ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ದೇಶದ ನಂ.1 ಬೈಕ್ ಉತ್ಪಾದನಾ ಸಂಸ್ಥೆಯಾದ ಹೀರೋ ಮೊಟೋಕಾರ್ಪ್ ತನ್ನ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ 2019ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿರುವ ಹೆಚ್‌ಎಫ್ ಡೀಲಕ್ಸ್ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.49,067ಕ್ಕೆ ನಿಗದಿಗೊಳಿಸಲಾಗಿದೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಟಾಪ್ 10 ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೆಚ್‌ಎಫ್ ಡೀಲಕ್ಸ್ ಬೈಕ್ ಮಾದರಿಯು ಮಧ್ಯಮ ವರ್ಗದ ಗ್ರಾಹಕರ ಹಾಟ್ ಫೆವರಿಟ್ ಆಗಿದ್ದು, ಇದೇ ಮೊದಲ ಬಾರಿಗೆ ಹೊಸ ಬೈಕ್ ಅನ್ನು ಇಂಟೆಗ್ರೇಟಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್) ಮತ್ತು ಐ3ಎಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗಿದೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಗ್ರಾಹಕರ ಆದ್ಯತೆ ಮೇರೆಗೆ ಹೆಚ್‌‌ಎಫ್ ಡೀಲಕ್ಸ್ ಬೈಕ್‌ಗಳಲ್ಲಿ ಐ3ಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಇನ್ನುಳಿದಂತೆ ಇಂಟೆಗ್ರೇಟಡ್ ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಇತ್ತೀಚೆಗೆ ಹೀರೋ ಸಂಸ್ಥೆಯ ಪ್ರಮುಖ ಬೈಕ್‌ಗಳಲ್ಲಿ ಇಂಧನ ಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಐ3ಎಸ್(ಐಡ್ಲಿ ಸ್ಟಾಪ್ ಆ್ಯಂಡ್ ಸ್ಟಾರ್ಟ್ ಸಿಸ್ಟಂ) ನೀಡಲಾಗುತ್ತಿದ್ದರೂ ಕೆಲವು ಗ್ರಾಹಕರು ಐ3ಎಸ್ ರಹಿತ ಬೈಕ್‌ಗಳನ್ನೇ ಬಳಕೆ ಮಾಡುತ್ತಿದ್ದಾರೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಇದಕ್ಕೆ ಕಾರಣ, ಐ3ಎಸ್ ಬಳಕೆಯಿಂದ ಬೈಕಿನ ಎಂಜಿನ್ ಬಹುಬೇಗ ಹಾಳಾಗಬಹುದು ಎನ್ನುವ ತಪ್ಪು ಸಂದೇಶಗಳಿಂದಾಗಿ ಗ್ರಾಹಕರು ಐ3ಎಸ್ ರಹಿತ ಬೈಕ್‌ಗಳಿಗಾಗಿ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗಿರುವ ಹೆಚ್ಎಫ್ ಡೀಲಕ್ಸ್ ಬೈಕಿನಲ್ಲಿ ಎರಡು ಆಯ್ಕೆಗಳು ನೀಡಿದೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಇದರಲ್ಲಿ ಹೊಸದಾಗಿ ನೀಡಲಾಗಿರುವ ಐಬಿಎಸ್ ತಂತ್ರಜ್ಞಾನವು ಬೈಕಿನ ಬ್ರೇಕಿಂಗ್ ಸೌಲಭ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದು, ವೇಗದಲ್ಲಿರುವ ಬೈಕ್ ಅನ್ನು ತುರ್ತು ಸಂದರ್ಭದಲ್ಲಿ ಬ್ರೇಕ್ ಒತ್ತಿದಾಗ ಹಠಾತ್ ಆಗಿ ಬೈಕ್ ನಿಲುಗಡೆಯಾಗುವ ಬದಲು ಕೆಲವೇ ಸೇಕೆಂಡುಗಳ ಬಳಿಕ ಬ್ರೇಕ್ ಅನ್ವಯವಾಗುತ್ತೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ವೇಗದಲ್ಲಿರುವಾಗ ಸಡನ್ ಆಗಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗುವ ಸಾಧ್ಯತೆಯಿದ್ದು, ಇದರಿಂದ ಬೈಕ್ ಸವಾರರಿಗೆ ಅಪಘಾತದಿಂದ ತಪ್ಪಿಸುವ ಅವಕಾಶವಿರುವುದಿಲ್ಲ. ಆದ್ರೆ ಐಬಿಎಸ್ ಬ್ರೇಕಿಂಗ್ ಸೌಲಭ್ಯವಿದ್ದಲ್ಲಿ ಇಂತಹ ಸಮಸ್ಯೆ ಉಂಟಾಗುವುದಿಲ್ಲ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಎಬಿಎಸ್ ನಂತೆಯೇ ಕಾರ್ಯನಿರ್ವಹಿಸುವ ಐಬಿಎಸ್ ಸೌಲಭ್ಯವು ಸಹ ಸವಾರರು ಬ್ರೇಕ್ ಅದುಮಿದ ಸಂದರ್ಭದಲ್ಲಿ ಚಕ್ರ ಹಠಾತ್ ಆಗಿ ಬಂದ್ ಆಗದೇ, ಅದರ ಬದಲಾಗಿ ವೇಗವನ್ನು ಕಡಿತಗೊಳಿಸಿ, ಚಕ್ರಗಳನ್ನು ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರು ಬೈಕಿನ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ.

MOST READ: 2019ರಿಂದ ಹೊಸ ಕಾಯ್ದೆ - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್ ಶುರು..!

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಈ ವೇಳೆ ಬೈಕ್ ಸ್ಕೀಡ್ ದುರಂತಗಳು ತಪ್ಪಲಿದ್ದು, ಒಟ್ಟಿನಲ್ಲಿ ಐಬಿಎಸ್ ಸೌಲಭ್ಯವು ಬೈಕ್ ಸವಾರರಿಗೆ ವರವಾಗಿ ಪರಿಣಮಿಸಲಿದೆ. ಹಾಗೆಯೇ ಐ3ಎಸ್ ಕೂಡಾ ಇದೀಗ ಹೀರೋ ಸಂಸ್ಥೆಯ ಎಲ್ಲಾ ಬೈಕ್ ಮಾದರಿಯಲ್ಲೂ ಪರಿಚಯಿಸಲಾಗುತ್ತಿದ್ದು, ಇದು ಇಂಧನ ಉಳಿತಾಯಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ.

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಇನ್ನು 97.2 ಸಿಸಿ ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಹೆಚ್‌ಎಫ್ ಡೀಲಕ್ಸ್ ಬೈಕ್ ಮಾದರಿಯು 8.36-ಬಿಎಚ್‌ಪಿ ಮತ್ತು 8.05-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಮೈಲೇಜ್ ಹಿಂದಿರುಗಿಸಬಲ್ಲವು.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಐಬಿಎಸ್, ಐ3ಎಸ್ ಪ್ರೇರಿತ ಹೀರೋ ಹೆಚ್‌ಎಫ್ ಡೀಲಕ್ಸ್ ಬಿಡುಗಡೆ

ಜೊತೆಗೆ ಎರಡು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಶಾಕ್ ಅಬರ್ಸ್, ಮುಂಭಾಗದಲ್ಲಿ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಸೌಲಭ್ಯ ಪಡೆದಿದೆ.

Most Read Articles

Kannada
English summary
Hero HF Deluxe IBS i3S Launched In India: Prices Start At Rs 49,067. Read in Kannada.
Story first published: Wednesday, January 16, 2019, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X