ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ದೆಹಲಿ ಮೂಲದ ಹೈ ನೋಟ್ ಪರ್ಫಾಮೆನ್ಸ್, ಜನಪ್ರಿಯ ಎಸ್ ಅಂಡ್ ಎಸ್ ಎಕ್ಸಾಸ್ಟ್ ಸಿಸ್ಟಂಗಳನ್ನು ರಾಯಲ್ ಎನ್‍‍‍ಫೀಲ್ಡ್ 650 ಟ್ವಿನ್ ಬೈಕುಗಳಿಗಾಗಿ ಆಮದು ಮಾಡಿಕೊಂಡು ಪೂರೈಸಲಿದೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಇಂಟರ್‍‍ಸೆಪ್ಟರ್ ಐಎನ್‍‍ಟಿ 650 ಹಾಗೂ ಕಾಟಿನೆಂಟಲ್ ಜಿಟಿ 650 ಬೈಕುಗಳಲ್ಲಿ ಎಸ್ಅಂಡ್ಎಸ್ ಎಕ್ಸಾಸ್ಟ್ ಗಳನ್ನು ಅಳವಡಿಸಿ ಆಯ್ದ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ. ಭಾರತದಲ್ಲಿರುವ ಬೈಕುಗಳಲ್ಲಿ ಈ ಸಿಸ್ಟಂಗಳನ್ನು ಇನ್ನೂ ಅಳವಡಿಸಲಾಗಿಲ್ಲ. ಹೈ ನೋಟ್ ಪರ್ಫಾರ್ಮೆನ್ಸ್ ಕಂಪನಿಯು ಸುರಕ್ಷತಾ ಗೇರ್, ಆಕ್ಸೆಸರೀಸ್ ಹಾಗೂ ಬೈಕುಗಳ ಬಿಡಿಭಾಗಗಳನ್ನು ಮಾರಾಟ ಮಾಡುತ್ತದೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಈ ಕಂಪನಿಯು ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಎಸ್ & ಎಸ್ ಎಕ್ಸಾಸ್ಟ್ ಸಿಸ್ಟಂಗಳ ಪ್ರಿ - ಆರ್ಡರ್ ಬಗ್ಗೆ ತಿಳಿಸಿದೆ. ಲಭ್ಯತೆ, ದಿನಾಂಕ ಹಾಗೂ ಬೆಲೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಪ್ರಚಾರಕ್ಕಾಗಿ ಅಳವಡಿಸಲಾಗಿರುವ ಚಿತ್ರವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಎಸ್ & ಎಸ್ ಎಕ್ಸಾಸ್ಟ್ ಫಾರ್ ಇಂಟರ್‍‍ಸೆಪ್ಟರ್ ಐಎನ್‍‍ಟಿ 650 ಎಂದು ಹೇಳಿದೆ. ಈ ಸಿಸ್ಟಂಗಳನ್ನು ಕಾಟಿನೆಂಟಲ್ ಜಿಟಿ 650 ಬೈಕುಗಳಲ್ಲಿಯೂ ಅಳವಡಿಸುವ ಸಾಧ್ಯತೆಗಳಿವೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಇಂಡಿಯನ್‍ಆಟೋಸ್‍‍ಬ್ಲಾಗ್ ವರದಿಗಳ ಪ್ರಕಾರ, ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್, ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್‍ ಹೊಂದಿರುವ ಬೈಕು‍ಗಳಲ್ಲಿ 270 ಡಿಗ್ರಿ ಫೈರಿಂಗ್ ಮೋಡಿನಲ್ಲಿ ಶಬ್ದ ಮಾಡಲಿದೆ ಎಂದು ಹೇಳಲಾಗುತ್ತಿದೆ. 650 ಟ್ವಿನ್ ಬೈಕುಗಳಲ್ಲದೇ ರೆಡ್ ರೂಸ್ಟರ್ ಪರ್ಫಾರ್ಮೆನ್ಸ್, ಎಇಡಬ್ಲ್ಯೂ ಮತ್ತು ಗ್ರಿಡ್7 ಬೈಕುಗಳಲ್ಲಿಯೂ ಸಹ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಅಳವಡಿಸಲಾಗಿದೆ. 650 ಟ್ವಿನ್ ಬೈಕುಗಳಿಗಾಗಿ ಉತ್ತಮವಾದ ಎಕ್ಸಾಸ್ಟ್ ಸಿಸ್ಟಂಗಳನ್ನು ಟರ್ಮಿಗ್ನೊನಿ ಕಂಪನಿಯು ಮಾರಾಟ ಮಾಡುತ್ತಿದೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಇಟಲಿ ಮೂಲದ ಟರ್ಮಿಗ್ನೊನಿ ಕಂಪನಿಯು ಕಳೆದ ತಿಂಗಳು ಇಂಟರ್‍‍ಸೆಪ್ಟರ್ ಐ‍ಎನ್‍‍ಟಿ 650 ಬೈಕಿಗಾಗಿ ಸ್ಕ್ರಾಂಬ್ಲರ್ ಸ್ಟೈಲ್‍‍ನ ಎಕ್ಸಾಸ್ಟ್ ಸಿಸ್ಟಂ ಅನಾವರಣಗೊಳಿಸಿತ್ತು. ದೆಹಲಿಯಲ್ಲಿರುವ ಹೈ ನೋಟ್ ಪರ್ಫಾಮೆನ್ಸ್ ಕಂಪನಿಯು, ಎಕ್ಸಾಸ್ಟ್ ಸಿಸ್ಟಂ ಅನ್ನು ಮಾತ್ರ ಆಮದು ಮಾಡಿಕೊಳ್ಳಲಿದೆ.

MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಎಸ್ ಅಂಡ್ ಎಸ್ ಎಕ್ಸಾಸ್ಟ್ ನೋಟ್‍‍ಗಳ ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 650 ಟ್ವಿನ್ ಬೈಕುಗಳಿಗೆ ಬಿಗ್ ಬೋರ್ ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ಕಿಟ್‌ನಲ್ಲಿ ಪಿಸ್ಟನ್‌, ಸಿಲಿಂಡರ್‌ ಹಾಗೂ ಹೆಡ್ ಗ್ಯಾಸ್ಕೆಟ್‍‍ಗಳಿರುತ್ತವೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಈ ಟ್ವಿನ್ ಬೈಕುಗಳಲ್ಲಿ 648 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್, ಪ್ಯಾರಲಲ್ ಟ್ವಿನ್ ಸಿಲಿಂಡರ್, ಏರ್, ಆಯಿಲ್ ಕೂಲ್ಡ್ ಎಸ್‍ಒ‍‍ಹೆಚ್‍‍ಸಿ ಎಂಜಿನ್‍‍ಯಿದ್ದು, 47 ಬಿಹೆಚ್‌ಪಿ ಯನ್ನು 7,250 ಆರ್‌ಪಿಎಂನಲ್ಲಿ ಉತ್ಪಾದಿಸಿದರೆ, 52 ಎನ್ಎಂ ಟಾರ್ಕ್ ಅನ್ನು 5,250 ಆರ್‌ಪಿಎಂನಲ್ಲಿ ಉತ್ಪಾದಿಸುತ್ತದೆ.

MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಹೆಚ್ಚುವರಿಯಾಗಿ ಸೇರಿಸಲಾದ ಡಿಸ್‍‍ಪ್ಲೇಸ್‍‍ಮೆಂಟ್ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸುತ್ತದೆ. ಬಿಗ್ ಬೋರ್ ಕಿಟ್‌ನ ಪವರ್ ಹಾಗೂ ಟಾರ್ಕ್ ಅಂಕಿಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬಿಗ್ ಬೋರ್ ಕಿಟ್ ಅನ್ನು ಕ್ಲೋಸ್ಡ್ ಕೋರ್ಸ್‍‍ಗೆ ಬಳಸಲಾಗುತ್ತದೆ.

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಇನ್ನುಳಿದಂತೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು, ಈ ಟ್ವಿನ್ ಬೈಕ್‍‍ಗಳ ಮಾಲೀಕರು ದೂರಿರುವಂತೆ ಪರ್ವತ ಪ್ರದೇಶಗಳಲ್ಲಿ ಚಲಿಸುವಾಗ ಉಂಟಾಗುವ ತೊಂದರೆಯನ್ನು ನಿವಾರಿಸಲು 650 ಟ್ವಿನ್‍ ಬೈಕುಗಳಲ್ಲಿರುವ ಇಸಿಯುವನ್ನು ಅಪ್‍‍ಡೇಟ್ ಮಾಡಲಿದೆ. ಈ ಸಾಫ್ಟ್‌ವೇರ್ ಅಪ್‍‍ಡೇಟ್ ಮಾಡಲು ಎ‍ಆರ್‍ಎ‍‍ಐ ಅನುಮೋದನೆ ನೀಡಿದೆ.

MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಎಕ್ಸಾಸ್ಟ್ ನೋಟ್ ಆಮದು ಮಾಡಿಕೊಳ್ಳಲಿದೆ ಆರ್‍ಇ ಬೈಕ್

ಈ ಅಪ್‍‍ಡೇಟ್ ಅನ್ನು ಜೂನ್ ನಂತರ ತಯಾರಾಗುವ ಎಲ್ಲಾ ಇಂಟರ್‌ಸೆಪ್ಟರ್‌ ಹಾಗೂ ಕಾಂಟಿನೆಂಟಲ್ ಜಿಟಿ ಬೈಕುಗಳಲ್ಲಿ ಅಳವಡಿಸಲಾಗುವುದು. ಈಗಾಗಲೇ ಈ ಬೈಕುಗಳನ್ನು ಹೊಂದಿರುವವರು ಅಧಿಕೃತ ರಾಯಲ್ ಎನ್‌ಫೀಲ್ಡ್ ಸೇವಾ ಕೇಂದ್ರಗಳಿಂದ ಅಪ್‍‍ಡೇಟ್ ಪಡೆದುಕೊಳ್ಳಬಹುದು. ಈ ಅಪ್‍‍ಡೇಟ್ ಪಡೆಯಲು ಸುಮಾರು 10 ನಿಮಿಷಗಳು ಹಿಡಿಯಲಿವೆ.

Article Published On: Friday, June 21, 2019, 13:26 [IST]
English summary
High Note Performance To Import S&S Exhausts For Royal Enfield 650 Twins - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+