ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಹೀರೋ ಮೊಟೊಕಾರ್ಪ್ ಸಂಸ್ಥೆಯು ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿಗಳಾದ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿದ್ದು, ಮೇ 1ರಂದು ಬಿಡುಗಡೆಯಾಗುವ ಹೊಸ ಬೈಕ್‌ಗಳ ಖರೀದಿಗೆ ಅಧಿಕೃತ ಡೀಲರ್ಸ್‌ಗಳಲ್ಲಿ ರೂ.5 ಸಾವಿರ ಮುಂಗಡದೊಂದಿದೆ ಬುಕ್ಕಿಂಗ್ ಆರಂಭವಾಗಿದೆ.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಇಮ್‌ಪಲ್ಸ್ 150 ಬೈಕ್ ಪ್ರೇರಣೆಯೊಂದಿಗೆ ಸಿದ್ದವಾಗಿರುವ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್‌ಗಳು ಆಪ್ ರೋಡ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಹೊಸ ಬೈಕಿನ ಬೆಲೆಗಳನ್ನು ಹೊರತು ಪಡಿಸಿ ಬಹುತೇಕ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿಯನ್ನು ಹೀರೋ ಸಂಸ್ಥೆಯು ಈಗಾಗಲೇ ಬಿಟ್ಟುಕೊಟ್ಟಿದೆ. ಹೀಗಾಗಿ ಬೈಕಿನ ಬೆಲೆಗಳ ಮೇಲೆ ಎಕ್ಸ್‌ಪಲ್ಸ್ 200 ಮತ್ತು 200ಟಿ ಬೈಕಿನ ಜನಪ್ರಿಯತೆ ನಿರ್ಧಾರವಾಗಲಿದೆ ಎನ್ನಬಹುದು.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದರಿಯು ಅಡ್ವೆಂಚೆರ್ ವಿಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಮತ್ತು 200ಟಿ ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.1.10 ಲಕ್ಷದಿಂದ ರೂ. 1.25 ಲಕ್ಷದೊಳಗೆ ನಿರ್ಧರಿಸುವ ಸಾಧ್ಯತೆಗಳಿವೆ.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಇನ್ನು ಹೀರೋ ಎಕ್ಸ್‌ಪಲ್ಸ್ 200 ಮತ್ತು 200ಟಿ ಬೈಕ್‌ಗಳು ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್ಸ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಎಕ್ಸ್‌ಪಲ್ಸ್ ಎಂಜಿನ್ ಸಾಮರ್ಥ್ಯ

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.

MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಹೀರೋ ಎಕ್ಸ್‌ಪಲ್ಸ್ 200 ಮತ್ತು 200ಟಿ ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 170-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಹೊಂದಿದೆ.

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಇದಲ್ಲದೇ ಈ ಬೈಕಿನ ಮುಂಭಾಗದಲ್ಲಿ 21 ಇಂಚಿನ ಚಕ್ರಗಳನ್ನು ಒದಗಿಸಲಾಗಿದ್ದು, ಮುಂಭಾಗದ 18 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಆಪ್ ರೋಡಿಂಗ್‌ಗೆ ಸಹಕಾರಿಯಾಗಲು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

MOST READ: ಪಾಪ್ ಕಾರ್ನ್ ತಯಾರಿಸಲು ಈ ಸೂಪರ್ ಬೈಕ್ ಮಾಲೀಕ ಮಾಡಿದ್ದೇನು ಗೊತ್ತಾ?

ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಒಟ್ಟಿನಲ್ಲಿ ಎಕ್ಸ್‌ಪಲ್ಸ್ 200 ಮತ್ತು 200ಟಿ ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Tuesday, April 30, 2019, 8:45 [IST]
English summary
Hero XPulse Bookings Open Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+