ರೈಡಿಂಗ್ ಭಂಗಿಗಳಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ

ರೈಡಿಂಗ್ ಭಂಗಿಗಳಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ

ಮೋಟಾರ್‍‍ಸೈಕಲ್ ತಯಾರಕ ದೈತ್ಯ ಹೋಂಡಾ ಕಂಪನಿಯು ಜಪಾನ್‍‍ನಲ್ಲಿ ಅನೇಕ ಪೇಟೆಂಟ್ ಅರ್ಜಿಗಳನ್ನು ಹೊಸ ಟೆಕ್ನಾಲಜಿಗಾಗಿ ಸಲ್ಲಿಸಿದೆ. ಈ ಹೊಸ ಟೆಕ್ನಾಲಜಿಯಿಂದ ಒಂದೇ ಬೈಕಿನಲ್ಲಿ ಎರಡು ವಿಭಿನ್ನ ರೈಡಿಂಗ್ ಭಂಗಿಗಳನ್ನು ನೀಡಲಾಗುವುದು.

ಈ ಪೇಟೆಂಟ್ ಚಿತ್ರದಲ್ಲಿ ತೋರಿಸಿರುವಂತೆ ಹೋಂಡಾದ ಸಿ‍‍ಬಿ‍ಆರ್1000 ಆರ್‍ಆರ್ ಬೈಕಿಗೆ - ಅಗ್ರೇಸಿವ್ ಮತ್ತು ಸ್ಪೋರ್ಟಿ - ಎಂಬ ಎರಡು ವಿಭಿನ್ನವಾದ ರೈಡಿಂಗ್ ಭಂಗಿಗಳನ್ನು ನೀಡಲಾಗಿದೆ. ಸದ್ಯ ಚಾಲ್ತಿಯಲ್ಲಿರುವ ಬೈಕುಗಳಿಗೆ ನೇರವಾದ ಭಂಗಿಯನ್ನು ನೀಡಲಾಗಿದೆ.

ಎನ್‍‍ಡಿ‍‍ಟಿವಿ ಆಟೋ ವರದಿಗಳ ಪ್ರಕಾರ, ಹೊಸ ಟೆಕ್ನಾಲಜಿಯಲ್ಲಿ ಅವಶ್ಯಕವಾಗಿ ಬೇಕಾಗಿರುವ ಅಂಶವೆಂದರೆ ಹ್ಯಾಂಡಲ್‍‍ಬಾರ್ ಮತ್ತು ವಿಂಡ್‍‍ಸ್ಕ್ರೀನ್‍‍ಗಳ ಚಲಿಸುವ ಸಾಮರ್ಥ್ಯ. ಇದರಿಂದ ಹ್ಯಾಂಡಲ್‍‍ಬಾರ್‍‍ಗಳನ್ನು ಎಕ್ಸ್ ಟೆಂಡೆಡ್ ಟ್ಯೂಬ್‍‍ಗಳ ಮೂಲಕ ರೆಗ್ಯುಲರ್ ಕ್ಲಿಪ್‍‍ಗಳಂತೆ ಎತ್ತರಿಸಿ ಫ್ರಂಟ್ ಫೋರ್ಕ್‍‍ಗಳ ನೇರಕ್ಕೆ ನಿಲ್ಲಿಸಲಾಗುವುದು.

ಕುಳಿತಿರುವ ಭಂಗಿಯನ್ನು ಬಟನ್ ಪ್ರೆಸ್ ಮಾಡುವ ಮೂಲಕವೇ ಬದಲಿಸಬಹುದಾಗಿದೆ. ಇದರಲ್ಲಿ ಚಲಿಸುವ ವಿಂಡ್‍‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಟಾಪ್ ಸೆಕ್ಷನ್‍‍ನಲ್ಲಿರುವ ಮುಂಭಾಗದ ಫೇರಿಂಗ್ ಅನ್ನು ಸೀಜರ್ ಸ್ಟೈಲ್‍‍ನ ಫ್ರೇಂಗೆ ಅಳವಡಿಸಲಾಗಿದ್ದು, ಚಾಲಕನಿಗೆ ವಿಂಡ್ ಸ್ಕ್ರೀನ್ ಅನ್ನು ಮೇಲಿನಿಂದ ನೇರವಾಗಿ ಬದಲಿಸಿ ಪ್ರಯಾಣಿಕ ಸ್ನೇಹಿ ರೈಡಿಂಗ್ ಭಂಗಿಗೆ ಬರಲು ನೆರವಾಗುತ್ತದೆ.

ಪೇಟೆಂಟ್ ಚಿತ್ರದಲ್ಲಿ ತೋರಿಸಲಾಗಿರುವಂತೆ ಮೆಕಾನಿಕಲ್‍‍ಗಳೂ ಸರಳವಾಗಿವೆ. ಇದರಲ್ಲಿ ಇನ್ನೂ ಹಲವಾರು ಬದಲಾವಣೆಗಳನ್ನು ಮಾಡಬೇಕಿದ್ದು, ಮೋಟಾರ್ ಹಾಗೂ ಎಲೆಕ್ಟಾನಿಕ್ ಉಪಕರಣಗಳನ್ನು ಅಳವಡಿಸಬೇಕಾಗಿದೆ. ಈ ಪೇಟೆಂಟ್ ಚಿತ್ರಗಳು ಸಿ‍‍ಬಿ‍ಆರ್1000 ಆರ್‍ಆರ್ ಫೈರ್ ಬ್ಲೇಡ್ ಬೈಕಿಗೆ ಸಂಬಂಧಪಟ್ಟಿವೆ.

ಹೊಸ ಫೀಚರ್‍‍ಗಳನ್ನು ಮುಂಬರುವ ಬೈಕುಗಳಲ್ಲಿ ಅಳವಡಿಸುವ ಬಗ್ಗೆ ಹೋಂಡಾ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೊಸದಾಗಿ ತಯಾರಾಗುವ ಅಥವಾ ಚಾಲ್ತಿಯಲ್ಲಿರುವ ಬೇರೊಂದು ಬೈಕ್, ಈ ಹೊಸ ಟೆಕ್ನಾಲಜಿಯನ್ನು ಹೊಂದುವ ಸಾಧ್ಯತೆಗಳಿವೆ. ಹೋಂಡಾ ಕಂಪನಿಯು ಈ ಟೆಕ್ನಾಲಜಿಯನ್ನು ಮುಂಬರುವ ಆಟೋ ಎಕ್ಸ್ ಪೋ ಗಳಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಹೊಸ ಟೆಕ್ನಾಲಜಿಯನ್ನು ಮುಂದೆ ತಯಾರಾಗಲಿರುವ ಹೊಸ ವಾಹನಗಳಲ್ಲಿ ಅಳವಡಿಸುವ ಸಂಭವವಿದೆ.

MOST READ: 20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೋಟಾರ್‍‍ಸೈಕಲ್‍‍ಗಳಲ್ಲಿ ಈ ರೀತಿಯಾದ ಟೆಕ್ನಾಲಜಿ ಅಳವಡಿಸುವ ಯೋಜನೆಯು ಅದ್ಭುತವಾಗಿದೆ. ಸ್ಪೋರ್ಟ್ ಮೋಡ್‍‍ನಲ್ಲಿ ಕುಳಿತಿರುವ ಭಂಗಿಯನ್ನು, ನೇರವಾಗಿ ಕುಳಿತಿರುವ ಭಂಗಿಗೆ ಬಟನ್ ಒತ್ತುವುದರಿಂದ ಬದಲಿಸುವುದು ರೋಮಾಂಚಕವಾಗಿದೆ. ಹೋಂಡಾ ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಕಾದು ನೋಡೋಣ.

ಈ ರೀತಿಯ ಟೆಕ್ನಾಲಜಿಯನ್ನು ಸ್ಪೋರ್ಟ್ಸ್ ಬೈಕುಗಳಲ್ಲಿ ಮಾತ್ರ ಅಳವಡಿಸುವುದು ಸರಿಯಾದ ಯೋಜನೆಯಲ್ಲ. ಇಲ್ಲಿ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಸೀಟುಗಳನ್ನು ವಿಭಿನ್ನವಾಗಿ ತಯಾರಿಸಬೇಕಾಗುತ್ತದೆ, ಸ್ಪೋರ್ಟ್ಸ್ ಬೈಕಿನಲ್ಲಿರುವ ಫುಟ್ ಪೆಗ್‍‍ಗಳು ಹಿಂಭಾಗದಲ್ಲಿರುತ್ತವೆ. ಈ ವಿನ್ಯಾಸಗಳನ್ನು ಬೈಕಿನಲ್ಲಿ ಅಳವಡಿಸಿದ ನಂತರ ಬೈಕ್ ಅದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Honda Files Patents For Varying Riding Positions - Read in kannada
Story first published: Friday, May 17, 2019, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X