ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಕಾರಿನೊಳಗೆ ಮಕ್ಕಳನ್ನು ಬಿಟ್ಟುಹೋಗುವುದು ಸಾಮಾನ್ಯವಾಗುತ್ತಿದೆ. ಬೀಗ ಹಾಕಿದ ಕಾರುಗಳಿಂದ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈ ವೀಡಿಯೊದಲ್ಲಿರುವ ಘಟನೆ ನಡೆದಿರುವುದು ಪಂಜಾಬ್‍‍ನ ನಂಗಾಲ್‍‍ನಲ್ಲಿ. ಕಾರಿನೊಳಗೆ ಸಿಲುಕಿದ ಎರಡು ಘಂಟೆಗಳ ನಂತರ ಮಗುವನ್ನು ರಕ್ಷಿಸಲಾಗಿದೆ. ಹಲ್‍‍ಚಲ್ ಟಿವಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಹ್ಯುಂಡೈ ಕ್ರೆಟಾದೊಳಗೆ ಮಗುವನ್ನು ಲಾಕ್ ಮಾಡಲಾಗಿದೆ. ಕಾರಿನ ಸುತ್ತಲೂ ಸೇರಿರುವ ಜನರು ಮಗುವಿಗೆ ಸಹಾಯ ಮಾಡಲು ಯತ್ನಿಸುತ್ತಿರುವುದನ್ನು ಕಾಣಬಹುದು.

ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಆದರೆ ಮಗು ಕಾರಿನಿಂದ ಹೊರಬರುವಂತೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಗುವಿನ ಪೋಷಕರು ಅವನನ್ನು ಕಾರಿನೊಳಗೆ ಬಿಟ್ಟು ಹೋದ ನಂತರ ಕಾರು ಲಾಕ್ ಆಗಿದೆ. ಕಾರಿನ ಎಂಜಿನ್ ಚಾಲನೆಯಲ್ಲಿದ್ದು, ಎಸಿಯನ್ನು ಸಹ ಆನ್ ಮಾಡಲಾಗಿದೆ. ಇದರಿಂದಾಗಿ ಕಾರಿನೊಳಗಿನ ತಾಪಮಾನವು ಆರಾಮದಾಯಕವಾಗಿದೆ ಎಂಬುದು ಖಚಿತವಾಗುತ್ತದೆ. ಹ್ಯುಂಡೈ ಕ್ರೆಟಾ ಕಾರನ್ನು ಸೆಂಟ್ರಲ್ ಲಾಕ್ ಮಾಡಬಹುದಾಗಿರುವುದರಿಂದ, ಕಾರಿನ ಒಳಗಿದ್ದ ಮಗು ಲಾಕ್ ಬಟನ್ ಒತ್ತಿರಬೇಕು.

ಈ ಸೆಂಟ್ರಲ್ ಲಾಕ್ ಅನ್ನು ಕಾರಿನ ಬಾಗಿಲಿನ ಮುಂಭಾಗದ ಆರ್ಮ್‌ರೆಸ್ಟ್‌ನಲ್ಲಿ ಅಳವಡಿಸಲಾಗಿದೆ. ಆದರೆ, ಅದೇ ಬಟನ್ ಅನ್ನು ಬಳಸಿ ಕಾರನ್ನು ಅನ್‍‍ಲಾಕ್ ಮಾಡುವುದು ಹೇಗೆ ಎಂದು ಮಗುವಿಗೆ ತಿಳಿದಿರಲಿಲ್ಲ. ಹಾಗಾಗಿ ಮಗು ಕಾರಿನೊಳಗೆ ಲಾಕ್ ಆಯಿತು. ಸ್ಥಳದಲ್ಲಿದ್ದ ಜನರು ಕಾರಿನ ಕಿಟಕಿ ಒಡೆಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆಧುನಿಕ ಕಾರುಗಳು ಲ್ಯಾಮಿನೇಟೆಡ್ ಕಿಟಕಿಗಳೊಂದಿಗೆ ಬರುವುದರಿಂದ, ಅವುಗಳನ್ನು ಒಡೆಯುವುದು ಅಷ್ಟು ಸುಲಭವಲ್ಲ. ಆದ ಕಾರಣ ಪ್ರತಿಯೊಬ್ಬ ಕಾರು ಮಾಲೀಕರು ವಿಂಡೋ ಬ್ರೇಕರ್ ಅನ್ನು ಸುಲಭವಾಗಿ ಕೈಗೆ ಸಿಗುವಂತೆ ಇಟ್ಟುಕೊಳ್ಳಬೇಕು.

ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಇದರಿಂದ ಅಪಘಾತದ ನಂತರ ಬಾಗಿಲುಗಳು ಜಾಮ್ ಆಗಿದ್ದರೆ ಕಿಟಕಿಗಳನ್ನು ಒಡೆಯಲು ಅನುಕೂಲವಾಗಲಿದೆ. ಕಿಟಕಿ ಗಾಜನ್ನು ಒಡೆಯಲು ವಿಫಲವಾದ ನಂತರ, ಕಾರಿನ ಮಾಲೀಕರು ಕಾರಿನ ನಕಲಿ ಕೀಲಿಯನ್ನು ತರಲು ಮನೆಗೆ ಹೋದರು ಎಂದು ವರದಿಯಾಗಿದೆ. ಅವರು ಎರಡು ಗಂಟೆಗಳ ನಂತರ ವಾಪಸ್ ಆದರು. ಅಲ್ಲಿಯವರೆಗೂ ಆ ಮಗು ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿತ್ತು. ಮಗು ಕಾರಿನಲ್ಲಿದ್ದಾಗ, ಕಾರಿನ ಸುತ್ತಲೂ ಜನ ಸೇರಿದರು. ಇದರಿಂದಾಗಿ ಮಗು ಗಾಬರಿಯಾದಂತೆ ಕಂಡು ಬಂದಿತು. ಕೆಲವು ದಿನಗಳ ಹಿಂದೆ ಚೀನಾದಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿತ್ತು.

MOST READ: ಕುಸಿತ ಕಂಡ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಮಾರಾಟ

ಆ ವೀಡಿಯೊದಲ್ಲಿ, ಆಡಿ ಸೆಡಾನ್ ಒಳಗೆ ಮಗುವೊಂದು ಸಿಲುಕಿಕೊಂಡಿತ್ತು. ಇದೇ ಪರಿಸ್ಥಿತಿಯಲ್ಲಿದ್ದ ಜನರು ಆ ಮಗುವಿಗೆ ಕೆಲವು ಸೂಚನೆಗಳನ್ನು ನೀಡಿದರು. ಮಗು ಸೂಚನೆಗಳನ್ನು ಪಾಲಿಸಿದ ನಂತರ ಕಾರು ಅನ್‍‍ಲಾಕ್ ಆಯಿತು. ಮಗುವನ್ನು ಹೊರತರಲು ಯಶಸ್ವಿಯಾದರು. ಆದರೆ, ಕ್ರೆಟಾ ಕಾರಿನ ಒಳಗಿದ್ದ ಮಗು ಸುತ್ತ ನೆರೆದಿದ್ದ ಜನರು ನೀಡುತ್ತಿದ್ದ ಯಾವುದೇ ಸೂಚನೆಗಳನ್ನು ಪಾಲಿಸಲೇ ಇಲ್ಲ. ಮಕ್ಕಳು ಹಾಗೂ ಸಾಕುಪ್ರಾಣಿಗಳು ವಾಹನಗಳಲ್ಲಿ ಲಾಕ್ ಆಗಿದ್ದಾಗ ಅವರ ಗಮನವನ್ನು ನಮ್ಮತ್ತ ಸೆಳೆಯುತ್ತಿರಬೇಕು. ಅವರನ್ನು ಹಾಗೆಯೇ ಬಿಡುವುದು ಅಪಾಯ.

MOST READ: ಇದು ಭಾರತದ ಬಲಿಷ್ಠ ಸ್ಕೋಡಾ ಕಾರ್ ಅಂತೆ..!

ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಅನೇಕ ದೇಶಗಳಲ್ಲಿ, ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ವಾಹನದೊಳಗೆ ಬಿಟ್ಟು ಲಾಕ್ ಮಾಡುವುದರ ವಿರುದ್ಧ ಕಠಿಣ ಕಾನೂನುಗಳಿವೆ. ವಾಹನದ ಎಸಿ ಆನ್ ಆಗಿದ್ದರೂ ಪರವಾಗಿಲ್ಲ. ಕಾರಿನ ಎಸಿ ಕಾರ್ಯನಿರ್ವಹಿಸದಿದ್ದರೆ, ಮಕ್ಕಳು ಶಾಖದಿಂದಾಗಿ ಉಸಿರುಗಟ್ಟಿ ಸಾಯಬಹುದು. ಗ್ರೀನ್ ಹೌಸ್ ಪರಿಣಾಮದಿಂದಾಗಿ ನಿಲುಗಡೆ ಮಾಡಿದ ವಾಹನಗಳೊಳಗಿನ ತಾಪಮಾನವು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚಾಗುತ್ತದೆ. ಈ ಹಿಂದೆ, ವಾಹನದೊಳಗಿನ ಅತಿಯಾದ ಉಷ್ಣತೆಯಿಂದಾಗಿ ಅನೇಕ ಸಾಕುಪ್ರಾಣಿಗಳು ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ.

MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ವಾಹನವನ್ನು ಆನ್ ಮಾಡಿದರೆ, ಮೇಲಿನ ವೀಡಿಯೊದಲ್ಲಿದ್ದಂತೆ ಮಗುವನ್ನು ಹೊರಗೆ ತರಬಹುದು. ಒಂದು ವೇಳೆ ಕಾರಿನಲ್ಲಿ ಲಾಕ್ ಆಗಿರುವ ಮಗು ಹ್ಯಾಂಡ್ ಬ್ರೇಕ್ ಅನ್ನು ನಿಷ್ಕ್ರಿಯಗೊಳಿಸಿದರೆ, ಕಾರು ಮುಂದಕ್ಕೆ ಚಲಿಸುತ್ತದೆ. ಅನೇಕ ಆಧುನಿಕ ಕಾರುಗಳು ಇ-ಪಾರ್ಕಿಂಗ್ ಬ್ರೇಕ್ ಅನ್ನು ನೀಡುತ್ತವೆ. ಈ ಬ್ರೇಕ್‍‍ಗಳನ್ನು ಸುಲಭವಾಗಿ ನಿಷ್ಕ್ರಿಯಗೊಳಿಸಬಹುದು. ಯಾವುದೇ ಸಂದರ್ಭಗಳಲ್ಲಿ, ಮಗುವನ್ನೇ ಆಗಲಿ ಅಥವಾ ಪ್ರಾಣಿಗಳನ್ನೇ ಆಗಲಿ ಕಾರಿನೊಳಗೆ ಬಿಟ್ಟು ಲಾಕ್ ಮಾಡಬಾರದು.

More from DriveSpark

Article Published On: Monday, June 24, 2019, 17:40 [IST]
English summary
Kid gets locked inside car; Rescued after 2 hours! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+