ಮಾರಾಟವಾಗದ ಟ್ರಯಂಫ್ ಬೈಕುಗಳ ಮೇಲೆ ಭಾರೀ ರಿಯಾಯಿತಿ
ದೆಹಲಿಯಲ್ಲಿರುವ ಟ್ರಯಂಫ್ ಮೋಟಾರ್‍ಸೈಕಲ್ ಡೀಲರ್‍ವೊಬ್ಬರು ಆಯ್ದ ಟ್ರಯಂಫ್ ಬೈಕುಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿ ನೀಡುತ್ತಿದ್ದಾರೆ. ಒನ್ ಟ್ರಯಂಫ್ ಹೆಸರಿನ ಡೀಲರ್ 2016, 2017, 2018ರ ಮಾದರಿಗಳ ಮಾರಾಟವಾಗದ ಹಾಗೂ ಡೆಮೊ ಮೋಟಾರ್‍ಸೈಕಲ್‍ಗಳ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದ್ದಾರೆ.

ಗಾಡಿವಾಡಿ ವರದಿಗಳ ಪ್ರಕಾರ, ಡೀಲರ್ ಹೆಚ್ಚು ಜನಪ್ರಿಯವಾದ ಸ್ಟ್ರೀಟ್ ಟ್ವಿನ್ ಬೈಕುಗಳನ್ನು ರೂ. 5 ಗಳಿಂದ, ಸ್ಟ್ರೀಟ್ ಟ್ರಿಪಲ್ ಬೈಕ್ ಅನ್ನು ರೂ. 6 ಲಕ್ಷಗಳಿಂದ, ಸ್ಟ್ರೀಟ್ ಸ್ಕ್ರಾಂಬ್ಲರ್ ಬೈಕ್ ಅನ್ನು ರೂ. 5.75 ಲಕ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ. ಬೊನ್‍ವಿಲ್ಲೆ ಸರಣಿಯ ಬೈಕುಗಳ ಮೇಲೂ ರಿಯಾಯಿತಿ ನೀಡಲಾಗುತ್ತಿದೆ. ಬೊನ್‍ವಿಲ್ಲೆ ಬಾಬರ್ ಬೈಕ್ ಅನ್ನು ರೂ.6.40 ಲಕ್ಷಗಳಿಂದ, ಟಿ100 ಬೈಕ್ ಅನ್ನು ರೂ.6.40 ಲಕ್ಷಗಳಿಂದ, ಟಿ120 ಬೈಕ್ ಅನ್ನು ರೂ.6.50 ಲಕ್ಷಗಳಿಂದ ಮಾರಾಟ ಮಾಡಲಾಗುವುದು. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

ಹೊಸ 2019ರ ಸ್ಟ್ರೀಟ್ ಟ್ವಿನ್‍ನ ಬೆಲೆಯು ರೂ. 7.7 ಲಕ್ಷಗಳಾಗಿದ್ದರೆ, ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನ ಬೆಲೆ ರೂ.11.13 ಲಕ್ಷ ಹಾಗೂ ಸ್ಟ್ರೀಟ್ ಸ್ಕ್ರಾಂಬ್ಲರ್ ಬೈಕಿನ ಬೆಲೆಯು ರೂ.8.60 ಲಕ್ಷಗಳಾಗಿದೆ. ಬೊನ್‍ವಿಲ್ಲೆ ಬಾಬರ್ ಬೈಕಿನ ಬೆಲೆಯು ರೂ.10.28 ಲಕ್ಷಗಳಾಗಿದ್ದರೆ, ಬೊನ್‍ವಿಲ್ಲೆ ಟಿ100 ನ ಬೆಲೆ ರೂ.8.87 ಲಕ್ಷ ಹಾಗೂ ಬೊನ್‍ವಿಲ್ಲೆ ಟಿ120 ಬೆಲೆಯು ರೂ.9.97 ಲಕ್ಷಗಳಾಗಿದೆ.

ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಡೀಲರ್ ಬಳಿ ಮಾರಾಟವಾಗದ ಎಷ್ಟು ಬೈಕುಗಳಿವೆ ಎಂಬುದರ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಆದರೆ ಮೂಲಗಳ ಪ್ರಕಾರ ಡೀಲರ್ ಬಳಿ ಇರುವ 30 ಟ್ರಯಂಫ್ ಮೋಟಾರ್‍ಸೈಕಲ್‍ಗಳ ಮೇಲೆ ಈ ರಿಯಾಯಿತಿಗಳನ್ನು ನೀಡಲಾಗುವುದು.

ಈ ರಿಯಾಯಿತಿಗಳು ಎಲ್ಲಾ ಬಣ್ಣಗಳ ಮಾದರಿಗಳ ಮೇಲೆ ದೊರೆಯಲಿದೆ, ಆಯ್ದ ಮಾದರಿಗಳ ಮೇಲೆ 55% ವರೆಗೂ ನಗದು ರಿಯಾಯಿತಿ ದೊರೆಯಲಿದ್ದು, ಶೂನ್ಯ ಬಡ್ಡಿ ಹಾಗೂ ಆಯ್ದ ಹೊಸ ಬೈಕುಗಳ ಮೇಲೆ 100% ಫೈನಾನ್ಸ್ ದೊರೆಯಲಿದೆ. ಈ ರಿಯಾಯಿತಿಯು ಜೂನ್ ತಿಂಗಳ ಅಂತ್ಯದವರೆಗೂ ಅಥವಾ ಸ್ಟಾಕ್ ಇರುವವರೆಗೂ ಲಭ್ಯವಿರಲಿದೆ. ರಿಯಾಯಿತಿ ದರದಲ್ಲಿ ದೊರೆತರೂ ಸಂಬಂಧ ಪಟ್ಟ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
(ಈ ಮೇಲ್ಕಂಡ ರಿಯಾಯಿತಿಯನ್ನು ದೆಹಲಿಯಲ್ಲಿರುವ ಟ್ರಯಂಫ್ ಬೈಕುಗಳ ಡೀಲರ್ ಆದ ಒನ್ ಟ್ರಯಂಫ್, 2016 ರಿಂದ 2018ರವರೆಗೆ ಮಾರಾಟವಾಗದೇ ಉಳಿದಿರುವ ಟ್ರಯಂಫ್ ಬೈಕುಗಳ ಮೇಲೆ ನೀಡಲಿದೆ)
MOST READ: ಎಂಟಿ15 ಬೈಕ್ ಖರೀದಿ ಮೇಲೆ ಯಮಹಾದಿಂದ ಭರ್ಜರಿ ಆಫರ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರಾಟವಾಗದೇ ಉಳಿದಿರುವ ಬೈಕ್ ಅನ್ನು ಕಡಿಮೆ ಬೆಲೆಗೆ ಕೊಳ್ಳುವ ಯೋಜನೆ ನಿಜಕ್ಕೂ ಅದ್ಭುತ. ಭಾರೀ ರಿಯಾಯಿತಿಗಳು ಯಾವಾಗಲೂ ಖರೀದಿದಾರರನ್ನು ಆಕರ್ಷಿಸುತ್ತವೆ. ದೆಹಲಿ ಮೂಲದ ಈ ಒನ್ ಟ್ರಯಂಫ್ ಡೀಲರ್ ತಮ್ಮಲ್ಲಿ ಉಳಿದಿರುವ 30 ಬೈಕುಗಳನ್ನು ಜೂನ್ ಅಂತ್ಯದೊಳಗೆ ಮಾರಾಟ ಮಾಡುವ ಸಾಧ್ಯತೆಗಳಿವೆ.

ಯಾವುದೇ ಡೀಲರ್ ಆಗಲಿ, ನಷ್ಟವನ್ನನುಭವಿಸಿ ಬೈಕುಗಳನ್ನು ಮಾರಾಟ ಮಾಡಲು ಬಯಸುವುದಿಲ್ಲ. ಇದರಿಂದ ಟ್ರಯಂಫ್ ಕಂಪನಿಯು ತೀರಾ ಹೆಚ್ಚಿನ ಬೆಲೆಗೆ ಬೈಕ್ ಮಾರಾಟ ಮಾಡುತ್ತಿದೆಯೇ ಎಂದೆನಿಸದೇ ಇರದು. ಒಬ್ಬ ಡೀಲರ್ ರೂ.2.7 ಲಕ್ಷಗಳ ರಿಯಾಯಿತಿ ನೀಡಿಯೂ ಲಾಭವನ್ನು ಹೊಂದುತ್ತಾನೆ ಎಂದರೆ, ಬೈಕಿನ ನಿಜವಾದ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಪ್ರಶ್ನೆ ಮೂಡುವುದು ಸಹಜ.
Source: Gaadiwaadi


Click it and Unblock the Notifications








