TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತಕ್ಕೆ ಎಂಟ್ರಿ ಕೊಟ್ಟ ಹೋಂಡಾ ಬಹುನಿರೀಕ್ಷಿತ ಸಿಬಿ300ಆರ್ ಬೈಕ್
ಹೋಂಡಾ ಮೋಟಾರ್ ಸೈಕಲ್ ಸಂಸ್ಥೆಯು ಮಧ್ಯಮ ಕ್ರಮಾಂಕದ ಕೆಲವು ಸೂಪರ್ ಬೈಕ್ ಮಾದರಿಗಳನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಗೊಳಿಸುತ್ತಿದ್ದು, ಇದರಲ್ಲಿ ವಿನೂತನ ವಿನ್ಯಾಸದ ಸಿಬಿ300ಆರ್ ಬೈಕ್ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿರುವುದಲ್ಲದೇ ಬಜಾಜ್ ಡೋಮಿನಾರ್ 400 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗುವ ಸುಳಿವು ನೀಡಿದೆ.
ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ ಇದೀಗ ಹೊಸ ಸಿಬಿ300ಆರ್ ಬೈಕ್ ಅನ್ನು ಮುಂದಿನ ತಿಂಗಳು ಫೆಬ್ರುವರಿ 8ರಂದು ಬಿಡುಗಡೆಗೊಳಿಸುತ್ತಿದೆ.
ದುಬಾರಿ ಬೆಲೆಯ ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಬೈಕ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದ್ದು, ಸ್ಪಾಟ್ ಟೆಸ್ಟಿಂಗ್ ಮೂಲಕ ಹೊಸ ಬೈಕ್ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡುತ್ತಿರುವುದು ಕಂಡುಬಂದಿದೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದ್ದು, ಕರ್ನಾಟಕದಲ್ಲಿ ಒಂದೇ ಒಂದು ಡೀಲರ್ಸ್‌ನಲ್ಲಿ ಮಾತ್ರವೇ ಸಿಬಿ300ಆರ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.
ಬೆಂಗಳೂರಿನಲ್ಲಿರುವ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ ಬಳಿ ಮಾತ್ರವೇ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಬೈಕ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಬೈಕ್ ಲಭ್ಯವಿರಲಿವೆ.
ಇದರಿಂದ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.
ರೆಟ್ರೋ ಲುಕ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ಸ್, ಸ್ಪೋರ್ಟಿ ಫ್ಯೂಲ್ ಟ್ಯಾಂಕ್, ಎಂಜಿನ್ ಬೆಲ್ಲಿ, ಗಮನಸೆಳೆಯುವ ಎಕ್ಸಾಸ್ಟ್ ವಿನ್ಯಾಸಗಳು ಬೈಕ್ ಬಲಿಷ್ಠತೆಗೆ ಸಹಕಾರಿಯಾಗಿದ್ದು, ಇದು ಬಜಾಜ್ ಡೋಮಿನಾರ್ 400 ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಜಿನ್ ಸಾಮರ್ಥ್ಯ
286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 30.5-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.
ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.
MOST READ: ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!
ಹೀಗಾಗಿ ಹೋಂಡಾದ ಮತ್ತೊಂದು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಸಿಬಿಆರ್250ಆರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿರುವ ಸಿಬಿ300ಆರ್ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ. 2.50 ಲಕ್ಷದಿಂದ ರೂ. 2.70 ಲಕ್ಷದ ತನಕ ಬೆಲೆ ಪಡೆಯುವ ಸಾಧ್ಯತೆಗಳಿವೆ.
ಸದ್ಯಕ್ಕೆ ಭಾರತದಲ್ಲಿ 22 ಹೋಂಡಾ ಶೋರೂಂಗಳಲ್ಲಿ ಮಾತ್ರವೇ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್ಸ್‌ಗಳಿಗೆ ಬುಕ್ಕಿಂಗ್ ಅವಕಾಶ ನೀಡುವ ಸಾಧ್ಯತೆಗಳಿವೆ.
MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!
ಇದಲ್ಲದೇ ಗ್ರಾಹಕರ ಬೇಡಿಕೆಯ ಆಧಾರ ಮೇಲೆ ಹೊಸ ಬೈಕಿನ ಉತ್ಪಾದನಾ ಕಾರ್ಯವನ್ನು ಭಾರತದಲ್ಲೇ ಆರಂಭಿಸುವ ಬಗ್ಗೆಯು ಸುಳಿವು ನೀಡಿರುವ ಹೋಂಡಾ ಸಂಸ್ಥೆಯು ಬೇಡಿಕೆ ಹೆಚ್ಚಿದ್ದಲ್ಲಿ ಭಾರತದಲ್ಲೇ ಉತ್ಪಾದನೆ ಮಾಡಿ ಬೈಕಿನ ಬೆಲೆ ತಗ್ಗಿಸುವ ಗುರಿಹೊಂದಿದೆ.
Source: Rushlane