ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಭಾರತದಲ್ಲಿ ಬೈಸಿಕಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಸೈಕಲ್ಸ್, ಲೆಕ್ಟ್ರೊ ಇ‍‍ಹೆಚ್‍ಎಕ್ಸ್20 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಬೈಕಿನ ಬೆಲೆ ರೂ.1.35 ಲಕ್ಷಗಳಾಗಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಲೆಕ್ಟ್ರೊ ಎಲೆಕ್ಟ್ರಿಕ್ ಬೈಕ್ ಅನ್ನು ಹೀರೋ ಸೈಕಲ್ಸ್ ಲಿಮಿಟೆಡ್, ಯಮಹಾ ಮೋಟಾರ್ ಕಂಪನಿ ಲಿಮಿಟೆಡ್ ಹಾಗೂ ಮಿಟ್ಸುಯಿ ಅಂಡ್ ಕೊ ಲಿಮಿಟೆಡ್ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಮೂರೂ ಕಂಪನಿಗಳ ನಡುವಿನ ಸಹಭಾಗಿತ್ವವನ್ನು ಕಳೆದ ವರ್ಷ ಘೋಷಿಸಲಾಗಿತ್ತು.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಲೆಕ್ಟ್ರೊ ಇ‍‍ಹೆಚ್‍ಎಕ್ಸ್20 ಬೈಕಿನಲ್ಲಿ, ಜಪಾನಿನಲ್ಲಿ ವಿನ್ಯಾಸಗೊಳಿಸಿದ ಹಾಗೂ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಹೀರೋ ಸೈಕಲ್ಸ್ ನ ಗಾಜಿಯಾಬಾದ್ ಘಟಕದಲ್ಲಿ ತಯಾರಿಸಲಾಗಿದೆ. ಹೀರೋ ಈ ಎಲೆಕ್ಟ್ರಿಕ್ ಬೈಕುಗಳನ್ನು ಪ್ರಪಂಚದಲ್ಲಿರುವ ಅನೇಕ ದೇಶಗಳಿಗೆ ರಫ್ತು ಮಾಡುವ ಗುರಿಯನ್ನಿಟ್ಟುಕೊಂಡಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಎಲೆಕ್ಟ್ರಿಕ್ ಬೈಕಿನ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದ ಹೀರೊ ಮೋಟಾರ್ಸ್ ಕಂಪನಿಯ ಚೇರ್‍‍ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಂಕಜ್ ಎಂ ಮುಂಜಾಲ್‍‍ರವರು ಮಾತನಾಡಿ, ಹೀರೋ ಸೈಕಲ್ಸ್ ಹಾಗೂ ಯಮಹಾ ಮೋಟಾರ್ ಸಹಭಾಗಿತ್ವದ ಮೊದಲ ವಾಹನವಾದ ಲೆಕ್ಟ್ರೊ ಇ‍ಹೆಚ್‍ಎಕ್ಸ್ 20 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಎಲೆಕ್ಟ್ರಿಕ್ ಸೈಕಲ್ ಸೆಂಟರ್ ಮೋಟರ್‍‍ನಿಂದ ಚಾಲನೆಯಾಗುತ್ತದೆ. ಇದರಿಂದಾಗಿ ಅಡ್ವೆಂಚರ್ ಸ್ಪೋರ್ಟ್ಸ್ ನಲ್ಲಿ ಹೆಚ್ಚಿನ ಪರ್ಫಾಮೆನ್ಸ್ ನೀಡಲಿದೆ. ಮುಂಬರುವ ದಿನಗಳಲ್ಲಿ ಇ-ಸೈಕಲ್ ಮಾರುಕಟ್ಟೆ ಹೆಚ್ಚು ಜನಪ್ರಿಯವಾಗಲಿದೆ. ನಾವು ಈ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದು ಹೇಳಿದರು.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಲೆಕ್ಟ್ರೊ ಇ‍‍ಹೆಚ್‍ಎಕ್ಸ್ 20 ಬೈಕಿನಲ್ಲಿರುವ ಸಸ್ಪೆಂಷನ್ ಆಫ್ ರೋಡ್ ರಸ್ತೆಗಳಲ್ಲಿಯೂ ಸಹ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಎಲೆಕ್ಟ್ರಿಕ್ ಬೈಕುಗಳಲ್ಲಿರುವ ಹಬ್ ಮೋಟರ್‍‍ಗೆ ಹೋಲಿಸಿದರೆ, ಇ‍‍ಹೆಚ್‍ಎಕ್ಸ್ 20ಯಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಪೆಡಲ್‍‍ಗಳ ಮಧ್ಯದಲ್ಲಿ ಇರಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಎಲೆಕ್ಟ್ರಿಕ್ ಬೈಕಿನಲ್ಲಿ ಬದಲಿಸಬಹುದಾದ 10.9 ಎ‍‍ಹೆಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿಯಲ್ಲಿನ ಚಾರ್ಜ್ ಖಾಲಿಯಾದಾಗ ಬ್ಯಾಟರಿಯನ್ನು ಹೊರತೆಗೆದು ಬೇರೆ ಬ್ಯಾಟರಿಯನ್ನು ಅಳವಡಿಸಿಕೊಳ್ಳಬಹುದು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಬ್ಯಾಟರಿಯ ತೂಕವು ಕೇವಲ 2 ಕೆ.ಜಿಯಾಗಿರುವುದರಿಂದ ಸುಲಭವಾಗಿ ಬ್ಯಾಟರಿಯನ್ನು ಬದಲಿಸಬಹುದು. ಈ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 80 ಕಿ.ಮೀವರೆಗೆ ಚಲಿಸಬಹುದು. ಮೂರುವರೆ - ನಾಲ್ಕು ಗಂಟೆಗಳಲ್ಲಿ ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಬ್ಯಾಟರಿಯು ಪೂರ್ತಿಯಾಗಿ ಖಾಲಿಯಾದರೂ ಚಿಂತೆ ಮಾಡಬೇಕಾಗಿಲ್ಲ. ಇದರಲ್ಲಿ ಅಳವಡಿಸಲಾಗಿರುವ ಪೆಡಲ್‍‍ನಿಂದ ಬೈಕ್ ಅನ್ನು ಚಾಲನೆ ಮಾಡಬಹುದು. ಈ ಎಲೆಕ್ಟ್ರಿಕ್ ಬೈಕಿನಲ್ಲಿ 5 ಪವರ್ ಮೋಡ್‍‍ಗಳನ್ನು ನೀಡಲಾಗಿದೆ. ಐದೂ ಪವರ್ ಮೋಡ್‍‍ಗಳೂ ಎಲೆಕ್ಟ್ರಿಕ್ ಮೋಟರ್‍‍ನಿಂದ ವಿವಿಧ ಪವರ್ ಔ‍‍ಟ್‍‍ಪುಟ್‍‍ಗಳನ್ನು ನೀಡುತ್ತವೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಬೈಕಿನಲ್ಲಿರುವ ಟಾರ್ಕ್ ಸೆನ್ಸಾರ್, ಸ್ಪೀಡ್ ಸೆನ್ಸಾರ್ ಹಾಗೂ ಕ್ರ್ಯಾಂಕ್ ಸೆನ್ಸಾರ್‍‍ಗಳಿಂದ ಈ ಬೈಕ್ ಅನ್ನು ಪವರ್ ಮೋಡ್‍‍ಗೆ ಎನೇಬಲ್ ಮಾಡಿಕೊಳ್ಳಬಹುದು. ಈ ಬೈಕಿನಲ್ಲಿ ಉನ್ನತವಾದ ಬ್ರೇಕಿಂಗ್‍‍ಗಳಿಗಾಗಿ ಶಿಮಾನೊ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ 2x10 ಗೇರ್ ಯುನಿಟನ್ನು ಸಹ ಹೊಂದಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಲೆಕ್ಟ್ರೊ ಎ‍‍ಹೆಚ್‍ಎಕ್ಸ್ 20 ಎಲೆಕ್ಟ್ರಿಕ್ ಬೈಕುಗಳನ್ನು ದೇಶಾದ್ಯಂತವಿರುವ ಹೀರೋ ಸೈಕಲ್ಸ್ ಔ‍‍ಟ್‍ಲೆ‍‍ಟ್‍‍ಗಳಿಂದ ಖರೀದಿಸಬಹುದು. ಈ ಎಲೆಕ್ಟ್ರಿಕ್ ಬೈಕಿನ ಮಾರಾಟ, ವಿತರಣೆ ಹಾಗೂ ಮಾರ್ಕೆಟಿಂಗ್‍‍ನ ಜವಾಬ್ದಾರಿಯನ್ನು ಮಿಟ್ಸುಯಿ ಅಂಡ್ ಕೊ. ನೋಡಿಕೊಳ್ಳಲಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್, ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಲೆಕ್ಟ್ರೊ ಹೆಸರಿನಡಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನಿಟ್ಟು ಕೊಂಡಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಬಹುದಾಗಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಲೆಕ್ಟ್ರೊ ಇ‍‍ಹೆಚ್ಎಕ್ಸ್ 20 ಎಲೆಕ್ಟ್ರಿಕ್ ಬೈಕ್ ಅನ್ನು ನಗರ ವ್ಯಾಪ್ತಿಯೊಳಗೆ ಸಂಚರಿಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗಿದೆ. ಹೀರೋ ಲೆಕ್ಟ್ರೊ ಇ-ಬೈಕ್ ಅನ್ನು ಸೈಕಲ್‍‍ಗಳ ಪ್ರೀಮಿಯಂ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಸೈಕಲ್‍‍ಗಳನ್ನು ಖರೀದಿಸ ಬಯಸುವ ಗ್ರಾಹಕರಿಗೆ ಎಲೆಕ್ಟ್ರಿಕ್ ಬೈಕ್ ಒಳ್ಳೆಯ ಆಯ್ಕೆಯಾಗಲಿದೆ.

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಿದ ಹೀರೋ ಸೈಕಲ್ಸ್

ಈ ಎಲೆಕ್ಟ್ರಿಕ್ ಬೈಕ್ ಅನ್ನು ದೂರ ಪ್ರಯಾಣದ ಸೈಕ್ಲಿಂಗ್, ಆಫ್ ರೋಡ್ ಹಾಗೂ ದಿನ ನಿತ್ಯದ ಬಳಕೆಗಾಗಿ ಉಪಯೋಗಿಸಬಹುದಾಗಿದೆ. ಪರಿಸರ ಸ್ನೇಹಿ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಆದರೆ ಈ ವಾಹನಗಳ ಬೆಲೆಗಳು ಸ್ವಲ್ಪ ಹೆಚ್ಚಾಗಿವೆ.

Article Published On: Thursday, September 19, 2019, 10:52 [IST]
English summary
Hero Lectro Electric Bike Launched In India: We Have All The Details - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+