ಹೀರೋ ಸ್ಕೂಟರ್‍ಗಳ ಮೇಲೆ ಭರ್ಜರಿ ಆಫರ್
ಹೀರೋ ಮೋಟೊಕಾರ್ಪ್, ಆಗಸ್ಟ್ 15ರಿಂದ 18ರವರೆಗೆ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ ಹಾಗೂ ವೀಕ್ ಎಂಡ್ ಹಿನ್ನೆಲೆಯಲ್ಲಿ ಹಾಗೂ ಸದ್ಯದ ಮಾರುಕಟ್ಟೆಯ ದೃಷ್ಟಿಯಿಂದ ತನ್ನ ಎಲ್ಲಾ ವಾಹನಗಳ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು.

ಸ್ಕೂಟರ್ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಹೀರೋ ಸ್ಕೂಟರ್ ಗ್ರ್ಯಾಂಡ್ ಕಾರ್ನಿವಲ್ ಆಫರ್ ಅನ್ನು ಘೋಷಿಸಿದೆ. ಈ ಆಫರ್ ಅನ್ನು ಹಬ್ಬದ ಹಿನ್ನೆಲೆಯಲ್ಲಿ ಶುರು ಮಾಡಲಾಗಿದೆ.

ಕಂಪನಿಯ ಎಲ್ಲಾ ಸರಣಿಯ ಸ್ಕೂಟರ್‌ಗಳ ಮೇಲೆ ಆಗಸ್ಟ್ 16 ರಿಂದ ಸೆಪ್ಟೆಂಬರ್ 14ರವರೆಗೆ ಈ ಆಫರ್ ನೀಡಲಾಗುವುದು. ಈ ಯೋಜನೆಯನ್ನು ಹೀರೋ ಕಂಪನಿಯ ಮಾರಾಟ ಪ್ರಮಾಣವು 2019ರ ಜುಲೈ ತಿಂಗಳಿನಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಘೋಷಿಸಲಾಗಿದೆ.

ಕಳೆದ ವರ್ಷ ಇದೇ ತಿಂಗಳಿನಲ್ಲಿ 6,79,862 ಸ್ಕೂಟರ್‍ಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷ 5,35,810 ಸ್ಕೂಟರ್‍ಗಳ ಮಾರಾಟವಾಗಿ 21.18%ನಷ್ಟು ಕುಸಿತ ಉಂಟಾಗಿದೆ. ಹೊಸ ಹೀರೋ ಸ್ಕೂಟರ್ ಖರೀದಿದಾರರು ಈಗ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು.

ರೂ.999 ಡೌನ್ ಮೆಂಟ್ ಪಾವತಿಸಿ, 6.99% ಬಡ್ಡಿದರದಲ್ಲಿ ಸ್ಕೂಟರ್ ಪಡೆಯಬಹುದಾಗಿದೆ. ಇತರ ಸೇವಾ ಕೊಡುಗೆಗಳ ಜೊತೆಗೆ 2 ಎಕ್ಸ್ ಗುಡ್ ಲೈಫ್ ಪ್ರಯೋಜನ ಹಾಗೂ ರೂ.8,500ಗಳ ಪೇಟಿಎಂ ಪ್ರಯೋಜನಗಳನ್ನು ಪಡೆಯಬಹುದು.

ಈ ಹೀರೋ ಸ್ಕೂಟರ್ ಗ್ರ್ಯಾಂಡ್ ಕಾರ್ನಿವಲ್ ಕೊಡುಗೆಯನ್ನು ಕಂಪನಿಯ ಎಲ್ಲಾ ಸರಣಿಯ ಸ್ಕೂಟರ್‌ಗಳ ಮೇಲೆ ನೀಡಲಾಗುವುದು. ಡ್ಯುಯೆಟ್, ಡೆಸ್ಟಿನಿ 125, ಪ್ಲೆಷರ್, ಪ್ಲೆಷರ್ ಪ್ಲಸ್, ಮೆಸ್ಟ್ರೋ ಎಡ್ಜ್, ಮೆಸ್ಟ್ರೋ ಎಡ್ಜ್ 125 ಹಾಗೂ ಮೆಸ್ಟ್ರೋ ಎಡ್ಜ್ 125 ಫೈಗಳ ಮೇಲೆ ಈ ಆಫರ್ ನೀಡಲಾಗುವುದು.

ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಏರಿಸಿತು. ಎಲ್ಲಾ ಉತ್ಪನ್ನಗಳ ಬೆಲೆಗಳನ್ನು ಇನ್‍ಪುಟ್ ವೆಚ್ಚವೆಂದು 1%ನಷ್ಟು ಹೆಚ್ಚಿಸಲಾಗಿದೆ. ಕಂಪನಿಯು ದ್ವಿಚಕ್ರ ವಾಹನ ವಿನಿಮಯ ಯೋಜನೆಯನ್ನು ಸಹ ಪರಿಚಯಿಸಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಯೋಜನೆಯ ಅಡಿಯಲ್ಲಿ ಹೊಸ ಸ್ಕೂಟರ್ ಖರೀದಿಸ ಬಯಸುವವರು ತಮ್ಮ ಹಳೆಯ ಸ್ಕೂಟರ್‌ಗಳನ್ನು ವಿನಿಮಯ ಮಾಡಿಕೊಂಡು ರಿಯಾಯಿತಿ ಪಡೆಯಬಹುದು. ಹಳೆಯ ಸ್ಕೂಟರ್‌ಗಳ ಬೆಲೆಯನ್ನು ಹೀರೋ ಕಂಪನಿಯ ಅಧಿಕೃತ ಸಿಬ್ಬಂದಿ ನಿರ್ಧರಿಸುತ್ತಾರೆ.
MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಹಳೆಯ ವಾಹನದ ಮೊತ್ತವನ್ನು ಕಡಿತಗೊಳಿಸುವುದರ ಜೊತೆಗೆ, ಖರೀದಿದಾರರು ವಿನಿಮಯ ಬೋನಸ್ ಆಗಿ ರೂ.4,500 ರಿಯಾಯಿತಿಯನ್ನು ಪಡೆಯಬಹುದು. ಹೀರೋ ಮೋಟೊಕಾರ್ಪ್ ತಮ್ಮ ದ್ವಿಚಕ್ರ ವಾಹನಗಳಿಗಾಗಿ ಹೋಮ್ ಡೆಲಿವರಿ ಸೇವೆಯನ್ನು ಸಹ ಪ್ರಾರಂಭಿಸಿದೆ.
MOST READ: ಈ ನಟಿ ಈಗ ಟುಕ್‍ಟುಕ್ ಆಟೋರಾಣಿ..!

ಈ ಸೇವೆಯನ್ನು ನೀಡಲು, ಖರೀದಿಸುವ ವಾಹನದ ಆನ್ ರೋಡ್ ಬೆಲೆಗಿಂತ ರೂ.395 ಹೆಚ್ಚುವರಿಯಾಗಿ ಪಡೆಯಲಾಗುತ್ತದೆ. ಈ ಸೇವೆಯನ್ನು ಸದ್ಯಕ್ಕೆ ಮುಂಬೈ, ನೋಯ್ಡಾ ಹಾಗೂ ಬೆಂಗಳೂರು ನಗರಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸುವ ಸಾಧ್ಯತೆಗಳಿವೆ.


Click it and Unblock the Notifications