ಅಡ್ವೆಂಚರ್ ಪ್ರಿಯರ ಹೀರೋ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬಿಡುಗಡೆ
ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ತನ್ನ ಜನಪ್ರಿಯ ಅಡ್ವೆಂಚರ್ ಆವೃತ್ತಿಗಳಾದ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.94 ಸಾವಿರದಿಂದ ಆರಂಭಗೊಳ್ಳಲಿವೆ.

ಹೀರೋ ಸಂಸ್ಥೆಯು ದೇಶದಲ್ಲಿ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಅಡ್ವೆಂಚರ್ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಈ ಹಿಂದಿನ ಇಮ್‌ಪಲ್ಸ್ 150 ಬೈಕ್ ಮಾದರಿಯ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲು ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್‌ಗಳನ್ನು ಅಭಿವೃದ್ಧಿಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಹಾಗಾದ್ರೆ ಹೊಸ ಬೈಕ್‌ಗಳ ಸ್ಪೆಷಲ್ ಏನು? ಬೆಲೆ ಎಷ್ಟು? ಎಲ್ಲಾ ಮಾಹಿತಿ ಇಲ್ಲಿದೆ ನೋಡಿ..

ಹೀರೋ ಬಿಡುಗಡೆ ಮಾಡಿರುವ ಎಕ್ಸ್‌ಪಲ್ಸ್ 200 ಮಾದರಿಯು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊಂದಿದ್ದರೆ ಎಕ್ಸ್‌ಪಲ್ಸ್ 200ಟಿ ಮಾದರಿಯು ಟೂರರ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾಬ್ಯೂರೆಟೆಡ್ ಮತ್ತು ಫ್ಯೂಲ್ ಇಂಜೆಕ್ಷಡೆಡ್ ಎಂಜಿನ್ ಸೌಲಭ್ಯಗಳೊಂದಿಗೆ ಹೊಸ ಬೈಕ್ ಖರೀದಿ ಲಭ್ಯವಿರಲಿದೆ.

ಹೊಸ ಬೈಕ್‌ಗಳ ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)
ಎಕ್ಸ್‌ಪಲ್ಸ್ 200ಟಿ - ರೂ.94,000
ಎಕ್ಸ್‌ಪಲ್ಸ್ 200(ಕಾಬ್ಯೂರೆಟೆಡ್) - ರೂ. 97,000
ಎಕ್ಸ್‌ಪಲ್ಸ್ 200(ಫ್ಯೂಲ್ ಇಂಜೆಕ್ಷಡೆಡ್)- 1,05,000

ಎಂಜಿನ್ ಸಾಮರ್ಥ್ಯ
ಹೊಸ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಗಳು 199.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಪೀಡ್ ಮ್ಯನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 18.4-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇನ್ನು ಅಡ್ವೆಂಚರ್ ಮತ್ತು ಟೂರರ್ ವಿಭಾಗದಲ್ಲಿನ ಬೇಡಿಕೆಯೆಂತೆ ಗರಿಷ್ಠ ಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಬೈಕ್‌ಗಳು ಡ್ಯುಯಲ್ ಪರ್ಪಸ್ ಟೈರ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯ ಪಡೆದಿದ್ದು, ಫುಲ್ ಎಲ್‌ಇಡಿ ರೌಂಡ್ ಹೆಡ್‌ಲ್ಯಾಂಪ್, ಸಿಂಗಲ್ ಪೀಸ್ ಸೀಟ್, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಗೇರ್ ಇಂಡಿಕೇಟರ್ ಗಮನಸೆಳೆಯುತ್ತವೆ.

ಹಾಗೆಯೇ ಹೊಸ ಬೈಕ್‌ಗಳಲ್ಲಿ ಸರ್ವಿಸ್ ರಿಮೆಂಡರ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಬ್ಲೂಟೂಥ್ ಕನೆಕ್ಟಿವಿಟಿ ಸೌಲಭ್ಯವಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಕನ್ವೆಷನಲ್ ಎಕ್ಸಾಸ್ಟ್, ಸಣ್ಣದಾದ ವೀಂಡ್ ಸ್ಕೀನ್, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆಷನ್ ಅಳವಡಿಸಲಾಗಿದೆ.
MOST READ: ಡ್ಯೂಕ್ 125 ನಂತರ ಆರ್‌ಸಿ 125 ಬಿಡುಗಡೆಗೆ ಸಜ್ಜಾದ ಕೆಟಿಎಂ..!

ಈ ಮೂಲಕ ಅಡ್ವೆಂಚರ್ ಪ್ರಿಯರ ಬೇಡಿಕೆಯನ್ನು ಅತಿ ಕಡಿಮೆ ಬೆಲೆಯಲ್ಲಿ ಪೂರೈಸಲು ಯತ್ನಿಸಿರುವ ಹೀರೋ ಸಂಸ್ಥೆಯು, ಎಕ್ಸ್‌ಪಲ್ಸ್ 200 ಬೈಕ್ ಮಾದರಿಯನ್ನು 5 ವಿವಿಧ ಬಣ್ಣಗಳಲ್ಲಿ ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಯನ್ನು 4 ಬಣ್ಣಗಳಲ್ಲಿ ಪರಿಚಯಿಸಿದೆ.

ಲಭ್ಯವಿರುವ ಬಣ್ಣಗಳು
ಎಕ್ಸ್‌ಪಲ್ಸ್ 200- ಮ್ಯಾಟೆ ಗ್ರೀನ್, ಪರ್ಲ್ ಫೆಡ್‌ಲೆಸ್ ವೈಟ್, ಮ್ಯಾಟೆ ಎಕ್ಸಿಸ್, ಸ್ಪೋರ್ಟ್ ರೆಡ್ ಮತ್ತು ಬ್ಲ್ಯಾಕ್
ಎಕ್ಸ್‌ಪಲ್ಸ್ 200ಟಿ- ಮ್ಯಾಟೆ ಎಕ್ಸಿಸ್ ಗ್ರೇ, ಮ್ಯಾಟೆ ಶೈಲ್ಡ್ ಗೋಲ್ಡ್, ಬ್ಲ್ಯಾಕ್ ಮತ್ತು ಕ್ಯಾಂಡಿ ಬ್ಲೆಜಿಂಗ್ ರೆಡ್
MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಒಟ್ಟಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಎಕ್ಸ್‌ಪಲ್ಸ್ 200 ಬೈಕ್ ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಗಳು ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದ್ದು, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ಇವು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications








