ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಮದ್ರಾಸ್ ಹೈಕೋರ್ಟ್ ಬೈಕ್ ಟ್ಯಾಕ್ಸಿ‍‍ಗಳ ಮೇಲೆ ನಿಷೇಧ ಹೇರಿದ್ದರೂ, ಚೆನ್ನೈನಲ್ಲಿ ಅಕ್ರಮವಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದೆ. ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು, ಸೂಕ್ತ ನಿಯಮಗಳನ್ನು ರೂಪಿಸುವವರೆಗೆ, ಬೈಕ್ ಟ್ಯಾಕ್ಸಿಗಳನ್ನು ನೀಡದಂತೆ ತೆಲಂಗಾಣ ಮೂಲದ ಖಾಸಗಿ ಸಂಸ್ಥೆಯಾದ ರ್‍ಯಾಪಿಡೊದ ಮೇಲೆ ಕಳೆದ ಗುರುವಾರ ನಿರ್ಬಂಧ ವಿಧಿಸಿದ್ದಾರೆ. ರ್‍ಯಾಪಿಡೊ ಸಂಸ್ಥೆಯು ಸೋಮವಾರವೂ ಸಹ ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಈ ಬಗ್ಗೆ ರ್‍ಯಾಪಿಡೊ ಕಂಪನಿಯ ಸಹ ಸಂಸ್ಥಾಪಕ ಅರವಿಂದ್ ಶಂಕಾರವರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಅಧಿಕೃತ ಅಂಕಿಅಂಶಗಳ ಪ್ರಕಾರ, ಚೆನ್ನೈನಲ್ಲಿನ 96 ದ್ವಿಚಕ್ರವಾಹನಗಳೂ ಸೇರಿದಂತೆ ಒಟ್ಟು 175 ದ್ವಿಚಕ್ರ ವಾಹನಗಳಿಗೆ ಪರವಾನಗಿ ದುರ್ಬಳಕೆ ಮಾಡಿದ್ದಕ್ಕಾಗಿ ರೂ.2,000 ದಿಂದ 4,000ಗಳವರೆಗೆ ದಂಡ ವಿಧಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ತಮಿಳುನಾಡಿನಲ್ಲಿ ದ್ವಿಚಕ್ರ ವಾಹನಗಳಿಗೆ ಸಾರಿಗೆ ವರ್ಗದ ಪರವಾನಗಿಗಳನ್ನು ನೀಡುವುದಿಲ್ಲ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಸರಳವಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿ ದ್ವಿಚಕ್ರ ವಾಹನಗಳನ್ನು ಹಳದಿ ಬೋರ್ಡ್‍‍ನೊಂದಿಗೆ ವಾಣಿಜ್ಯ ಉದ್ದೇಶಕ್ಕೆ ನೋಂದಾಯಿಸಲಾಗುವುದಿಲ್ಲ. ವ್ಯಕ್ತಿಗಳು ಬಿಳಿ ಬೋರ್ಡ್‌ ಹೊಂದಿರುವ ದ್ವಿಚಕ್ರವಾಹನಗಳನ್ನು ವೈಯಕ್ತಿಕ ಬಳಕೆಗಾಗಿ ಮಾತ್ರ ಖರೀದಿಸಬೇಕು. ಬೈಕು ಟ್ಯಾಕ್ಸಿ ಸೇವೆಗಳು ಚೆನ್ನೈನಲ್ಲಿ ಜನವರಿಯಲ್ಲಿ ಪ್ರಾರಂಭವಾದ ನಂತರ ಜನಪ್ರಿಯವಾಗುತ್ತಿದ್ದರೂ, ಮೂರು ಪ್ರಮುಖ ಕಾರಣಗಳಿಗಾಗಿ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಈ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನಿಸುತ್ತಾರೆ. ಚಾಲನಾ ಪರವಾನಗಿ ಹೊಂದಿರುವ ಯಾವುದೇ ದ್ವಿಚಕ್ರ ವಾಹನ ಮಾಲೀಕರು ರ್‍ಯಾಪಿಡೊ ಜೊತೆ ಕ್ಯಾಪ್ಟನ್ ಆಗಿ ನೋಂದಾಯಿಸಿಕೊಳ್ಳಬಹುದು. ಆಪ್ ಬಳಸಿ ಬೇರೆ ಪ್ರಯಾಣಿಕರನ್ನು ಡ್ರಾಪ್ ಮಾಡುವ ಮೂಲಕ ಆದಾಯ ಗಳಿಸಬಹುದು. ರ್‍ಯಾಪಿಡೊ ಕಂಪನಿಯು, ಚಾಲಕನ ಹಿನ್ನೆಲೆಯನ್ನು ಪರಿಶೀಲನೆ ನಡೆಸುತ್ತದೆ ಎಂದು ಹೇಳಿಕೊಂಡಿದ್ದರೂ, ಅದನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡಿಲ್ಲ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಚೆನ್ನೈ ನಗರದ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಮಹಿಳಾ ಪ್ರಯಾಣಿಕರು ರಾತ್ರಿಯಲ್ಲಿ ಅಪರಿಚಿತರೊಂದಿಗೆ ಪ್ರಯಾಣಿಸುವುದು ತುಂಬಾ ಅಪಾಯಕಾರಿ. ದ್ವಿಚಕ್ರ ವಾಹನ ಅಪಘಾತದ ಪ್ರಮಾಣವು ಈಗಾಗಲೇ ಚೆನ್ನೈನಲ್ಲಿ ತುಂಬಾ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳನ್ನು ಕಮರ್ಷಿಯಲ್ ಬಳಕೆಗೆ ನೀಡಿದರೆ ರ್‍ಯಾಶ್ ಡ್ರೈವಿಂಗ್ ಹಾಗೂ ಅಪಘಾತಗಳಿಗೆ ಕಾರಣವಾಗಲಿವೆ. ಸಾರಿಗೆ ಅಧಿಕಾರಿಯೊಬ್ಬರ ಪ್ರಕಾರ, ಎರಡನೇ ಕಾರಣ ವಿಮೆ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ರ್‍ಯಾಪಿಡೊದಲ್ಲಿ ಕಾರ್ಯಾಚರಿಸುವ ಬೈಕ್‌ಗಳು ವೈಯಕ್ತಿಕ ವಿಮಾ ಪಾಲಿಸಿಗಳನ್ನು ಮಾತ್ರ ಹೊಂದಿವೆ. ಅವುಗಳು ಥರ್ಡ್ ಪಾರ್ಟಿ ಕ್ಲೇಮ್‍‍ಗಳನ್ನು ಹೊಂದಿರುವುದಿಲ್ಲ. ಆದ್ದರಿಂದ, ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಬೈಕುಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದುವುದು ಅಗತ್ಯವಾದರೂ, ಪ್ರಸ್ತುತ ನಿಯಮಗಳ ಪ್ರಕಾರ ಅದು ಸಾಧ್ಯವಿಲ್ಲ.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಮೂರನೇ ಕಾರಣವೆಂದರೆ ಸರ್ಕಾರಕ್ಕೆ ಉಂಟಾಗುವ ನಷ್ಟ. ವಾಣಿಜ್ಯ ಕಾರ್ಯಾಚರಣೆಯಲ್ಲಿ ತೊಡಗುವ ಯಾವುದೇ ವಾಹನವು ತೆರಿಗೆಯನ್ನು ಪಾವತಿಸಲೇಬೇಕು. ಫಿಟ್‌ನೆಸ್ ಪ್ರಮಾಣಪತ್ರಗಳನ್ನು ವಾರ್ಷಿಕವಾಗಿ ನವೀಕರಿಸಬೇಕು. ಆದ್ದರಿಂದ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗೆ ಸ್ವಂತ ಬಳಕೆಯ ವಾಹನಗಳನ್ನು ಬಳಸುವ ಮೂಲಕ ಹಣ ಸಂಪಾದಿಸಲು ಅನುಮತಿ ನೀಡಲಾಗುವುದಿಲ್ಲವೆಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಿದ ರ್‍ಯಾಪಿಡೊ

ಇದಕ್ಕೆ ಪ್ರತಿಕ್ರಿಯೆ ನೀಡಿರುವ, ರ್‍ಯಾಪಿಡೊದ ಶಂಕಾರವರು, ಕಮಿಷನ್ ಹಾಗೂ ಸರ್ವಿಸ್ ಚಾರ್ಜ್‍‍ಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬುದನ್ನು ನಿರಾಕರಿಸಿದರು. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಬೈಕು-ಟ್ಯಾಕ್ಸಿಗಳಿಗಾಗಿ ಹೊಸ ಕಾನೂನನ್ನು ರೂಪಿಸಿದರೆ ಮಾತ್ರ ಬೈಕ್ ಟ್ಯಾಕ್ಸಿಗಳು ಕಾನೂನುಬದ್ದವಾಗಿ ಕಾರ್ಯಾಚರಣೆ ನಡೆಸಬಹುದು. ಈ ರೀತಿಯಾಗಿ ಕಾನೂನು ರೂಪಿಸಲು ಇನ್ನೂ ನಾಲ್ಕೈದು ತಿಂಗಳು ಬೇಕಾಗಬಹುದು.

Article Published On: Tuesday, July 23, 2019, 18:21 [IST]
English summary
Despite ban, bike taxi firm Rapido continues service - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+