Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೆಡಿ ಪವರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು..!
ಆಟೋ ಉದ್ಯಮದಲ್ಲಿನ ಗುಣಮಟ್ಟ ಮತ್ತು ಗ್ರಾಹಕರ ಅಭಿಪ್ರಾಯಗಳ ಆಧಾರದ ಮೇಲೆ ವಾಹನ ಉತ್ಪಾದನಾ ಸಂಸ್ಥೆಗಳ ಅಸಲಿಯತ್ತು ಬಯಲು ಮಾಡುವ ಜೆಡಿ ಪವರ್ ಸಮೀಕ್ಷಾ ಸಂಸ್ಥೆಯು 2019ರ ಅತ್ಯತ್ತಮ ಬೈಕ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಗುಣಮಟ್ಟದಲ್ಲಿ ಹೊಸ ಭರವಸೆ ಮೂಡಿಸಿರುವ ಹಲವು ಹೊಸ ಬೈಕ್‌ಗಳು ಈ ಬಾರಿ ಜೆಡಿ ಪವರ್ ಸಮೀಕ್ಷೆಯಲ್ಲಿ ಉತ್ತಮ ಜನಾಭಿಪ್ರಾಯ ಪಡೆದುಕೊಂಡಿವೆ.

ಜೆಡಿ ಪವರ್ ಸಂಸ್ಥೆಯು ಅಂತರ್‌ರಾಷ್ಟ್ರೀಯ ಮಟ್ಟದ ವಾಹನ ಉತ್ಪಾದನಾ ಗುಣಮಟ್ಟ ಮತ್ತು ಮಾರುಕಟ್ಟೆ ಅಧ್ಯಯನ ಕೈಗೊಳ್ಳುವ ಮೂಲಕ ವಾಹನ ಖರೀದಿಸುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಇದೀಗ 2019ರ ಅತ್ಯುತ್ತಮ ಬೈಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಯ್ಕೆಯಾದ ಬಹುತೇಕ ಬೈಕ್ ಮಾದರಿಗಳು ನಿಗದಿತ ಗುಣಮಟ್ಟವನ್ನು ತಲುಪಲು ಸಾಧ್ಯವಾಗದ್ದಿದ್ದರೂ ಜನಾಭಿಪ್ರಾಯದಲ್ಲಿ ಮೂಂಚೂಣಿ ಸಾಧಿಸಿರುವುದು ಅಚ್ಚರಿ ತರಿಸಿದೆ.

ಜೆಡಿ ಪವರ್ ಸಂಸ್ಥೆಯು ಬೈಕ್ ಮಾದರಿಗಳ ಗುಣಮಟ್ಟದ ವಿಭಾಗದಲ್ಲಿ ಒಟ್ಟು ಆರು ವಿಭಾಗಗಳಾಗಿ ವಿವಿಧ ಬೈಕ್‌ಗಳನ್ನು ಆಯ್ಕೆ ಮಾಡಿದ್ದು, ದ್ವಿಚಕ್ರ ವಾಹನ ವಿಭಾಗದಲ್ಲಿ ಯಮಹಾ ವೈಜೆಡ್ಎಫ್ ಆರ್15 ಮತ್ತು ಸ್ಕೂಟರ್ ವಿಭಾಗದಲ್ಲಿ ಹೋಂಡಾ ಆಕ್ಟಿವಾ ಐ ಮಾದರಿಯು ಅಗ್ರಸ್ಥಾನ ಗಳಿಸಿವೆ.

ಎಕ್ಸಿಕೆಟಿವ್ ಸ್ಕೂಟರ್ ಸೆಗ್ಮೆಂಟ್, ಅಪ್ಪರ್ ಎಕ್ಸಿಕೆಟಿವ್ ಸ್ಕೂಟರ್ ಸೆಗ್ಮೆಂಟ್, ಎಕಾನಮಿ ಮೋಟಾರ್‌ಸೈಕಲ್ ಸೆಗ್ಮೆಂಟ್, ಎಕ್ಸಿಕೆಟಿವ್ ಮೋಟಾರ್‌ಸೈಕಲ್ ಸೆಗ್ಮೆಂಟ್, ಅಪ್ಪರ್ ಎಕ್ಸಿಕೆಟಿವ್ ಮೋಟಾರ್‌ಸೈಕಲ್ ಸೆಗ್ಮೆಂಟ್ ಮತ್ತು ಪ್ರೀಮಿಯಂ ಮೋಟಾರ್ ಸೈಕಲ್ ಸೆಗ್ಮೆಂಟ್ ವಿಭಾಗದಲ್ಲಿ ವಿವಿಧ ಮಾದರಿಯ ಗುಣಮಟ್ಟದ ಬೈಕ್‌ಗಳನ್ನು ಆಯ್ಕೆ ಮಾಡಲಾಗಿದೆ.

ಎಕ್ಸಿಕೆಟಿವ್ ಸ್ಕೂಟರ್ ಸೆಗ್ಮೆಂಟ್‌ನಲ್ಲಿ 1 ಸಾವಿರ ಅಂಕಗಳಿಗೆ 806 ಅಂಕಗಳನ್ನು ಗಳಿಸಿರುವ ಹೋಂಡಾ ಆಕ್ಟಿವಾ ಐ ಮೊದಲ ಸ್ಥಾನದಲ್ಲಿ ಹೊರಹೊಮ್ಮಿದ್ದಲ್ಲಿ, ಪ್ರೀಮಿಯಂ ಮೋಟಾರ್ ಸೈಕಲ್ ಸೆಗ್ಮೆಂಟ್ ವಿಭಾಗದಲ್ಲಿ ಯಮಹಾ ವೈಜೆಡ್ಎಫ್ ಆರ್15 ಮಾದರಿಯು 1 ಸಾವಿರ ಅಂಕಗಳಿಗೆ 812 ಅಂಕ ಗಳಿಸಿದೆ.

ಪ್ರತಿ ವಿಭಾಗದಲ್ಲೂ ಗುಣಮಟ್ಟದ ಬೈಕ್‌ಗಳು ಆವೃತ್ತಿಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಸಹ ಗ್ರಾಹಕರ ಅಭಿಪ್ರಾಯದಲ್ಲಿ ಇನ್ನು ಕೂಡಾ ಅಸಾಮಾಧಾನ ಇರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಹೋಂಡಾ, ಯಮಹಾ ಮತ್ತು ಟಿವಿಎಸ್ ಮಾತ್ರ ಗ್ರಾಹಕರ ಬೇಡಿಕೆಯೆಂತೆ ಉತ್ಪನ್ನ ಮಾರಾಟದಲ್ಲಿ ಮುಂಚೂಣಿ ಸಾಧಿಸಿವೆ.

ಮೇಲೆ ಹೇಳಲಾದ 6 ವಿಭಾಗದಲ್ಲಿ ವಿವಿಧ ಮಾದರಿಯ ಬೈಕ್ ಪಟ್ಟಿಯಲ್ಲಿ ಹೋಂಡಾ ಸಂಸ್ಥೆಯ 3 ದ್ವಿಚಕ್ರ ವಾಹನಗಳು ಸ್ಥಾನ ಗಿಟ್ಟಿಸಿಕೊಂಡರೆ, ಯಮಹಾ ನಿರ್ಮಾಣದ 2 ದ್ವಿಚಕ್ರ ವಾಹನಗಳು ಮತ್ತು ಟಿವಿಎಸ್ ನಿರ್ಮಾಣದ 1 ದ್ವಿಚಕ್ರ ಮಾತ್ರವೇ ಉತ್ತಮ ಬೈಕ್ ಮಾದರಿಯಾಗಿ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿವೆ.

ಗ್ರಾಹಕರ ಬೇಡಿಕೆಗೆ ಸ್ಪಂದನೆ, ಗುಣಮಟ್ಟದ ಬಿಡಿಭಾಗಗಳು, ಮೈಲೇಜ್, ಪರ್ಫಾಮೆನ್ಸ್ ಸೇರಿದಂತೆ 36 ಅಂಶಗಳನ್ನು ಒಳಗೊಂಡ ಸಮೀಕ್ಷಾ ವರದಿಯ ಮೇಲೆ ಈ ಅಂಕಗಳನ್ನು ನೀಡಲಾಗಿದ್ದು, ಇದು ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ಉತ್ತಮ ಮಾರ್ಗದರ್ಶಿಯಾಗಿರಲಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇನ್ನು 1968ರಿಂದಲೇ ಜಾಗತಿಕವಾಗಿ ಆಟೋ ಉದ್ಯಮದಲ್ಲಿ ರ‍್ಯಾಂಕಿಂಗ್ ಆರಂಭಿಸಿರುವ ಜೆಡಿ ಪವರ್ ಸಂಸ್ಥೆಯು ಇದುವರೆಗೆ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳ ಗುಣಮಟ್ಟವನ್ನು ಗುರುತಿಸಿರುವುದಲ್ಲದೇ ಗ್ರಾಹಕರಿಗೆ ಮೋಸ ಮಾಡುವ ಸಾವಿರಾರು ಆಟೋ ಉತ್ಪಾದನಾ ಸಂಸ್ಥೆಗಳ ಅಸಲಿಯತ್ತು ಬಯಲು ಮಾಡಿ ವಾಹನ ಖರೀದಿದಾರರ ಮೆಚ್ಚುಗೆಗೆ ಪಾತ್ರವಾಗಿದೆ.