ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ದೇಶಾದ್ಯಂತ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಮಾಲಿನ್ಯ ಪ್ರಮಾಣವು ಕೂಡಾ ಅದೇ ರೀತಿಯಾಗಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಮುಂದಾಗಿರುವ ಕೇಂದ್ರ ಸರ್ಕಾರವು ಪೆಟ್ರೋಲ್ ಎಂಜಿನ್ ಪ್ರೇರಿತ ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಹೆಚ್ಚುವರಿ ತೆರಿಗೆ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಸದ್ಯ ಬೆಂಗಳೂರು ಒಂದರಲ್ಲೇ ಪ್ರತಿದಿನ 1800 ರಿಂದ 2000 ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ಇದರಲ್ಲಿ ಶೇ.80ರಷ್ಟು ದ್ವಿಚಕ್ರ ವಾಹನಗಳಾಗಿವೆ. ಹೀಗಿರುವಾಗ ದೇಶಾದ್ಯಂತ ದಿನಂಪ್ರತಿ ಮಾರಾಟವಾಗುತ್ತಿರುವ ಪೆಟ್ರೋಲ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳ ಸಂಖ್ಯೆ ಎಷ್ಟಿರಬಹುದು ನೀವೇ ಊಹಿಸಿಕೊಳ್ಳಿ. ಹೀಗಾಗಿ ಪೆಟ್ರೋಲ್ ಎಂಜಿನ್ ಬದಲಾಗಿ ಎಲೆಕ್ಟ್ರಿಕ್ ಎಂಜಿನ್ ಬೈಕ್‌ ಮತ್ತು ಸ್ಕೂಟರ್ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಕೇಂದ್ರವು ಹೊಸ ತೆರಿಗೆ ಜಾರಿಗೆ ತರುತ್ತಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಎಲೆಕ್ಟ್ರಿಕ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಹೊರತುಪಡಿಸಿ ಪೆಟ್ರೋಲ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳ ಖರೀದಿ ಮೇಲೆ ಹೆಚ್ಚುವರಿಯಾಗಿ ಗ್ರೀನ್ ಸೆಸ್ ವಿಧಿಸಲು ಸಿದ್ದತೆ ನಡೆಸಲಾಗಿದ್ದು, ಹೊಸ ವಾಹನ ಖರೀದಿಯು ಮತ್ತಷ್ಟು ದುಬಾರಿಯಾಗಲಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಮುಂಬರುವ ತಿಂಗಳು ನಡೆಯಲಿರುವ ಕೇಂದ್ರದ ಬಜೆಟ್ ಮಂಡನೆ ವೇಳೆ ಹೊಸ ತೆರಿಗೆ ನೀತಿ ಅಧಿಕೃತವಾಗಿ ಜಾರಿಗೊಳ್ಳಲಿದ್ದು, ಎಲೆಕ್ಟ್ರಿಕ್ ಎಂಜಿನ್ ವಾಹನಗಳನ್ನು ಹೊರತುಪಡಿಸಿ ಪರಿಸರಕ್ಕೆ ಮಾರಾಕವಾಗಿರುವ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಗ್ರೀನ್ ಸೆಸ್ ವಿಧಿಸಲು ನಿರ್ಧರಿಸಲಾಗಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಮಾಹಿತಿಗಳ ಪ್ರಕಾರ ಗ್ರೀನ್ ಸೆಸ್‌ನಿಂದಾಗಿ ಬೈಕ್ ಮತ್ತು ಸ್ಕೂಟರ್ ಬೆಲೆಗಳಲ್ಲಿ ಕನಿಷ್ಠ ರೂ.800ರಿಂದ ರೂ.1200 ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಇನ್ನುಳಿದಂತೆ ಇತರೆ ಆಯಾ ರಾಜ್ಯಗಳ ತೆರಿಗೆಗಳು ಸಹ ಈಗಿನಂತೆಯೇ ಮುಂದುವರಿಯಲಿವೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಇದರಲ್ಲಿ ಗ್ರೀನ್ ಸೆಸ್‌ನಿಂದ ಸದ್ಯ ಮುಕ್ತವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೆ ಮುಂದಿನ 3 ವರ್ಷಗಳ ತನಕ ತೆರಿಗೆ ವಿನಾಯ್ತಿ ಸಿಗಲಿದ್ದು, ಪೆಟ್ರೋಲ್ ಎಂಜಿನ್ ಸ್ಕೂಟರ್ ಮತ್ತು ಬೈಕ್ ಬದಲಾಗಿ ಎಲೆಕ್ಟ್ರಿಕ್ ಎಂಜಿನ್ ವಾಹನ ಮಾರಾಟ ಹೆಚ್ಚಳಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಇದರಿಂದ ಕೇಂದ್ರಕ್ಕೆ ಭಾರೀ ಪ್ರಮಾಣದ ಆದಾಯ ಹರಿದು ಬರಲಿದ್ದು, ಅದರಿಂದಲೇ ಎಲೆಕ್ಟ್ರಿಕ್ ವಾಹನಗಳ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಮತ್ತು ನಿರ್ದಿಷ್ಟ ಅವಧಿಗೆ ಎಲೆಕ್ಟ್ರಿಕ್ ಕಾರುಗಳಿಗೆ ಟೋಲ್ ವಿನಾಯ್ತಿ, ಪಾರ್ಕಿಂಗ್ ಶುಲ್ಕ ವಿನಾಯ್ತಿಗಳನ್ನು ನೀಡಲು ಯೋಜಿಸಲಾಗಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

125 ಸಿಸಿ ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ..!

ವಾಹನ ಜಗತ್ತಿನ ಕ್ರಾಂತಿಕಾರಿ ಬೆಳವಣಿಗೆಯೊಂದರಲ್ಲಿ ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಬಳಕೆ ಕೂಡಾ ಕಡ್ಡಾಯವಾಗಲಿದೆ. ದೇಶದಲ್ಲಿ ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಇಂತಹದೊಂದು ಗಮನಾರ್ಹ ಬೆಳವಣೆಗೆ ಕಂಡುಬಂದಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಕೇಂದ್ರ ಸಾರಿಗೆ ಇಲಾಖೆಯು ಇದೇ ವರ್ಷ 2019ರ ಎಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ ಬಳಕೆಯನ್ನು ಜಾರಿಗೆ ತರುತ್ತಿದ್ದು, ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತೀಯ ಮಧ್ಯಮ ವರ್ಗದ ಜನರು ಮೋಟಾರುಸೈಕಲ್‌ಗಳನ್ನೇ ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದರಿಂದಲೇ ಮೋಟಾರುಸೈಕಲ್ ಮಾರುಕಟ್ಟೆಯು ಆಗಾಧವಾಗಿ ಬೆಳೆದು ನಿಂತಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಇನ್ನೊಂದೆಡೆ ಸುರಕ್ಷತೆಯತ್ತ ಗಮನ ಹಾಯಿಸಿದಾಗ ಅತ್ಯಂತ ಕೆಳ ಮಟ್ಟದಲ್ಲಿದ್ದು, ಸಾರಿಗೆ ಸಚಿವಾಲಯದ 2017ರ ಮಾಹಿತಿ ಪ್ರಕಾರ, ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ 60 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಸಾವೀಗೀಡಾಗಿದ್ದರು.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಅಂದರೆ ದೇಶದ ರಸ್ತೆಯಲ್ಲಿ ನಡೆಯುವ ಒಟ್ಟು ಅಪಘಾತದ ಶೇಕಡಾ 60ರಷ್ಟು ದ್ವಿಚಕ್ರ ಸವಾರರೇ ಹೆಚ್ಚು ಪ್ರಾಣಕಳೆದುಕೊಳ್ಳುತ್ತಿದ್ದು, ಇಂತಹ ಬಹುತೇಕ ಪ್ರಕರಣಗಳಲ್ಲಿ ಸವಾರರು ಕನಿಷ್ಠ ಹೆಲ್ಮೆಟ್ ಕೂಡಾ ಧರಿಸುವುದಿಲ್ಲವೆಂಬುದು ಕಂಡುಬಂದಿದೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಇದರಿಂದ ಪ್ರಯಾಣಿಕ ಅಪಾಯದಿಂದ ಪಾರಾಗುವ ಎಲ್ಲ ಸಾಧ್ಯತೆಗಳು ಕ್ಷೀಣಿಸುತ್ತದೆ. ಈಗ ಯುರೋಪ್ ರಸ್ತೆ ಕಾನೂನಿಂದ ಪ್ರೇರಣೆ ಪಡೆದಿರುವ ಭಾರತದ ಸಾರಿಗೆ ಅಧಿಕಾರಿಗಳು ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಅಷ್ಟಕ್ಕೂ ಎಬಿಎಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ಎಬಿಎಸ್ ಪೂರ್ಣ ರೂಪವೇ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠಾತ್ ಆಗಿ ಬ್ರೇಕ್ ಒತ್ತಿದಾಗ ಚಕ್ರದ ಚಾಲನೆ ಒಮ್ಮೆಲೇ ನಿಲುಗಡೆಯಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಈ ವೇಳೆ ಚಾಲಕರಿಗೆ ಅಪಘಾತದಿಂದ ತಪ್ಪಿಸಿಕೊಳ್ಳಲು ಅವಕಾಶವಿರುವುದಿಲ್ಲ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಬ್ರೇಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಿರುವುದು.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಬ್ರೇಕ್ ಒತ್ತಿದ ಸಂದರ್ಭದಲ್ಲಿ ಚಕ್ರ ಹಠಾತ್ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರು ತಮ್ಮ ವಾಹನದ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ. ಈ ಮೂಲಕ ಆಗಬಹುದಾದ ದುರಂತಗಳನ್ನು ತಪ್ಪಿಸಬಹುದಾಗಿದೆ.

ಬದಲಾದ ತೆರಿಗೆ ನೀತಿ- ಸದ್ಯದಲ್ಲೇ ಹೊಸ ಬೈಕ್, ಸ್ಕೂಟರ್‌ಗಳು ಮತ್ತಷ್ಟು ದುಬಾರಿ..!

ಹೀಗಾಗಿ ಏಪ್ರಿಲ್ 1ರಿಂದಲೇ ಹೊಸ ನಿಯಮದ ಪ್ರಕಾರ 125 ಸಿಸಿ ಮೇಲ್ಪಟ್ಟ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಎಬಿಎಸ್ ಹೊಂದಿದ್ದರೇ ಮಾತ್ರವೇ ನೋಂದಣಿಯಾಗಲಿದ್ದು, ಇದರಿಂದಲೂ ಸಹ ಬೈಕ್‌ಗಳ ಬೆಲೆಯಲ್ಲಿ ಕನಿಷ್ಠ ಅಂದ್ರು ರೂ.5 ಸಾವಿರದಿಂದ ರೂ. 8 ಸಾವಿರ ಬೆಲೆ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Petrol Two Wheelers Have To Face Green Cess. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X