸರಣಿಯ ಬೈಕುಗಳು ಹೆಚ್ಚುವರಿಯಾದ ಪವರ್ ಉತ್ಪಾದಿಸುತ್ತವೆ. ಇದರಿಂದಾಗಿ ಬೈಕುಗಳ ಮಾಲಿನ್ಯ ಹಾಗೂ ಇಂಧನ ಬಳಕೆ ಪ್ರಮಾಣವು ಹೆಚ್ಚಾಗಿ, ಎಂಜಿನ್ ಪರ್ಫಾಮೆನ್ಸ್ ಸಹ ಹೆಚ್ಚುತ್ತದೆ.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜರ್ಮನಿ ಮೂಲದ ಬಿ‍ಎಂ‍‍ಡಬ್ಲ್ಯು ಕಂಪನಿಯ ಬೈಕುಗಳು ದಕ್ಷತೆ ಹಾಗೂ ಗುಣಮಟ್ಟಕ್ಕೆ ಹೆಸರು ವಾಸಿಯಾಗಿವೆ. ಬಿ‍ಎಂ‍‍ಡಬ್ಲ್ಯು ಕಂಪನಿಯು ಪ್ರತಿ ಬಾರಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದಾಗ ಹೆಚ್ಚು ದಕ್ಷತೆಯ ಬೈಕುಗಳನ್ನು ನೀಡುತ್ತದೆ. ಈಗ ಬಿಡುಗಡೆಗೊಳಿಸಿರುವ ಬೈಕುಗಳನ್ನು ಕಂಪ್ಲೀಟ್ ಬಿಲ್ಟ್ ಯುನಿಟ್‍‍ಗಳಾಗಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಗೊಂಡ ಬಿ‍ಎಂ‍‍ಡಬ್ಲ್ಯು ಆರ್ ಸರಣಿಯ ಬೈಕುಗಳು

ಯುರೋಪಿಯನ್ ಗುಣಮಟ್ಟವನ್ನು ಹೊಂದಿರುವ ಸಿಬಿಯು ಬೈಕುಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಆಕರ್ಷಕವಾಗಿ ಕಾಣುವ ಈ ಬೈಕುಗಳು, ತಮ್ಮ ಲುಕ್‍‍ನಂತೆಯೇ ಆಕರ್ಷಕವಾಗಿ ಕಾರ್ಯನಿರ್ವಹಿಸಲಿವೆ. ಯುರೋಪಿಯನ್ ಗುಣಮಟ್ಟದ ಬೈಕುಗಳನ್ನು ಭಾರತಕ್ಕೆ ತಂದ ಬಿ‍ಎಂ‍‍ಡಬ್ಲ್ಯು ಕಂಪನಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.

More from DriveSpark

Article Published On: Wednesday, September 25, 2019, 10:54 [IST]
English summary
BMW Motorrad R 1250 R And R 1250 RT Motorcycles Launched In India: Prices Start At Rs 15.95 Lakh - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+