ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಹೋಂಡಾ ದ್ವಿಚಕ್ರ ವಾಹನ ಉತ್ಪಾದನಾ ವಿಭಾಗವು ತಮ್ಮ ಬಹುನಿರೀಕ್ಷಿತ ಸಿಬಿ300ಆರ್ ಬೈಕ್ ಅನ್ನು ಕೆಲ ದಿನಗಳ ಹಿಂದಷ್ಟೆ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ಬೈಕ್ ಖರೀದಿಗೆ ದಾಖಲೆ ಪ್ರಮಾಣದ ಬೇಡಿಕೆ ಹರಿದುಬಂದಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ನಿಯೊ ಸ್ಪೋರ್ಟ್ಸ್ ಕೇಫ್ ವಿನ್ಯಾಸದಲ್ಲಿ ಬಿಡುಗಡೆಯಾಗಿರುವ ಸಿಬಿ300ಆರ್ ಬೈಕ್ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಸಿಬಿ300ಆರ್ ಬೈಕ್‌ಗಳು ಮೊದಲ ಹಂತದಲ್ಲೇ ಹೊಸ ದಾಖಲೆಗೆ ಕಾರಣವಾಗಿವೆ. ಮೊದಲ ಹಂತದಲ್ಲಿ ಐದು ತಿಂಗಳ ಅವಧಿಯೊಳಗೆ 500 ಬೈಕ್‌ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದ ಹೋಂಡಾ ಸಂಸ್ಥೆಯು ದೇಶದ ಕೆಲವೇ ಹೋಂಡಾ ಡೀಲರ್ಸ್‌ಗಳ ಬಳಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಆದ್ರೆ ಐದು ತಿಂಗಳು ಅವಧಿಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದ ಹೊಸ ಸಿಬಿ300ಆರ್ ಬೈಕ್‌ಗಳು ಕೇವಲ 2 ತಿಂಗಳಿನಲ್ಲಿ ಸಂಪೂರ್ಣ ಬುಕ್ಕಿಂಗ್ ಪಡೆದುಕೊಂಡಿದ್ದು, ಬುಕ್ಕಿಂಗ್ ದಾಖಲೆಯ ಆಧಾರದ ಮೇಲೆ ಬೈಕ್ ವಿತರಣೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಮಾಹಿತಿಗಳ ಪ್ರಕಾರ ಇದುವರೆಗೆ ದಾಖಲಾಗಿರುವ ಸಿಬಿ300ಆರ್ ಖರೀದಿಯ 500 ಬುಕ್ಕಿಂಗ್‌ಗಳನ್ನು ಪೂರ್ಣಗೊಳಿಸಲು ಮುಂದಿನ ಮೂರು ತಿಂಗಳ ಕಾಲ ಸಮಯ ನಿಗದಿಪಡಿಸಲಾಗಿದ್ದು, ಕರ್ನಾಟಕದಲ್ಲಿ ಒಂದೇ ಒಂದು ಹೋಂಡಾ ಡೀಲರ್ಸ್‌ಗೆ ಮಾತ್ರ ಬುಕ್ಕಿಂಗ್ ಅವಕಾಶ ನೀಡಲಾಗಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಬೆಂಗಳೂರಿನ ಸಿಲಿಕಾಸ್ ಮೋಟಾರ್ಸ್ ಹೋಂಡಾ ಡೀಲರ್ಸ್‌ನಲ್ಲಿ ಮಾತ್ರವೇ ಸಿಬಿ300ಆರ್ ಬೈಕಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಸಿಬಿ300ಆರ್ ಬೈಕ್ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ. 2.41 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಈ ಬೈಕ್ ಹೋಂಡಾ ಸಂಸ್ಥೆಯ ಮೊದಲ 300ಸಿಸಿ ಮೋಟಾರ್‍‍ಸೈಕಲ್ ಎಂಬ ಖ್ಯಾತಿಯನ್ನು ಸಹ ಪಡೆದುಕೊಂಡಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ನಿಯೋ ಸ್ಪೋರ್ಟ್ ಕೆಫೆ ವಿನ್ಯಾಸದಲ್ಲಿ ಬಿಡುಗಡೆಯಾದ ಮಧ್ಯಮ ಗಾತ್ರದ ಮೊದಲ ಬೈಕ್ ಆವೃತ್ತಿ ಇದಾಗಿದ್ದು, ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಫ್ಯೂಲ್ ಟ್ಯಾಂಕ್ ಸೌಲಭ್ಯವು ಹೊಸ ಬೈಕ್ ಆಯ್ಕೆಯ ಮೌಲ್ಯ ಹೆಚ್ಚಿಸಿವೆ.

MOST READ: 19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಎಂಜಿನ್ ಸಾಮರ್ಥ್ಯ

ಸಿಬಿ300ಆರ್ ಬೈಕ್ ಮಾದರಿಯು 286 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಹಾಗೆಯೇ ಹೊಸ ಬೈಕಿನಲ್ಲಿ ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌, 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಇದರೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸಿಂಗಲ್ ಚಾನೆಲ್ ಎಬಿಎಸ್ ಹಾಗೂ ಮುಂಭಾಗದಲ್ಲಿ 41-ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್‌ನೊಂದಿಗೆ ರೆಟ್ರೋ ಡಿಸೈನ್‌ ಆಕರ್ಷಣೆಯಾಗಿವೆ.

MOST READ: ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಮತ್ತೊಂದು ಪ್ರಮುಖ ವಿಚಾರ ಅಂದ್ರೆ 300ಸಿಸಿ ಬೈಕ್ ಸೆಗ್ಮೆಂಟ್‍‍ನಲ್ಲಿ ಅತಿ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಸಿಬಿ 300ಆರ್ ಬೈಕ್ ಸುಮಾರು 143 ಕಿ.ಗ್ರಾಂ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೆಟಪ್ ಅನ್ನು ಒದಗಿಸಲಾಗಿದೆ.

ಭಾರತದಲ್ಲಿ ಹೋಂಡಾ ಸಿಬಿ300ಆರ್ ಬೈಕ್ ಸೋಲ್ಡ್ ಔಟ್

ಇನ್ನು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೇ ಕೆಟಿಎಂ ಡ್ಯೂಕ್ 390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಈ ಬೈಕ್ ಉತ್ಪಾದನೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

Most Read Articles

Kannada
Read more on ಹೋಂಡಾ honda
English summary
Honda CB300R Sold Out In India — Receives Over 500 Bookings Within Two Months Of Launch. Read in Kannada.
Story first published: Wednesday, April 17, 2019, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X