19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ದೇಶಿಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿ ದಾಖಲೆಯ ಕುಸಿತವಾಗಿದ್ದು, ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಸಂಸ್ಥೆಗೂ ಭಾರೀ ಹಿನ್ನಡೆಯಾಗಿದೆ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

2001ರ ತನಂತರ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿರುವ ಹೋಂಡಾ ಸಂಸ್ಥೆಯು 19 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಶೇ. 15ರಿಂದ ಶೇ.20ರಷ್ಟು ಕಡಿತಗೊಳಿಸಿದ್ದು, ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿರುವುದು ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸ್ಟಾಕ್ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಆರ್ಥಿಕವಾಗಿ ಹೊರೆಯಾಗುವ ಸ್ಟಾಕ್ ಪ್ರಮಾಣವನ್ನು ತಗ್ಗಿಸುತ್ತಿರುವ ಹೋಂಡಾ ಸಂಸ್ಥೆಯು ಸ್ಕೂಟರ್ ಉತ್ಪಾದನೆಯ ಪ್ರಮಾಣವನ್ನು ಸದ್ಯಕ್ಕೆ ಶೇ. 15ರಿಂದ ಶೇ.20ರಷ್ಟು ಕಡಿತಗೊಳಿಸಿದೆ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಯಾವುದೇ ಒಂದು ಉದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಪ್ರಮಾಣದ ಬೆಳವಣಿಗೆಯನ್ನು ಬಯಸುವುದು ತಪ್ಪಲ್ಲ. ಆದ್ರೆ ಇತರೆ ಉದ್ಯಮ ವಲಯಗಳಿಂತ ತುಸು ಭಿನ್ನ ಎನ್ನಿಸುವ ಆಟೋ ಉದ್ಯಮದಲ್ಲಿ ನಿರಂತರವಾಗಿ ಒಂದೇ ರೀತಿಯ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ತುಸು ಕಷ್ಟಸಾಧ್ಯ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಯಾಕೆಂದ್ರೆ ಅದು ಗ್ರಾಹಕರ ಆಯ್ಕೆ ಮತ್ತು ಖರೀದಿಸುವ ಶಕ್ತಿಯ ಮೇಲೆ ಸಂಪೂರ್ಣ ಅವಲಂಬನೆಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ತುಸು ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ ಎನ್ನುವುದು ವಾಸ್ತವಾಂಶ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಸದ್ಯ ಮಾಹಿತಿಗಳ ಪ್ರಕಾರ, 2018-19ರ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಒಟ್ಟು 67 ಲಕ್ಷ ಸ್ಕೂಟರ್‌ಗಳು ಮಾರಾಟವಾಗಿದ್ದು, ಇದು ಈ ಹಿಂದಿನ ಆರ್ಥಿಕ ವರ್ಷದ ಸ್ಕೂಟರ್ ಮಾರಾಟ ಪ್ರಮಾಣಕ್ಕೆ ಹೊಲಿಕೆ ಮಾಡಿದ್ದಲ್ಲಿ ಶೇ.0.27ರಷ್ಟು ಕುಸಿತ ಕಂಡುಬಂದಿದೆ. ಆರ್ಥಿಕ ತಜ್ಞರ ಪ್ರಕಾರ ಮಾರುಕಟ್ಟೆಯಲ್ಲಿ ಸದ್ಯ ಉದ್ಯೋಗ ಅಭದ್ರತೆ ಮತ್ತು ಕೆಲವು ಆಟೋ ಉತ್ಪದಾನ ನೀತಿಯಲ್ಲಿ ಆದಾ ಕೆಲವು ಬದಲಾವಣೆಗಳಿಗೆ ಈ ಪರಿಸ್ಥಿತಿ ಪ್ರಮುಖ ಕಾರಣವಾಗಿದೆ ವಿಶ್ಲೇಷಿಸಿದ್ದಾರೆ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಅರೇ, ಸ್ಕೂಟರ್ ಮಾರಾಟ ಇಳಿಕೆ ಕಂಡುಬಂದಲ್ಲಿ ಉದ್ಯೋಗ ಅಭದ್ರತೆಯೇ ಹೇಗೆ ಕಾರಣ ಎಂಬ ಪ್ರಶ್ನೆ ಮೂಡಬಹುದು. ಯಾಕೆಂದ್ರೆ ಹೊಸ ಸ್ಕೂಟರ್‌ಗಳು ಅತಿ ಹೆಚ್ಚು ಮಾರಾಟವಾಗುವುದೇ ಮೆಟ್ರೋ ನಗರಗಳಲ್ಲಿ ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಹೀಗಿರುವಾಗ ಸ್ಕೂಟರ್ ಮಾರಾಟದಲ್ಲಿ ಕಳೆದ 11 ವರ್ಷಗಳಿಂದ ಸತತ ಏರಿಕೆ ಕಂಡಿತ್ತು. ಆದ್ರೆ ಕಳೆದ 2018-19ರ ಆರ್ಥಿಕ ವರ್ಷದಲ್ಲಿ ಇದು ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದ ಜಿಎಸ್‌ಟಿ ನಿರ್ಣಯವು ಐಟಿ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ.

MOST READ: ಮತದಾನ ಮಾಡುವ ಬೈಕ್ ಸವಾರರಿಗೆ ಹೀರೋ ಕಡೆಯಿಂದ ಸ್ಪೆಷಲ್ ಆಫರ್!

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಜಿಎಸ್‌ಟಿ ಜಾರಿಯಿಂದಾಗಿ ಮೆಟ್ರೋ ನಗರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಐಟಿ ವಲಯದ ಮೇಲೆ ಪರಿಣಾಮ ಬೀರಿದ್ದು, ಇದಕ್ಕೆ ವ್ಯತರಿಕ್ತ ಎಂಬಂತೆ ಐಟಿ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತಗೊಳ್ಳುತ್ತಿರುವುದಲ್ಲದೇ ಇಷ್ಟು ದಿನ ತೆರಿಗೆ ವಂಚನೆ ಮಾಡಿ ಕೋಟ್ಯಾಂತರ ರೂಪಾಯಿ ಆದಾಯ ಗಳಿಕೆ ಮಾಡುತ್ತಿದ್ದ ಕೆಲವು ಸಂಸ್ಧೆಗಳು ಕದ ಮುಚ್ಚುತ್ತಿವೆ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಇದರ ಪರಿಣಾಮವಾಗಿಯೇ ಐಟಿ ವಲಯದಲ್ಲಿ ದುಡಿಯುವ ಉದ್ಯೋಗಿಗಳಿಗೆ ಉದ್ಯೋಗ ಅಭದ್ರತೆ ಕಾಡುತ್ತಿದ್ದು, ಹೊಸ ವಾಹನ ಖರೀದಿ ಯೋಜನೆಯನ್ನು ಮುಂದಕ್ಕೆ ಹಾಕುತ್ತಿದ್ದಾದೆ. ಇದೇ ಕಾರಣವೇ ವಾಹನಗಳ ಮಾರಾಟ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುವುದು ಮಾರುಕಟ್ಟೆಯ ಅಧ್ಯಯನದ ವರದಿ ಹೇಳುತ್ತಿದೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಇದರಿಂದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಮಾರಾಟವಾಗದೇ ಸಂಗ್ರವಾಗಿರುವ ಸ್ಟಾಕ್ ಇದೀಗ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಮೆಟ್ರೋ ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಬಹುತೇಕ ಆಟೋ ಡೀಲರ್ಸ್‌ಗಳು ಹೊಸ ವಾಹನಗಳ ಮಾರಾಟದಲ್ಲಿ ನಿಗದಿತ ಗುರಿಮುಟ್ಟಲು ಸಾಧ್ಯವಾಗದೇ ನಷ್ಟಕ್ಕೆ ಸಿಲುಕುವಂತಾಗಿದೆ.

19 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಕಡಿತಗೊಳಿಸಿದ ಹೋಂಡಾ

ಇದರ ಜೊತೆಗೆ ಹೆಚ್ಚುತ್ತಿರುವ ಇಂಧನಗಳ ಬೆಲೆ, ಹೊಸ ವಾಹನಗಳ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಮತ್ತು ವರದಾನವಾಗುತ್ತಿರುವ ಮೆಟ್ರೋ ಸೇವೆಗಳು ಕೂಡಾ ಹೊಸ ವಾಹನ ಖರೀದಿಗೆ ಹಿನ್ನೆಡೆಯಾಗುತ್ತಿದ್ದು, ಇದರಿಂದ ವಾಹನ ಉತ್ಪಾದನೆಯಲ್ಲಿ ಕಡಿತವಾಗುವುದಷ್ಟೇ ಅಲ್ಲದೇ ಮುಂಬರುವ ದಿನಗಳಲ್ಲಿ ಆಟೋ ಉದ್ಯಮದಲ್ಲಿ ಮತ್ತಷ್ಟು ಉದ್ಯೋಗ ಕಡಿತವಾಗುವ ಭೀತಿ ಕೂಡಾ ಎದುರಾಗಿದೆ.

Most Read Articles

Kannada
Read more on ಹೋಂಡಾ honda
English summary
Honda Forecasts Sharp Drop In Demand For Scooters; Cuts Production By 15-20 Percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X