ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣೆಗೆ ಕಂಡುಬರುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ. ಹೀರೋ ಮೋಟೊಕಾರ್ಪ್ ಕೂಡಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿರುವುದಲ್ಲದೇ ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಪಂಜಾಬ್‌ನ ಲೂಧಿಯಾನ್‌ನಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದ ಘಟಕದ ವಿಸ್ತರಣೆಗಾಗಿ ಬರೋಬ್ಬರಿ ರೂ.700 ಕೋಟಿ ಹೂಡಿಕೆಗೆ ಮುಂದಾಗಿರುವ ಹೀರೋ ಮೋಟೊಕಾರ್ಪ್ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ನೀಡಿದೆ. ಹೀರೋ ಸಂಸ್ಥೆಯು ಈಗಾಗಲೇ ವಿವಿಧ ಮಾದರಿಯ 11 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರ ಉದ್ಯಮ ವಿಸ್ತರಣೆ ಯೋಜನೆಗೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಬಹುತೇಕ ಸ್ಕೂಟರ್ ಮಾದರಿಗಳು ಕಡಿಮೆ ಮೈಲೇಜ್ ಪ್ರಮಾಣವನ್ನು ಹೊಂದಿರುವುದು ಗ್ರಾಹಕರ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಶೀಘ್ರದಲ್ಲೇ ಹೊಸ ಮಾದರಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೀರೋ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹೀರೋ ಸಂಸ್ಥೆಯು ತನ್ನ ಪೆಟ್ರೋಲ್ ಎಂಜಿನ್ ಬೈಕ್ ಮಾರಾಟ ಮಳಿಗೆಯಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟಕ್ಕಾಗಿಯೇ ಪ್ರತ್ಯೇಕವಾಗಿ ದೇಶಾದ್ಯಂತ 15 ಹೊಸ ಡೀಲರ್ಸ್‌ಗಳಿಗೆ ಚಾಲನೆ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಇದಕ್ಕಾಗಿಯೇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟಕ್ಕೆ ಪೂರಕವಾಗಿ ದೇಶದ ಪ್ರಮುಖ ನಗರಗಳಲ್ಲಿ 1,500 ಟಚ್ ಪಾಯಿಂಟ್‌ಗಳನ್ನು ತೆರೆಯಲು ಸಹ ಯೋಜನೆ ರೂಪಿಸಿರುವ ಹೀರೋ ಸಂಸ್ಥೆಯು, ಟಚ್ ಪಾಯಿಂಟ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲಿದೆ. ಹಾಗೆಯೇ ಟಚ್ ಪಾಯಿಂಟ್‌ಗಳ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡಿಭಾಗಗಳು ಮತ್ತು ಸರ್ವಿಸ್ ನೀಡಲು ನಿರ್ಧರಿಸಿರುವ ಹೀರೋ ಸಂಸ್ಥೆಯು ಇದಕ್ಕಾಗಿ ಸಾವಿರಾರು ನುರಿತ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಈ ಮೂಲಕ ಬೈಕ್ ಮಾರಾಟದಲ್ಲಿನ ನಂ.1 ಸ್ಥಾನವನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲೂ ಸದ್ದು ಮಾಡಲು ಮುಂದಾಗಿರುವ ಹೀರೋ ಸಂಸ್ಥೆಯು ಗ್ರಾಹಕರ ಆದ್ಯತೆ ಮೇರೆಗೆ ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಅಭಿವೃದ್ದಿಪಡಿಸಲು ಮಾರುಕಟ್ಟೆ ಅಧ್ಯಯನ ನಡೆಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಇದಲ್ಲದೇ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು ಫೇಮ್ 2 ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಅಷ್ಟೇ ಅಲ್ಲದೇ ಗ್ರಾಹಕರಿಗೆ ಭರ್ಜರಿ ಸಬ್ಸಡಿ ದೊರೆಯಲಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಸಬ್ಸಡಿ ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು 3 ವರ್ಷಗಳ ಅವಧಿಗಾಗಿ ರೂ.10 ಸಾವಿರ ಕೋಟಿ ಮೀಸಲು ಇರಿಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕೂ ಸಬ್ಸಡಿ ನೀಡುತ್ತಿದೆ.

MOST READ: ದೇಶದ ಜನಪ್ರಿಯ ಕಾರ್ ಬ್ರಾಂಡ್ ಆಗಿ ಮಿಂಚುತ್ತಿರುವ ಟಾಟಾ ಯಶಸ್ವಿ ಹಿಂದಿನ ಕಾರಣವೇನು?

ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿ ಯೋಜನೆಗಾಗಿ ರೂ.700 ಕೋಟಿ ಹೂಡಿಕೆ ಮಾಡಿದ ಹೀರೋ

ಹೀಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯಡಿ ಭರ್ಜರಿ ಲಾಭದೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ತವಕದಲ್ಲಿದ್ದು, 2022ರ ವೇಳೆಗೆ ದೇಶಾದ್ಯಂತ ಶೇ.25ರಷ್ಟು ವಾಹನಗಳು ಎಲೆಕ್ಟ್ರಿಕ್ ಎಂಜಿನ್ ಪ್ರೇರಣೆ ಹೊಂದಿರಲಿವೆ ಅಂದಾಜಿಸಲಾಗಿದೆ.

Article Published On: Saturday, December 7, 2019, 13:23 [IST]
English summary
Hero Electric will be investing RS. 700 crore in Ludhiana facility. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+