ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಹೋಂಡಾ ಸಿಬಿ 300ಆರ್ ಟಿವಿ ಜಾಹೀರಾತು
ಹೋಂಡಾ ಇಂಡಿಯಾ ತನ್ನ ಜನಪ್ರಿಯ ಸಿಬಿ 300ಆರ್ ಬೈಕ್ ಆವೃತ್ತಿಯ #YourMove ಟಿವಿ ಜಾಹೀರಾತನ್ನು ಬಿಡುಗಡೆಗೊಳಿಸಿದ್ದು, ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ವಿನೂತನ ವಿನ್ಯಾಸ, ಬಲಿಷ್ಠ ಎಂಜಿನ್ ವೈಶಿಷ್ಟ್ಯತೆಯೇ ಈ ಬೈಕಿನ ಪ್ರಮುಖ ಹೈಲೈಟ್ಸ್ ಅಂದ್ರೆ ತಪ್ಪಾಗುವುದಿಲ್ಲ.

ಹೋಂಡಾ ತನ್ನ ಬಹುನಿರೀಕ್ಷಿತ ಸಿಬಿ 300ಆರ್ ಬೈಕ್ ಅನ್ನು ಕಳೆದ ತಿಂಗಳ ಹಿಂದಷ್ಟೆ ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಬೈಕ್ ಖರೀದಿಗಾಗಿ ಸಾವಿರಾರು ಗ್ರಾಹಕರು ಕಾಯ್ದುಕುಳಿತಿದ್ದಾರೆ. ಯಾಕೆಂದ್ರೆ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಬೈಕ್ ಮಾದರಿ ಇದಾಗಿದ್ದು, ಮುಂದಿನ 5 ತಿಂಗಳವರೆಗೆ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಭರ್ತಿಯಾಗಿವೆ.

ನಿಯೋ ಸ್ಪೋರ್ಟ್ ಕೆಫೆ ವಿನ್ಯಾಸದಲ್ಲಿ ಬಿಡುಗಡೆಯಾದ ಮಧ್ಯಮ ಗಾತ್ರದ ಮೊದಲ ಬೈಕ್ ಆವೃತ್ತಿ ಇದಾಗಿದ್ದು, ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಸೌಲಭ್ಯವು ಹೊಸ ಬೈಕ್ ಆಯ್ಕೆಯ ಮೌಲ್ಯ ಹೆಚ್ಚಿಸಿವೆ.

ಹೊಸ ಸಿಬಿ 300ಆರ್ ಬೈಕ್ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ. 2.41 ಲಕ್ಷ ಬೆಲೆ ಹೊಂದಿದ್ದು, ಈ ಬೈಕ್ ಹೋಂಡಾ ಸಂಸ್ಥೆಯ ಮೊದಲ 300ಸಿಸಿ ಮೋಟಾರ್‍ಸೈಕಲ್ ಎಂಬ ಖ್ಯಾತಿಯನ್ನು ಸಹ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಸಿಬಿ 300ಆರ್ ಬೈಕ್ ಮಾದರಿಯು 286 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಹಾಗೆಯೇ ಹೊಸ ಬೈಕಿನಲ್ಲಿ ಸಿಂಗಲ್ ಪೀಸ್ ಹ್ಯಾಂಡಲ್ ಬಾರ್, 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಇದರೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸಿಂಗಲ್ ಚಾನೆಲ್ ಎಬಿಎಸ್ ಹಾಗೂ ಮುಂಭಾಗದಲ್ಲಿ 41-ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್‌ನೊಂದಿಗೆ ರೆಟ್ರೋ ಡಿಸೈನ್ ಆಕರ್ಷಣೆಯಾಗಿವೆ.

ಮತ್ತೊಂದು ಪ್ರಮುಖ ವಿಚಾರ ಅಂದ್ರೆ 300ಸಿಸಿ ಬೈಕ್ ಸೆಗ್ಮೆಂಟ್‍ನಲ್ಲಿ ಅತಿ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಸಿಬಿ 300ಆರ್ ಬೈಕ್ ಸುಮಾರು 143 ಕಿ.ಗ್ರಾಂ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೆಟಪ್ ಅನ್ನು ಒದಗಿಸಲಾಗಿದೆ.
MOST READ: ಹುತಾತ್ಮ ಯೋಧರ ಮಕ್ಕಳಿಗಾಗಿ ಜಾವಾ ಸಂಸ್ಥೆಯಿಂದ ದಿಟ್ಟಹೆಜ್ಜೆ..!

ಸದ್ಯ ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದ್ದು, ಕರ್ನಾಟಕದಲ್ಲಿ ಒಂದೇ ಒಂದು ಡೀಲರ್ಸ್‌ನಲ್ಲಿ ಮಾತ್ರವೇ ಸಿಬಿ300ಆರ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.
ಬೆಂಗಳೂರಿನ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ ಬಳಿ ಮಾತ್ರವೇ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಬೈಕ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಮಾತ್ರವೇ ಈ ಬೈಕ್ ಲಭ್ಯವಿರಲಿದೆ.
MOST READ: ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಇನ್ನು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೇ ಕೆಟಿಎಂ ಡ್ಯೂಕ್ 390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಈ ಬೈಕ್ ಉತ್ಪಾದನೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.


Click it and Unblock the Notifications