ಸ್ಕೂಟರ್‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ
ಹೋಂಡಾ ಮೋಟಾರ್‍ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ (ಹೆಚ್‍ಎಂಎಸ್‍ಐ), ತನ್ನ ನಾಲ್ಕು ಮಾದರಿಗಳಲ್ಲಿರುವ ಫ್ರಂಟ್ ಬ್ರೇಕ್ ಮಾಸ್ಟರ್ ಸಿಲಿಂಡರ್‍ನಲ್ಲಿರುವ ದೋಷವನ್ನು ಸರಿಪಡಿಸಲು 50,034 ವಾಹನಗಳನ್ನು ಶುಕ್ರವಾರ ರಿಕಾಲ್ ಮಾಡಿದೆ.

ಹೋಂಡಾ ಕಂಪನಿಯು ಡಿಸ್ಕ್ ಗಳನ್ನು ಹೊಂದಿರುವ ಏವಿಯೇಟರ್, ಆಕ್ಟಿವಾ 125, ಗ್ರೇಜಿಯಾ ಹಾಗೂ ಸೆಲ್ಫ್ ಡಿಸ್ಕ್ ಹೊಂದಿರುವ ಸಿಬಿ ಶೈನ್ ಸಿಬಿಎಸ್ ಮಾದರಿಗಳನ್ನು ರಿಕಾಲ್ ಮಾಡಿದೆ. ಕಂಪನಿಯು ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಫ್ರಂಟ್ ಬ್ರೇಕ್ ಮಾಸ್ಟರ್ ಸಿಲಿಂಡರ್‍ನಲ್ಲಿ ದೋಷವಿರುವುದು ಕಂಡು ಬಂದಿದೆ. ಈ ದೋಷದಿಂದಾಗಿ ಫ್ರಂಟ್ ವ್ಹೀಲ್ ಅನ್ನು ತಿರುಗಿಸಲು ತೊಂದರೆಯಾಗಲಿದೆ. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ವ್ಹೀಲ್ ಜಾಮ್ ಆಗುವ ಸಾಧ್ಯತೆಗಳಿವೆ ಎಂದು ಆ ಹೇಳಿಕೆಯಲ್ಲಿ ತಿಳಿಸಿದೆ.

ಈಗ ರಿಕಾಲ್ ಮಾಡಲಾಗುತ್ತಿರುವ ವಾಹನಗಳನ್ನು 2019ರ ಫೆಬ್ರವರಿ 4ರಿಂದ 2019ರ ಜುಲೈ 3ರ ನಡುವಿನ ಅವಧಿಯಲ್ಲಿ ತಯಾರಿಸಲಾಗಿದೆ. ಹೋಂಡಾ ಕಂಪನಿಯು ಸ್ವತಃ ತಾನೇ ಈ ವಾಹನಗಳನ್ನು ಪರೀಕ್ಷಿಸಲಿದೆ. ಅವಶ್ಯಕತೆಯಿದ್ದಲ್ಲಿ ನಾಲ್ಕೂ ಮಾದರಿಗಳಲ್ಲಿರುವ ದೋಷ ಪೂರಿತ ಬಿಡಿಭಾಗಗಳನ್ನು ಬದಲಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಆರಾಮದಾಯಕ ಸವಾರಿಗಾಗಿ ಹೋಂಡಾ ಕಂಪನಿಯು ಮುನ್ನೆಚ್ಚರಿಕೆಯ ಕ್ರಮವಾಗಿ, ಈ ನಾಲ್ಕು ಮಾದರಿಯ ವಾಹನಗಳನ್ನು ಪರೀಕ್ಷಿಸಲಿದ್ದು, ಅವಶ್ಯಕತೆಯಿದ್ದಲ್ಲಿ ಬಿಡಿಭಾಗಗಳನ್ನು ಉಚಿತವಾಗಿ ಬದಲಿಸಿಕೊಡಲಾಗುವುದು ಎಂದು ತಿಳಿಸಿದೆ.

ಹೋಂಡಾ ಏವಿಯೇಟರ್ 109.2 ಸಿಸಿ ಎಂಜಿನ್ ಹೊಂದಿದೆ. 7000 ಆರ್‌ಪಿಎಂನಲ್ಲಿ 8 ಬಿಎಚ್‌ಪಿ ಪವರ್ ಹಾಗೂ 5500 ಆರ್ಪಿಎಂನಲ್ಲಿ 8.94 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್ ಪೆಟ್ರೋಲಿಗೆ 49 ಕಿ.ಮೀ ಮೈಲೇಜ್ ನೀಡುತ್ತದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್, 124.9 ಸಿಸಿ ಎಂಜಿನ್ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.52 ಬಿಹೆಚ್‌ಪಿ ಹಾಗೂ 5,000 ಆರ್ಪಿಎಂನಲ್ಲಿ 10.54 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಸಿವಿಟಿ ಯುನಿಟ್ ಅಳವಡಿಸಲಾಗಿದೆ.

ಹೋಂಡಾ ಗ್ರಾಜಿಯಾ ಸ್ಕೂಟರ್, 124.9 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ 6,500 ಆರ್‍ಪಿಎಂನಲ್ಲಿ 8.52 ಬಿಎಚ್‌ಪಿ ಪವರ್ ಹಾಗೂ 5,000 ಆರ್ಪಿಎಂನಲ್ಲಿ 10.54 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಸಿಬಿ ಶೈನ್ ಬೈಕ್, 124.7 ಸಿಸಿಯ ಎಂಜಿನ್ ಹೊಂದಿದೆ. ಈ ಎಂಜಿನ್ 7,500 ಆರ್‍ಪಿಎಂನಲ್ಲಿ 10.16 ಬಿಹೆಚ್‍ಪಿ ಪವರ್ ಹಾಗೂ 5,500 ಆರ್ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications