ಸ್ಥಗಿತವಾಯ್ತು ಹೋಂಡಾ ಸಿಬಿಆರ್ 650 ಆರ್ ಬೈಕ್ ಬುಕ್ಕಿಂಗ್
ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ಸ್ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಸಿಬಿಆರ್ 650 ಆರ್ ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಐಎಬಿಯ ವರದಿಯ ಪ್ರಕಾರ ಹೋಂಡಾ ಡೀಲರ್‍ಗಳು ಮಿಡ್-ಕೆಪಾಸಿಟಿ ಸ್ಪೋರ್ಟ್ಸ್ ಬೈಕ್ ಬುಕ್ಕಿಂಗ್ ಅನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಮಿಡ್-ಕೆಪಾಸಿಟಿ ಬೈಕ್ ಅನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ತರಲಾಗಿದೆ. ಹೋಂಡಾ ಸಿಬಿಆರ್ 650 ಆರ್ ಬೈಕ್ ಅನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೋಂಡಾ ಸಿಬಿಆರ್ 650ಆರ್ ಬೈಕಿನ ಬೆಲೆ ಭಾರತದಲ್ಲಿ ಎಕ್ಸ್ ಶೋ ರೂಂ ದರ ರೂ.7.70 ಲಕ್ಷವಾಗಿದೆ.

ದೇಶದಲ್ಲಿ ಸಿಬಿಆರ್ 650 ಆರ್ ಅನ್ನು ಸೀಮಿತವಾದ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಈ ಹೊಸ ಬೈಕ್‍ನಲ್ಲಿ ಬಿಎಸ್-6 ಎಂಜಿನ್ ಎಂಜಿನ್ ಹೊಂದಿರಲಿದೆ. ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಕಾರಣಕ್ಕೆ ಹೊಸ ಬೈಕ್ ಬಿಎಸ್-6 ಎಂಜಿನ್ ಹೊಂದಿರಲಿದೆ ಎಂದು ನಿರೀಕ್ಷಿಸಬಹುದು.

ಸಿಬಿಆರ್ 650 ಆರ್ ಬೈಕ್ ಅನ್ನು ಬಿಡುಗಡೆಗೊಳಿಸುವುದನ್ನು ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆ ಹೋಂಡಾ ಖಚಿತಪಡಿಸಿದೆ. 300-500 ಸಿಸಿ ಸೆಗ್‍ಮೆಂಟ್‍ನ ಹೊಸ ಮಾದರಿಗಳನ್ನು ಮುಂದಿನ 18 ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಈ ವಿಭಾಗದಲ್ಲಿ ಶೇ.85 ರಷ್ಟು ಪಾಲನ್ನು ಹೊಂದಿದ್ದು, ಇದಕ್ಕೆ ಪೈಪೋಟಿಯನ್ನು ನೀಡಲು ಹೋಂಡಾ ಹೊಸ ಸಿಬಿಆರ್ 650 ಆರ್ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ.

ಸಿಬಿಆರ್ 350 ಆರ್ ಬೈಕ್ ಲಿಕ್ವಿಡ್ ಕೂಲ್ಡ್ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ 11,500 ಆರ್‍ಪಿಎಂನಲ್ಲಿ 87.1 ಬಿಎಚ್‍ಪಿ ಪವರ್ ಮತ್ತು 8,000 ಆರ್‍ಪಿಎಂನಲ್ಲಿ 60.1 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಸಿಬಿಆರ್ 650ಆರ್ 41 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಅನ್ನು ಮುಂಭಾಗದಲ್ಲಿ ಮತ್ತು ಮೊನೊ ಶಾಕ್ ಅನ್ನು ಹಿಂಭಾಗದಲ್ಲಿ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಮೂಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಈ ಬೈಕಿಗೆ ಟ್ವಿನ್ಸ್ ಹೆಡ್‍ಲೈಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಹೆಡ್‍ಲ್ಯಾಂಪ್, ಟೈಲ್ ಲ್ಯಾಂಪ್‍ಗಳು ಮತ್ತು ಟರ್ನ್ ಇಂಡಿಕೇಟರ್‍ಗಳು ಪೂರ್ಣ ಪ್ರಮಾಣದ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಸಿಬಿಆರ್ 650 ಆರ್ ಬೈಕ್‍ನಲ್ಲಿ 7 ಇಂಚಿನ ಎಲ್‍ಸಿಡಿ ಯುನಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಅನ್ನು ಹೊಂದಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಬೈಕಿನಲ್ಲಿ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (ಎಚ್‌ಎಸ್‌ಟಿಸಿ), ಡ್ಯುಯಲ್-ಚಾನೆಲ್ ಎಬಿಎಸ್ ,ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-6 ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಿಬಿಆರ್ 650 ಆರ್ ಬೈಕ್ ದುಬಾರಿ ಬೆಲೆಯನ್ನು ಹೊಂದಿದ್ದು , ಹೋಂಡಾ ದೇಶದಲ್ಲಿ ಉತ್ಪಾದಿಸಿದ ಎಲ್ಲಾ ಯುನಿಟ್‍ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಂಪನಿಯು ಬಿಎಸ್-6 ಎಂಜಿನ್ 300-500 ಸಿಸಿ ಬೈಕ್‍ಗಳನ್ನು ಬಿಡುಗಡೆ ಮಾಡುವ ಮೂಲಕ ರಾಯಲ್ ಎನ್‍ಫೀಲ್ಡ್ ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹೋಂಡಾ ಮೋಟಾರ್ ಸೈಕಲ್ ಸಜ್ಜಾಗುತ್ತಿದೆ.


Click it and Unblock the Notifications








