ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ಶೀಘ್ರದಲ್ಲೇ ಹೊಸ ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಳ್ಳಲಿವೆ. ಎಐಎಸ್ 145 ಸುರಕ್ಷತಾ ಮಾನದಂಡವನ್ನು 2019ರ ಜುಲೈ 1ರಿಂದ ಜಾರಿಗೆ ತರಲಾಗುವುದು. ಕಟ್ಟುನಿಟ್ಟಾದ ಕ್ರ್ಯಾಶ್ ಟೆಸ್ಟ್ ಮಾನದಂಡವಾದ- ಬಿಎಸ್‌ಎನ್‌ವಿಎಸ್‌ಎಪಿ ಈ ವರ್ಷದ ಕೊನೆಯಲ್ಲಿ ಜಾರಿಗೆ ಬರಲಿದ್ದು, ಮುಂದಿನ ವರ್ಷದ ಏಪ್ರಿಲ್‍‍ನಿಂದ ಬಿಎಸ್ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಲಾಗುವುದು.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಹೊಸ ಸುರಕ್ಷತಾ ಮಾನದಂಡಗಳು, ಹೊಸ ಮಾಲಿನ್ಯ ನಿಯಮ ಹಾಗೂ ಮಾರುಕಟ್ಟೆಯಲ್ಲಿನ ಮಾರಾಟದ ಕುಸಿತದಿಂದಾಗಿ ಕೆಲವು ಕಾರುಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಿವೆ. ಯಾವ ಕಾರುಗಳು ಹಾಗೂ ಎಸ್‍‍ಯುವಿಗಳು ಈ ಮೂರು ಕಾರಣಗಳಿಂದಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಟೊಯೋಟಾ ಎಟಿಯೋಸ್ ಲಿವಾ

ಜಪಾನ್ ಮೂಲದ ಎಂಟ್ರಿ ಲೆವೆಲ್‍‍ನ ಕಾರು ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇನೂ ಜನಪ್ರಿಯವಾಗಿಲ್ಲ. ಈ ಕಾರು ಮಾರುತಿ ಸುಜುಕಿ ಸ್ವಿಫ್ಟ್‌ಗೆ ಪೈಪೋಟಿ ನೀಡಿದರೂ, ಎಟಿಯೋಸ್ ಲಿವಾ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ. ಟೊಯೊಟಾ ಕಂಪನಿಯು ಶೀಘ್ರದಲ್ಲೇ ಎಟಿಯೋಸ್ ಲಿವಾ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಇನ್ನು ಮುಂದೆ ಭಾರತದಲ್ಲಿ ಗ್ಲಾಂಝಾ ಭಾರತದಲ್ಲಿ ಕಂಪನಿಯ ಹೊಸ ಎಂಟ್ರಿ ಲೆವೆಲ್ ಕಾರ್ ಆಗಿರಲಿದೆ.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಟೊಯೊಟಾ ಇಟಿಯೊಸ್

ಟ್ಯಾಕ್ಸಿ ಮಾಲೀಕರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಎಟಿಯೋಸ್ ಸೆಡಾನ್ ಕಾರ್ ಅನ್ನು ಸಹ ಹೊಸ ಸುರಕ್ಷತಾ ಮಾನದಂಡಗಳ ಅನುಸಾರವಾಗಿ ನವೀಕರಿಸಲಾಗುವುದಿಲ್ಲ ಹಾಗೂ ಬಿಎಸ್6 ನಿಯಮಗಳಿಗೆ ತಕ್ಕಂತಹ ಎಂಜಿನ್ ಪಡೆಯುವುದಿಲ್ಲ. ಎಟಿಯೋಸ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಯಿಂದ ನಿಲ್ಲಿಸಲಾಗುವುದು. ಎಟಿಯೋಸ್ ಮಾರಾಟವು ಮಾರುಕಟ್ಟೆಯಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಕ್ಸೆಂಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಮಹೀಂದ್ರಾ ಥಾರ್

ಲೆಜೆಂಡರಿ ಮಹೀಂದ್ರಾ ಥಾರ್‍‍ನ ಬದಲಿಗೆ ಬೇರೆ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುವುದು. ಈ ಮಾದರಿಯನ್ನು ಥಾರ್ ಎಂದೂ ಕರೆಯುವ ನಿರೀಕ್ಷೆಯಿದೆ. ಈಗಿರುವ ಮಹೀಂದ್ರಾ ಥಾರ್‌ನ ಆವೃತ್ತಿಯನ್ನು ಈ ವರ್ಷದ ಕೊನೆಯಲ್ಲಿ ನಿಲ್ಲಿಸಲಾಗುವುದು. ಮಹೀಂದ್ರಾ ಸೀಮಿತ ಆವೃತ್ತಿಯ ಥಾರ್ 700 ಅನ್ನು ಬಿಡುಗಡೆ ಮಾಡಿದೆ. ಈ ಕಾರು ಜುಲೈ 1 ರ ನಂತರ ಜಾರಿಗೆ ಬರಲಿರುವ ಕಡ್ಡಾಯ ಸುರಕ್ಷತಾ ಸಾಧನಗಳನ್ನು ಹೊಂದಿದೆ. ಆದರೆ ಈ ಕಾರಿನ ಕೇವಲ 700 ಘಟಕಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಹೊಸ ಆವೃತ್ತಿಯ ಥಾರ್ ಮುಂದಿನ ವರ್ಷ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಪ್ಲಾಟ್‌ಫಾರ್ಮ್ ಹೊಂದಿರಲಿದೆ.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಟಾಟಾ ಬೊಲ್ಟ್

ಟಾಟಾ ಕಂಪನಿಯು, ಟಾಟಾ ಬೊಲ್ಟ್ ಹ್ಯಾಚ್‌ಬ್ಯಾಕ್‌ಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದೆ. ಟಾಟಾ ಬೊಲ್ಟ್ ಕಾರು ದೀರ್ಘಕಾಲದವರೆಗೂ ಮಾರುಕಟ್ಟೆಯಲ್ಲಿದ್ದರೂ, ಮಾರಾಟದಲ್ಲಿ ಹೇಳಿಕೊಳ್ಳುವಂತಹ ಪರಿಣಾಮವನ್ನು ಉಂಟುಮಾಡಿರಲಿಲ್ಲ. ಬೊಲ್ಟ್ ವಿಶಾಲವಾದ ಇಂಟಿರಿಯರ್ಸ್ ಹಾಗೂ ಟರ್ಬೊಚಾರ್ಜ್ಡ್ ಪೆಟ್ರೋಲ್‍‍ಗಳಿಗೆ ಹೆಸರುವಾಸಿಯಾಗಿತ್ತು. ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದ ಮೊದಲ ಮಾಸ್ ಸೆಗ್‍‍ಮೆಂಟಿನ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಟೊಯೊಟಾ ಯಾರೀಸ್

ಟೊಯೊಟಾ ಕಂಪನಿಯು, ಟೊಯೊಟಾ ಯಾರೀಸ್ ಬಿಡುಗಡೆಯೊಂದಿಗೆ ಮಧ್ಯಮ ಗಾತ್ರದ ಸೆಡಾನ್ ಸೆಗ್‍‍ಮೆಂಟ್ ಅನ್ನು ಪ್ರವೇಶಿಸಿತು. ಆದರೆ ಟೊಯೊಟಾ ಕಂಪನಿ ನಿರೀಕ್ಷೆ ಮಾಡಿದ ರೀತಿಯಲ್ಲಿ ಮಾರಾಟವಾಗಲಿಲ್ಲ. ಯಾರೀಸ್ ಕಾರ್ ಅನ್ನು ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಎಲ್ಲಾ ಮಾದರಿಗಳಲ್ಲಿಯೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿತ್ತು. ಟೊಯೊಟಾ ಯಾರೀಸ್‌ನ ಮೂಲ ಮಾದರಿಯ ಕಾರಿನಲ್ಲಿಯೂ ಸಹ 7 ಏರ್‌ಬ್ಯಾಗ್‍‍ಗಳನ್ನು ನೀಡಲಾಗಿತ್ತು.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಆದರೆ ದೇಶಿಯ ಮಾರುಕಟ್ಟೆಯಲ್ಲಿ ಈ ಸೆಡಾನ್ ಕಾರು ಜನಪ್ರಿಯವಾಗದ ಕಾರಣ, ಟೊಯೊಟಾ ಕಂಪನಿಯು ಯಾರೀಸ್ ಕಾರಿನ ಮಾರಾಟವನ್ನು ನಿಲ್ಲಿಸಿ, ಅದನ್ನು ಸಿಯಾಜ್ ಕಾರಿನೊಂದಿಗೆ ಬದಲಿಸಲು ನಿರ್ಧರಿಸಿದೆ. ಟೊಯೊಟಾ ಕಂಪನಿಯು, ಮಾರುತಿ ಸುಜುಕಿ ಕಂಪನಿಯ ಸಿಯಾಜ್‌ ಕಾರಿನ ರಿಬಾಜ್ಡ್ ಆವೃತ್ತಿಯನ್ನು ತನ್ನ ಬ್ರಾಂಡಿನಡಿಯಲ್ಲಿ ಮಾರಾಟ ಮಾಡಲಿದೆ.

MOST READ: ಕುಸಿತ ಕಂಡ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಮಾರಾಟ

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಫಿಯೆಟ್ ಪುಂಟೊ

ಫಿಯೆಟ್ ಪುಂಟೊ ಕಾರು ತನ್ನ ಉತ್ತಮ ನಿರ್ಮಾಣ ಗುಣಮಟ್ಟ ಹಾಗೂ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಆದರೆ ವಿವಿಧ ಕಾರಣಗಳಿಂದಾಗಿ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಲೇ ಇಲ್ಲ. ಹೊಸ ಮಾನದಂಡಗಳೊಂದಿಗೆ, ಫಿಯೆಟ್ ವಾಹನವನ್ನು ಅಪ್‌ಗ್ರೇಡ್ ಮಾಡದಿರಲು ಫಿಯಟ್ ಕಂಪನಿಯು ನಿರ್ಧರಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪುಂಟೊ ಮಾರಾಟ ಪ್ರಮಾಣವು ಕಡಿಮೆ ಇರುವುದರಿಂದ, ಶೀಘ್ರದಲ್ಲೇ ಮಾರಾಟವನ್ನು ಸ್ಥಗಿತಗೊಳಿಸಲಾಗುವುದು. ಫಿಯೆಟ್ ಕಂಪನಿಯು ಇನ್ನು ಮುಂದೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪುಂಟೊ ಕಾರುಗಳನ್ನು ಮಾರಾಟ ಮಾಡುವುದಿಲ್ಲ. ಅವೆಂಟುರಾ ಹಾಗೂ ಅಬರ್ತ್ ಪುಂಟೊ ಕಾರುಗಳನ್ನು ಪುಂಟೊ ಕಾರ್ ಅನ್ನು ಆಧರಿಸಿ ತಯಾರಿಸಲಾಗಿದೆ.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಫಿಯಟ್ ಲಿನಿಯಾ

ಫಿಯೆಟ್ ಲಿನಿಯಾ ಭಾರತೀಯ ಮಾರುಕಟ್ಟೆಯಲ್ಲಿದ್ದ ಅತ್ಯಂತ ಬಲಶಾಲಿ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಕಾರಿನ ನಿರ್ಮಾಣ ಗುಣಮಟ್ಟ ಹಾಗೂ ಡ್ರೈವಿಂಗ್ ಡೈನಾಮಿಕ್ಸ್ ಗಳಿಂದ ಕಾರು ಪ್ರಿಯರಲ್ಲಿ ಬಹು ಜನಪ್ರಿಯವಾಗಿತ್ತು. 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿ-ಜೆಟ್ ಲಿನಿಯಾ ಗರಿಷ್ಠ 123 ಬಿಎಚ್‌ಪಿ ಪವರ್ ಹಾಗೂ 208 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಲಾಗುವುದು.

MOST READ: ಇದು ಭಾರತದ ಬಲಿಷ್ಠ ಸ್ಕೋಡಾ ಕಾರ್ ಅಂತೆ..!

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಮಹೀಂದ್ರಾ ವೆರಿಟೊ

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯು‍‍ವಿಗಳಿಂದಾಗಿ ಜನಪ್ರಿಯವಾಗಿದೆ. ಸೆಡಾನ್ ಮಾದರಿಯ ವೆರಿಟೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ದಯನೀಯವಾಗಿ ಸೋತಿತು. ವೆರಿಟೊ ಸೆಡಾನ್ ಕಾರ್ ಅನ್ನು ಹ್ಯಾಚ್‌ಬ್ಯಾಕ್ ರೂಪದಲ್ಲಿಯೂ ಸಹ ಬಿಡುಗಡೆ ಮಾಡಲಾಗಿತ್ತು. ಈ ಕಾರನ್ನು ವೆರಿಟೊ ವೈಬ್ ಎಂದು ಕರೆಯಲಾಗುತ್ತಿತ್ತು. ಆದರೆ ಹ್ಯಾಚ್‌ಬ್ಯಾಕ್ ಆವೃತ್ತಿಯು ಸಹ ಮಾರಾಟದಲ್ಲಿ ವಿಫಲವಾಯಿತು. ವೆರಿಟೊ ಕಾರಿನಲ್ಲಿ ಹೊಸ ಬಿಎಸ್6 ನಿಯಮದ ಎಂಜಿನ್‌ಗಳನ್ನು ಅಳವಡಿಸುವುದಿಲ್ಲ ಹಾಗೂ ಹೊಸ ಸುರಕ್ಷತಾ ನಿಯಮಗಳನ್ನು ಸಹ ಅಳವಡಿಸುವುದಿಲ್ಲ. ಆದ ಕಾರಣ ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು.

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ನಿಸ್ಸಾನ್ ಟೆರಾನೊ

ನಿಸ್ಸಾನ್ ಕಂಪನಿಯು, ಕಿಕ್ಸ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಹೆಚ್ಚಿನ ಗಮನ ಸೆಳೆಯುತ್ತಿದೆ. ರೆನಾಲ್ಟ್ ಡಸ್ಟರ್‌ನ ಮರುರೂಪಿಸಲಾದ ಆವೃತ್ತಿಯಾಗಿರುವ ಟೆರಾನೊ ಸುರಕ್ಷತಾ ಮಾನದಂಡ ಹಾಗೂ ಹೊಸ ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳದ ಕಾರಣ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳ್ಳಲಿದೆ. ಟೆರಾನೊವನ್ನು ಡಸ್ಟರ್‌ನ ಪ್ರೀಮಿಯಂ ಆವೃತ್ತಿಯಾಗಿ ಮಾರುಕಟ್ಟೆಯಲ್ಲಿ ಮಾಡಲಾಗುತ್ತಿದೆ.

MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಟೊಯೊಟಾ ಕರೊಲಾ

ಟೊಯೊಟಾ ಕಂಪನಿಯು, ಹೊಸ ಟೊಯೊಟಾ ಕರೊಲಾ ಆಲ್ಟಿಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಗೆ ತರುವ ಯೋಜನೆಯನ್ನು ಕೈಬಿಟ್ಟಿದೆ. ಹೊಸ ಸುರಕ್ಷತಾ ನಿಯಮ ಹಾಗೂ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಕಾರನ್ನು ನವೀಕರಿಸಲಾಗುತ್ತಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಡಿ-ಸೆಗ್ಮೆಂಟ್ ಸೆಡಾನ್ ಗಳಿಗೆ ಜನಪ್ರಿಯತೆ ಇಲ್ಲದಿರುವ ಕಾರಣ ಈ ಕಾರು ಮಾರಾಟದಲ್ಲಿ ವಿಫಲವಾಗಿತ್ತು. ಈ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೋಂಡಾ ಸಿವಿಕ್ ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾದ ಕಾರ್ ಆಗಿದೆ.

Most Read Articles

Kannada
English summary
10 cars & SUVs that will say GOODBYE soon: Mahindra Thar to Toyota Corolla - Read in kannada
Story first published: Monday, June 24, 2019, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X