ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಟೆಸ್ಲಾ ಕಂಪನಿಯ ಮಾಜಿ ಉದ್ಯೋಗಿ ಮೋಹನ್ ರಾಮಸಾಮಿರವರು ದೇಶಿಯ ಮಾರುಕಟ್ಟೆಗಾಗಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಮೋಹನ್ ರಾಮಸಾಮಿರವರು ಶ್ರೀವಾರು ಮೋಟಾರ್ಸ್ ಎಂಬ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಶ್ರೀವಾರು ಮೋಟಾರ್ಸ್‍‍ನ ಮೊದಲ ಬೈಕ್ ಪರ್ಫಾಮೆನ್ಸ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಆಗಿರಲಿದೆ. ಶ್ರೀವಾರು ಮೋಟಾರ್ಸ್‍ ಕಂಪನಿಯನ್ನು ಮೋಹನ್ ರಾಮಸಾಮಿರವರು ಅಮೇರಿಕಾದಿಂದ ಭಾರತಕ್ಕೆ ವಾಪಸ್ಸಾದ ನಂತರ ಶುರು ಮಾಡಿದರು. ಆಟೋಕಾರ್ ಪ್ರೊಫೆಷನಲ್ ವರದಿಗಳ ಪ್ರಕಾರ, ಟೆಸ್ಲಾ ಕಂಪನಿಯ ಮಾಜಿ ಉದ್ಯೋಗಿಯಾದ ಮೋಹನ್‍‍ರವರು ಸುಮಾರು ಎರಡು ದಶಕಗಳ ಕಾಲ ಅಮೇರಿಕಾದಲ್ಲಿದ್ದರು. ಈಗ ಎಲೆಕ್ಟ್ರಿಕ್ ವಾಹನಗಳ ದಿಕ್ಕನ್ನು ಬದಲಿಸುವ ಸಲುವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಎಲೆಕ್ಟ್ರಿಕ್ ವಾಹನ ಉದ್ಯಮವು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬೆಳವಣಿಗೆಯನ್ನು ಪ್ರಾರಂಭಿಸಿದೆ. ಹಲವಾರು ಹೆಸರಾಂತ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಎಲೆಕ್ಟ್ರಿಕ್ ವಾಹನಗಳ ಉದ್ಯಮವು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿದೆ ಎಂಬ ಕಾರಣದಿಂದ ನೂರಾರು ಸ್ಟಾರ್ಟ್ ಅಪ್ ಕಂಪನಿಗಳು ಆರಂಭವಾಗಿವೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಎಲೆಕ್ಟ್ರಿಕ್ ವಾಹನ ಉದ್ಯಮದ ಕಾರ್ಯ ಶೈಲಿಯನ್ನು ಬದಲಿಸಿದ ಕೆಲವು ಸ್ಟಾರ್ಟ್ ಅಪ್‌ ಕಂಪನಿಗಳಲ್ಲಿ ಟೆಸ್ಲಾ ಕಂಪನಿಯು ಸಹ ಒಂದು. ಟೆಸ್ಲಾ ಕಂಪನಿಯ ಕಾರುಗಳು ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಎಲ್ಲರೂ ಯೋಚಿಸುವ ವಿಧಾನವನ್ನೇ ಬದಲಿಸಿದವು.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಟೆಸ್ಲಾ ಕಂಪನಿಯ ವಾಹನಗಳು ಉತ್ತಮವಾದ ವಿನ್ಯಾಸವನ್ನು ಹೊಂದಿದ್ದು, ವೇಗಕ್ಕೆ, ವಿಶ್ವಾಸಾರ್ಹತೆಗೆ ಹಾಗೂ ಹೆಚ್ಚು ದೂರ ಕ್ರಮಿಸುವುದಕ್ಕೆ ಹೆಸರುವಾಸಿಯಾಗಿವೆ. ಈ ಕಂಪನಿಯ ವಾಹನಗಳು 2020ರಲ್ಲಿ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಲಿವೆ. ಅದಕ್ಕೂ ಮೊದಲೇ ಟೆಸ್ಲಾ ಕಂಪನಿಯಲ್ಲಿ ಅನುಭವವನ್ನು ಹೊಂದಿರುವ ಮೋಹನ್ ರಾಮಸಾಮಿರವರು ಭಾರತದಲ್ಲಿ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಈ ನಿಟ್ಟಿನಲ್ಲಿ ಮೋಹನ್ ರಾಮಸಾಮಿ ಹಾಗೂ ಅವರ ಹೊಸ ಸ್ಟಾರ್ಟ್ ಅಪ್ ಶ್ರೀವಾರು ಮೋಟಾರ್ಸ್‍‍ಗೆ ಧನ್ಯವಾದಗಳನ್ನು ಹೇಳಲೇ ಬೇಕು. ಶ್ರೀವಾರು ಮೋಟಾರ್ಸ್‌ನ ತಯಾರಿಸಲಿರುವ ಮೊದಲ ವಾಹನಕ್ಕೆ ಪ್ರಾಣ ಎಂದು ಹೆಸರಿಡಲಾಗುವುದು.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಭಾರತದ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸೆಗ್‍‍ಮೆಂಟಿನಲ್ಲಿ ಎಮ್‌ಫ್ಲಕ್ಸ್ ಒನ್‌ ಕಂಪನಿಯ ಜೊತೆಗೆ ಕೈಜೋಡಿಸಲಿದೆ. ಎಲೆಕ್ಟ್ರಿಕ್ ಮೋಟರ್ ಪವರ್ ಹೊಂದಿರುವ ಪ್ರಾಣ 35 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಪವರ್ ಉತ್ಪಾದನೆಯ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಪರ್ಫಾಮೆನ್ಸ್ ಅಂಕಿ ಅಂಶಗಳ ಬಗ್ಗೆ ಹೇಳಲಾಗಿದೆ. ಅದರಂತೆ ಶ್ರೀವಾರು ಮೋಟಾರ್ಸ್‍‍ನ ಪ್ರಾಣ ಬೈಕ್ ಕೇವಲ ನಾಲ್ಕು ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಕ್ರಮಿಸಲಿದೆ ಎಂದು ವರದಿಯಾಗಿದೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಟಾಪ್ ಸ್ಪೀಡ್ ಗಂಟೆಗೆ 100 ಕಿ.ಮೀನಷ್ಟಿರಲಿದೆ. ಈ ಬೈಕಿನಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಯಿಂದಾಗಿ ಸುಮಾರು 126 ಕಿ.ಮೀ ವ್ಯಾಪ್ತಿಯವರೆಗೆ ಚಲಿಸಲಿದೆ ಎಂದು ಹೇಳಲಾಗಿದೆ. ಶ್ರೀವಾರು ಮೋಟಾರ್ಸ್‍‍ನ ಪ್ರಾಣ ಬೈಕ್ ರಿವರ್ಸ್ ಮೋಡ್ ಸೇರಿದಂತೆ ಸ್ವಿಚೆಬಲ್ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.

MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಈ ಎಲೆಕ್ಟ್ರಿಕ್ ಬೈಕ್ ಅನ್ನು ಗ್ರ್ಯಾಂಡ್, ಎಲೈಟ್ ಹಾಗೂ ಕ್ಲಾಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಮೂರೂ ಮಾದರಿಯ ಬೈಕುಗಳು ಪರ್ಫಾಮೆನ್ಸ್ ಹಾಗೂ ಮೈಲೇಜ್‍ ವಿಷಯದಲ್ಲಿ ವಿಭಿನ್ನವಾಗಿವೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಗ್ರ್ಯಾಂಡ್ 126 ಕಿ.ಮೀ ಮೈಲೇಜ್ ನೀಡಿದರೆ, ಎಲೈಟ್ ಸುಮಾರು 250 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಮೋಹನ್ ರಾಮಸಾಮಿ ತಿಳಿಸಿದ್ದಾರೆ. ಕ್ಲಾಸ್ ಮಾದರಿಯನ್ನು ಕಸ್ಟಮೈಸ್ ಮಾಡಬಹುದಾಗಿದೆ. ವರದಿಗಳ ಪ್ರಕಾರ ಈ ಬೈಕುಗಳನ್ನು ಕೊಯಮತ್ತೂರಿನಲ್ಲಿರುವ ಕಂಪನಿಯ ಘಟಕದಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಅಭಿವೃದ್ಧಿ ಹೊಂದಿದ ನಂತರ ಇದೇ ಘಟಕದಲ್ಲಿಯೇ ಬೈಕುಗಳನ್ನು ತಯಾರಿಸಲಾಗುವುದು. ಶ್ರೀವಾರು ಮೋಟಾರ್ಸ್ ಈ ಘಟಕವು, ವರ್ಷಕ್ಕೆ 30,000 ಯುನಿಟ್ ಬೈಕುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಹೆಚ್ಚಿನ ಬೇಡಿಕೆ ಬಂದಲ್ಲಿ ಉತ್ಪಾದನೆಯನ್ನು ವರ್ಷಕ್ಕೆ ಎರಡು ಲಕ್ಷ ಯೂನಿಟ್‌ಗಳಿಗೆ ಹೆಚ್ಚಿಸಲು ಹೊರಗುತ್ತಿಗೆ ನೀಡುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದ್ದಾರೆ ಟೆಸ್ಲಾ ಮಾಜಿ ಉದ್ಯೋಗಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೈಕಿನ ಬೆಲೆಯು ಮಿಡ್ ಸೆಗ್‍‍ಮೆಂಟಿನ ಬೈಕಿಗೆ ಸಮನಾಗಿರಲಿದೆ ಎಂದು ಹೇಳಲಾಗಿದೆ. ಬೆಲೆಯು ಹೆಚ್ಚಿದ್ದರೆ ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಯಶಸ್ಸು ಕಾಣುವುದು ಕಷ್ಟವಾಗಲಿದೆ. ವರದಿಗಳ ಹಿನ್ನೆಲೆಯಲ್ಲಿ ಈಗಲೇ ಶ್ರೀವಾರು ಮೋಟಾರ್ಸ್‍‍ನ ಯಶಸ್ಸಿನ ಬಗ್ಗೆ ಹೇಳಲು ಸಾಧ್ಯವಿಲ್ಲ. ಕಾದು ನೋಡೋಣ.

Source: Autocarpro

Most Read Articles

Kannada
English summary
Ex-Tesla Engineer Sets-Up EV Company In India To Manufacture Performance Electric Motorcycle - Read in kannada
Story first published: Wednesday, August 7, 2019, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X