ಅನಾವರಣವಾಯ್ತು ಹೋಂಡಾ ಸಿಬಿಆರ್1000 ಆರ್‍ಆರ್ ಫೈರ್‍ಬ್ಲೇಡ್ ಬೈಕ್
2020ರ ಹೊಸ ಸಿಬಿಆರ್1000 ಆರ್‍ಆರ್ - ಆರ್ ಫೈರ್ಬ್ಲೇಡ್ ಹಾಗೂ ಸಿಬಿಆರ್1000 ಆರ್‍ಆರ್ - ಆರ್ ಫೈರ್ಬ್ಲೇಡ್ ಎಸ್ಪಿ ಬೈಕುಗಳನ್ನು 2019ರ ಇಐಸಿಎಂಎನಲ್ಲಿ ಅನಾವರಣಗೊಳಿಸಲಾಗಿದೆ. ಇದರಿಂದಾಗಿ ಹೋಂಡಾ ಕಂಪನಿಯ ಲೀಟರ್-ಕ್ಲಾಸ್ ಬೈಕುಗಳಲ್ಲಿ ಹೊಸ ಯುಗವೊಂದು ಆರಂಭವಾಗಿದೆ.

ಹಲವಾರು ವರ್ಷಗಳಿಂದ, ಸಿಬಿಆರ್ 1000 ಫೈರ್‌ಬ್ಲೇಡ್, ಹೋಂಡಾ ಕಂಪನಿಯ ಪ್ರಮುಖ ಉತ್ಪನ್ನವಾಗಿತ್ತು. 2020 ಸಿಬಿಆರ್ 1000 ಆರ್‍ಆರ್ - ಆರ್ ಫೈರ್ಬ್ಲೇಡ್ ಹಾಗೂ ಫೈರ್‌ಬ್ಲೇಡ್ ಎಸ್‌ಪಿ ಬೈಕುಗಳು ಹೊಸ ಬೈಕಿಂಗ್ ಅನುಭವವನ್ನು ನೀಡಲಿವೆ ಎಂದು ಹೇಳಲಾಗುತ್ತಿದೆ.

ಲೀಟರ್ ಕ್ಲಾಸ್ ಸೆಗ್‍ಮೆಂಟಿನಲ್ಲಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೋಂಡಾ ಕಂಪನಿಯು ಸಾಕಷ್ಟು ಶ್ರಮ ವಹಿಸಿರುವುದು ಕಾಣುತ್ತದೆ. ಇದಕ್ಕೆ ಪೂರಕವೆಂಬಂತೆ ಹೊಸ ಬ್ಲೇಡ್ ಬೈಕುಗಳಲ್ಲಿ ಹೋಂಡಾದ ರೇಸಿಂಗ್ ಆರ್ಮ್‍ಗಳನ್ನು ಅಳವಡಿಸಲಾಗಿದೆ.

ಏರೋಡೈನಾಮಿಕ್ ಎಫಿಶಿಯನ್ಸಿಯನ್ನು ಸುಧಾರಿಸಲು ಮೊದಲಿಗಿಂತಲೂ ತೀಕ್ಷ್ಣವಾದ ಸ್ಟೈಲಿಂಗ್ ನೀಡಲಾಗಿದೆ. ನಯವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸೆಂಟ್ರಲ್ ರಾಮ್ ಏರ್ ಡಕ್ಟ್ ನಿಂದ ಬೇರ್ಪಡಿಸಲಾಗಿದೆ.

ಇದರಿಂದಾಗಿ ಇನ್‍ಟೇಕ್ ಪೋರ್ಟ್, ತಡೆರಹಿತ ಹರಿವನ್ನು ಪಡೆಯಲಿದೆ. ಇದನ್ನು ಕೀಲೆಸ್ ಇಗ್ನಿಷನ್ ಮೂಲಕ ಪಡೆಯಲಾಗಿದೆ. ಇದು ಕೀ ಬ್ಯಾರೆಲ್ ಅನ್ನು ತೆಗೆದುಹಾಕಲು ಹೋಂಡಾಗೆ ನೆರವಾಗಲಿದೆ. ಹೊಸ ಫೇರಿಂಗ್‍ಗಳು, ವಿಂಗ್ಲೆಟ್‍ಗಳ ಪಕ್ಕದಲ್ಲಿವೆ.

ಇದು 2018 ಹೋಂಡಾ ಆರ್‍ಸಿ 2013ವಿ ಮೋಟೋ ಜಿಪಿ ಯಂತ್ರಕ್ಕೆ ಸಮಾನವಾದ ಕ್ಲೈಮ್ಡ್ ಡೌನ್‍ಫೋರ್ಸ್ ಅನ್ನು ಉತ್ಪಾದಿಸುತ್ತದೆ. ಇದಾದ ನಂತರ ಮೊದಲಿಗಿಂತಲೂ ಚಿಕ್ಕದಾದ ಫ್ಯೂಯಲ್ ಟ್ಯಾಂಕ್ ಇದ್ದು, ಸವಾರನಿಗೆ ಫೇರಿಂಗ್ ಹಿಂದೆ ಸರಿಯಾಗಿ ಕೂರಲು ಅನುವು ಮಾಡಿಕೊಡುತ್ತದೆ.

ಟೇಲ್ ಪೀಸ್ ಸಾಕಷ್ಟು ಮಂದವಾಗಿದ್ದು, ಒಟ್ಟಾರೆಯಾಗಿ ಹೋಂಡಾ ಕಾಂಪ್ಯಾಕ್ಟ್ ಲೀಟರ್-ಕ್ಲಾಸ್ ಮಿಷಿನ್‍ನೊಂದಿಗೆ ಬಂದಿದೆ. ಹೊಸ ಫೈರ್‌ಬ್ಲೇಡ್ ಹಳೆಯ ಬೈಕಿಗಿಂತ 5 ಕೆ.ಜಿ ಹೆಚ್ಚು ತೂಕವನ್ನು ಹೊಂದಿದ್ದು, ಒಟ್ಟಾರೆಯಾಗಿ 201 ಕೆ.ಜಿ ತೂಕವನ್ನು ಹೊಂದಿದೆ.

ಹೊಸ ಬೈಕಿನಲ್ಲಿ 999.9 ಸಿಸಿಯ, ಲಿಕ್ವಿಡ್ ಕೂಲ್ ಇನ್-ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 14,500 ಆರ್‍ಪಿಎಂನಲ್ಲಿ 214 ಬಿಹೆಚ್‍ಪಿ ಪವರ್ ಹಾಗೂ 12,500 ಆರ್‍ಪಿಎಂನಲ್ಲಿ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಟ್ಯಾಂಡರ್ಡ್ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ, ಉದ್ದವಾದ ಟೇಲ್ ಪೈಪ್ ಹೊಂದಿದ್ದು, ಇನ್-ಲೈನ್-ಫೋರ್ ಸೌಂಡ್ ಮಾಡಲಿದೆ. ಹೊಸ ಎಂಜಿನ್‌ನ ಬೋರ್ ಎಕ್ಸ್ ಸ್ಟ್ರೋಕ್ ಅಂಕಿಅಂಶಗಳು ಮೋಟೋ ಜಿಪಿ ಬೈಕಿನ ಎಂಜಿನ್ ಅನ್ನು ಹೋಲುತ್ತವೆ.

ಕ್ಯಾಮ್ ಮೇಲಿರುವ ಡೈಮಂಡ್ ತರಹದ ಕೋಟಿಂಗ್ ಹಾಗೂ ಟಿಟಾನಿಯಂ ರಾಡ್‍ಗಳಿಂದಾಗಿ ಬೈಕಿನ ತೂಕವು ಮತ್ತಷ್ಟು ಕಡಿಮೆಯಾಗಿದೆ. ಈ ಬೈಕಿನಲ್ಲಿರುವ ಎಂಜಿನ್‍ನಲ್ಲಿ 6 ಸ್ಪೀಡಿನ ಟ್ರಾನ್ಸ್ಮಿಷನ್ ಅಳವಡಿಸಲಾಗಿದ್ದು, ಹಿಂಭಾಗದಲ್ಲಿರುವ ಫ್ಯಾಟ್ 200 ಸೆಕ್ಷನ್ ಟಯರಿಗೆ ಪವರ್ ಕಳುಹಿಸುತ್ತದೆ.

ಸುಧಾರಿತ ರೈಡರ್ ಭಾವನೆಗಾಗಿ ಹೆಚ್ಚಿನ ಫ್ಲೆಕ್ಸ್‌ನೊಂದಿಗೆ ಎಂಜಿನ್ ಅನ್ನು ಹೊಸ ಅಲ್ಯೂಮಿನಿಯಂ ಚಾಸಿಸ್‍ನಲ್ಲಿ ನೀಡಲಾಗಿದೆ. ಹೊಸ ಸ್ವಿಂಗಾರ್ಮ್ ಸಹ ಇದ್ದು, ವ್ಹೀಲ್‌ಬೇಸ್ 1,455 ಎಂಎಂ ಆಗಿರುವುದರಿಂದ, ಇದು ಮಧ್ಯದಲ್ಲಿರುವ ಕಾರ್ನರ್ ಸ್ಟಾಬಿಲಿಟಿ ಹಾಗೂ ಫೀಲ್ ಅನ್ನು ಹೆಚ್ಚಿಸುತ್ತದೆ.

ಸ್ಟ್ಯಾಂಡರ್ಡ್ ಸಿಬಿಆರ್ 1000 ಆರ್‍ಆರ್-ಆರ್ ಫೈರ್‌ಬ್ಲೇಡ್ ಬೈಕಿನ ಮುಂಭಾಗದಲ್ಲಿ ಶೋವಾ ಬಿಪಿಎಫ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಶೋವಾ ಬಿಎಫ್‌ಆರ್‍ಸಿ-ಲೈಟ್ ಮೊನೊಶಾಕ್‍ಗಳಿವೆ. ಟಾಪ್ ಎಂಡ್ ಫೈರ್‌ಬ್ಲೇಡ್ ಎಸ್‌ಪಿ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಒಹ್ಲಿನ್‍ನ ಎಲೆಕ್ಟ್ರಾನಿಕ್ ಸಸ್ಪೆಂಷನ್‍ಗಳಿವೆ.

ಹೋಂಡಾ ಹಿಂಭಾಗದಲ್ಲಿರುವ ಮೊನೊಶಾಕ್ ಅನ್ನು ನೇರವಾಗಿ ಎಂಜಿನ್‌ನ ಹಿಂಭಾಗಕ್ಕೆ ಜೋಡಿಸಿದ್ದು, ಇದು ಸಂಕೀರ್ಣ ಲಿಂಕ್ ಮಾದರಿಯ ಅಗತ್ಯವನ್ನು ನಿವಾರಿಸುತ್ತದೆ. ಹೊಸ ಫೈರ್‌ಬ್ಲೇಡ್‌ನ ಎರಡೂ ಹೊಸ ಮಾದರಿಗಳು ಡ್ಯುಯಲ್ 330 ಎಂಎಂ ಡಿಸ್ಕ್ ಗಳನ್ನು ಹೊಂದಿವೆ.

ಆದರೆ ಬೇಸ್ ಮಾದರಿಯಲ್ಲಿ ನಿಸ್ಸಿನ್ ಕ್ಯಾಲಿಪರ್‌ಗಳಿದ್ದರೆ, ಎಸ್‌ಪಿ ಮಾದರಿಯಲ್ಲಿ ಬ್ರೆಂಬೊನ ಸ್ಟೈಲ್‌ಮಾ ಬ್ರೇಕ್ ಕ್ಯಾಲಿಪರ್‌ಗಳಿವೆ. ಟಾಪ್ ಫ್ಲೈಟ್ ಲೀಟರ್ ಕ್ಲಾಸ್ ಮಿಷಿನ್‍ನಲ್ಲಿ ನಿರೀಕ್ಷೆಯಂತೆ, ಹೊಸ ಬಾಷ್ 6 ಆಕ್ಸಿಸ್‍ನ ಐಎಂಯು ಎಲೆಕ್ಟ್ರಾನಿಕ್ ರೈಡರ್ ಸಾಧನಗಳಿವೆ.

ಈ ಬೈಕುಗಳಲ್ಲಿ 9 ಲೆವೆಲ್‍ನ ಟ್ರಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್ ಹಾಗೂ ಎಬಿಎಸ್‍ಗಳಿದ್ದು, ಇವೆಲ್ಲವನ್ನೂ ಹೊಸ 5.0 ಇಂಚಿನ ಬಣ್ಣದ ಟಿಎಫ್‌ಟಿ ಡ್ಯಾಶ್ ಮೂಲಕ ಆಕ್ಸೆಸ್ ಪಡೆದು, ಕಂಟ್ರೋಲ್ ಮಾಡಬಹುದಾಗಿದೆ.

ಹೊಸ ಹೋಂಡಾ ಸಿಬಿಆರ್ 1000 ಆರ್‍ಆರ್-ಆರ್ ಫೈರ್ಬ್ಲೇಡ್ ಹಾಗೂ ಸಿಬಿಆರ್ 1000 ಆರ್‍ಆರ್-ಆರ್ ಫೈರ್ಬ್ಲೇಡ್ ಎಸ್ಪಿ ಬೈಕುಗಳನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುವುದು. ಮುಂದಿನ ವರ್ಷ ಹೋಂಡಾ ಇಂಡಿಯಾ ಈ ಬೈಕ್‌ಗಳನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.


Click it and Unblock the Notifications








