ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್ 1000 ಆರ್‍ಆರ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ 2019ರ ಎಸ್1000 ಆರ್‍ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2019 ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕ್, ಸ್ಟ್ಯಾಂಡರ್ಡ್, ಪ್ರೊ ಹಾಗೂ ಪ್ರೊ ಎಂ ಸ್ಪೋರ್ಟ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ ಮಾದರಿಯ ಬೆಲೆಯು ರೂ.18.50 ಲಕ್ಷಗಳಾಗಿದೆ. ಪ್ರೊ ಮಾದರಿಯ ಬೆಲೆ ರೂ.20.95ಲಕ್ಷಗಳಾದರೆ, ಟಾಪ್ ಮಾದರಿಯ ಪ್ರೊ ಎಂ ಸ್ಪೋರ್ಟ್ ಮಾದರಿಯ ಬೆಲೆ ರೂ.22.95ಲಕ್ಷಗಳಾಗಿದೆ. ಈ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋರೂಂ ದರಗಳಾಗಿವೆ.

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

2019ರ ಬಿಎಂಡಬ್ಲ್ಯು ಎಸ್ 1000 ಆರ್‍ಆರ್ ಬೈಕಿನ ಬುಕಿಂಗ್ ಶುರುಮಾಡಲಾಗಿದೆ. ಇದಾದ ನಂತರ ಈ ಲೀಟರ್-ಕ್ಲಾಸ್ ಸೂಪರ್‍‍ಬೈಕಿನ ಡೆಲಿವರಿಗಳನ್ನು ಶುರುಮಾಡಲಾಗುವುದು. 2019ರ ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕಿನಲ್ಲಿ ಈಗ ಹೊಸ ವಿನ್ಯಾಸದ ಎಂಜಿನ್ ಹಾಗೂ ಮೆಕ್ಯಾನಿಕಲ್ ಅಂಶಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಬೈಕ್ ಹೆಚ್ಚಿನ ಪ್ರಮಾಣದ ಪವರ್ ಉತ್ಪಾದಿಸಲಿದೆ. ಇನ್ನು ವಿನ್ಯಾಸದ ಬಗ್ಗೆ ಹೇಳುವುದಾದರೆ, 2019ರ ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕ್ ನವೀಕರಿಸಿದ ವಿನ್ಯಾಸದೊಂದಿಗೆ ಬರುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

ಹಿಂದಿನ ತಲೆಮಾರಿನ ಬೈಕಿಗಿಂತ ಹೆಚ್ಚು ಕಾಂಪ್ಯಾಕ್ಟ್ ಹಾಗೂ ಚುರುಕಾಗಿದೆ. ಮುಂಭಾಗದಲ್ಲಿ ಹಿಂದಿನ ಬೈಕುಗಳಲ್ಲಿ ಇದ್ದ ಹಳೆಯ ಹೆಡ್‍‍ಲ್ಯಾಂಪ್‍‍ಗಳ ಬದಲಿಗೆ, ಟ್ವಿನ್-ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. 2019 ಎಸ್1000 ಆರ್‍ಆರ್ ಬೈಕಿನ ಫೇರಿಂಗ್ ಅನ್ನು ಸಹ ನವೀಕರಿಸಲಾಗಿದೆ. ಹಿಂಭಾಗದಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್‍‍ಗಳ ಜೊತೆಗೆ ಎಲ್ಇಡಿ ಟೈಲ್‍‍ಲೈಟ್‍‍ಗಳನ್ನು ಅಳವಡಿಸಲಾಗಿದೆ. ಬಿಎಂಡಬ್ಲ್ಯು ಎಂಜಿನ್ ಅನ್ನು ಸಹ ಅಪ್‍‍ಡೇಟ್ ಮಾಡಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

ಈ ಬೈಕ್ ಹಳೆಯ ಬೈಕುಗಳಿಗಿಂತಲೂ ಹೆಚ್ಚು ಬಲಶಾಲಿಯಾಗಿದೆ. ಹಳೆ ತಲೆಮಾರಿನ ಬೈಕುಗಳಲಿದ್ದ 999 ಸಿಸಿ ಇನ್-ಲೈನ್ 4 ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, 13,500 ಆರ್‌ಪಿಎಂನಲ್ಲಿ 207 ಬಿಹೆಚ್‌ಪಿ ಹಾಗೂ 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ ಮಾದರಿ ಬೈಕಿಗಿಂತ 8 ಬಿ‍‍ಹೆಚ್‍‍ಪಿ ಹೆಚ್ಚು ಉತ್ಪಾದನೆ ಮಾಡುತ್ತದೆ. ಎಂಜಿನ್‍‍ನಲ್ಲಿ ಅಳವಡಿಸಲಾಗಿರುವ 6 ಸ್ಪೀಡಿನ ಗೇರ್‌ಬಾಕ್ಸ್‌ ಜೊತೆಗೆ ಸ್ಲಿಪರ್ ಕ್ಲಚ್ ಹಾಗೂ ಬೈ-ಡೈರೆಕ್ಷನಲ್ ಕ್ವಿಕ್-ಶಿಫ್ಟರ್‌‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

ಮೊದಲಿಗಿಂತ ಹೆಚ್ಚು ಕಾಂಪ್ಯಾಕ್ಟ್ ಆಗಿರುವುದರಿಂದ, 2019 ಬಿಎಂಡಬ್ಲ್ಯು ಎಸ್1000 ಆರ್‍ಆರ್ 11 ಕೆಜಿ ಕಡಿಮೆ ತೂಕವನ್ನು ಹೊಂದಿದೆ. ಈಗ ಈ ಬೈಕ್ 196 ಕೆ.ಜಿ ತೂಕವನ್ನು ಹೊಂದಿದೆ. ಕಡಿಮೆ ತೂಕದ ಬಿಡಿಭಾಗಗಳನ್ನು ಅಳವಡಿಸಿರುವ ಕಾರಣದಿಂದ, ಮರುವಿನ್ಯಾಸಗೊಳಿಸಲಾದ ಚಾಸಿಸ್‍‍ನಿಂದ ಹಾಗೂ ಡಬ್ಲ್ಯೂಎಸ್‍‍ಬಿಕೆ ಆಧಾರಿತ ಸ್ವಿಂಗ್‍‍ಆರ್ಮ್‍‍ಗಳ ಕಾರಣದಿಂದಾಗಿ ತೂಕ ಕಡಿಮೆಯಾಗಿದೆ. 2019 ರ ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕಿನಲ್ಲಿ ಹಲವಾರು ಫೀಚರ್‍‍ಗಳು ಹಾಗೂ ಬಿಡಿಭಾಗಗಳಿವೆ.

MOST READ: ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

ಅವುಗಳೆಂದರೆ 6 ಆಕ್ಸಿಸ್‍‍ನ ಐಎಂಯು, ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಎಂಜಿನ್ ಬ್ರೇಕಿಂಗ್ ಕಂಟ್ರೋಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ 6.5 ಇಂಚಿನ ಟಿಎಫ್‌ಟಿ ಸ್ಕ್ರೀನ್. ಈ ಬೈಕಿನಲ್ಲಿ ರೇನ್, ರೋಡ್, ರೇಸ್ ಹಾಗೂ ಡೈನಾಮಿಕ್ ಎಂಬ ನಾಲ್ಕು ವಿಭಿನ್ನ ಬಗೆಯ ಡ್ರೈವಿಂಗ್ ಮೋಡ್‍‍ಗಳಿವೆ. ಬಿಎಂಡಬ್ಲ್ಯು 2019 ಎಸ್1000 ಆರ್‍ಆರ್ ಬೈಕ್ ಅನ್ನು ಸ್ಪೋರ್ಟ್-ಆಧಾರಿತ ಎಂ ಪ್ಯಾಕೇಜ್‍‍ನೊಂದಿಗೆ ನೀಡಲಾಗುತ್ತದೆ. ಇದರಲ್ಲಿ ವ್ಹೀಲಿ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್ ಹಾಗೂ ಹೆಚ್ಚುವರಿಯಾದ ರೇಸ್ ಪ್ರೊ ರೈಡಿಂಗ್ ಮೋಡ್‍‍ನಂತಹ ಹೆಚ್ಚುವರಿ ಫೀಚರ್‍‍ಗಳಿವೆ.

MOST READ: ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಭಾರತಕ್ಕೆ ಲಗ್ಗೆಯಿಟ್ಟ ಬಿ‍ಎಂ‍‍ಡಬ್ಲ್ಯು ಎಸ್1000 ಆರ್‍ಆರ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಎಂಡಬ್ಲ್ಯು ಎಸ್1000 ಆರ್‍ಆರ್ ಮಾರುಕಟ್ಟೆಯಲ್ಲಿರುವ ಅತಿ ವಿಶಿಷ್ಟ ಲೀಟರ್-ಕ್ಲಾಸ್ ಬೈಕುಗಳಲ್ಲಿ ಒಂದಾಗಿದೆ. ರಸ್ತೆ ಹಾಗೂ ಟ್ರ್ಯಾಕ್ ಬಳಕೆಗಾಗಿ ಹಲವಾರು ಫೀಚರ್‍‍ಗಳನ್ನು ಹಾಗೂ ಬಿಡಿಭಾಗಗಳನ್ನು ಹೊಂದಿದೆ. ಬಿಎಂಡಬ್ಲ್ಯು ಎಸ್1000 ಆರ್‍ಆರ್ ಬೈಕ್, ಯಮಹಾ ವೈಝಡ್ಎಫ್-ಆರ್ 1, ಕವಾಸಕಿ ಝಡ್ಎಕ್ಸ್ -10 ಆರ್, ಸುಜುಕಿ ಜಿಎಸ್ಎಕ್ಸ್-ಆರ್ 1000, ಹೋಂಡಾ ಸಿಬಿಆರ್ 1000 ಆರ್‍ಆರ್ ಫೈರ್‍‍‍ಬ್ಲೇಡ್ ಹಾಗೂ ಡುಕಾಟಿ ಪಾನಿಗಲ್ ವಿ4 ಬೈಕುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, June 27, 2019, 16:10 [IST]
English summary
2019 BMW S 1000 RR Launched In India — Prices Start At Rs 18.50 Lakh - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+