ಐ3ಎಸ್ ಸೌಲಭ್ಯ ಪ್ರೇರಿತ ಹೀರೋ ಮ್ಯಾಸ್ಟ್ರೋ ಎಡ್ಜ್ 125 ಬಿಡುಗಡೆ
ಹೀರೋ ಮೊಟೊಕಾರ್ಪ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಮ್ಯಾಸ್ಟ್ರೋ ಎಡ್ಜ್ 125 ವಿನೂತನ ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 58,500ಕ್ಕೆ ನಿಗದಿ ಮಾಡಲಾಗಿದೆ.

ಹೊಸ ಸೌಲಭ್ಯ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಮತ್ತು ಫ್ಯೂಲ್ ಇಂಜೆಕ್ಷಡ್ ವೆರಿಯೆಂಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹೀಗಾಗಿ ಸ್ಕೂಟರ್‌ಗಳಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಮೇಲೆ ಬೆಲೆ ನಿಗದಿ ಮಾಡಲಾಗಿದ್ದು, ಡಿಸ್ಕ್ ಬ್ರೇಕ್ ವೆರಿಯೆಂಟ್ ಮಾದರಿಯು ಆರಂಭಿಕವಾಗಿ ಮಾರಾಟವಾದಲ್ಲಿ ಫ್ಯೂಲ್ ಇಂಜೆಕ್ಷಡ್ ಮಾದರಿಯು ಹೈ ಎಂಡ್ ಆವೃತ್ತಿಯಾಗಿ ಮಾರಾಟವಾಗಲಿದೆ.

ಮ್ಯಾಸ್ಟ್ರೋ ಎಡ್ಜ್ 125 ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)
ಡ್ರಮ್ ಬ್ರೇಕ್ ವೆರಿಯೆಂಟ್- ರೂ. 58,500
ಡಿಸ್ಕ್ ಬ್ರೇಕ್ ವೆರಿಯೆಂಟ್- ರೂ. 60,000
ಫ್ಯೂಲ್ ಇಂಜೆಕ್ಷಡ್ ವೆರಿಯೆಂಟ್- ರೂ. 62,700

ಇನ್ನು ತಾಂತ್ರಿಕವಾಗಿ ಡೆಸ್ಟಿನಿ 125 ಮಾದರಿಯಲ್ಲೇ ಹಲವು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿರುವ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯು, ಇದೇ ಮೊದಲ ಬಾರಿಗೆ ಏರ್ ಕೂಲ್ಡ್ ಎಂಜಿನ್‌ನೊಂದಿಗೆ ಆಯ್ಕೆ ರೂಪದಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಫ್ಯೂಲ್ ಇಂಜೆಕ್ಷಡ್ ವೆರಿಯೆಂಟ್ ಅನ್ನು ಅಭಿವೃದ್ಧಿಗೊಳಿಸಿದೆ.

ಎಂಜಿನ್ ಸಾಮರ್ಥ್ಯ
ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯು 125 ಸಿಸಿ ಎಂಜಿನ್‌ನೊಂದಿಗೆ 8.7-ಬಿಎಚ್‌ಪಿ ಮತ್ತು 10.2-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದರಲ್ಲಿ ಫ್ಯೂಲ್ ಇಂಜೆಕ್ಷಡ್ ಮಾದರಿಯು 125 ಸಿಸಿ ಎಂಜಿನ್‌ನಲ್ಲಿಯೇ 9.1-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು. ಇದು ಪರ್ಫಾಮೆನ್ಸ್ ಪ್ರಿಯರ ಆಯ್ಕೆಯನ್ನು ಹೆಚ್ಚಿಸಲಿದ್ದು, ಮುಂಭಾಗದಲ್ಲಿ ಮರುಹೊಂದಾಣಿಕೆ ಮಾಡಿಕೊಳ್ಳಬಹುದಾದ ಟೆಲಿಸ್ಕೋಪಿಕ್ ಫೋಕ್ಸ್ ಮತ್ತು ಹಿಂಭಾಗದಲ್ಲಿನ ಮೊನೋಶಾರ್ಕ್ ಸಸ್ಷೆಷನ್‌ಗಳು ಸ್ಪೋರ್ಟಿ ಲುಕ್ ನೀಡಿವೆ.

ಹೊಸ ಸ್ಕೂಟರ್ ವೈಶಿಷ್ಟ್ಯತೆಗಳು
125ಸಿಸಿ ಸ್ಕೂಟರ್ ಮಾದರಿಗಳಲ್ಲೇ ಈ ಬಾರಿ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯಲ್ಲಿ ಮರು ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್, ವಿಭಜಿತ ಮಾದರಿಯಲ್ಲಿರುವ ಇಂಡಿಕೇಟರ್‌ಗಳು ಮತ್ತು ವಿಸ್ತರಿಸಲಾದ ಫುಲ್ ಬೋರ್ಡ್ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹಾಗೆಯೇ ಈ ಹಿಂದೆ ಡೆಸ್ಟಿನಿ 125 ಸ್ಕೂಟರಿನಲ್ಲಿ ಪರಿಚಯಿಸಲಾಗಿದ್ದ ಐ3ಎಸ್ ಸೌಲಭ್ಯ ಕೂಡಾ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‌ನಲ್ಲೂ ಅಳವಡಿಸಲಾಗಿದ್ದು, ಇದು ಸ್ಕೂಟರ್ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕನ್ಸೊಲ್, ಸರ್ವಿಸ್ ರಿಮೆಂಡರ್ ಇಂಡಿಕೇಟರ್, ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್,ಮಲ್ಟಿ ಫಂಕ್ಷನ್ ಕೀ ಹೋಲ್ಡರ್, ಡೈಮಂಡ್ ಕಟ್ ಅಲಾಯ್ ವೀಲ್ಹ್, ಟೈರ್ ಲೆಸ್ ಟ್ಯೂಬ್ ಮತ್ತು ಹೊರ ಭಾಗದಲ್ಲಿ ಫ್ಯೂಲ್ ಟ್ಯಾಂಕ್ ಕ್ಯಾಪ್ ಸೌಲಭ್ಯವು ಹೊಸ ಸ್ಕೂಟರಿನ ಪ್ರಮುಖ ಆಕರ್ಷಣೆಗಳಾಗಿವೆ.
MOST READ: ಡ್ಯೂಕ್ 125 ನಂತರ ಆರ್‌ಸಿ 125 ಬಿಡುಗಡೆಗೆ ಸಜ್ಜಾದ ಕೆಟಿಎಂ..!

ಲಭ್ಯವಿರುವ ಬಣ್ಣಗಳ ಆಯ್ಕೆ
ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‌ಗಳು ಒಟ್ಟು 6 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಬ್ಲ್ಯೂ, ಬ್ರೌನ್, ಗ್ರೇ, ರೆಡ್, ಪರ್ಲ್ ಫೆಡ್‌ಲೆಸ್ ವೈಟ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿವೆ.


Click it and Unblock the Notifications