ಬೈಕ್ ನೋಂದಣಿ ಆಗಬೇಕಾದ್ರೆ ಈ ಹೊಸ ನಿಯಮ ಇನ್ಮುಂದೆ ಕಡ್ಡಾಯ..!
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ಅದೆಷ್ಟೋ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡರೂ ಸಹ ಕೆಲವರು ಮಾತ್ರ ದಂಡ ಪಾವತಿಸಿದರೂ ಸರಿ ಹೆಲ್ಮೆಟ್ ಬಳಕೆ ಬಳಕೆ ಮಾಡುವುದಿಲ್ಲ ಎನ್ನುವ ಮಟ್ಟಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಪ್ರವೃತ್ತಿಯನ್ನು ತಪ್ಪಿಸಲು ಹೊಸ ನಿಯಮವೊಂದನ್ನು ಕಡ್ಡಾಯವಾಗಿ ಜಾರಿಗೆ ತರವಾಗಿದೆ.

ಹೌದು, ಮಧ್ಯಪ್ರದೇಶದಲ್ಲಿ ಸಾರಿಗೆ ಇಲಾಖೆಯು ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸುವ ಸಂಬಂಧ ಹೊಸ ಬೈಕ್ ನೋಂದಣಿಗಾಗಿ ಕೆಲವು ತಿದ್ದುಪಡಿಗಳನ್ನು ತರಲಾಗಿದ್ದು, ಹೊಸ ಬೈಕ್ ನೋಂದಣಿಯಾಗಬೇಕಿದ್ದಲ್ಲಿ ಬೈಕ್ ಮಾಲೀಕನ ಹೆಸರಿನಲ್ಲಿ ಐಎಸ್ಐ ಮಾರ್ಕ್ ಹೊಂದಿರುವ ಹೊಸದೊಂದು ಹೆಲ್ಮೆಟ್ ಅನ್ನು ಖರೀದಿಸಿದ ರಶೀದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

ಇದರಿಂದ ಹೊಸದಾಗಿ ನೋಂದಣಿ ಮಾಡಕೊಳ್ಳಬೇಕಿರುವ ಬೈಕ್ ಮಾಲೀಕರು ಗುಣಮಟ್ಟದ ಹೆಲ್ಮೆಟ್ ಒಂದನ್ನು ಹೊಂದಿರಬೇಕಿದ್ದು, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿಯನ್ನು ತಪ್ಪಿಸಲು ಇಂತದೊಂದು ಮಹತ್ವದ ನಿಯಮವನ್ನು ಜಾರಿಗೆ ತರಲಾಗಿದೆ.

ಇದು ಸದ್ಯಕ್ಕೆ ಮಧ್ಯಪ್ರದೇಶದಲ್ಲಿ ಮಾತ್ರವೇ ಜಾರಿಗೆ ಬಂದಿದ್ದು, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ಬಂದರೂ ಅಚ್ಚರಿಯಿಲ್ಲ. ಯಾಕೆಂದ್ರೆ ಗುಣಮಟ್ಟದ ಹೆಲ್ಮೆಟ್ ಬಳಕೆಗಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಸಹ ಪೊಲೀಸರ ಮಾತು ಕಿವಿಗೆ ಹಾಕಿಕೊಳ್ಳದ ಬೈಕ್ ಮಾಲೀಕರಿಗೆ ಇದೊಂದು ಕಠಿಣ ನಿಯಮವಾಗಲಿದೆ.

ಇನ್ನು ಬಹುತೇಕ ಬೈಕ್ ಸವಾರರು ಸಾವಿರಾರು ರೂಪಾಯಿ ಕೊಟ್ಟು ಬೈಕ್ ಖರೀದಿ ಮಾಡಿದರೂ ಸಹ ಒಂದು ಉತ್ತಮವಾದ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನ ಖರೀದಿಸುತ್ತಾರೆ.

ಆದ್ರೆ ಕಳೆಪೆ ಹೆಲ್ಮೆಟ್‌ಗಳು ಅಪಘಾತಗಳ ಸಂದರ್ಭದಲ್ಲಿ ಪ್ರಾಣ ಉಳಿಯುವ ಬದಲು ಪ್ರಾಣಕ್ಕೆ ಮತ್ತಷ್ಟು ಸಂಚಕಾರ ತರಲಿವೆ ಎಂಬುವುದು ಗೊತ್ತಿದ್ದರೂ ಸಹ ಅಗ್ಗದ ಬೆಲೆಯ ಹೆಲ್ಮೆಟ್‌ಗಳೇ ಹೆಚ್ಚು ಮಾರಾಟವಾಗುತ್ತಿದ್ದು, ಇಂತಹ ಪ್ರವೃತ್ತಿಯನ್ನು ತಪ್ಪಿಸಲು ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷಾ ಆಯುಕ್ತರು ಸಹ ಹೊಸದೊಂದು ರೂಲ್ಸ್ ಅನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿದ್ದಾರೆ.

ಹೊಸದಾಗಿ ಬೈಕ್ ಖರೀದಿಸುವ ಗ್ರಾಹಕರಿಗೆ ಡೀಲರ್ಸ್‌ಗಳೇ ಉಚಿತವಾಗಿ 2 ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ವಿತರಣೆ ಮಾಡುವಂತೆ ಸೂಚನೆ ನೀಡಲಾಗಿದ್ದು, ನಿಯಮ ಪಾಲಿಸದ ಡೀಲರ್ಸ್ ವಿರುದ್ಧ ಸೂಕ್ತ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ.
MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಹಾಗೆಯೇ ಹೆಲ್ಮೆಟ್ ಬಳಕೆ ಮಾಡದ ದ್ವಿಚಕ್ರ ವಾಹನ ಸವಾರರ ವಿರುದ್ದವು ಸೂಕ್ತ ಕ್ರಮ ಕೈಗೊಳ್ಳಲು ಪ್ರತ್ಯೇಕ ತಂಡ ರಚಿಸಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ.

ನೆರೆ ರಾಜ್ಯ ತಮಿಳುನಾಡಿನಲ್ಲೂ ಸಹ ಈಗಾಗಲೇ ಬೈಕ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡುವಂತೆ ಅಲ್ಲಿನ ಸಾರಿಗೆ ಮತ್ತು ಟ್ರಾಫಿಕ್ ಪೊಲೀಸ್ ಆಯುಕ್ತರು ಡೀಲರ್ಸ್‌ಗಳಿಗೆ ಸೂಚನೆ ನೀಡಿದ್ದು, ಹೆಲ್ಮೆಟ್ ಬಳಕೆ ಮಹತ್ವವನ್ನು ಅರಿಯಲು ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
MOST READ: ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್

ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.


Click it and Unblock the Notifications








