ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಗಾಲ್ಫ್ ಆಟವು ಕೆಲವರಿಗೆ ಬೋರಿಂಗ್ ಎನಿಸಬಹುದು. ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಮೊತ್ತದ ಬಹುಮಾನವನ್ನು ನೀಡುವ ಆಟಗಳಲ್ಲಿ ಗಾಲ್ಫ್ ಸಹ ಒಂದಾಗಿದೆ. ವೃತ್ತಿಪರ ಗಾಲ್ಫ್ ಆಟಗಾರರೂ ಸಹ ದುಬಾರಿ ಮೊತ್ತದ ಬಹುಮಾನವನ್ನು ಪಡೆಯಲಿದ್ದಾರೆ. ದುಬಾರಿ ಕಾರುಗಳಲ್ಲಿ ಒಂದಾದ ಬಿ‍ಎಂ‍‍ಡಬ್ಲ್ಯು ಕಂಪನಿಯು ಸಾಕಷ್ಟು ಬಾರಿ ಗಾಲ್ಫ್ ಟೂರ್ನಿಗಳ ಪ್ರಾಯೋಜಕತ್ವವನ್ನು ವಹಿಸಿದೆ. ನಾವಿಲ್ಲಿ ಹೇಳುತ್ತಿರುವ ವಿಷಯ ಗಾಲ್ಫ್ ಟೂರ್ನಿಯಲ್ಲಿ ಭಾಗವಹಿಸಿ ದುಬಾರಿ ಕಾರು ಗೆದ್ದ ಭಾರತದ ಗಾಲ್ಫ್ ಆಟಗಾರನ ಬಗ್ಗೆ.

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಗಗನ್‌ಜೀತ್ ಭುಲ್ಲರ್ ಎಂಬ ಭಾರತೀಯ ಗಾಲ್ಫ್ ಆಟಗಾರನೇ ಬಿಎಂಡಬ್ಲ್ಯು ಕಾರು ಗೆದ್ದಿರುವವರು. ಗಗನ್‌ಜೀತ್ ಅಂತರರಾಷ್ಟ್ರೀಯ ವೃತ್ತಿಪರ ಗಾಲ್ಫ್ ಪಟ್ಟಿಯಲ್ಲಿ 175 ನೇ ರ್‍ಯಾಂಕ್ ಪಡೆದಿದ್ದಾರೆ. ಅವರು ಬಿಎಂಡಬ್ಲ್ಯು ಇಂಟರ್ ನ್ಯಾಷನಲ್ ಓಪನ್ ಟೂರ್ನಿಯಲ್ಲಿ ಭಾಗವಹಿಸಿ, ಬಿ‍ಎಂ‍‍ಡಬ್ಲ್ಯೂ ಎಂ8 ಕಾಂಪಿಟೇಷನ್ ಕೂಪೆ ಕಾರ್ ಅನ್ನು ಗೆದ್ದಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬಿಎಂಡಬ್ಲ್ಯು ಕಂಪನಿಯು ಈ ಕಾರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಹಾಗೂ ಇದುವರೆಗೂ ಈ ಕಾರನ್ನು ಸಾರ್ವಜನಿಕರಿಗೆ ಪ್ರದರ್ಶಿಸಿಲ್ಲ. ಗಗನ್‍‍ಜೀತ್‍‍ರವರು ಹೋಲ್-ಇನ್-ಒನ್ ಗುರಿಯನ್ನು ಮುಟ್ಟಿರುವುದು ಇದೇ ಮೊದಲ ಸಲವೇನಲ್ಲ.

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಈ ಹಿಂದೆಯೂ ಅವರು ಈ ಸಾಧನೆಯನ್ನು ಮಾಡಿದ್ದರು. 2010ರ ನಂತರ ಮ್ಯೂನಿಚ್ ಈವೆಂಟ್‌ನಲ್ಲಿ ಆಟಗಾರನೊಬ್ಬ ಬಿಎಂಡಬ್ಲ್ಯು ಹೋಲ್-ಇನ್-ಒನ್ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು. 31 ವರ್ಷದ ಇತಿಹಾಸ ಹೊಂದಿರುವ ಈ ಟೂರ್ನಿಯಲ್ಲಿ ಎಂಟನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಇದಕ್ಕೂ ಮೊದಲು 1991ರಲ್ಲಿ ಬಿಎಂಡಬ್ಲ್ಯು 325 ಐ ಕ್ಯಾಬ್ರಿಯೊ ಕಾರ್ ಅನ್ನು ನೀಡಲಾಗಿತ್ತು. ನಂತರದ ವರ್ಷಗಳಲ್ಲಿ ಝಡ್8 ರೋಡ್‍‍‍ಸ್ಟರ್, 535ಐ ಸೆಡಾನ್, 640 ಐ ಗ್ರ್ಯಾನ್ ಕೂಪೆ, ಐ8 ಕೂಪೆ, ಐ8 ರೋಡ್‍‍‍ಸ್ಟರ್ ಹಾಗೂ ಎಂ760 ಎಲ್‍ಐ ಸೆಡಾನ್‍‍‍ಗಳನ್ನು ನೀಡಲಾಗಿತ್ತು.

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಬಿಎಂಡಬ್ಲ್ಯು ಕಂಪನಿಯು, ಮುಂದಿನ ವಾರ ಈ ಕಾರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಭಾರತದ ಗಾಲ್ಫ್ ಆಟಗಾರ ಗಗನ್‌ಜೀತ್‍‍ರವರು ಈ ಕಾರ್ ಹೊಂದಿರುವ ವಿಶ್ವದ ಮೊದಲ ವ್ಯಕ್ತಿ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು ಎಂ8 ಕಾಂಪಿಟೇಷನ್ ಕೂಪೆ ಕಾರಿನ ಬೆಲೆಯು 193,880 ಯುರೋಗಳಾಗಿದ್ದು, ಭಾರತೀಯ ಮೌಲ್ಯದಲ್ಲಿ ಸುಮಾರು ರೂ.1.53 ಕೋಟಿಗಳಾಗಲಿದೆ. ಗಾಲ್ಫ್‌ಕ್ಲಬ್ ಮಂಚೆನ್ ಐಚೆನ್ರಿಡ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಗಗನ್‍‍ಜೀತ್‍‍ರವರು ಸಿಕ್ಸ್ - ಐರನ್‍ ಬ್ಯಾಟಿನಿಂದ, 197 ಯಾರ್ಡ್‍ ಡ್ರೈವ್‍‍ನ 17 ನೇ ಹೋಲ್‍‍‍ಗೆ ಗುರಿಯಿಟ್ಟು ಲಕ್ಷ್ಯವನ್ನು ಮುಟ್ಟಿದರು.

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಪ್ರಶಸ್ತಿ ಗೆದ್ದ ನಂತರ ಗಗನ್‌ಜೀತ್ ಭುಲ್ಲರ್‍‍ರವರು ಮಾತನಾಡಿ, ವೃತ್ತಿಪರ ಗಾಲ್ಫ್ ಪಂದ್ಯಾವಳಿಯಲ್ಲಿ ಇದು ನನ್ನ ಎರಡನೇ ಪ್ರಶಸ್ತಿಯಾಗಿದೆ. ಈ ವರ್ಷವನ್ನು ಪ್ರಾರಂಭಿಸುವ ಮೊದಲು, ನನ್ನ ಕ್ಯಾಡಿ ಜೊತೆ ನನ್ನ ಕನಸುಗಳ ಬಗ್ಗೆ ಚರ್ಚಿಸಿದ್ದೆ. ಸರಿಯಾದ ಹೋಲ್ ನಿರ್ಮಿಸಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದೆ, ಅಂದುಕೊಂಡಿದ್ದನ್ನು ಸಾಧಿಸಿದ್ದಕ್ಕೆ ಖುಷಿಯಾಗಿದೆ. ಇದು ನನ್ನ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ಬಿಎಂಡಬ್ಲ್ಯು ನನ್ನ ನೆಚ್ಚಿನ ಕಾರುಗಳಲ್ಲಿ ಒಂದಾಗಿದ್ದು, ನಾನು ಆ ಕಾರನ್ನು ಓಡಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಬಿಎಂಡಬ್ಲ್ಯು ಎಂ8 ಕಾಂಪಿಟೇಷನ್ ಕೂಪೆ, ಇದುವರೆಗಿನ ಅತ್ಯಂತ ದುಬಾರಿ ಬೆಲೆಯ ಬಹುಮಾನವಾಗಿದೆ. ಹೊಸ ಮಾದರಿಯ ಈ ಕಾರು 4.4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಹೊಂದಿದ್ದು, 616 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. 100 ಕಿ.ಮೀ ವೇಗವನ್ನು 3.2 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಬಿಎಂಡಬ್ಲ್ಯು ಕಸ್ಟಮೈಸ್ ಮಾಡಿದ ಚಾಸಿಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಟ್ರ್ಯಾಕ್‌ಗಳಲ್ಲಿ ಚಲಿಸುವುದಕ್ಕಾಗಿ ಟ್ಯೂನ್ ಮಾಡಲಾಗಿದೆ. ಈ ಕಾರಿನಲ್ಲಿ ಹೊಸ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ.

MOST READ: ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಈ ಸಿಸ್ಟಂನಿಂದಾಗಿ ಕಾರಿನ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಚಾಲಕನು ಎರಡು ವಿವಿಧ ಬಗೆಯ ಪೆಡಲ್ ಸೆಟ್ಟಿಂಗ್‌ ಆಯ್ಕೆಗಳನ್ನು ಪಡೆಯಲಿದ್ದಾನೆ. ಇದರ ಜೊತೆಗೆ ಕಾರಿನಲ್ಲಿ ಟ್ರಾಕ್ ಮೋಡ್ ಅಳವಡಿಸಲಾಗಿದೆ. ಇದು ಕಾರಿನಲ್ಲಿರುವ ಎಂಜಿನ್‍‍ನ ಪರ್ಫಾಮೆನ್ಸ್ ಸೆಟ್ಟಿಂಗ್‍‍ಗಳ ಜೊತೆಗೆ ಬ್ರೇಕಿಂಗ್, ಸ್ಟೀಯರಿಂಗ್, ಸಸ್ಪೆಂಷನ್ ಹಾಗೂ ಕಾರಿನ ಆಲ್ ವ್ಹೀಲ್ ಡ್ರೈವ್ ಸಿಸ್ಟಂಗಳನ್ನು ಬದಲಿಸುತ್ತದೆ. ಇದರ ಜೊತೆಗೆ ಡಿಸ್ಟ್ರಾಕ್ಷನ್ ಫ್ರೀ ಸೆಟ್ಟಿಂಗ್ ಅಳವಡಿಸಲಾಗಿದ್ದು, ರೇಡಿಯೋ ಹಾಗೂ ಕಂಟ್ರೋಲ್ ಕಂಸೋಲ್‍‍ಗಳನ್ನು ತೆಗೆದು ಹಾಕಲಾಗಿದೆ.

Most Read Articles

Kannada
English summary
Indian golfer wins BMW M8 – the car is not even on sale yet! - Read in kannada
Story first published: Wednesday, June 26, 2019, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X