ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಮುಂಬರುವ ದಿನಗಳಲ್ಲಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು. ಅವುಗಳಲ್ಲಿ ಬಹು ನಿರೀಕ್ಷಿತ 8 ಕಾರುಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ. ಕಾರು ತಯಾರಕರು ವಿವಿಧ ಸೆಗ್‍‍ಮೆಂಟ್‍‍ಗಳಲ್ಲಿ, ಅದರಲ್ಲೂ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಎಸ್‍‍ಯು‍‍ವಿ ಸೆಗ್‍‍ಮೆಂಟ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಳವಣಿಗೆ ಕಾಣುತ್ತಿರುವ ಸೆಗ್‍‍ಮೆಂಟ್‍ ಆಗಿದೆ. ಈ ವರ್ಷ, ಒಂದೆರಡು ಹೊಸ ಕಾರು ತಯಾರಕ ಕಂಪನಿಗಳು ಭಾರತಕ್ಕೆ ಕಾಲಿಡಲಿವೆ. ಈ ಕಂಪನಿಗಳ ಮೊದಲ ಆದ್ಯತೆ ಎಸ್‍‍ಯು‍‍ವಿ ಕಾರುಗಳಾಗಿರುತ್ತವೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಹಿಡಿತ ಹೊಂದಲು ಸಾಧ್ಯವಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

1. ಕಿಯಾ ಸೆಲ್ಟೋಸ್

ನಿರೀಕ್ಷಿತ ಬೆಲೆ: ರೂ. 9 ರಿಂದ 15 ಲಕ್ಷ (ಎಕ್ಸ್ ಶೋ ರೂಂ) ಬಿಡುಗಡೆ: ಜುಲೈ / ಆಗಸ್ಟ್ 2019

ಕಿಯಾ ಕಂಪನಿಯು 2018ರ ಆಟೋ ಎಕ್ಸ್‌ಪೋದಲ್ಲಿ ತನ್ನ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಕುರಿತು ಪ್ರಕಟಿಸಿತ್ತು. ಕೊರಿಯಾ ಮೂಲದ ಕಂಪನಿಯು ಈಗಾಗಲೇ ತನ್ನ ಮೊದಲ ಉತ್ಪಾದನಾ ಘಟಕದ ಕಾಮಗಾರಿಯನ್ನು ಆರಂಭಿಸಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಪ್ರಾರಂಭವಾಗಲಿದೆ. 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಎಸ್‌ಪಿ2 ಐ ಕಂಪನಿಯ ಮೊದಲ ಮಾದರಿ ಉತ್ಪಾದನಾ ಆವೃತ್ತಿಯಾಗಿದ್ದು, ಇದು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿ ನೀಡಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಬಿಡುಗಡೆಯಾಗಲಿರುವ ಕಾರು ಹೊಸ ತಲೆಮಾರಿನ ಕ್ರೆಟಾ ಪ್ಲಾಟ್‌ಫಾರ್ಮ್‍‍ನ ಮೇಲೆ ಆಧಾರವಾಗಿದೆ. ಇತ್ತೀಚೆಗಷ್ಟೆ ಈ ಕಾರ್ ಅನ್ನು ಸೆಲ್ಟೋಸ್ ಎಂಬ ಹೆಸರಿನಿಂದ ಅನಾವರಣಗೊಳಿಸಲಾಗಿದೆ. ಇಂಟಿರಿಯರ್‍‍ನಲ್ಲಿ ಆಧುನಿಕ ಹಾಗೂ ಕಿಯಾ ಸರಣಿಯ ಇತರ ಕಾರುಗಳಲ್ಲಿರುವಂತಹ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಎಸ್‌ಯುವಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ 1.4 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳಿರಲಿದ್ದು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಆಯ್ಕೆಗಳಿರಲಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

2. ಎಂಜಿ ಹೆಕ್ಟರ್

ನಿರೀಕ್ಷಿತ ಬೆಲೆ: ರೂ.15-20 ಲಕ್ಷ (ಎಕ್ಸ್ ಶೋರೂಂ) ಬಿಡುಗಡೆ: 27 ಜೂನ್ 2019

ಎಂಜಿ ಮೋಟಾರ್ ಭಾರತಕ್ಕೆ ಕಾಲಿಡುತ್ತಿದ್ದು, ಈ ಕಂಪನಿಯ ಮೊದಲ ಕಾರು ಹೆಕ್ಟರ್ ಎಸ್‌ಯುವಿ ಆಗಿರಲಿದೆ. ಇದು ಬಾವ್‍‍ಜುನ್ 530 ಕಾರಿನ ಮೇಲೆ ಆಧಾರಿತವಾಗಿದ್ದು, ಈಗಾಗಲೇ ಚೀನಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಎರಡೂ ಮಾದರಿಗಳಲ್ಲಿ ಒಂದೇ ರೀತಿಯ ಹಲವಾರು ಬಿಡಿಭಾಗಗಳನ್ನು ಅಳವಡಿಸಲಾಗಿದೆ. ಆದರೆ ಎಂಜಿ ಕಾರಿನಲ್ಲಿ ಹೊಸ ಅಲಾಯ್ ವೀಲ್ಸ್ ಹಾಗೂ ಬಂಪರ್‌ನೊಂದಿಗೆ ಹೊಸ ಕಪ್ಪು ಬಣ್ಣದಲ್ಲಿರುವ ಫ್ರಂಟ್ ಗ್ರಿಲ್‌ನಂತಹ ಕೆಲವು ವಿನ್ಯಾಸಗಳನ್ನು ತಿರುಚಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಡ್ಯಾಶ್‌ಬೋರ್ಡ್‍‍ನಲ್ಲಿ ನೇರವಾಗಿ ಇರಿಸಲಾಗಿರುವ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಇರುವುದರಿಂದ ಇಂಟಿರಿಯರ್ ಹೊಸತನದಿಂದ ಕೂಡಿದೆ. ಇದರಲ್ಲಿ ಇಂಟರ್‍‍ನೆಟ್ ಕನೆಕ್ಟಿವಿಟಿ ಹಾಗೂ ಹಲವು ಹೊಸ ಫೀಚರ್‍‍ಗಳಿವೆ. ಹೆಕ್ಟರ್ ಕಾರಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫುಲ್ ಪನೋರಮಿಕ್ ಸನ್‌ರೂಫ್ ಮೊದಲಾದ ಫೀಚರ್‍‍ಗಳಿವೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಿರಲಿದ್ದು, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿರಲಿವೆ. ಎಂಜಿ ಕಂಪನಿಯು ಜೂನ್ 27 ರಂದು ಭಾರತದಲ್ಲಿ ಹೆಕ್ಟರ್ ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಎಸ್‌ಯುವಿ ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ, ಮುಂಬರುವ ಕಿಯಾ ಸೆಲ್ಟೋಸ್ ಹಾಗೂ ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

3. ರೆನಾಲ್ಟ್ ಟ್ರೈಬರ್

ನಿರೀಕ್ಷಿತ ಬೆಲೆ: ರೂ. 5-8 ಲಕ್ಷ (ಎಕ್ಸ್ ಶೋರೂಮ್) ಬಿಡುಗಡೆ: ಜುಲೈ 2019

ರೆನಾಲ್ಟ್ ತನ್ನ ಮುಂಬರುವ ಎಂಪಿವಿ ಟ್ರೈಬರ್ ಕಾರಿನ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ಇದನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಟ್ರೈಬರ್ ಸಿಎಮ್ಎಫ್-ಎ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಕಾರು ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ಆಧಾರಿತವಾಗಿದ್ದು, ಬೆಲೆಯನ್ನು ಕಡಿಮೆಗೊಳಿಸಲು ಈ ಎರಡೂ ಕಾರುಗಳು ಹಲವಾರು ಬಿಡಿಭಾಗಗಳನ್ನು ಹಂಚಿಕೊಂಡಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಟ್ರೈಬರ್‌ನ ಬಾಹ್ಯ ವಿನ್ಯಾಸವು ಸಹ ಕ್ವಿಡ್‌ ಕಾರಿನ ಮೇಲೆ ಆಧಾರಿತವಾಗಿದೆ. ಈ ಕಾರಿನ ಮುಂಭಾಗದಲ್ಲಿ ಹೊಸ ಹೆಡ್‌ಲ್ಯಾಂಪ್‌, ಟೈಲ್ ಲ್ಯಾಂಪ್‌ಗಳಿದ್ದು, ಹೊಸ ಗ್ರಿಲ್ ಅನ್ನು ಹೊಸ ಬಂಪರ್‌ನೊಂದಿಗೆ ಅಳವಡಿಸಲಾಗಿದೆ. ಇಂಟಿರಿಯರ್‍‍ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಹಾಗೂ ಹಲವಾರು ಫೀಚರ್‍‍ಗಳಿವೆ. ಈ ಎಂಪಿವಿಯಲ್ಲಿ ಅನೇಕ ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ 1.0 ಲೀಟರಿನ ಪೆಟ್ರೋಲ್ ಎಂಜಿನ್‌ಯಿದ್ದು ಮ್ಯಾನುವಲ್ ಹಾಗೂ ಎಎಂಟಿ ಆಯ್ಕೆಗಳನ್ನು ಹೊಂದಿದೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

4. ಟಾಟಾ ಆಲ್ಟ್ರೋಜ್

ನಿರೀಕ್ಷಿತ ಬೆಲೆ: ರೂ. 5.5-8.5 ಲಕ್ಷ (ಎಕ್ಸ್ ಶೋರೂಂ) ಬಿಡುಗಡೆ: 2019ರ ಕೊನೆಗೆ

ಟಾಟಾ ಮೋಟಾರ್ಸ್ 2019 ರ ಜಿನೀವಾ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಪ್ರದರ್ಶಿಸಿತ್ತು. ಈ ಕಾರ್ ಅನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಆಲ್ಟ್ರೊಜ್ ಆಲ್ಫಾ ಪ್ಲಾಟ್‌ಫಾರ್ಮ್ ಮೇಲೆ ಆಧಾರಿತವಾಗಿದ್ದು, ಹ್ಯಾಚ್‌ಬ್ಯಾಕ್ ವಿನ್ಯಾಸ ಥೀಮ್ ಇಂಪ್ಯಾಕ್ಟ್ ಡಿಸೈನ್ 2.0 ಮೇಲೆ ಆಧಾರಿತವಾಗಿದೆ. ಮುಂಭಾಗದಲ್ಲಿ ಕಪ್ಪು ಬಣ್ಣದ ಗ್ರಿಲ್ ಹಾಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಟಾಟಾ ಆಲ್ಟ್ರೊಜ್ ಕಾರಿನ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ದೊಡ್ಡ ಗಾತ್ರದ ಅಲಾಯ್ ವೀಲ್‌ಗವೆ. ಡ್ಯಾಶ್‌ಬೋರ್ಡ್‍‍ನಲ್ಲಿ ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೆಕ್ಸನ್‌ ಕಾರಿನ ಮೇಲೆ ಆಧಾರಿತವಾಗಿದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ದೊಡ್ಡ ಎಂಐಡಿ ಡಿಸ್‍‍ಪ್ಲೇ ಹೊಂದಿದ್ದು, ಹಲವಾರು ಮಾಹಿತಿಗಳನ್ನು ತೋರಿಸುತ್ತದೆ. ಆಲ್ಟ್ರೊಜ್ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಮುಂದಿನ ವರ್ಷ ಈ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗುವುದು.

MOST READ: ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

5. ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ನಿರೀಕ್ಷಿತ ಬೆಲೆ: ರೂ. 4-7 ಲಕ್ಷ (ಎಕ್ಸ್ ಶೋರೂಂ) ಬಿಡುಗಡೆ: 2019ರ ಮಧ್ಯ ಭಾಗದಲ್ಲಿ.

ಮಾರುತಿ ಸುಜುಕಿ ಕಂಪನಿಯು, ಕಾನ್ಸೆಪ್ಟ್ ಫ್ಯೂಚರ್ ಎಸ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಅಭಿವೃದ್ದಿಪಡಿಸುತ್ತಿದ್ದು, ಈಗಾಗಲೇ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಕಾರು ಸಂಪೂರ್ಣವಾಗಿ ಹೊಸ ವಿನ್ಯಾಸದ ಥೀಮ್ ಹೊಂದಿರಲಿದೆ. ಈ ಕಾರು 2018 ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಎಸ್‌ಯುವಿ ಕಾನ್ಸೆಪ್ಟ್ ಕಾರಿನಲ್ಲಿದ್ದ ಸ್ಟೈಲಿಂಗ್ ಅನ್ನು ಪಡೆದುಕೊಂಡಿದೆ. ಈ ಕಾರಿಗೆ ಎಸ್-ಪ್ರೆಸ್ಸೊ ಎಂದು ಹೆಸರಿಡುವ ಸಾಧ್ಯತೆಗಳಿವೆ. ಈ ಹೊಸ ಮಾರುತಿ ಸ್ಮಾಲ್ ಹ್ಯಾಚ್ ಅನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಎಸ್-ಪ್ರೆಸ್ಸೊದ ಇಂಟಿರಿಯರ್‍‍ನ ಮಧ್ಯಭಾಗದಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಅದರ ಕೆಳಗಿರುವ ಇನ್ಫೋಟೈನ್‌ಮೆಂಟ್ ಸಿಸ್ಟಂಗಳು ಅತ್ಯಾಧುನಿಕವಾಗಿವೆ. ಹೊಸ ಮಾದರಿಯು ಮುಂಬರುವ ಕ್ರ್ಯಾಶ್ ಟೆಸ್ಟ್ ಹಾಗೂ ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕಾಗಿರುವುದರಿಂದ ಇದು ಹಾರ್ಟ್ ಟೆಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಸಾಧ್ಯತೆಗಳಿವೆ. ಈ ಕಾರಿನಲ್ಲಿರುವ ಪೆಟ್ರೋಲ್ ಎಂಜಿನ್‍‍ನಲ್ಲಿ ಮ್ಯಾನುವಲ್ ಹಾಗೂ ಆಟೋ ಗೇರ್ ಬಾಕ್ಸ್ ಆಯ್ಕೆಗಳಿವೆ.

MOST READ: ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

6. ಹ್ಯುಂಡೈ ಗ್ರ್ಯಾಂಡ್ ಐ 10

ನಿರೀಕ್ಷಿತ ಬೆಲೆ:ರೂ. 5.2 ಲಕ್ಷ, ಬಿಡುಗಡೆ: ಆಗಸ್ಟ್ / ಸೆಪ್ಟೆಂಬರ್ 2019

ಹ್ಯುಂಡೈ ಭಾರತೀಯ ಮಾರುಕಟ್ಟೆಗಾಗಿ ಗ್ರ್ಯಾಂಡ್ ಐ10ನ ಎರಡನೇ ತಲೆಮಾರಿನ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಕಾರ್ ಅನ್ನು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಕಾರು ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 2019ರ ಅಕ್ಟೋಬರ್‌ನಲ್ಲಿ ಜಾರಿಯಾಗಲಿರುವ ಬಿಎನ್‌ವಿಎಸ್‌ಎಪಿ ಮಾನದಂಡಗಳಿಗೆ ಅನುಗುಣವಾಗಿರಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಗ್ರ್ಯಾಂಡ್ ಐ10 ಕಾರ್ ಅನ್ನು ಹೊಸ ಫ್ರಂಟ್-ಎಂಡ್ ಮಾದರಿಯಲ್ಲಿ ನೀಡುವ ನಿರೀಕ್ಷೆಗಳಿವೆ ಹಾಗೂ 1.2-ಲೀಟರ್ ಎಂಜಿನ್ ಅನ್ನು ಬಿ‍ಎಸ್6 ನಿಯಮಕ್ಕನುಗುಣವಾಗಿ ನವೀಕರಿಸಲಾಗುತ್ತಿದೆ. ಹ್ಯುಂಡೈನ ಹೊಸ ಗ್ರ್ಯಾಂಡ್ ಐ10 ಅನ್ನು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡದಿರುವ ಸಾಧ್ಯತೆಗಳಿವೆ. ಅಲ್ಲದೆ, ಈ ಕಾರು ಹ್ಯುಂಡೈ ವೆನ್ಯೂದಲ್ಲಿರುವಂತಹ ಕನೆಕ್ಟೆಡ್ ಫೀಚರ್‍‍ಗಳನ್ನು ಹೊಂದಿರಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

7. ಮಾರುತಿ ಎರ್ಟಿಗಾ ಕ್ರಾಸ್

ನಿರೀಕ್ಷಿತ ಬೆಲೆ: ರೂ.9 ಲಕ್ಷ, ಬಿಡುಗಡೆ: ಆಗಸ್ಟ್ / ಸೆಪ್ಟೆಂಬರ್ 2019

ಮಾರುತಿ ಸುಜುಕಿ ಎರ್ಟಿಗಾದ ಕ್ರಾಸ್ಒವರ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾರಿನ ಹೊರಭಾಗವು ಒರಟಾದ ಬಾಡಿ ಕ್ಲಾಡಿಂಗ್‌ಗಳನ್ನು ಹೊಂದಿದ್ದು, ಕ್ಯಾಬಿನ್ ಸಾಮಾನ್ಯ ಮಾರುತಿ ಸುಜುಕಿ ಎರ್ಟಿಗಾ ಗಿಂತ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಹೊಸ ಕಾರಿನ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳೊಂದಿಗೆ 6 ಆಸನಗಳ ಸೆಟಪ್ ಇರಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಇದನ್ನು ಬಿಡುಗಡೆ ಮಾಡಲಾಗುವುದು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

8. ಟಾಟಾ ಬಜಾರ್ಡ್

ನಿರೀಕ್ಷಿತ ಬೆಲೆ: 15 ಲಕ್ಷ, ಲಾಂಚ್ ಎಂಡ್ 2019

ಟಾಟಾ ಬಜಾರ್ಡ್ ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಹ್ಯಾರಿಯರ್‌ನ 7 ಆಸನಗಳ ಆವೃತ್ತಿಯಾಗಿದೆ. ಹೊಸ ಎಸ್‍‍ಯು‍‍ವಿಯನ್ನು ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಕಾರು ಟಾಟಾ ಹ್ಯಾರಿಯರ್‌ ಕಾರ್ ಅನ್ನು ಹೋಲುತ್ತದೆ. ಎರಡೂ ಕಾರುಗಳಲ್ಲಿ ಒಂದೇ ರೀತಿಯ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಲಾಗಿದೆ. ಹ್ಯಾರಿಯಲ್‍‍ನಲ್ಲಿರುವಂತಹ 138 ಬಿ‍‍ಹೆಚ್‍ಪಿ ಉತ್ಪಾದಿಸುವ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಬಜಾರ್ಡ್ ಹೊಂದಿರಲಿದೆ. ಆದರೆ ಬಜಾರ್ಡ್‌ನಲ್ಲಿರುವ ಎಂಜಿನ್ ಸುಮಾರು 167 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.

Most Read Articles

Kannada
English summary
8 Most Awaited Upcoming Cars In India Launching This Year - Read in kannada
Story first published: Wednesday, June 26, 2019, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X